Search
  • Follow NativePlanet
Share
» »ದಕ್ಷಿಣ ಜನಗಳ ನೆಚ್ಚಿನ ಉತ್ತರದ ಪ್ರವಾಸಿ ತಾಣಗಳು

ದಕ್ಷಿಣ ಜನಗಳ ನೆಚ್ಚಿನ ಉತ್ತರದ ಪ್ರವಾಸಿ ತಾಣಗಳು

ವಿವಿಧ ಸಂಸ್ಕೃತಿಗಳ ನಡುವೆಯೂ ಏಕತೆಯಿಂದ ಬದುಕುತ್ತಿರುವ ಅಗಾಧ ಭಾರತ ಉಪಖಂಡವು ಪ್ರಮುಖವಾಗಿ ಉತ್ತರ ಭಾರತ ಹಾಗು ದಕ್ಷಿಣ ಭಾರತಗಳೆಂದು ವಿಭಾಗಿಸಲ್ಪಟ್ಟಿದೆ. ಅದೇ ರೀತಿ ಈ ಎರಡೂ ಭಾಗಗಳಲ್ಲಿ ಸಂಪ್ರದಾಯ ಆಚರಣೆಗಳೂ ವಿಭಿನ್ನವಾಗಿವೆ. ಉತ್ತರ ಭಾರತದ ಬಹುತೇಕ ಪ್ರದೇಶಗಳಲ್ಲಿ ಹೆಚ್ಚಾಗಿ ಬಳಸಲ್ಪಡುವ ಭಾಷೆ ಹಿಂದಿ. ಸಾಮಾನ್ಯವಾಗಿ ದಕ್ಷಿಣ ಭಾರತವು ಪಶ್ಚಿಮ ಘಟ್ಟ ಹಾಗು ಪೂರ್ವಘಟ್ಟದ ಹಸಿರಿನಿಂದ ಕಂಗೊಳಿಸಿದರೆ ಉತ್ತರ ಭಾರತವು ಸುಡುವ ಮರಭೂಮಿಯಿಂದ ಹಿಡಿದು ಮೈಯೆಲ್ಲಾ ತಂಪಾಗಿಸುವ ಹಿಮಾಲಯದವರೆಗೆ ವಿಭಿನ್ನವಾದ ಭೌತಿಕತೆಯನ್ನು ಹೊಂದಿದೆ.

ಉತ್ತರ ಭಾರತ ಪ್ರವಾಸೋದ್ಯಮವು ತನ್ನದೆ ಆದ ವಿಶೀಷ್ಟತೆಯಿಂದ ಕೂಡಿದ್ದು ಹಲವು ಪ್ರಖ್ಯಾತ, ವಿಶ್ವ ವಿಖ್ಯಾತ ಪ್ರವಾಸಿ ತಾಣಗಳನ್ನು ಇಲ್ಲಿ ಕಾಣಬಹುದು. ಕೆಲವು ಸಾಹಸಮಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದರೆ ಇನ್ನೂ ಕೆಲವು ಪ್ರಾಕೃತಿಕ ಸೌಂದರ್ಯಕ್ಕಾಗಿ ಜನಪ್ರಿಯತೆ ಪಡೆದಿವೆ. ಅಷ್ಟೆ ಅಲ್ಲ, ಆಧ್ಯಾತ್ಮಿಕತೆಯು ಹಾಸು ಹೊಕ್ಕಾಗಿರುವ ಧಾರ್ಮಿಕ ಯಾತ್ರಾ ಕ್ಷೇತ್ರಗಳು ಕೂಡ ಉತ್ತರ ಭಾರತದಲ್ಲಿ ಎಲ್ಲೆಡೆ ಕಾಣಬಹುದು. ಧಾರ್ಮಿಕ ನಗರಿ ಕಾಶಿಯಿಂದ ಹಿಡಿದು ಮೋಕ್ಷ ಕರುಣಿಸುವ ಅಮರನಾಥ್ ವರೆಗಿನ ಪುಣ್ಯ ಧಾಮಗಳು ಕಂಡುಬರುವುದು ಉತ್ತರ ಭಾರತದಲ್ಲಿ. ಈ ಲೇಖನವು ಉತ್ತರ ಭಾರತದ ಕೆಲವು ಪ್ರಸಿದ್ಧ ಪ್ರವಾಸಿ ತಾಣಗಳ ಪರಿಚಯ ಮಾಡಿಸುತ್ತದೆ. ಇಲ್ಲಿ ನೀಡಲಾಗಿರುವ ಪ್ರವಾಸಿ ತಾಣಗಳನ್ನು ಸಾಂಪ್ರದಾಯಿಕ ನಗರಗಳು, ಆಧ್ಯಾತ್ಮಿಕ ನಗರಗಳು, ಹಿಮಾಲಾಯ ಪ್ರದೇಶಗಳು, ಸಾಹಸಮಯ ತಾಣಗಳು ಹೀಗೆ ವಿವಿಧ ಸ್ತರಗಳಲ್ಲಿ ವಿಂಗಡಿಸಿ ನೀಡಲಾಗಿದೆ.

