Search
  • Follow NativePlanet
Share
» »ರಾಹು-ಕೇತುವು ಒಂದೇ ಶರೀರದಲ್ಲಿ ನೆಲೆಸಿರುವ ಏಕೈಕ ದೇವಾಲಯವಿದು....

ರಾಹು-ಕೇತುವು ಒಂದೇ ಶರೀರದಲ್ಲಿ ನೆಲೆಸಿರುವ ಏಕೈಕ ದೇವಾಲಯವಿದು....

ನಮ್ಮ ಕರ್ನಾಟಕ ರಾಜ್ಯದಲ್ಲಿ ಅನೇಕ ಸರ್ಪಕ್ಷೇತ್ರಗಳಿವೆ. ಪ್ರಜೆಗಳು ತಮ್ಮ-ತಮ್ಮ ಸರ್ಪದೋಷಗಳನ್ನು ಪರಿಹಾರ ಮಾಡಿಕೊಳ್ಳುವ ಸಲುವಾಗಿ ಶ್ರೀಕಾಳಹಸ್ತಿಗೆ ತೆರಳಿ ಪೂಜೆಗಳನ್ನು ಮಾಡಿಸುತ್ತಿರುತ್ತಾರೆ. ತಮಿಳುನಾಡು ರಾಜ್ಯದಲ್ಲಿಯೇ ಅತ್ಯಂತ ಪ್ರಸಿದ್ಧವಾದ

ನಮ್ಮ ಕರ್ನಾಟಕ ರಾಜ್ಯದಲ್ಲಿ ಅನೇಕ ಸರ್ಪಕ್ಷೇತ್ರಗಳಿವೆ. ಪ್ರಜೆಗಳು ತಮ್ಮ-ತಮ್ಮ ಸರ್ಪದೋಷಗಳನ್ನು ಪರಿಹಾರ ಮಾಡಿಕೊಳ್ಳುವ ಸಲುವಾಗಿ ಶ್ರೀಕಾಳಹಸ್ತಿಗೆ ತೆರಳಿ ಪೂಜೆಗಳನ್ನು ಮಾಡಿಸುತ್ತಿರುತ್ತಾರೆ. ತಮಿಳುನಾಡು ರಾಜ್ಯದಲ್ಲಿಯೇ ಅತ್ಯಂತ ಪ್ರಸಿದ್ಧವಾದ ಸರ್ಪದೋಷ ಕ್ಷೇತ್ರವಿದೆ. ಆ ಮಹಿಮಾನ್ವಿತವಾದ ಕ್ಷೇತ್ರವೇ ತಿರುಪ್ಪಾಂಪುರಂ. ಇಲ್ಲಿನ ವಿಶೇಷತೆ ಏನಪ್ಪ ಎಂದರೆ ರಾಹು ಹಾಗು ಕೇತು ಇಬ್ಬರು ಒಂದೇ ಶರೀರದಲ್ಲಿ ನೆಲೆಸಿದ್ದಾರೆ. ಅದ್ದರಿಂದಲೇ ಈ ತಿರುಪ್ಪಾಂಪುರಂ ಕ್ಷೇತ್ರದ ಅತ್ಯಂತ ಮಹಿಮಾನ್ವಿತವಾದುದು ಎಂದು ತಮಿಳು ಪ್ರಜೆಗಳ ನಂಬಿಕೆಯಾಗಿದೆ.

ಇಲ್ಲಿ ಸರ್ಪದೋಷಗಳು ನಿವಾರಣೆಗೆ ಕೇವಲ ತಮಿಳುನಾಡಿನ ಪ್ರಜೆಗಳೇ ಅಲ್ಲದೇ, ದೇಶದ ಮೂಲೆ-ಮೂಲೆಗಳಿಂದಲೂ ಕೂಡ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿರುವ ಪುಣ್ಯಕ್ಷೇತ್ರದ ಹೆಸರು ಆದಿಶೇಷ ತೀರ್ಥ. ಇದರಲ್ಲಿ ಸ್ನಾನವನ್ನು ಆಚರಿಸಿದರೆ ಸಮಸ್ತ ರೋಗಗಳು ಗುಣವಾಗುತ್ತದೆ ಎಂದು ಭಕ್ತರ ದೃಢವಾದ ನಂಬಿಕೆಯಾಗಿದೆ. ಇಷ್ಟು ಪ್ರಸಿದ್ಧಿಯನ್ನು ಹೊಂದಿರುವ ಕ್ಷೇತ್ರದ ಬಗ್ಗೆ ಸಂಕ್ಷೀಪ್ತವಾದ ಮಾಹಿತಿಯನ್ನು ಲೇಖನದ ಮೂಲಕ ಸಂಕ್ಷೀಪ್ತವಾದ ಮಾಹಿತಿಯನ್ನು ಪಡೆಯಿರಿ.

