Search
  • Follow NativePlanet
Share
» »ಶಿವನ ಅಂಶವಿರುವ ಐದು ದೇವಸ್ಥಾನಗಳು ಎಲ್ಲಿವೆ?

ಶಿವನ ಅಂಶವಿರುವ ಐದು ದೇವಸ್ಥಾನಗಳು ಎಲ್ಲಿವೆ?

ದೇಶದಲ್ಲಿ ಎಷ್ಟೆಲ್ಲಾ ಶಿವನ ದೇವಸ್ಥಾನಗಳಿಲ್ಲ. ಅವುಗಳಲ್ಲಿ ಉತ್ತರಖಂಡದಲ್ಲಿರುವ ಐದು ಕೇದಾರವನ್ನು ಮಹತ್ವದ್ದು ಎನ್ನಲಾಗಿದೆ. ಶಿವನು ತನ್ನ ಮಹಿಷರೂಪ ಅವತಾರದಲ್ಲಿ ಐದು ಅಂಗಗಳನ್ನು ಐದು ಬೇರೆ ಬೇರೆ ಸ್ಥಳಗಳಲ್ಲಿ ಸ್ಥಾಪಿಸಿದ್ದನು ಎನ್ನಲಾಗುತ್ತದೆ. ಕೇದಾರನಾಥ ದೇವಸ್ಥಾನದ ಜೊತೆಗೆ ಇನ್ನೂ ನಾಲ್ಕು ಪೀಠಗಳನ್ನು ಸೇರಿಸಿ ಪಂಚ ಕೇದಾರ ಎನ್ನಲಾಗುತ್ತದೆ. ಅವು ಯಾವುವು ಅನ್ನೋದನ್ನು ಇಲ್ಲಿ ನೋಡಿ.

ಹಿಂದೂ ಮುಸ್ಲಿಂ ಇಬ್ಬರಿಗೂ ವಿಶೇಷವಾದ ದೇವಸ್ಥಾನ ಇದು !ಹಿಂದೂ ಮುಸ್ಲಿಂ ಇಬ್ಬರಿಗೂ ವಿಶೇಷವಾದ ದೇವಸ್ಥಾನ ಇದು !

ಕೇದಾರನಾಥ

ಕೇದಾರನಾಥ

PC: Vijayakumarblathur

ಇದು ಮುಖ್ಯಕೇದಾರನಾಥ ಪೀಠ. ಇದನ್ನು ಪಂಚ ಕೇದಾರಗಳಲ್ಲಿ ಪ್ರಥಮ ಎನ್ನಲಾಗುತ್ತದೆ. ಪುರಾಣಗಳ ಪ್ರಕಾರ, ಮಹಾಭಾರತ ಯುದ್ಧ ಮುಗಿಯುತ್ತಿದ್ದಂತೆ ತಮ್ಮದೇ ಕುಲದ ಜನರನ್ನು ಹತ್ಯೆ ಮಾಡಿದ ಪಾಪದ ಪ್ರಾಯಶ್ಚಿತ ಮಾಡಲು ವೇದವ್ಯಾಸರ ಆಜ್ಷೆಯಂತೆ ಪಾಂಡವರು ಇದೇ ಸ್ಥಳದಲ್ಲಿ ಶಿವನ ಉಪಾಸನೆ ಮಾಡಿದ್ದರು. ಆಗ ಶಿವನು ಇವರ ಭಕ್ತಿಗೆ ಮೆಚ್ಚಿ ಗೂಳಿಯ ರೂಪದಲ್ಲಿ ದರ್ಶನ ನೀಡುತ್ತಾನೆ, ಆಗಿನಿಂದ ಇಲ್ಲಿ ಶಿವನ ಮೇಲ್ಮೈ ಶಿಲಾ ರೂಪದಲ್ಲಿ ಸ್ಥಾಪಿತವಾಗಿದೆ.

ಮಧ್ಯಮೇಶ್ವರ

ಮಧ್ಯಮೇಶ್ವರ

PC: wikipedia

ಇದನ್ನು ಮನಮಹೇಶ್ವರ ಅಥವಾ ಮದನಮಹೇಶ್ವರ ಎಂದು ಕರೆಯುತ್ತಾರೆ. ಇದನ್ನು ಪಂಚ ಕೇದಾರದಲ್ಲಿ ಎರಡನೆಯದು ಎನ್ನಲಾಗುತ್ತದೆ. ಇದು ಊಷಿಮಠದಿಂದ ೧೮ ಮೈಲು ದೂರದಲ್ಲಿದೆ. ಇಲ್ಲಿ ಮಹಿಷರೂಪಿ ಶಿವನ ಹೊಕ್ಕುಳ ಲಿಂಗ ರೂಪದಲ್ಲಿ ಪ್ರತಿಷ್ಠಾಪನೆಯಾಗಿದೆ.

ತುಂಗನಾಥ

ತುಂಗನಾಥ

PC: wikipedia

ಪಂಚ ಕೇದಾರದಲ್ಲಿ ಮೂರನೆಯರು ತುಂಗನಾಥ. ಬದ್ರಿನಾಥ್‌ ಹೋಗುವಾಗ ಈ ಕ್ಷೇತ್ರ ಸಿಗುತ್ತದೆ. ಇಲ್ಲಿ ಶಿವನ ಭುಜ ಮೂರ್ತಿಯ ರೂಪದಲ್ಲಿ ಸ್ಥಾಪಿತವಾಗಿದೆ. ಶಿವನನ್ನು ಪ್ರಸನ್ನಗೊಳಿಸಲು ಪಾಂಡವರು ಈ ಮಂದಿರವನ್ನು ನಿರ್ಮಿಸಿದ್ದಾರೆ ಎನ್ನಲಾಗುತ್ತದೆ.

ರುದ್ರನಾಥ

ರುದ್ರನಾಥ

PC:rolling on

ಪಂಚ ಕೇದಾರದಲ್ಲಿ ನಾಲ್ಕನೆಯದೇಂದರೆ ರುದ್ರನಾಥ ಇಲ್ಲಿ ಶಿವನ ಮುಖ ಸ್ಥಾಪಿತವಾಗಿದೆ. ಈ ಮಂದಿರವು ಗುಹೆಯ ಒಳಗೆ ಇರುವುದರಿಂದ ಇದನ್ನು ತಲುಪುವ ರಸ್ತೆ ಕೂಡಾ ತುಂಬಾ ಕಠಿಣವಾಗಿರುತ್ತದೆ.

ಕಲ್ಪೇಶ್ವರ್

ಕಲ್ಪೇಶ್ವರ್

PC: Wikipedia

ಇಲ್ಲಿ ಶಿವನ ಜಡೆಯನ್ನು ಪೂಜಿಸಲಾಗುತ್ತದೆ. ಇದರ ಗರ್ಭಗುಡಿಯನ್ನು ತಲುಪಲು ನೈಸರ್ಗಿಕ ಗುಹೆಯಿಂದ ಸಾಗಬೇಕಾಗುತ್ತದೆ.

Read more about: india temple shiva
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X