ಆಧ್ಯಾತ್ಮಿಕ ನಗರಿಗಳು:- ಉತ್ತರಕಾಶಿ:

ಆಧ್ಯಾತ್ಮಿಕ ನಗರಿಗಳು:- ಉತ್ತರಕಾಶಿ:

ಉತ್ತರಾಖಂಡ್ ರಾಜ್ಯದಲ್ಲಿರುವ ಉತ್ತರಕಾಶಿ ಪಟ್ಟಣವು ಭಾಗೀರತಿ ನದಿ ತಟದ ಮೇಲೆ ನೆಲೆಸಿರುವ ಒಂದು ಸುಂದರ ಗಿರಿ ಪ್ರದೇಶವಾಗಿದೆ. ಕಂದರ ದೇವತಾ ಮಂದಿರ, ವಿಶ್ವನಾಥ ದೇವಾಲಯ, ಕುತೇತಿ ದೇವಿ ದೇವಾಲಯ ಮುಂತಾದ ಧಾರ್ಮಿಕ ತಾಣಗಳನ್ನು ಇಲ್ಲಿ ಕಾಣಬಹುದು.

ಇರುವುದು: ಡೆಹ್ರಾಡೂನ್ ನಿಂದ 205 ಕಿ.ಮೀ ದೂರದಲ್ಲಿ.
ನೋಡಲೇಬೇಕಾದ ಸ್ಥಳಗಳು: ಮಣಿಕರ್ಣಿಕಾ ಘಾಟ್, ವಿಶ್ವನಾಥ್ ದೇವಾಲಯ, ಆಶ್ರಮಗಳು

ಚಿತ್ರಕೃಪೆ: Atarax42

ಕಾಶಿ/ವಾರಣಾಸಿ:

ಕಾಶಿ/ವಾರಣಾಸಿ:

ಇನ್ನೂ ಅಸ್ತಿತ್ವದಲ್ಲಿರುವ ಜಗತ್ತಿನ ಅತಿ ಪುರಾತನ ನಗರಗಳ ಪೈಕಿ ಒಂದಾಗಿರುವ ಉತ್ತರ ಪ್ರದೇಶ ರಾಜ್ಯದಲ್ಲಿರುವ ವಾರಣಸಿಯು ಭಾರತದ ಆಧ್ಯಾತ್ಮಿಕ ರಾಜಧಾನಿ ಎಂತಲೆ ಪ್ರಸಿದ್ಧವಾಗಿದೆ. ಕಾಶಿ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಈ ನಗರಿಯು ಪ್ರತಿ ವರ್ಷವು ಅಸಂಖ್ಯಾತ ಪ್ರವಾಸಿಗರನ್ನು ಕಾಣುತ್ತದೆ. ಉತ್ತರ ಭಾರತದ ಸಾಂಸ್ಕೃತಿಕ ಕೇಂದ್ರ ಎಂಬ ಹೆಗ್ಗಳಿಕೆಯನ್ನೂ ಈ ನಗರ ಪಡೆದಿದೆ.

ಇರುವುದು: ಲಖನೌ ಪಟ್ಟಣದಿಂದ 320 ಕಿ.ಮೀ ದೂರದಲ್ಲಿ.
ನೋಡಲೇಬೇಕಾದ ಸ್ಥಳಗಳು: ಜಂತರ್ ಮಂತರ್(ವಾರಣಾಸಿ), ರಾಮನಗರ್ ಕೋಟೆ, ಘಾಟ್‍ಗಳು, ಕಾಶಿ ವಿಶ್ವನಾಥ ದೇವಾಲಯ

ಚಿತ್ರಕೃಪೆ: Jeeheon Cho

ರುದ್ರಪ್ರಯಾಗ್:

ರುದ್ರಪ್ರಯಾಗ್:

ರುದ್ರಭಯಂಕರ ಪರಮೇಶ್ವರನಿಗೆ ಸಮರ್ಪಿತವಾದ ಹೆಸರನ್ನು ಪಡೆದಿರುವ ಈ ಪುಣ್ಯ ನಗರವು ಒಂದು ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾಗಿದೆ. ಇದೊಂದು ಉತ್ತರ ಭಾರತದ ಜನಪ್ರಿಯ ಪ್ರವಾಸಿ ಕ್ಷೇತ್ರವಾಗಿದೆ. ಅಲಕನಂದಾ ಹಾಗು ಮಂದಾಕಿನಿ ನದಿಗಳ ಸಂಗಮವನ್ನು ಇಲ್ಲಿ ಕಾಣಬಹುದು.