1.ಪುರಾಣ ಕಥೆ

1.ಪುರಾಣ ಕಥೆ

PC:YOUTUBE

ಈ ರಾಹುಕೇತುಗಳ ಕ್ಷೇತ್ರಕ್ಕೆ ಒಂದು ರೋಚಕವಾದ ಪುರಾಣ ಕಥೆ ಇದೆ. ಒಮ್ಮೆ ವಿನಾಯಕನು ತನ್ನ ತಂದೆಯಾದ ಪರಮಶಿವನಿಗೆ ಪೂಜೆ ಮಾಡುತ್ತಾ ಇರುತ್ತಾನೆ. ಆ ಸಮಯದಲ್ಲಿ ಶಿವನ ಆಭರಣಗಳಾಗಿದ್ದ ಹಾವುಗಳು ಆ ಪೂಜೆಗಳು ತಮಗೂ ಕೂಡ ದಕ್ಕುತ್ತದೆ ಎಂದು ಮನಸ್ಸಿನಲ್ಲಿ ಗರ್ವಪಡುತ್ತಿರುತ್ತವೆ. ವಿನಾಯಕನಂತಹವನೇ ತಮಗೆ ಪೂಜೆಗಳನ್ನು ಮಾಡುತ್ತಿದ್ದಾನೆ ಎಂದು ಭಾವಿಸುತ್ತಾರೆ. ಈ ವಿಷಯವನ್ನು ಗ್ರಹಿಸಿಕೊಂಡ ಪರಮಶಿವನನು ತನ್ನ ಶರೀರದ ಮೇಲಿರುವ ಹಾವುಗಳನ್ನು ಶಕ್ತಿಹೀನರಾಗಿ ಸಾಧಾರಣವಾದ ಮಾನವರ ಕೈಗೆ ಸಿಕ್ಕಿ ನಾನಾಹಿಂಸೆಗಳನ್ನು ಅನುಭವಿಸಿ ಎಂದು ಶಪಿಸುತ್ತಾನೆ.

2.ಶಾಪವಿಮೋಚನೆ

2.ಶಾಪವಿಮೋಚನೆ

PC:YOUTUBE

ಇದರಿಂದಾಗಿ ಶಿವನ ಕೊರಳಿನಲ್ಲಿದ್ದ ವಾಸುಕಿಯ ಜೊತೆಜೊತೆಗೆ ಆದಿಶೇಷ, ಕಟಕ, ತಕ್ಷ ತದಿತರ ಸರ್ಪಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ತಮ್ಮ ತಪ್ಪುಗಳನ್ನು ಮನ್ನಿಸಿ ಶಾಪವಿಮೋಚನೆಗೊಳಿಸು ಎಂದು ಪರಮಶಿವನಲ್ಲಿ ಬೇಡಿಕೊಳ್ಳುತ್ತಾರೆ. ಶಾಂತನಾದ ಶಿವನು ತಿರುಪ್ಪಾಂಪುರದಲ್ಲಿನ ಪಾಂಬುರಾನಾಥದಲ್ಲಿ ನೆಲೆಸಿರುವ ತನ್ನನ್ನು ಆರಾಧಿಸಿದರೆ ಶಾಪವಿಮೋಚನೆಯ ದಾರಿ ದೊರೆಯುತ್ತದೆ ಎಂದು ಹೇಳುತ್ತಾನೆ.

3.ಆದಿಶೇಷ ತೀರ್ಥ

3.ಆದಿಶೇಷ ತೀರ್ಥ

PC:YOUTUBE

ಇದರಿಂದಾಗಿ ಆ ಸರ್ಪಗಳೆಲ್ಲಾ ಸೇರಿ ಪರಮಶಿವನು ತಿಳಿಸಿದ ಸ್ಥಳಕ್ಕೆ ಸೇರಿಕೊಂಡು ಪಾಂಬುನಾಥನನ್ನು ಆರಾಧಿಸಿ ತಮ್ಮ ಶಾಪದಿಂದ ವಿಮೋಚನೆಗೊಳಿಸಬೇಕು ಎಂದು ಬೇಡಿಕೊಳ್ಳುತ್ತವೆ. ಅಷ್ಟೇ ಅಲ್ಲದೇ, ಇಲ್ಲಿ ಏಕ ಶರೀರದಲ್ಲಿರುವ ರಾಹು-ಕೇತುಗಳು ಕೂಡ ಅರ್ಚನೆಗಳನ್ನು ಮಾಡುತ್ತವೆ. ಇದು ಹೀಗೆ ಇದ್ದರೆ, ಇಲ್ಲಿ ಪರಮಶಿವನನ್ನು ಆರಾಧಿಸಲು ಬಂದ ಸರ್ಪಗಳೆಲ್ಲಾ ಸೇರಿ ಒಂದು ಪುಣ್ಯಕ್ಷೇತ್ರವನ್ನು ಏರ್ಪಾಟು ಮಾಡಿಕೊಂಡವವು. ಅದೇ ಆದಿಶೇಷ ತೀರ್ಥ. ಅಗಸ್ತ್ಯ, ಗಂಗಾದೇವಿ, ಇಂದ್ರನ ಜೊತೆ ಜೊತೆಗೆ ಬ್ರಹ್ಮನು ಕೂಡ ಈ ತೀರ್ಥದಲ್ಲಿ ಸ್ನಾನವನ್ನು ಮಾಡಿದರು ಎಂದು ಪುರಾಣಗಳು ಹೇಳುತ್ತವೆ.

