Search
  • Follow NativePlanet
Share
» »ಈ ಶ್ರೀ ಕೃಷ್ಣ ದೇವಾಲಯಕ್ಕೆ ತೆರಳಿದರೆ ಮರಣ ಖಚಿತ...

ಈ ಶ್ರೀ ಕೃಷ್ಣ ದೇವಾಲಯಕ್ಕೆ ತೆರಳಿದರೆ ಮರಣ ಖಚಿತ...

ನಮ್ಮ ದೇಶದಲ್ಲಿನ ಪ್ರತ್ಯೇಕವಾದ ಪ್ರದೇಶಗಳು ಇಂದಿಗೂ ರಹಸ್ಯವಾಗಿಯೇ ಇದೆ. ಇವುಗಳಲ್ಲಿ ಕೆಲವು ನಮ್ಮ ಪುರಾಣದಲ್ಲಿ ಮತ್ತು ಚಾರಿತ್ರಿಕತೆಗಳಿಗೆ ಸಂಬಂಧ ಹೊಂದಿದೆ. ಅವುಗಳ ರಹಸ್ಯವನ್ನು ಭೇಧಿಸುವುದಕ್ಕೆ ಆನೇಕ ಮಂದಿ ಹಲವಾರು ಪ್ರಯತ್ನಗಳು ಮಾಡಿದರು ಕೂ

ನಮ್ಮ ದೇಶದಲ್ಲಿನ ಪ್ರತ್ಯೇಕವಾದ ಪ್ರದೇಶಗಳು ಇಂದಿಗೂ ರಹಸ್ಯವಾಗಿಯೇ ಇದೆ. ಇವುಗಳಲ್ಲಿ ಕೆಲವು ನಮ್ಮ ಪುರಾಣದಲ್ಲಿ ಮತ್ತು ಚಾರಿತ್ರಿಕತೆಗಳಿಗೆ ಸಂಬಂಧ ಹೊಂದಿದೆ. ಅವುಗಳ ರಹಸ್ಯವನ್ನು ಭೇಧಿಸುವುದಕ್ಕೆ ಆನೇಕ ಮಂದಿ ಹಲವಾರು ಪ್ರಯತ್ನಗಳು ಮಾಡಿದರು ಕೂಡ ಆ ರಹಸ್ಯಗಳನ್ನು ಭೇಧಿಸಲೇ ಇಲ್ಲ. ಹಾಗೆಯೇ ಆನೇಕ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಅಂಥಹ ರಹಸ್ಯವಾದ ಸ್ಥಳಗಳಲ್ಲಿ ಶ್ರೀ ಕೃಷ್ಣನ ದೇವಾಲಯವು ಒಂದು.

ನಾವು ದೇವಾಲಯಗಳಿಗೆ ಬೆಳಗ್ಗೆ, ರಾತ್ರಿ ಎನ್ನದೇ ಆ ಭಗವಂತನ ದರ್ಶನ ಮಾಡಲು ತೆರಳುತ್ತೇವೆ. ಆದರೆ ದೇವಾಲಯಗಳಿಗೆ ರಾತ್ರಿಯ ಸಮಯದಲ್ಲಿ ಒಂದು ಜೀವಿಯು ಅಲ್ಲಿ ಇರುವುದಿಲ್ಲವಂತೆ. ಏಕೆ ಎಂಬ ಪ್ರೆಶ್ನೆ ಮೂಡುವುದು ಸರ್ವೆ ಸಾಮಾನ್ಯವಾದುದು. ಅಲ್ಲಿನ ರಹಸ್ಯವನ್ನು ನೀವು ಕೇಳಿದರೆ ಆಶ್ಚರ್ಯಗೊಳ್ಳುವುದರಲ್ಲಿ ಅನುಮಾನವೇ ಇಲ್ಲ.