ಇರುವುದು: ಡೆಹ್ರಾಡೂನ್ ನಿಂದ 180 ಕಿ.ಮೀ ದೂರದಲ್ಲಿ.
ನೋಡಲೇಬೇಕಾದ ಸ್ಥಳಗಳು: ಕೇದಾರನಾಥ್ ದೇವಾಲಯ, ಸೋನ್ ಪ್ರಯಾಗ್, ಸಾಹಸಮಯ ಚಾರಣ ಮಾರ್ಗಗಳು

ಚಿತ್ರಕೃಪೆ: Vvnataraj

ಹರಿದ್ವಾರ:

ಹರಿದ್ವಾರ:

ಉತ್ತರಾಖಂಡ್ ರಾಜ್ಯದ ಹರಿದ್ವಾರವು ಜಗದ್ವಿಖ್ಯಾತ ಉತ್ತರ ಭಾರತದ ಪ್ರವಾಸಿ ತಾಣವಾಗಿರುವುದಲ್ಲದೆ ಭಾರತದ ಅತಿ ಪವಿತ್ರ ಕ್ಷೇತ್ರಗಳ ಪೈಕಿ ಒಂದಾಗಿದೆ. ಗಂಗಾ ನದಿ ತಟದಲ್ಲಿ ನೆಲೆಸಿರುವ ಈ ತಾಣವನ್ನು ಭಾರತದ ಏಳು ಪುಣ್ಯ್ ಕ್ಷೇತ್ರಗಳ ಪೈಕಿ ಒಂದಾಗಿ ಪರಿಗಣಿಸಲಾಗಿದೆ.

ಇರುವುದು: ಡೆಹ್ರಾಡೂನ್ ನಿಂದ 55 ಕಿ.ಮೀ ದೂರದಲ್ಲಿ.
ನೋಡಲೇಬೇಕಾದ ಸ್ಥಳಗಳು/ಆಕರ್ಷಣೆ: ಹರ್ ಕಿ ಪೌರ್ ನಲ್ಲಿ ನಡೆಯುವ ಗಂಗಾ ಆರತಿ, ಮಾನಸಾ ದೇವಿ ದೇವಾಲಯ, ಗಂಗಾ ನದಿಯ ಪುಣ್ಯ ಸ್ನಾನ

ಚಿತ್ರಕೃಪೆ: Sanatansociety

ರಿಶಿಕೇಶ್:

ರಿಶಿಕೇಶ್:

ಉತ್ತರಾಖಂಡದ ತೆಹ್ರಿ-ಗಡ್ವಾಲ್ ಪ್ರದೇಶದಲ್ಲಿರುವ ರಿಶಿಕೇಶ್ ಪ್ರಸಿದ್ಧ ಯಾತ್ರಾ ಕ್ಷೇತ್ರಗಳ ಪೈಕಿ ಒಂದಾಗಿದೆ. ಪ್ರತಿ ವರ್ಷವು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುತ್ತಾರೆ.

ಇರುವುದು: ಡೆಹ್ರಾಡೂನ್ ನಿಂದ 45 ಕಿ.ಮೀ ದೂರದಲ್ಲಿ.
ನೋಡಲೇಬೇಕಾದ ಸ್ಥಳಗಳು/ಆಕರ್ಷಣೆ: ಲಕ್ಷ್ಮಣ ಝೂಲಾ, ಭರತ ಮಂದಿರ, ಆಶ್ರಮಗಳು, ದೇವಾಲಯಗಳು, ರಿಶಿಕುಂಡ

ಚಿತ್ರಕೃಪೆ: Tylersundance

ಅಲಹಾಬಾದ್:

ಅಲಹಾಬಾದ್:

ಪ್ರಯಾಗ್ ಎಂತಲೂ ಕರೆಯಲ್ಪಡುವ ಉತ್ತರ ಪ್ರದೇಶದ ಅಲಹಾಬಾದ್ ಮಹಾನಗರವು ತನ್ನಲ್ಲಿರುವ ಗಂಗಾ, ಯಮುನಾ ಹಾಗು ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಮತ್ತು ಪ್ರತಿ 12 ವರ್ಷಗಳಿಗೊಮ್ಮೆ ಜರುಗುವ ವಿಶ್ವ ವಿಖ್ಯಾತ ಕುಂಭ ಮೇಳದಿಂದಾಗಿ ಅತ್ಯಂತ ಹೆಸರುವಾಸಿಯಾದ ಉತ್ತರ ಭಾರತದ ಪ್ರವಾಸಿ ತಾಣವಾಗಿದೆ.

