Search
  • Follow NativePlanet
Share
» »ಮಾಕಳಿದುರ್ಗ- ಒಂದು ದಿನ- ಟ್ರೆಕ್ಕಿಂಗ್ - ಪ್ರವಾಸ

ಮಾಕಳಿದುರ್ಗ- ಒಂದು ದಿನ- ಟ್ರೆಕ್ಕಿಂಗ್ - ಪ್ರವಾಸ

ಮಾಕಳಿದುರ್ಗದ ಇತಿಹಾಸವನ್ನು ಕೆದಕಲು ಹೊರಟರೆ ದೊಡ್ಡ ಕಥೆಯು ಸಿಗುತ್ತದೆ, ಇದು ವಿಜಯನಗರ ಸಾಮ್ರಾಜ್ಯದ ಅರಸರು ತಮ್ಮ ಸೈನ್ಯದ ತರಬೇತಿಗಾಗಿ, ಶಿವಾಜಿಯ ತಂದೆಯಿಂದ ಈ ಜಾಗವನ್ನು ವಶಪಡಿಸಿಕೊಂಡಿದ್ದರು ಎನ್ನುವ ಇತಿಹಾಸವಿದೆ. ಇದಾದ ನಂತರ ಬೆಂಗಳೂರು ನಗ

By Manjula Balaraj Tantry

ಮಾಕಳಿದುರ್ಗ ಟ್ರೆಕ್ಕಿಂಗಿಗೆ ಹೆಸರಾಂತ ಸ್ಥಳವಾಗಿದೆ. ಬೆಂಗಳೂರಿನಿಂದ 57.7 ಕಿ,ಮೀ ದೂರದಲ್ಲಿರುವ ಮಾಕಳಿದುರ್ಗವಿದ್ದು, ದೊಡ್ಡಬಳ್ಳಾಪುರದ ಬಳಿಯಿದೆ. ಈ ಸ್ಥಳವನ್ನು ಸುಮಾರು ಎರಡು ಗಂಟೆಯಲ್ಲಿ ಪ್ರಯಾಣಿಸಬಹುದು.

ಮಾರ್ಗ: ಬನಶಂಕರಿ-ರಾಜನಕುಂಟೆ, ದೊಡ್ಡಬಳ್ಳಾಪುರ-ಮಾಕಳಿದುರ್ಗ

ಪ್ರಯಾಣಿಸುವುದು ಹೇಗೆ: ಯಶವಂತಪುರದಿಂದ ಬೆಳಗ್ಗೆ 7:30ಕ್ಕೆ ರೈಲು

ಬೇರೆ ಪ್ರಯಾಣದ ವ್ಯವಸ್ಥೆ: ರಾಜ್ಯ ರಸ್ತೆಸಾರಿಗೆ ಸಂಸ್ಥೆ ಬಸ್ ಮತ್ತು ಖಾಸಗಿ ಬಸ್ಸುಗಳು

ಪ್ರಯಾಣ ಮತ್ತು ಟ್ರೆಕ್ಕಿಂಗ್ ಅವಧಿ: ಆರು ಗಂಟೆ

ಪ್ರಯಾಸದ ಹಂತಗಳು: ಸಾಧಾರಣದಿಂದ ಕಷ್ಟಕರವಾದ ಮಾಕಳಿದುರ್ಗದ ಟ್ರೆಕ್ಕಿಂಗ್ ಅನ್ನು ಬೆಂಗಳೂರಿಗರು ಯಾವತ್ತೂ ತಮ್ಮ ಲಿಸ್ಟ್ ನಲ್ಲಿ ಇಟ್ಟುಕೊಂಡಿರುತ್ತಾರೆ. ಈ ಬೆಟ್ಟವನ್ನು ಹತ್ತುವುದು ಅಷ್ಟು ಸುಲಭದ ಮಾತಲ್ಲ. ಒಟ್ಟಾರೆ ಈ ಬೆಟ್ಟದ ಟ್ರೆಕ್ಕಿಂಗ್ ಎಂಟು ಕಿಲೋಮೀಟರ್.

ಮಾಕಳಿದುರ್ಗ

PC : MAP

ಅದರೆ ಸಾಧಾರಣದಿಂದ ಕಷ್ಟಕರವಾದ ಮಾಕಳಿದುರ್ಗದ ಟ್ರೆಕ್ಕಿಂಗ್ ನಲ್ಲಿ ಭಯಂಕರ ಬೆಟ್ಟ ಹತ್ತಬೇಕಾಗಿರುವುದರಿಂದ ಇದೊಂದು ಅಷ್ಟು ಸುಲಭದ ಚಾರಣವಲ್ಲ. ಈ ಬೆಟ್ಟದ ಕೆಳಭಾಗದವರೆಗೂ ಟ್ರೆಕ್ಕಿಂಗ್ ಮಾಡದೇ ರೈಲ್ವೇ ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗಬಹುದಾಗಿದೆ.

ಮಾಕಳಿದುರ್ಗ ರೈಲ್ವೆ ನಿಲ್ದಾಣದಿಂದ ಇಳಿದ ಕೂಡಲೇ ಟ್ರೆಕ್ಕಿಂ ಆರಂಭವಾಗುತ್ತದೆ. ಆದರೂ, ಬೇಸ್ ಪಾಯಿಂಟ್ ತಲುಪಲು ಎರಡ್ಮೂರು ಕಿಲೋಮೀಟರ್ ಪ್ರಯಾಣಿಸಬೇಕಾಗುತ್ತದೆ. ಬೇಸ್ ಪಾಯಿಂಟ್ ತಲುಪಿದ ಕೂಡಲೇ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲು ಕೃಷ್ಣದೇವಾಲಯದಲ್ಲಿರಬಹುದು. ಹಳ್ಳಿಗರು ತಮ್ಮ ಎತ್ತಿನಗಾಡಿಯಲ್ಲಿ ಪ್ರಯಾಣಿಸುವ ದೃಶ್ಯವನ್ನೂ ನೋಡಬಹುದು.

ಮಾಕಳಿದುರ್ಗ

PC : Brunda Nagaraj

ಮಾಕಳಿದುರ್ಗದ ಇತಿಹಾಸವನ್ನು ಕೆದಕಲು ಹೊರಟರೆ ದೊಡ್ಡ ಕಥೆಯು ಸಿಗುತ್ತದೆ, ಇದು ವಿಜಯನಗರ ಸಾಮ್ರಾಜ್ಯದ ಅರಸರು ತಮ್ಮ ಸೈನ್ಯದ ತರಬೇತಿಗಾಗಿ, ಶಿವಾಜಿಯ ತಂದೆಯಿಂದ ಈ ಜಾಗವನ್ನು ವಶಪಡಿಸಿಕೊಂಡಿದ್ದರು ಎನ್ನುವ ಇತಿಹಾಸವಿದೆ. ಇದಾದ ನಂತರ ಬೆಂಗಳೂರು ನಗರದ ಸ್ಥಾಪಕರಾದ ಕೆಂಪೇಗೌಡರ ಅಧೀನಕ್ಕೆ ಈ ಪ್ರದೇಶ ಬರುತ್ತದೆ. ಈ ಪ್ರದೇಶದಲ್ಲಿ ಶಿವ ದೇವರ ದೇವಸ್ಥಾನ ಮತ್ತು ಬೆಟ್ಟದ ತುದಿಯಲ್ಲಿ ನಂದಿಯ ದೇವಸ್ಥಾನವಿದೆ.

ಮಾಕಳಿದುರ್ಗ

PC : Brunda Nagaraj

ಈ ಟ್ರೆಕ್ಕಿಂಗ್ ಅನ್ನು ನಾಲ್ಕು ಭಾಗವಾಗಿ ಪ್ರಯಾಣಿಸಬಹುದಾಗಿದೆ. ರೈಲ್ವೇ ಹಳಿಯಿಂದ ಆರಂಭವಾಗುವ ಟ್ರೆಕ್ಕಿಂಗ್ ಕೆಲವು ಕಿ.ಮೀ ದೂರ ಸಾಗುತ್ತದೆ. ನಂತರದ ಟ್ರೆಕ್ಕಿಂಗ್ ಕೃಷ್ಣದೇವಾಲಯದಿಂದ ಬೇಸ್ ನಿಂದ ಬೆಟ್ಟಹತ್ತುವ ಜಂಕ್ಷನ್ ವರೆಗೆ. ಮೂರನೇ ಟ್ರೆಕ್ಕಿಂಗ್ ಕಡಿದಾದ ಬೆಟ್ಟ ಮತ್ತು ಮರಗಳಿಂದ ಕೂಡಿದ ಟ್ರೆಕ್ಕಿಂಗ್, ಇದು ತೀರಾ ಕಷ್ಟಕರವಲ್ಲದಿದ್ದರೂ ಜಾಗರೂಕತೆಯಿಂದ ಹತ್ತಬೇಕಾಗುತ್ತದೆ. ಕೊನೆಯ ಟ್ರೆಕ್ಕಿಂಗ್ ಅಂದರೆ ಕೋಟೆಯನ್ನು ತಲುಪುವುದು, ಇದು ತೀರಾ ಶ್ರಮದಾಯಕ.