ಹಾಗಾದರೆ ಆ ಶ್ರೀ ಕೃಷ್ಣ ದೇವಾಲಯದಲ್ಲಿ ಏನಾಗುತ್ತದೆ? ಅಲ್ಲಿ ರಾತ್ರಿಯ ಸಮಯದಲ್ಲಿ ನಡೆಯುವುದಾದರೂ ಏನು? ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ಪಡೆಯಿರಿ.

1.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

1.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

ಅತ್ಯಂತ ರಹಸ್ಯವನ್ನು ಹೊಂದಿರುವ ಪ್ರದೇಶಗಳಲ್ಲಿ ಶ್ರೀ ಕೃಷ್ಣ ದೇವಾಲಯವು ಒಂದು. ಆ ನಿಗೂಢವಾದ ದೇವಾಲಯಗಳಲ್ಲಿ ನಿಧಿವನ್ ಕೂಡ ಒಂದು. ಈ ಪ್ರದೇಶದ ರಹಸ್ಯವು ದ್ವಾಪರಯುಗದಲ್ಲಿನ ರಾಧ-ಕೃಷ್ಣರಿಗೆ ಸಂಬಂಧಿಸಿದೆ. ಅಸಲಿಗೆ ಈ ನಿಧಿವನ್ ಯಾವುದು? ಆ ನಿಧಿವನ್‍ನಲ್ಲಿರುವ ಪ್ರದೇಶಕ್ಕೂ ರಾಧ-ಕೃಷ್ಣರಿಗೂ ಸಂಬಂಧವಾದರೂ ಏನು? ಎಂಬುದು ತಿಳಿಯಿರಿ.

2.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

2.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

ನಮ್ಮ ಪುರಾಣಗಳ ಪ್ರಕಾರ, ರಾಧ-ಕೃಷ್ಣರ ಪ್ರೇಮಾಯಣದ ಕುರಿತು ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವುದೇ. ಆಶ್ಚರ್ಯ ಏನಪ್ಪ ಎಂದರೆ ರಾಧಕೃಷ್ಣರು ಇಂದಿಗೂ ಆ ನಿಧಿವನ್‍ನಲ್ಲಿ ಸೇರುತ್ತಾರಂತೆ. ಇಂಥಹ ರಹಸ್ಯಮಯವಾದ ಪ್ರದೇಶವು ಉತ್ತರ ಪ್ರದೇಶದ ಮಥುರ ಜಿಲ್ಲೆಯಲ್ಲಿ ಬೃಂದಾವನ್ ಎಂಬ ಊರಿನಲ್ಲಿದೆ.

3.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

3.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

ಇಲ್ಲಿರುವ ನಿಧಿವನ್‍ನಲ್ಲಿ ರಾತ್ರಿಯ ಸಮಯದಲ್ಲಿ ಶ್ರೀ ಕೃಷ್ಣನು ರಾಧಳನ್ನು ಸೇರಲು ಬರುತ್ತಾನೆ ಎಂದೂ, ಅಷ್ಟೇ ಅಲ್ಲದೇ ಗೋಪಿಕೆಯರ ಜೊತೆಗೆ ನೃತ್ಯವನ್ನು ಮಾಡುತ್ತಾನೆ ಎಂದು ಅಲ್ಲಿನ ಜನರ ನಂಬಿಕೆಯಾಗಿದೆ. ಸೂರ್ಯಾಸ್ತಮವಾದ ನಂತರ ದೇವಾಲಯದ ದ್ವಾರಗಳು, ನಿಧಿವನ್ ಪ್ರದೇಶದ ಮುಖ್ಯ ದ್ವಾರವೆಲ್ಲಾವನ್ನು ಮುಚ್ಚಿ ಹಾಕುತ್ತಾರೆ.