ಇರುವುದು: ಲಖನೌನಿಂದ 200 ಕಿ.ಮೀ ದೂರದಲ್ಲಿ.
ನೋಡಲೇಬೇಕಾದ ಸ್ಥಳಗಳು/ಆಕರ್ಷಣೆ: ತ್ರಿವೇಣಿ ಸಂಗಮ, ಅಲ್ ಫ್ರೆಡ್ ಪಾರ್ಕ್, ಅಲಹಾಬಾದ್ ಕೋಟೆ ಮುಂತಾದವು.

ಚಿತ್ರಕೃಪೆ: Abhijeet Vardhan

ಮಥುರಾ - ವೃಂದಾವನ:

ಮಥುರಾ - ವೃಂದಾವನ:

ಬಾಲ ಕೃಷ್ಣನ ಮುದ್ದು ತಮಾಷೆಗಳೊಂದಿಗೆ ಬೇಸುಗೆ ಹೊಂದಿರುವ ಈ ಪುಣ್ಯ ನಗರವು ಒಂದು ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿಗೆ ಭೇಟಿ ನೀಡಿದಾಗ ಇಲ್ಲಿನ ಪ್ರಖ್ಯಾತ ಸಿಹಿ ಖಾದ್ಯವಾದ ಮಥುರಾ ಪೇಡೆಯ ರುಚಿಯನ್ನು ಸವಿಯಲು ಮರೆಯದೆ ಇರಿ.

ಇರುವುದು: ಆಗ್ರಾದಿಂದ 60 ಕಿ.ಮೀ ದೂರದಲ್ಲಿ.
ನೋಡಲೇಬೇಕಾದ ಸ್ಥಳಗಳು/ಆಕರ್ಷಣೆ: ದ್ವಾರಕಾಧೀಶ ದೇವಾಲಯ, ಶ್ರೀ ಕೃಷ್ಣ ಜನ್ಮಭೂಮಿ ದೇವಾಲಯಗಳು

ಚಿತ್ರಕೃಪೆ: Dr.Rohit choudhary raj

ಸಾಂಪ್ರದಾಯಿಕ ನಗರಗಳು:- ಫತೇಪುರ್ ಸಿಕ್ರಿ:

ಸಾಂಪ್ರದಾಯಿಕ ನಗರಗಳು:- ಫತೇಪುರ್ ಸಿಕ್ರಿ:

ಕೆಂಪು ಮರಳುಗಲ್ಲಿನ ನಗರಿ ಅಥವಾ ರೆಡ್ ಸ್ಯಾಂಡ್ ಸ್ಟೋನ್ ಸಿಟಿ ಎಂದು ಜನಪ್ರಿಯವಾಗಿರುವ ಈ ಐತಿಹಾಸಿಕ ನಗರವು ಅಕ್ಬರ್ ಚಕ್ರವರ್ತಿಯ ಆಡಳಿತದಲ್ಲಿ ರಾಜಧಾನಿಯಾಗಿ ಮೆರೆದಿತ್ತು. ಈ ಸ್ಮಾರಕ ನಗರವು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಇರುವುದು: ಆಗ್ರಾ ನಗರದಿಂದ 37 ಕಿ.ಮೀ ದೂರದಲ್ಲಿ ನೆಲೆಸಿದೆ.
ನಿರ್ಮಾಣ: 1570 ರಲ್ಲಿ ಅಕ್ಬರ್ ಚಕ್ರವರ್ತಿಯಿಂದ.
ನೋಡಲೇಬೇಕಾದ ಸ್ಥಳಗಳು: ಬುಲಂದ್ ದರ್ವಾಜಾ, ಜಾಮಾ ಮಸೀದಿ, ಸಲೀಮ್ ಚಿಶ್ತಿ ದರ್ಗಾ

ಚಿತ್ರಕೃಪೆ: Shakti

ಆಗ್ರಾ:

ಆಗ್ರಾ:

ಯಮುನಾ ನದಿ ತಟದಲ್ಲಿ ನೆಲೆಸಿರುವ ಆಗ್ರಾ ಪಟ್ಟಣವು ಪ್ರವಾಸೋದ್ಯಮದ ದೃಷ್ಟಿಯಿಂದ ಒಂದು ಮಹತ್ವದ ನಗರವಾಗಿದೆ. ಕೇವಲ ಭಾರತೀಯರಲ್ಲದೆ ವಿದೇಶಿಯರಿಂದಲೂ ಸಹ ಈ ಪಟ್ಟಣವು ಭೇಟಿ ನೀಡಲ್ಪಡುತ್ತದೆ. ಈ ಪಟ್ಟಣದ ಅತಿ ಪ್ರಮುಖ ಆಕರ್ಷಣೆಯೆಂದರೆ ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ತಾಜ್ ಮಹಲ್.

