Search
  • Follow NativePlanet
Share
» »ವಿಭೀಷಣ ಗಣೇಶನ ತಲೆಗೆ ಮಾಡಿದ ಗಾಯ ಇಂದಿಗೂ ಇದೆಯಂತೆ ಈ ದೇವಸ್ಥಾನದಲ್ಲಿ

ವಿಭೀಷಣ ಗಣೇಶನ ತಲೆಗೆ ಮಾಡಿದ ಗಾಯ ಇಂದಿಗೂ ಇದೆಯಂತೆ ಈ ದೇವಸ್ಥಾನದಲ್ಲಿ

ಬೆಟ್ಟದ ಮೇಲಿರುವ ಈ ವಿಗ್ರಹವನ್ನು ನೋಡಲು 400 ಮೆಟ್ಟಿಲು ಹತ್ತಿ ಹೋಗಬೇಕು. ವಯಸ್ಸಾದವರಿಗೆ ಈ ದೇವಸ್ಥಾನಕ್ಕೆ ಹೋಗೋದು ಕಷ್ಟಸಾಧ್ಯ. ಇಂತಹ ಐತಿಹಾಸಿಕ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.

ದೀರ್ಘ ಸುಮಂಗಲಿಯಾಗಿರಲು ಈ ದೇವಸ್ಥಾನಕ್ಕೆ ಹೋಗಬೇಕಂತೆ!ದೀರ್ಘ ಸುಮಂಗಲಿಯಾಗಿರಲು ಈ ದೇವಸ್ಥಾನಕ್ಕೆ ಹೋಗಬೇಕಂತೆ!

 400ಮೆಟ್ಟಿಲುಗಳ ಮಂದಿರ

400ಮೆಟ್ಟಿಲುಗಳ ಮಂದಿರ

PC: Arunankapilan
ಗಣೇಶನ ಉಚ್ಚಿ ಪಿಲ್ಲರ್ ಮಂದಿರ ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿದೆ. ಇದು ರಾಕ್ ಫೋರ್ಟ್ ಬೆಟ್ಟದ ತುತ್ತತುದಿಯಲ್ಲಿದೆ. ಈ ಮಂದಿರವು ಸುಮಾರು 273 ಅಡಿ ಎತ್ತರದಲ್ಲಿದೆ. ಈ ಮಂದಿರವನ್ನು ತಲುಪಲು ಸುಮಾರು 400 ಮೆಟ್ಟಿಲುಗಳನ್ನು ಹತ್ತಬೇಕು. ಬೆಟ್ಟದ ಮೇಲೆ ಇರುವುದರಿಂದ ಈ ಮಂದಿರ ಬಹಳ ಸುಂದರವಾಗಿ ಕಾಣಿಸುತ್ತದೆ. ಈ ಮಂದಿರದ ಕಥೆಯು ಇನ್ನೂ ವಿಶೇಷವಾಗಿದೆ. ಪುರಾಣದ ಪ್ರಕಾರ ಈ ಮಂದಿರದ ಕಥೆಯು ರಾವಣನ ತಮ್ಮ ವಿಭೀಷಣನಿಗೆ ಸಂಬಂಧಿಸಿದ್ದು.

ಮಂದಿರದ ಇತಿಹಾಸ

ಮಂದಿರದ ಇತಿಹಾಸ

PC:Arunankapilan
ರಾವಣನ ವಧೆ ಮಾಡಿದ ನಂತರ ರಾಮ ತನ್ನ ಭಕ್ತನಾದ ರಾವಣನ ತಮ್ಮ ವಿಭೀಷಣನಿಗೆ ವಿಷ್ಣುವಿನ ಮೂರ್ತಿಯನ್ನು ನೀಡುತ್ತಾನೆ. ವಿಭೀಷಣ ಆ ಮೂರ್ತಿಯನ್ನು ತೆಗೆದುಕೊಂಡು ಲಂಕೆಗೆ ಹೊರಡಲಿದ್ದ. ವಿಭೀಷಣ ರಾಕ್ಷಸ ವಂಶಕ್ಕೆ ಸೇರಿದವನಾಗಿದ್ದರಿಂದ ದೇವತೆಗಳಿಗೆ ವಿಷ್ಣುವಿನ ಮೂರ್ತಿ ಲಂಕೆಗೆ ಹೋಗುವುದು ಇಷ್ಟವಿರಲಿಲ್ಲ. ಎಲ್ಲಾ ದೇವತೆಗಳು ಸೇರಿ ಗಣೇಶನಲ್ಲಿ ಸಹಾಯ ಕೋರಿದರು.

