Search
  • Follow NativePlanet
Share
» »ಸವದತ್ತಿಯ ಸುಂದರ ಕೋಟೆ

ಸವದತ್ತಿಯ ಸುಂದರ ಕೋಟೆ

ಸವದತ್ತಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು. ಇದೊಂದು ಪುಟ್ಟ ತಾಲೂಕಾದರೂ ಅನೇಕ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿದೆ. ಮೊದಲು ಇದನ್ನು ಸೌಗಂಧಿಪುರ, ಸೌಗಂಧವತಿ, ಸುಗಂಧವರ್ತಿ ಎಂತಲೂ ಕರೆಯುತ್ತಿದ್ದರು.

By Divya

ಸವದತ್ತಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು. ಇದೊಂದು ಪುಟ್ಟ ತಾಲೂಕಾದರೂ ಅನೇಕ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿದೆ. ಮೊದಲು ಇದನ್ನು ಸೌಗಂಧಿಪುರ, ಸೌಗಂಧವತಿ, ಸುಗಂಧವರ್ತಿ ಎಂತಲೂ ಕರೆಯುತ್ತಿದ್ದರು. ಚಾಲುಕ್ಯರ ಕಾಲದಲ್ಲಿ ಈ ನಗರವು ಹೆಚ್ಚು ಶ್ರೀಮಂತ ಸ್ಥಿತಿಯಲ್ಲಿತ್ತು ಎನ್ನಲಾಗುತ್ತದೆ.

ಬೆಳಗಾವಿ ಸುತ್ತಮುತ್ತಲಿನ ಪ್ರದೇಶಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ರಟ್ಟರ ಆಳ್ವಿಕೆಯ ಅವಧಿಯಲ್ಲಿ ಇದು ಅವರ ರಾಜಧಾನಿಯಾಗಿತ್ತು. ಇಲ್ಲಿರುವ ರೇಣುಕಾ ಎಲ್ಲಮ್ಮ ದೇವಿಯ ದೇಗುಲ, ರೇಣುಕಾ ಜಲಾಶಯ ಹಾಗೂ ಸವದತ್ತಿ ಕೋಟೆಯು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ. ಧಾರವಾಡದಿಂದ 35 ಕಿ.ಮೀ. ಹಾಗೂ ಬೆಂಗಳೂರಿನಿಂದ 469 ಕಿ.ಮೀ. ದೂರದಲ್ಲಿದೆ. ರಸ್ತೆ ಮಾರ್ಗವು ಉತ್ತಮ ಸ್ಥಿತಿಯಲ್ಲಿರುವುದರಿಂದ ದಣಿವಿಲ್ಲದೆಯೇ ಇಲ್ಲಿಗೆ ಬರಬಹುದು.

Saundatti

PC: wikipedia.org

ಸವದತ್ತಿ ಕೋಟೆ
18ನೇ ಶತಮಾನದ ಇತಿಹಾಸವನ್ನು ಹೊಂದಿರುವ ಈ ಕೋಟೆ ಒಂದು ಪುಟ್ಟ ಬೆಟ್ಟದ ಮೇಲಿದೆ. ಅಲ್ಲಿಯೇ ಒಂದು ಕಾಡಸಿದ್ಧೇಶ್ವರ ದೇಗುಲ ಇರುವುದನ್ನು ಕಾಣಬಹುದು. ಈ ಕೋಟೆಯು ದಟ್ಟ ಅರಣ್ಯ ಸಂಪತ್ತಿನಿಂದ ಸುತ್ತುವರಿದಿದೆ. ಬೆಳಗಾವಿ ಜಿಲ್ಲೆಯಿಂದ 83 ಕಿ.ಮೀ. ದೂರದಲ್ಲಿದೆ.

Saundatti

PC: wikipedia.org

ಹಿನ್ನೆಲೆ
ಕರ್ನಾಟಕವನ್ನು ಆಳಿದ ರಾಜಮನೆತನದವರಲ್ಲಿ ರಟ್ಟರು ಒಬ್ಬರು. ಮೊದಲು ಮಾಂಡಲೀಕರಾಗಿ, ನಂತರ ಆಳುವ ಅರಸರಾಗಿ, 9 ರಿಂದ 13 ಶತಮಾನಗಳ ಕಾಲ ರಾಜ್ಯವಾಳಿದರು. ಆ ಕಾಲದಲ್ಲಿ ನಿರ್ಮಿಸಲಾದ ಕೋಟೆ, ಇಂದು ಪ್ರವಾಸ ತಾಣದಲ್ಲಿ ಒಂದಾಗಿದೆ.

Saundatti

PC: wikipedia.org

ವಿನ್ಯಾಸ
ಪೂರ್ವ ದಿಕ್ಕಿಗೆ ಪ್ರಧಾನ ಬಾಗಿಲನ್ನು ಹೊಂದಿರುವ ಈ ಕೋಟೆ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಒಂಬತ್ತು ತಿರುವುಗಳು ಹಾಗೂ 30 ಮೆಟ್ಟಿಲುಗಳ ಸಾಲಿವೆ. 120 ಅಡಿ ಎತ್ತರ ಇರುವ ಈ ಕೋಟೆ ಹೆಚ್ಚು ಸುಭದ್ರವಾಗಿದೆ.

ಹತ್ತಿರದ ಆಕರ್ಷಣೆ
ಮಲಪ್ರಭಾ ನದಿಯ ಅಣೆಕಟ್ಟು, ಯಲ್ಲಮ್ಮ ಗುಡ್ಡ, ರೇಣುಕಾ ಸಾಗರ, ಪುರದೇಶ್ವರ ದೇಗುಲ ಹಾಗೂ ಅಂಕೇಶ್ವರ ದೇಗುಲಗಳಿಗೂ ಭೇಟಿ ನೀಡಬಹುದು.

Read more about: belgaum
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X