ಮಾಕಳಿದುರ್ಗ

PC : Brunda Nagaraj

ಬೆಟ್ಟ ಹತ್ತಬೇಕಾದರೆ ಚಾರಣ ಮಾಡಲು ಅನುಕೂಲವಾಗಲು ಅಲ್ಲಲ್ಲಿ ಗುಡ್ಡದಲ್ಲಿ ಚಾಕ್ ಪೀಸ್ ನಲ್ಲಿ ಹೇಗೆ ಹತ್ತಬೇಕು ಎನ್ನುವುದರ ಮಾರ್ಗಸೂಚಿಯನ್ನು ಹಾಕಲಾಗಿರುತ್ತದೆ. ಚಾರಣದ ವೇಳೆ ಕೆಲವೊಂದು ಗ್ರಾನೈಟ್ ಗುಡ್ಡಗಳೂ ಸಿಗುವುದರಿಂದ ಜಾರುವ ಸಾಧ್ಯತೆ ದಟ್ಟವಾಗಿರುತ್ತದೆ.

ಬೆಟ್ಟದ ಮೇಲಿನಿಂದ ಕಾಣಸಿಗುವ ದೃಶ್ಯಗಳು ನಯನಮನೋಹರವಾಗಿರುತ್ತದೆ. ಚಾರಣದ ಜೊತೆಗೆ, ಪುರಾತನ ಗುಹೆಗಳು, ಕೋಟೆಯ ಅವಶೇಷಗಳು ಮತ್ತು ದೇವಸ್ಥಾನಗಳನ್ನು ನೋಡಬಹುದು. ನೀವು ಬೆಟ್ಟದಿಂದ ಕೆಳಗೆ ಇಳಿಯುವ ವೇಳೆ, ಸೂರ್ಯಾಸ್ತಮಾನದ ದೃಶ್ಯವನ್ನೂ ನೋಡಬಹುದು.

ಮಾಕಳಿದುರ್ಗ

PC : Brunda Nagaraj

ಸ್ಕಂದಗಿರಿ ಟ್ರೆಕ್ಕಿಂಗ್: ಈ ಚಾರಣಕ್ಕೆ ರಾತ್ರಿವೇಳೆಯೂ ಅವಕಾಶವಿರುದರಿಂದ, ಬೆಟ್ಟ ಹತ್ತುವ ಉತ್ಸಾಹಿಗಳು, ಸುಂದರ ದೃಶ್ಯ ನೋಡಬಹುದೆಂದು ರಾತ್ರಿ ಚಾರಣ ಮಾಡುವುದನ್ನೇ ಬಯಸುತ್ತಾರೆ. ಬೇಸಿಗೆಕಾಲದಲ್ಲಿ ಈ ಪ್ರದೇಶ ತೀರಾ ಸೆಖೆಯಿಂದ ಕೂಡಿರುವುದರಿಂದ ಬೆಳಗ್ಗೆ ಆರು ಗಂಟೆಗೆ ಚಾರಣ ಆರಂಭಿಸುವುದು ಸೂಕ್ತ.

ಮಾಕಳಿದುರ್ಗಕ್ಕೆ ಹೋಗುವಾಗ ಗಮನಿಸಬೇಕಾದ ಅಂಶಗಳು: ಪ್ರತಿಯೊಂದು ಚಾರಣದ ಹಂತ ಮುಗಿದ ನಂತರ, ಒಮ್ಮೆ ಹಿಂದಿರುಗಿ ನೋಡುವುದನ್ನು ಮರೆಯದಿರಿ, ಯಾಕೆಂದರೆ ಒಮ್ಮೆಮ್ಮೆಯೂ ದೃಶ್ಯ ಬದಲಾಗುವ ಸಾಧ್ಯತೆಯಿದೆ. ತಿಳಿ ಆಕಾಶದಲ್ಲಿ ಮೋಡಗಳ ಸುಂದರ ಚಿತ್ರಣ ಕಣ್ಣಿಗೆ ಮುದನೀಡುತ್ತದೆ. ಬೆಟ್ಟದ ಮತ್ತು ಮಣ್ಣನ ಸುಂದರ ಮಿಶ್ರಣ ಚಾರಣಿಗರಿಗೆ ಖುಷಿ ನೀಡುತ್ತದೆ.