4.ಸಾವಿರ ವರ್ಷಗಳ ಹಿಂದೆ

4.ಸಾವಿರ ವರ್ಷಗಳ ಹಿಂದೆ

PC:YOUTUBE

ಈ ದೇವಾಲಯದಲ್ಲಿರುವ ಶಾಸನಗಳ ಪ್ರಕಾರ ಈ ದೇವಾಲಯವನ್ನು ಕುಲೋತ್ತುಂಗ ಚೋಳನು ನಿರ್ಮಾಣ ಮಾಡಿರುವುದು ಎಂದು ತಿಳಿದುಬರುತ್ತದೆ. ಅಂದರೆ ಈ ದೇವಾಲಯದ ನಿರ್ಮಾಣವು ಸುಮಾರು ಸಾವಿರ ವರ್ಷಗಳಾಗಿವೆ ಎಂದು ಅರ್ಥ. ತಂಜಾವೂರನನ್ನು ಆಳ್ವಿಕೆ ಮಾಡುತ್ತಿದ್ದ ಶರಭೋಜಿ ಚಕ್ರವರ್ತಿ ಈ ದೇವಾಲಯಕ್ಕೆ ವಸಂತ ಮಂಡಪವನ್ನು, ರಾಜಗೋಪುರವನ್ನು ನಿರ್ಮಾಣ ಮಾಡಿಸಿದನು. ಗರ್ಭಗುಡಿಯಲ್ಲಿನ ಶಿವನಿಗೆ ಪೂಜಿಸುವ ರೀತಿಯಲ್ಲಿರುವ ಆದಿಶೇಷನ ವಿಗ್ರಹವು ಅತ್ಯಂತ ಮನೋಹರವಾಗಿದೆ. ಇಲ್ಲಿ ಒಂದು ವೃಕ್ಷದ ಕೆಳಗೆ ಸಾವಿರಾರು ಸಂಖ್ಯೆಯಲ್ಲಿ ಸರ್ಪಶಿಲೆಗಳನ್ನು ಕಾಣಬಹುದು.

5.ಸರ್ಪದೋಷ ನಿವಾರಣ ಪೂಜೆಗಳು

5.ಸರ್ಪದೋಷ ನಿವಾರಣ ಪೂಜೆಗಳು

PC:YOUTUBE

ದೇವಾಲಯದಲ್ಲಿನ ಈಶಾನ್ಯ ದಿಕ್ಕಿನಲ್ಲಿರುವ ರಾಹುಕೇತು ಒಂದೇ ಸನ್ನಿಧಿಯಲ್ಲಿ ದರ್ಶನವನ್ನು ನೀಡುತ್ತಾರೆ. ಇಲ್ಲಿ ರಾಹುಕೇತುಗಳ ಪೂಜೆಗಳು ಇಲ್ಲಿ ವಿಶೇಷವಾಗಿ ನಡೆಯುತ್ತವೆ. ಹಾಗೆಯೇ ಸರ್ಪದೋಷ ಪರಿಹಾರ ಪೂಜೆಗಳಿಗೆ ಈ ದೇವಾಲಯವು ಅತ್ಯಂತ ಪ್ರಸಿದ್ಧವಾಗಿದೆ. ರಾಹುಕಾಲದಲ್ಲಿ ದೇವಾಲಯ ತೆರೆದ ತಕ್ಷಣ ದೀಪಗಳನ್ನು ಬೆಳಗಿಸುತ್ತಾರೆ. ಇಲ್ಲಿ ಸರ್ಪದೋಷ ನಿವಾರಣೆಗೆ ಸುಮಾರು ರೂ.5500 ರವರೆಗೆ ವಸೂಲಿ ಮಾಡುತ್ತಾರೆ. ಈ ಪೂಜೆಯನ್ನು ಮಾಡಿಸುವವರು ಬೆಳಗಿನ ಜಾವವೇ ಈ ದೇವಾಲಯಕ್ಕೆ ಸೇರಿಕೊಳ್ಳುವುದು ಉತ್ತಮ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X