Search
  • Follow NativePlanet
Share
» »ಸಮುದ್ರದ ಮಧ್ಯೆ ಇರುವ ಈ ನಿಷ್ಕಲಂಕ ಮಹಾದೇವನ ಸನ್ನಿಧಿಗೆ ಹೋದ್ರೆ ನೀವೂ ನಿಷ್ಕಳಂಕರಾಗ್ತೀರಾ

ಸಮುದ್ರದ ಮಧ್ಯೆ ಇರುವ ಈ ನಿಷ್ಕಲಂಕ ಮಹಾದೇವನ ಸನ್ನಿಧಿಗೆ ಹೋದ್ರೆ ನೀವೂ ನಿಷ್ಕಳಂಕರಾಗ್ತೀರಾ

ಗುಜರಾತ್‌ನ ಅರಬ್ಬಿ ಸಮುದ್ರದ ಮಧ್ಯದಲ್ಲಿ 5000 ವರ್ಷಗಳಷ್ಟು ಹಳೆಯದಾದ ಪುರಾತನ ದೇವಾಲಯವೊಂದಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಎತ್ತರದಅಲೆಗಳು ಬಂದರೆ ದೇವಸ್ಥಾನ ನೀರಿನಲ್ಲಿ ಮುಚ್ಚಿ ಹೋಗುತ್ತದೆ. ಬರೀ ಧ್ವಜವಷ್ಟೇ ಕಾಣಿಸುತ್ತದೆ. ಇದು ಗುಜರಾತ್ ರಾಜ್ಯದ ಭಾವನಗರ ಜಿಲ್ಲೆಯಿಂದ 28 ಕಿ.ಮೀ ದೂರದಲ್ಲಿರುವ ಕೊಲಿಯಕ್‌ನಲ್ಲಿದೆ. ಈ ದೇವಾಲಯವು ಶಿವನಿಗೆ ಸಮರ್ಪಿಸಲಾಗಿದೆ.

ನಿಷ್ಕಲಂಕ ಮಹಾದೇವ

ನಿಷ್ಕಲಂಕ ಮಹಾದೇವ

PC: youtube

ಜನರು ಈ ದೇವಸ್ಥಾನವನ್ನು ತಲುಪಲು ಸುಮಾರು 1.5 ಕಿ.ಮೀ. ನೀರಿನಲ್ಲಿ ನಡೆಯಬೇಕು. ಈ ದೇವಾಲಯವನ್ನು "ನಿಷ್ಕಲಂಕ ಮಹಾದೇವ ದೇವಾಲಯ" ಎಂದೂ ಕರೆಯಲಾಗುತ್ತದೆ. ಸಮುದ್ರದಲ್ಲಿನ ಎತ್ತರದ ಅಲೆಗಳ ಸಮಯದಲ್ಲಿ, ಕೇವಲ ಧ್ವಜ ಮತ್ತು ದೇವಸ್ಥಾನದ ಕಂಬವನ್ನು ಮಾತ್ರ ಸಮುದ್ರದಲ್ಲಿ ಕಾಣಬಹುದಾಗಿದೆ.

ಪಾಪ ಪರಿಹಾರ

ಪಾಪ ಪರಿಹಾರ

PC: youtube
ಈ ದೇವಾಲಯವು ಸಮುದ್ರದಲ್ಲಿನ ಎತ್ತರದ ಅಲೆಗಳ ಸಮಯದಲ್ಲಿ ನೀರಿನ ಅಡಿಯಲ್ಲಿರುತ್ತದೆ ಮತ್ತು ಕಡಿಮೆ ಅಲೆಗಳ ಸಮಯದಲ್ಲಿ ಹೊರಕಾಣಿಸುತ್ತದೆ, ಪಾಪಗಳೆಲ್ಲವೂ ತೊಳೆದು ಹೋಗುತ್ತದೆ ಎನ್ನುವ ಭರವಸೆ ಭಕ್ತರದ್ದು.