ಮೂರ್ತಿ ಜೊತೆ ಲಂಕೆ ತೆರಳಿದ ವಿಭೀಷಣ

ಮೂರ್ತಿ ಜೊತೆ ಲಂಕೆ ತೆರಳಿದ ವಿಭೀಷಣ

PC:Balaji Viswanathan
ಆ ಮೂರ್ತಿಯನ್ನು ಯಾವ ಜಾಗದಲ್ಲಿ ಇಡುತ್ತಾರೋ ಅದೇ ಜಾಗದಲ್ಲಿ ಆ ಮೂರ್ತಿ ಸ್ಥಾಪನೆಯಾಗುತ್ತದೆ ಎನ್ನಲಾಗಿತ್ತು. ವಿಭೀಷಣ ಆ ಮೂರ್ತಿಯನ್ನು ಹಿಡಿದು ಲಂಕೆಗೆ ತೆರಳುವಾಗ ತಿರುಚಿ ಸಿಗುತ್ತದೆ. ಅಲ್ಲಿ ಕಾವೇರಿ ನದಿಯಲ್ಲಿ ಸ್ಥಾನ ಮಾಡುವ ಮನಸ್ಸಾಗುತ್ತದೆ. ಆ ಮೂರ್ತಿಯನ್ನು ಯಾರದಾದರೂ ಕೈಯಲ್ಲಿ ಕೊಡುವ ಸಲುವಾಗಿ ಹುಡುಕಾಡುತಿದ್ದ.

ಮೂರ್ತಿಯನ್ನು ನೆಲದಲ್ಲಿಟ್ಟ ಗಣೇಶ

ಮೂರ್ತಿಯನ್ನು ನೆಲದಲ್ಲಿಟ್ಟ ಗಣೇಶ

PC:Ranjanigopi
ಆಗ ಗಣೇಶ ಓರ್ವ ಬಾಲಕನ ರೂಪದಲ್ಲಿ ಅಲ್ಲಿಗೆ ಬರುತ್ತಾನೆ. ವಿಭೀಷಣ ಗಣೇಶನಿಗೆ ವಿಷ್ಣುವಿನ ಮೂರ್ತಿಯನ್ನು ಹಿಡಿಯಲು ಕೊಡುತ್ತಾನೆ. ಅದನ್ನು ನೆಲದಲ್ಲಿ ಇಡಬಾರದೆಂದು ಪ್ರಾರ್ಥಿಸುತ್ತಾನೆ. ವಿಭೀಷಣ ಸ್ನಾನಕ್ಕೆಂದು ಹೋದಾಗ ಗಣೇಶ ಆ ಮೂರ್ತಿಯನ್ನು ನೆಲದ ಮೇಲೆ ಇಟ್ಟುಬಿಟ್ಟ. ವಿಭೀಷಣ ಹಿಂದಿರುಗಿ ಬರುವಾಗ ಮೂರ್ತಿ ನೆಲದ ಮೇಲಿತ್ತು. ಮೂರ್ತಿಯನ್ನು ಎತ್ತಲು ಹರಸಾಹಸ ಪಟ್ಟನು ಆದರೂ ಆಗಲಿಲ್ಲ. ಮೂರ್ತಿಯನ್ನು ನೆಲದ ಮೇಲೆ ಇಟ್ಟದ್ದಕ್ಕೆ ಗಣೇಶನ ಮೇಲೆ ಕೋಪ ಬಂದು ಗಣೇಶನನ್ನು ಹುಡುಕಲು ಪ್ರಾರಂಭಿಸಿದ. ಗಣೇಶ ವಿಭೀಷಣನಿಂದ ತಪ್ಪಿಸಿಕೊಳ್ಳಲು ಈ ಬೆಟ್ಟದ ಮೇಲೆ ಹತ್ತಿದ. ಮುಂದೆ ರಸ್ತೆ ಇಲ್ಲದ ಕಾರಣ ಅಲ್ಲೇ ಕುಳಿತುಕೊಂಡ.