 4.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

4.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

ಇಲ್ಲಿನ ವಿಶೇಷವೆನೆಂದರೆ, ಈ ಪ್ರದೇಶದಲ್ಲಿ ರಾತ್ರಿಯ ಸಮಯದಲ್ಲಿ ಕೇವಲ ಮನುಷ್ಯರೇ ಅಲ್ಲ, ಕನಿಷ್ಟ ಪ್ರಾಣಿ-ಪಕ್ಷಿಗಳೂ ಕೂಡ ಆ ಪ್ರದೇಶಕ್ಕೆ ಹೋಗುವುದಿಲ್ಲ. ಸಾಧರಣವಾಗಿ ಬೆಳಗಿನ ಸಮಯದಲ್ಲಿ ಕೋತಿಗಳಿಂದ ತುಂಬಿ ತುಳುಕಾಡುವ ದೇವಾಲಯವು, ಸಂಜೆಯಾಗುತ್ತಿದ್ದಂತೆ ಯಾವ ಜಂತುಗಳು ಕೂಡ ಇರುವುದಿಲ್ಲ.

5.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

5.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

ಆ ಪ್ರದೇಶವನ್ನು ಶ್ರೀ ಕೃಷ್ಣನ ಏಕಾಂತ ಪ್ರದೇಶವೆಂದೇ ಗುರುತಿಸಲಾಗಿದೆ. ಆತನ ಏಕಾಂತಕ್ಕೆ ಭಂಗ ಬಾರದಂತೆ ಆ ವನದ ಸುತ್ತ ಕೃಷ್ಣನ ಭಟರು ಮನುಷ್ಯ ರೂಪದಲ್ಲಿ ಕಾಯುತ್ತಾರೆ ಎಂದೂ, ಈ ಪ್ರದೇಶಕ್ಕೆ ಸಾಮಾನ್ಯ ಮಾನವರು ಪ್ರವೇಶ ಮಾಡಿದರೆ ಸಾವು ಸಂಭವಿಸುತ್ತದೆ ಎಂದು ನಂಬಲಾಗಿದೆ.

6.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

6.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

ಕೆಲವು ಮಂದಿ ಆ ವನದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಹೋದವರು ಮರಣ ಹೊಂದರು ಅಥವಾ ಬುದ್ಧಿ ಮಾನ್ಯರಾದರಂತೆ. ಹಾಗಾಗಿ ಆನೇಕ ಮಂದಿ ಈ ಪ್ರದೇಶದ ಕುರಿತು ಪರಿಶೋಧನೆಗಳನ್ನು ಮಾಡಬೇಕು ಎಂದುಕೊಂಡರೂ ಕೂಡ ಸ್ಥಾನಿಕರು ಅನುಮತಿಯನ್ನು ನೀಡುವುದಿಲ್ಲ.

7.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

7.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

ಆ ವನದ ಸುತ್ತ-ಮುತ್ತ ಇರುವ ಮನೆಯವರು ಕೂಡ ರಾತ್ರಿಯ ಸಮಯದಲ್ಲಿ ಆ ವನದ ದಿಕ್ಕಿಗೆ ಇರುವ ಎಲ್ಲಾ ಕಿಟಕಿಗಳು ಮುಚ್ಚಿ ಹಾಕುತ್ತಾರಂತೆ. ಆ ಪ್ರದೇಶದಲ್ಲಿ ಯಾವುದೇ ಒಂದು ಮನೆಯ ದ್ವಾರವು ಕೂಡ ಆ ವನಕ್ಕೆ ಎದುರಿಗೆ ಮುಖ ಮಾಡಿ ನಿರ್ಮಾಣ ಮಾಡುವುದಿಲ್ಲವಂತೆ.

 8.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

8.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

ಈ ನಿಧಿವನ್‍ಗೆ ಪಕ್ಕದಲ್ಲಿಯೇ ಇರುವ ಮನೆಯವರಿಗೆ ರಾತ್ರಿಯ ಸಮಯದಲ್ಲಿ ಕೊಳಲಿನ ಮಧುರವಾದ ಶಬ್ಧ, ಕಾಲಿಗೆ ಹಾಕಿರುವ ಗೆಜ್ಜೆಯ ಶಬ್ಧ ಕೇಳಿಸುತ್ತವೆ ಎಂದು ಅಲ್ಲಿನ ಸ್ಥಾನಿಕರು ಹೇಳುತ್ತಾರೆ. ಈ ನಿಧಿವನ್‍ನಲ್ಲಿಯೇ ಸ್ವಾಮಿ ಹರಿದಾಸ ಎಂಬ ಕೃಷ್ಣ ಭಕ್ತನು ರಾಧ-ಕೃಷ್ಣರನ್ನು ಉದ್ದೇಶಿಸಿ ತಪಸ್ಸು ಮಾಡಿದನಂತೆ.