ಮಾಕಳಿದುರ್ಗ

PC : Brunda Nagaraj

ಬೆಟ್ಟದ ತುದಿಯಲ್ಲಿ ಮಂಗಗಳು ಸುತ್ತುವರಿಯುತ್ತದೆ ಜೊತೆಗೆ ದಕ್ಷಿಣ ಅಮೆರಿಕಾ ಖಂಡದ ಅನುಭವ ತುದಿಯಲ್ಲಿ ಸಿಗುತ್ತದೆ. ಮಾಕಳಿದುರ್ಗ ಎನ್ನುವುದು ಛಾಯಾಗ್ರಾಹಕರಿಗೆ ಸುಂದರವಾದ ಸ್ಥಳ. ಮರಗಳು, ತಿಳಿ ಆಕಾಶ, ಇದರ ಜೊತೆ ಅವಶೇಷಗಳ ಹಿನ್ನೋಟ ಮುಂತಾದವು ಫೋಟೋಗೆ ಹೇಳಿ ಮಾಡಿಸಿದಂತಿರುತ್ತದೆ. ಗುಹೆಗೆ ಹೋಗುವುದು, ಬೆಟ್ಟ ಹತ್ತುವುದು ಮುಂತಾದವನ್ನೂ ಚಾರಣದ ವೇಳೆ ಮಾಡಬಹುದು. ಬೆಟ್ಟದಿಂದ ಇಳಿಯಬೇಕಾದರೆ ನವಿಲು, ಹೆಣ್ಣುನವಿಲನ್ನೂ ನೋಡಬಹುದು.

ಎರಡು ಲೀಟರ್ ನೀರನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬಾರದು. ದೊಡ್ಡಬಳ್ಳಾಪುರದವರೆಗೆ ಎಲ್ಲೂ ತಿಂಡಿ ಮತ್ತು ಊಟದ ಸಿಗದಿರುವುದರಿಂದ, ಬೆಟ್ಟ ಹತ್ತುವ ಮುನ್ನವೇ ಪ್ಯಾಕ್ ಮಾಡಿಕೊಂಡು ಹೋಗಬೇಕು. ರಾತ್ರಿ ಚಾರಣ ಮಾಡುವಂತಿದ್ದರೆ ಟಾರ್ಚ್ ತೆಗೆದುಕೊಂಡು ಹೋಗಬೇಕು, ಜೊತೆಗೆ ಮಳೆಯಿಂದ ರಕ್ಷಸಿಸಿಕೊಳ್ಳಲು ಜಾಕೆಟ್, ಚಳಿ ತಡೆದುಕೊಳ್ಳಲು ಶ್ವೆಟ್ಟರ್ ಮುಂತಾದವು ಇದ್ದರೆ ಸೂಕ್ತ.

ಮಾಕಳಿದುರ್ಗ

PC : Brunda Nagaraj

ಮಾಕಳಿದುರ್ಗದಲ್ಲಿ ಏನೇನು ಸಿಗುತ್ತದೆ:? ಬಿಸ್ಕಿಟ್, ಚಾಕೋಲೇಟ್ ಮತ್ತು ನೀರು, ಸಮೀಪದ ರೈಲ್ವೆ ಸ್ಟೇಷನ್ ನಲ್ಲಿ ಸಿಗುತ್ತದೆ. ಎಳನೀರು ಕೂಡಾ ಬೆಟ್ಟದ ಬೇಸ್ ಪಾಯಿಂಟ್ ನಲ್ಲಿ ಸಿಗುತ್ತದೆ, ಜೊತೆಗೆ ಎರಡನೇ ಹಂತದ ಟ್ರೆಕ್ಕಿಂಗ್ ಬಳಿಯೂ ಸಿಗುತ್ತದೆ.

ಮಾಕಳಿದುರ್ಗ

PC:Brunda Nagaraj

ತಿಂಡಿ ತಿನುಸುಗಳನ್ನು ಪ್ಯಾಕ್ ಮಾಡಿಕೊಳ್ಳುವ ಮೊದಲು ಗಮನಿಸಬೇಕಾಗಿರುವುದು ಮಂಗಗಳ ಹಾವಳಿ, ಕೈಯಲ್ಲಿ ಇರುವುದನ್ನೆಲ್ಲಾ ಮಂಗಗಳು ಎಳೆದುಕೊಳ್ಳುವ ಸಾಧ್ಯತೆಯಿದೆ. ಸೂಕ್ತವಾದ ಬಟ್ಟೆ ಮತ್ತು ಪಾದರಕ್ಷೆಗಳನ್ನು ಧರಿಸಿ, ನಿರ್ಜಲೀಕರಣದಿಂದ ದೂರವಾಗಲು ಪ್ರತ್ಯೇಕ ನೀರಿನ ಬಾಟಲ್ ತೆಗೆದುಕೊಳ್ಳಿ. ಕ್ಯಾಮರಾ ಮತ್ತು ಇತರ ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗೃತೆಯಿಂದ ಇರಿ, ಯಾಕೆಂದರೆ ಯಾವುದೇ ಅಪಾಯದಿಂದ ಇದನ್ನು ರಕ್ಷಿಸಿಕೊಳ್ಳುವುದು ಕಷ್ಟ. ಈ ವಿಶೇಷ ಅನುಭವ ನೀಡುವ ಪ್ರವಾಸವನ್ನು ಪ್ಲಾನ್ ಮಾಡಿಕೊಳ್ಳಿ. ಆವಿಷ್ಕಾರ, ಅವಶೇಷ ಮುಂತಾದವುಗಳನ್ನು ನೋಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X