ಇರುವುದು: ದೆಹಲಿಯಿಂದ 242 ಕಿ.ಮೀ ದೂರದಲ್ಲಿ.
ನೋಡಲೇಬೇಕಾದ ಸ್ಥಳಗಳು: ತಾಜ್ ಮ್ಹಲ್, ಆಗ್ರಾ ಕೋಟೆ, ಮಂಕಾಮೇಶ್ವರ ದೇವಾಲಯ, ಗುರು ಕಾ ತಾಲ್

ಚಿತ್ರಕೃಪೆ: Prakash.saivasan

ಖಜುರಾಹೊ:

ಖಜುರಾಹೊ:

ಮಧ್ಯ ಪ್ರದೇಶದ ಛತ್ತರ್ಪುರ್ ಜಿಲ್ಲೆಯಲ್ಲಿರುವ ಖಜುರಾಹೊ ಒಂದು ಉನೆಸ್ಕೊ ಮಾನ್ಯತೆ ಪಡೆದ ಸ್ಮಾರಕಗಳ ನಗರಿಯಾಗಿದ್ದು ಹೆಸರುವಾಸಿಯಾದ ಪ್ರವಾಸಿ ತಾಣವಾಗಿದೆ. ಇಲ್ಲಿ ಹಲವು ಮಧ್ಯಕಾಲದ ಹಿಂದು ಹಾಗು ಜೈನ ದೇವಾಲಯಗಳನ್ನು ಕಾಣಬಹುದು. ಮಿಥುನ ಶಿಲ್ಪಗಳಿಗಾಗಿ ಈ ಸ್ಥಳವು ಜಗದ್ವಿಖ್ಯಾತವಾಗಿದೆ. ಶೃಂಗಾರ ರಸ ಉಕ್ಕಿಸುವ ಖಜುರಾಹೊವಿನ ಶಿಲ್ಪ ಕಲೆಗಳು.

ಇರುವುದು: ಭೋಪಾಲ್ ನಿಂದ ಸುಮಾರು 370 ಕಿ.ಮೀ ದೂರದಲ್ಲಿ.
ನೋಡಲೇಬೇಕಾದ ಸ್ಥಳಗಳು: ಮಿಥುನ ಶಿಲ್ಪಕಲೆಗಳು, ಬಂಬರ್ ಬೈನಿ, ಕಂದರಿಯಾ ಮಹಾದೇವ್, ಹೇಮವತಿ, ಬೀಜಮಂಡಲ್

ಚಿತ್ರಕೃಪೆ: Aakash.gautam

ಹಿಮಾಲಯ ಪ್ರದೇಶಗಳು:- ಮನಾಲಿ:

ಹಿಮಾಲಯ ಪ್ರದೇಶಗಳು:- ಮನಾಲಿ:

ಮನಾಲಿ ಹಿಮಾಚಲ ಪ್ರದೇಶದ ಒಂದು ನಯನ ಮನೋಹರ ಗಿರಿಧಾಮ ಪ್ರದೇಶವಾಗಿದೆ. ಉತ್ತರ ಭಾರತದ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿ ಅಸಂಖ್ಯಾತ ಪ್ರವಾಸಿಗರನ್ನು ಈ ಪ್ರದೇಶವು ಆಕರ್ಷಿಸುತ್ತದೆ.

ಇರುವುದು: ಹಿಮಾಚಲ ಪ್ರದೇಶದಲ್ಲಿ.
ನೋಡಲೇಬೇಕಾದ ಸ್ಥಳಗಳು/ಆಕರ್ಷಣೆ: ನೈನಿತಾಲ್, ರಹೆಲ್ಲಾ ಜಲಪಾತ, ಸೋಲಂಗ್ ಕಣಿವೆ

ಚಿತ್ರಕೃಪೆ: Jishnu2602

ಲೇಹ್:

ಲೇಹ್:

ಜಮ್ಮು೦ಕಾಶ್ಮೀರ ರಾಜ್ಯದಲ್ಲಿರುವ ಲೇಹ್, ಉಸಿರನ್ನು ಬಿಗಿ ಹಿಡಿಯುವಂತಹ ರಮಣೀಯ ನೋಟವನ್ನು ಹೊಂದಿದ್ದು ಪ್ರವಾಸಿಗರನ್ನು ಅತಿ ಹರ್ಷದಿಂದ ಸ್ವಾಗತಿಸುತ್ತದೆ. ದಕ್ಷಿಣ ಭಾರತದಿಂದ ಸಾಕಷ್ಟು ಜನರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

ಇರುವುದು: ಜಮ್ಮು ಕಾಶ್ಮೀರ ರಾಜ್ಯದಲ್ಲಿ.
ಸಮಯ: ಜೂನ್ ನಿಂದ ಸೆಪ್ಟಂಬರ್ ಅಂತ್ಯದ ವರೆಗೆ
ನೋಡಲೇಬೇಕಾದ ಸ್ಥಳಗಳು/ಆಕರ್ಷಣೆ: ಚಾರಣ, ಪರ್ವತಾರೋಹಣ, ವಾಟರ್ ರಾಫ್ಟಿಂಗ್

ಚಿತ್ರಕೃಪೆ: McKay Savage

ಲಡಾಖ್:

ಲಡಾಖ್:

ಪ್ರಾಕೃತಿಕ ಸೌಂದರ್ಯ, ಹಿಮಚ್ಛಾದಿತ ಪರ್ವತಗಳ ವಿಹಂಗಮ ನೋಟವನ್ನು ಸವಿಯಲು ಬಯಸ್ಸಿದ್ದಲ್ಲಿ ಭೇಟಿ ನೀಡಿ ಉತ್ತರ ಭಾರತದ ಪ್ರಖ್ಯಾತ ಪ್ರವಾಸಿ ತಾಣ ಲಡಾಖ್ ಗೆ.

ಇರುವುದು: ಜಮ್ಮು ಕಾಶ್ಮೀರ ರಾಜ್ಯದಲ್ಲಿ.
ಸಮಯ: ಜೂನ್ ನಿಂದ ಸೆಪ್ಟಂಬರ್ ಅಂತ್ಯದ ವರೆಗೆ
ನೋಡಲೇಬೇಕಾದ ಸ್ಥಳಗಳು/ಆಕರ್ಷಣೆ: ಲೇಹ್ ಅರಮನೆ, ಶಾಂತಿ ಸ್ತೂಪ ಮುಂತಾದವುಗಳು.

ಚಿತ್ರಕೃಪೆ: Incomposition

ಶಿಮ್ಲಾ:

ಶಿಮ್ಲಾ:

ಉತ್ತರ ಭಾರತ ಪ್ರವಾಸೋದ್ಯಮದ ಅತಿ ಮಹತ್ತರ ಸ್ಥಳವಾಗಿ ಶಿಮ್ಲಾ ನಗರವು ಕಂಗೊಳಿಸುತ್ತದೆ. ಹಳೆಯ ಕೆಲವು ಪ್ರಖ್ಯಾತ ಹಿಂದಿ ಚಲನ ಚಿತ್ರಗಳು ಈ ಸುಂದರ ತಾಣದಲ್ಲಿ ಚಿತ್ರೀಕರಣಗೊಂಡಿವೆ.

ಇರುವುದು: ಹಿಮಾಚಲ ಪ್ರದೇಶ ರಾಜ್ಯದಲ್ಲಿ.
ನೋಡಲೇಬೇಕಾದ ಸ್ಥಳಗಳು/ಆಕರ್ಷಣೆ: ಮಾಲ್ ರಸ್ತೆ, ರಾಷ್ಟ್ರಪತಿ ನಿವಾಸ, ಸಾಹಸಮಯ ಕ್ರೀಡೆಗಳು

ಚಿತ್ರಕೃಪೆ: Bjørn Christian Tørrissen

ಶ್ರೀನಗರ:

ಶ್ರೀನಗರ:

ಜಮ್ಮು ಕಾಶ್ಮೀರ ರಾಜ್ಯದ ಅತಿ ಭವ್ಯ ತಾಣ ಶ್ರೀನಗರ. ಪ್ರತಿ ವರ್ಷ ಅಸಂಖ್ಯಾತ ಸಂಖ್ಯೆಯಲ್ಲಿ ಪ್ರವಾಸಿಗರು ಈ ಭವ್ಯ ಹಿಮಚ್ಛಾದಿತ ತಾಣಕ್ಕೆ ಭೇಟಿ ನೀಡುತ್ತಿರುತ್ತಾರೆ. ಪ್ರಕೃತಿಯ ಹಲವು ಸೋಜಿಗಗಳನ್ನು ಇಲ್ಲಿ ಸವಿಯಬಹುದು.