ಸ್ವಂಯಂಭೂ ಶಿವಲಿಂಗ

ಸ್ವಂಯಂಭೂ ಶಿವಲಿಂಗ

PC: youtube
ಸ್ಥಳೀಯರು ಈ ದೇವಸ್ಥಾನವನ್ನು ಈಗಲೂ ಬಳಸುತ್ತಿದ್ದಾರೆ. ಜನರು ಇಲ್ಲಿಗೆ ನಡಿಗೆಯ ಮೂಲಕ ಭೇಟಿ ನೀಡುತ್ತಾರೆ. ಇದು 5 ಪ್ರತ್ಯೇಕ ಸ್ವಂಯಂಭೂ ಶಿವಲಿಂಗಗಳನ್ನು ಹೊಂದಿದ್ದು ಖಂಡಿತವಾಗಿಯೂ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಭೇಟಿ ನೀಡುವ ಅತ್ಯುತ್ತಮ ಆಧ್ಯಾತ್ಮಿಕ ಸ್ಥಳಗಳಲ್ಲಿ ಒಂದಾಗಿದೆ.

ಕೌರವರನ್ನು ಕೊಂದ ಪಾಪ

ಕೌರವರನ್ನು ಕೊಂದ ಪಾಪ

PC: youtube
ಮಹಾಭಾರತದದಲ್ಲಿ ಪಾಂಡವರು ಕೃಷ್ಣನ ಸೂಚನೆಯ ಮೇರೆಗೆ ಶಿವನನ್ನು ಪೂಜಿಸುತ್ತಾರೆ. ಏಕೆಂದರೆ ಅವರು ತಮ್ಮ ಸಹೋದರರನ್ನು ಅಂದರೆ ಎಲ್ಲಾ ಕೌರವರನ್ನು ಕೊಂದ ಪಾಪವನ್ನು ಮಾಡಿರುತ್ತಾರೆ.

ನಿಷ್ಕಳಂಕ ಆಶಿರ್ವಾದ

ನಿಷ್ಕಳಂಕ ಆಶಿರ್ವಾದ

PC: youtube
ಶಿವನ ಆಶೀರ್ವಾದಕ್ಕಾಗಿ ಪಾಂಡವರು ತಪಸ್ಸು ಮಾಡಿದರು. ನಂತರ ಅವರ ಆರಾಧನೆಯಿಂದ ಪ್ರಭಾವಿತರಾಗಿ 5 ಲಿಂಗದ ರೂಪದಲ್ಲಿ ಪಾಂಡವರ ಮುಂದೆ ಕಾಣಿಸಿಕೊಂಡರು ಮತ್ತು ಅವರನ್ನು ನಿಷ್ಕಳಂಕ ಎಂದು ಆಶೀರ್ವದಿಸಿದರು.

ಐದು ಲಿಂಗಗಳು

ಐದು ಲಿಂಗಗಳು

PC: flickr
ಪಾಂಡವರು ಈ ಐದು ಲಿಂಗಗಳಿಗೆ ಭಕ್ತಿಯಿಂದ ಪೂಜಿಸುತ್ತಿದ್ದರು. ಅವಿಶ್ವಾಸವಿದೆ ಮತ್ತು ಈ ಮಂದಿರವು 500 ಅಡಿ ಎತ್ತರದಲ್ಲಿದೆ ಮತ್ತು ಇದು ಸಮುದ್ರದಲ್ಲಿ 2000 ಅಡಿ ಉದ್ದವಾಗಿದೆ. ನಿಷ್ಕಲಂಕ ಮಹಾದೇವ್ ಎಂಬ ಹೆಸರನ್ನು ಪಡೆದುಕೊಂಡಿದೆ.