ಗಣೇಶನ ತಲೆಗೆ ಹೊಡೆ ವಿಭೀಷಣ

ಗಣೇಶನ ತಲೆಗೆ ಹೊಡೆ ವಿಭೀಷಣ

PC:Ankushsamant
ಗಣೇಶನನ್ನು ನೋಡಿದ ವಿಭೀಷಣ ಕೋಪದಿಂದ ಗಣೇಶನ ತಲೆಗೆ ಹೊಡೆದಿದ್ದಾನೆ. ಆ ಸಂದರ್ಭದಲ್ಲಿ ಗಣೇಶ ತನ್ನ ನಿಜ ಸ್ವರೂಪದಲ್ಲಿ ದರ್ಶನ ನೀಡಿದನು. ಗಣೇಶನ ನಿಜ ರೂಪ ಕಂಡ ವಿಭೀಷಣ ಗಣೇಶನಲ್ಲಿ ಕ್ಷಮೆ ಕೇಳಿದನು. ಅಂದಿನಿಂದ ಗಣೇಶ ಅದೇ ಬೆಟ್ಟದ ಮೇಲೆ ಉಚ್ಚಿ ಪಿಲ್ಲಯರ್ ರೂಪದಲ್ಲಿ ಇದ್ದಾನೆ ಎನ್ನಲಾಗುತ್ತದೆ.

ಇಂದಿಗೂ ಇದೆ ಗಣೇಶನ ತಲೆಯಲ್ಲಿ ಗಾಯ

ಇಂದಿಗೂ ಇದೆ ಗಣೇಶನ ತಲೆಯಲ್ಲಿ ಗಾಯ

PC:Ilasun
ವಿಭೀಷಣ ಗಣೇಶನ ತಲೆಗೆ ಹೊಡೆದಿದ್ದರ ಗುರುತು ಇಂದಿಗೂ ಇದೆ ಎನ್ನಲಾಗುತ್ತದೆ. ಈ ಮಂದಿರದಲ್ಲಿರುವ ಗಣೇಶನ ಮೂರ್ತಿಯಲ್ಲಿ ಆ ಗುರುತನ್ನು ಕಾಣಬಹುದು.

 ರಾಕ್ ಫೋರ್ಟ್ ಗಣೇಶ

ರಾಕ್ ಫೋರ್ಟ್ ಗಣೇಶ

PC:Rajesh
ಎತ್ತರವಾದ ಬೆಟ್ಟದ ಮೇಲೆ ಇರುವುದರಿಂದ ಇದನ್ನು ರಾಕ್‌ ಫೋರ್ಟ್ ಗಣೇಶ ಎಂದು ಕರೆಯುತ್ತಾರೆ.

ವಾಸ್ತು ಶಿಲ್ಪಗಳು

ವಾಸ್ತು ಶಿಲ್ಪಗಳು

ಉಚ್ಚೀ ಪಿಲ್ಲರ್ ಗಣೇಶನ ದೇವಸ್ಥಾನದಲ್ಲಿರುವ ವಾಸ್ತು ಶಿಲ್ಪಗಳು

ಶಿವ, ಪಾರ್ವತಿ ಕೂಡಾ ಇದ್ದಾರೆ

ಶಿವ, ಪಾರ್ವತಿ ಕೂಡಾ ಇದ್ದಾರೆ

PC:Neilsatyam
ಈ ದೇವಸ್ಥಾನದಲ್ಲಿ 400 ಮೆಟ್ಟಿಲುಗಳಿದ್ದು ಶಿವ, ಪಾರ್ವತಿ ಹಾಗು ಗಣೇಶನ ವಿಗ್ರಹವಿದೆ.

Read more about: temple trichy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X