ಇರುವುದು: ಜಮ್ಮು ಕಾಶ್ಮೀರ ರಾಜ್ಯದಲ್ಲಿ.
ನೋಡಲೇಬೇಕಾದ ಸ್ಥಳಗಳು/ಆಕರ್ಷಣೆ: ದಾಲ್ ಸರೋವರ, ಮುಘಲ್ ಉದ್ಯಾನ, ಸೋನ್ಮಾರ್ಗ್, ಗುಲ್ಮಾರ್ಗ್ ನಲ್ಲಿ ಜರುಗುವ ಚಳಿಗಾಲದ ಕ್ರೀಡೆಗಳು.

ಚಿತ್ರಕೃಪೆ: hamon jp

ಮರಭೂಮಿಯ ಬೆರುಗುಗಳು:- ಜೈಪುರ್:

ಮರಭೂಮಿಯ ಬೆರುಗುಗಳು:- ಜೈಪುರ್:

ರಾಜಸ್ಥಾನ ರಾಜ್ಯದ ರಾಜಧಾನಿಯಾಗಿರುವ ಪಿಂಕ್ ಸಿಟಿ ಎಂತಲೂ ಕರೆಯಲ್ಪಡುವ ಜೈಪುರ್ ಉತ್ತರ ಭಾರತದ ಒಂದು ಗಮ್ಯ ಪ್ರವಾಸಿ ತಾಣವಾಗಿದೆ. ಅನೇಕ ವಿದೇಶಿ ಪ್ರವಾಸಿಗರಿಂದ ಈ ತಾಣವು ಭೇಟಿ ನೀಡಲ್ಪಡುತ್ತದೆ.

ಇರುವುದು: ರಾಜಸ್ಥಾನ ರಾಜ್ಯದಲ್ಲಿ.
ನೋಡಲೇಬೇಕಾದ ಸ್ಥಳಗಳು/ಆಕರ್ಷಣೆ: ಹವಾ ಮಹಲ್, ಅಮೇರ್ ಕೋಟೆ, ಜೈಗಡ್ ಕೋಟೆ, ಸಿಟಿ ಪ್ಯಾಲೇಸ್, ಜಂತರ್ ಮಂತರ್, ಜಲ್ ಮಹಲ್

ಜೈಸಲ್ಮೇರ್:

ಜೈಸಲ್ಮೇರ್:

ಜನಪ್ರಿಯವಾಗಿ ಇದನ್ನು "ಗೋಲ್ಡನ್ ಸಿಟಿ" ಎಂದು ಕರೆಯಲಾಗುತ್ತದೆ. ಉತ್ತರ ಭಾರತದ ನೆಚ್ಚಿನ ಪ್ರವಾಸಿ ತಾಣವಾಗಿ ಇದು ಕಂಗೊಳಿಸುತ್ತದೆ.

ಇರುವುದು: ರಾಜಸ್ಥಾನ ರಾಜ್ಯದಲ್ಲಿ.
ನೋಡಲೇಬೇಕಾದ ಸ್ಥಳಗಳು/ಆಕರ್ಷಣೆ: ಜೈಸಲ್ಮೇರ್ ಕೋಟೆ, ಜೈನ ದೇವಾಲಯಗಳು, ಸಂಗ್ರಹಾಲಯಗಳು, ಒಂಟೆ ಸಫಾರಿ

ಚಿತ್ರಕೃಪೆ: Adrian Sulc

ಜೋಧಪುರ್:

ಜೋಧಪುರ್:

ಸನ್ ಸಿಟಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜೋಧಪುರ್ ರಾಜಸ್ಥಾನದ ಎರಡನೆಯ ಮೆಟ್ರೊಪಾಲಿಟನ್ ನಗರವಾಗಿದೆ. ಇದು ಕೂಡ ಉತ್ತರ ಭಾರತದ ಪ್ರಸಿದ್ಧ ಪ್ರವಾಸಿ ಪಟ್ಟಣವಾಗಿದೆ.

ಇರುವುದು: ರಾಜಸ್ಥಾನ ರಾಜ್ಯದಲ್ಲಿ.
ನೋಡಲೇಬೇಕಾದ ಸ್ಥಳಗಳು/ಆಕರ್ಷಣೆ: ಮೆಹ್ರಾನ್‍ಗಡ್ ಕೋಟೆ, ಉಮೈದ್ ಭವನ, ಘಂಟಾ ಘರ್, ಒಂಟೆ ಸಫಾರಿ ಮುಂತಾದವುಗಳು.