ಸ್ವಯಂಭೂ ಶಿವ ಲಿಂಗಗಳು

ಸ್ವಯಂಭೂ ಶಿವ ಲಿಂಗಗಳು

PC: youtube
ಈ ದೇವಾಲಯದಲ್ಲಿ 5 ವಿಶಿಷ್ಟ ಸ್ವಯಂಭೂ ಶಿವ ಲಿಂಗಗಳು ಪಾಂಡವ ಸಹೋದರರಿಂದ ಆರಾಧಿಸಲ್ಪಟ್ಟಿವೆ, ಮತ್ತು ಪ್ರತಿಯೊಂದೂ ಶಿವಲಿಂಗದ ಎದುರು ನಂದಿ ವಿಗ್ರಹವಿದೆ. ಇಲ್ಲಿ ಭಕ್ತರು ಮೊದಲು ತಮ್ಮ ಕೈಗಳನ್ನು ಮತ್ತು ಕಾಲುಗಳನ್ನು ಪಾಂಡವಸ್ ಪೊನ್ ಎಂಬ ಕೊಳದಲ್ಲಿ ತೊಳೆದುಕೊಳ್ಳುತ್ತಾರೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: youtube
ಈ ದೇವಸ್ಥಾನವನ್ನು ಅಮಾಸ್ಯೆ ರಾತ್ರಿಯ ದಿನದಂದು 9.00 ರಿಂದ 12.00 ರವರೆಗೆ ಭೇಟಿ ಮಾಡಬಹುದು. ಸಮುದ್ರವು ಮತ್ತೆ ಏರುವಂತೆ ಪ್ರವಾಸಿಗರು ಈ ಸ್ಥಳವನ್ನು 1:00 ಗಂಟೆಗೂ ಮುಂಚಿತವಾಗಿ ಇಲ್ಲಿಂದ ತೆರಳಬೇಕು. ಅಮಾವಾಸ್ಯೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ದೇವಾಲಯವನ್ನು ಭೇಟಿ ನೀಡುತ್ತಾರೆ. ಈ ದೇವಾಲಯವನ್ನು ಭೇಟಿಕೊಡಲು ಅಲೆಗಳ ಉಬ್ಬರವಿಳಿತಕ್ಕಾಗಿ ಅವರು ತಾಳ್ಮೆಯಿಂದ ಕಾಯುತ್ತಿರುತ್ತಾರೆ. ಆದ್ದರಿಂದ ಒಂದು ದಿನದಲ್ಲಿ ಈ ದೇವಾಲಯಕ್ಕೆ ಕೇವಲ ಎರಡು ಬಾರಿ ಒಳಗೆ ಹೋಗಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: youtube
ರಸ್ತೆಯ ಮೂಲಕ: ರಸ್ತೆಯ ಮೂಲಕ ಪ್ರಯಾಣಿಸಲು ಬಯಸುವವರು ಈ ದೇವಾಲಯವನ್ನು ತಲುಪಲು ಬಸ್ ಅಥವಾ ಸ್ವಂತ ಕಾರನ್ನು ತೆಗೆದುಕೊಳ್ಳಬಹುದು. ಭಾವನಗರದಿಂದ ಕೊಲಿಯಾಕ್ ಗೆ ರಸ್ತೆಯಿಂದ 30 ನಿಮಿಷಗಳು ಬೇಕಾಗುತ್ತದೆ.

ವಿಮಾನ ನಿಲ್ದಾಣ: ಭಾವನಗರಕ್ಕೆ 126 ಕಿ.ಮೀ ದೂರದಲ್ಲಿರುವ ವಡೋದರಾ ವಿಮಾನ ನಿಲ್ದಾಣ ಭಾವನಗರಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಅಹಮದಾಬಾದ್ ಕೊಲಿಯಾಕ್ ತಲುಪಲು ಮತ್ತೊಂದು ಆಯ್ಕೆಯಾಗಿದೆ.

ರೈಲು ಮೂಲಕ: ಗುಜರಾತಿನ ಭಾವನಗರ್ ರೈಲ್ವೆ ನಿಲ್ದಾಣವು ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದ ಈ ದೇವಸ್ಥಾನವನ್ನು ತಲುಪಲು ಹತ್ತಿರದ ರೈಲು ನಿಲ್ದಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X