ಚಿತ್ರಕೃಪೆ: christopher

ಉದೈಪುರ್:

ಉದೈಪುರ್:

ಸರೋವರಗಳ ನಗರಿ ಉದೈಪುರ್, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಲ್ಪಡುವ ರಾಜಸ್ಥಾನದ ಮತ್ತೊಂದು ಗಮ್ಯ ಪ್ರವಾಸಿ ತಾಣವಾಗಿದೆ. ಹಲವು ಆಕರ್ಷಣೆಗಳನ್ನು ಈ ಮರಭೂಮಿ ಪಟ್ಟಣದಲ್ಲಿ ಆಸ್ವಾದಿಸಬಹುದಾಗಿದೆ.

ಇರುವುದು: ರಾಜಸ್ಥಾನ ರಾಜ್ಯದಲ್ಲಿ.
ನೋಡಲೇಬೇಕಾದ ಸ್ಥಳಗಳು/ಆಕರ್ಷಣೆ: ಸಿಟಿ ಪ್ಯಾಲೇಸ್, ಲೇಕ್ ಪ್ಯಾಲೇಸ್, ಜಗ್ ಮಂದಿರ್, ಮಾನ್ಸೂನ್ ಪ್ಯಾಲೇಸ್, ಜಗದೀಶ ದೇವಾಲಯ

ಚಿತ್ರಕೃಪೆ: tommy

ಇತರೆ:- ಅಮೃತಸರ್:

ಇತರೆ:- ಅಮೃತಸರ್:

ಪಂಜಾಬ್ ಮಣ್ಣಿನ ಸುವಾಸನೆಯುಳ್ಳ ಉತ್ತರ ಭಾರತದ ಮತ್ತೊಂದು ಪ್ರಸಿದ್ಧ ಪ್ರವಾಸಿ ತಾಣ ಅಮೃತಸರ್. ಸಿಖ್ ಧರ್ಮದ ಪವಿತ್ರ ದೇಗುಲವಾದ ಗೋಲ್ಡನ್ ಟೆಂಪಲ್ ನಿಂದ ಈ ತಾಣವು ಅತಿ ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರವಾಗಿದೆ. ಅಷ್ಟೆ ಅಲ್ಲ ಭಾರತ ಹಾಗು ಪಾಕಿಸ್ತಾನಗಳನ್ನು ಬೇರ್ಪಡಿಸುವ ವಾಘಾ ಗಡಿಯಿಂದಲೂ ಸಹ ಇದು ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿ ಹೊರಹೊಮ್ಮಿದೆ.

ಇರುವುದು: ಪಂಜಾಬ್ ರಾಜ್ಯದಲ್ಲಿ.
ನೋಡಲೇಬೇಕಾದ ಸ್ಥಳಗಳು/ಆಕರ್ಷಣೆ: ಗೋಲ್ಡನ್ ಟೆಂಪಲ್, ವಾಘಾ ಗಡಿ, ಜಲಿಯನ್ ವಾಲ ಬಾಗ್

ಚಿತ್ರಕೃಪೆ: Jasleen Kaur

ರಣಥಂಬೋರ್:

ರಣಥಂಬೋರ್:

ವಿಶ್ವ ಪಾರಂಪರಿಕ ಬೆಟ್ಟ ಕೋಟೆಗಳ ಪೈಕಿ ಒಂದಾಗಿರುವ ರಣಥಂಬೋರ್, ಸವಾಯ್ ಮಾಧೋಪೋರ್ ಬಳಿಯಲ್ಲಿ ನೆಲೆಸಿದ್ದು ಉತ್ತರ ಭಾರತದ ಗಮ್ಯ ಪ್ರವಾಸಿ ತಾಣವಾಗಿ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿನ ರಣಥಂಬೋರ್ ರಾಷ್ಟ್ರೀಯ ಉದ್ಯಾನದಿಂದಾಗಿ ಇದು ಹೆಸರುವಾಸಿಯಾಗಿದೆ.

ಇರುವುದು: ರಾಜಸ್ಥಾನ ರಾಜ್ಯದಲ್ಲಿ.
ನೋಡಲೇಬೇಕಾದ ಸ್ಥಳಗಳು/ಆಕರ್ಷಣೆ: ಕಚಿದಾ ಕಣಿವೆ, ಸುರ್ವಾಲ್ ಕೆರೆ, ಮಾಲಿಕ್ ತಾಲಾಬ್, ಬಕುಲಾ, ಜೋಗಿ ಮಹಲ್ ಮುಂತಾದವುಗಳು.

ಚಿತ್ರಕೃಪೆ: Rohanmyself

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X