9.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

9.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?


ಆತನ ತಪಸ್ಸಿಗೆ ಮೆಚ್ಚಿದ ರಾಧ-ಕೃಷ್ಣರು ಪ್ರತ್ಯಕ್ಷವಾಗಿ ಹರಿದಾಸನನ್ನು ಕರುಣಿಸಿದರಂತೆ. ಅದರ ನೆನಪಿಗೆ ಹರಿದಾಸ್ ರಾಧ-ಕೃಷ್ಣರಿಗೆ ಒಂದು ದೇವಾಲಯವನ್ನು ನಿರ್ಮಾಣ ಮಾಡಿದನು. ಅದನ್ನೇ ರಂಗ ಮಹಲ್ ಎಂದು ಕರೆಯುತ್ತಾರೆ ಎಂದು ಪುರಾಣಗಳು ಹೇಳುತ್ತವೆ.

10.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

10.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

ಈ ದೇವಾಲಯಕ್ಕೆ ಪ್ರತಿ ರಾತ್ರಿ ರಾಧ-ಕೃಷ್ಣರು ಏಕಾಂತವಾಗಿ ಕಾಲ ಕಳೆಯಲು ಬರುತ್ತಾರಂತೆ. ಹಾಗಾಗಿಯೇ ದೇವಾಲಯದ ದ್ವಾರವನ್ನು ಮುಚ್ಚುವ ಮುಂದೆ ರಾಧ-ಕೃಷ್ಣರು ಮಲಗಲು ಮಂಚ, ಅಲಂಕಾರಯುತವಾದ ಬೆಳ್ಳಿಯ ಒಂದು ಲೋಟದ ತುಂಬ ಹಾಲು, ಸಿಹಿ ತಿನಿಸುಗಳು, ರಾಗಿ ಚಂಬಿನಲ್ಲಿ ನೀರು, ಹಲ್ಲು ಉಜ್ಜಿಕೊಳ್ಳಲು 2 ಬೇವಿನ ಕಡ್ಡಿಗಳು, ರಾಧ ಅಲಂಕಾರ ಮಾಡಿಕೊಳ್ಳಲು ಸೀರೆ, ಬಳೆಗಳನ್ನು ಇಟ್ಟು ಆ ದೇವಾಲಯಕ್ಕೆ ಬೀಗ ಹಾಕಿ ಬರುತ್ತಾರೆ.

11.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

11.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

ಮರುದಿನ ಬೆಳಗ್ಗೆ ಆ ದೇವಾಲಯವು ತೆರೆದ ನಂತರ ಅಲ್ಲಿ ಎಲ್ಲಾ ಅಸ್ತವ್ಯಸ್ಥವಾಗಿರುತ್ತದೆ. ಅಲ್ಲಿ ಇಟ್ಟಿರುವ ಹಾಲು ಇರುವುದಿಲ್ಲ, ರಾಗಿ ಚೆಂಬಿನಲ್ಲಿರು ಅರ್ಥ ನೀರು ಇರುವುದಿಲ್ಲ. ಹಾಗೆಯೇ ಬೇವಿನ ಕಡ್ಡಿಗಳು ತುಂಡು-ತುಂಡಾಗಿ ಬಿದ್ದಿರುತ್ತದೆ.

12.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

12.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

ಅಲ್ಲಿರುವ ಸಿಹಿ ತಿನಿಸುಗಳು ಅರ್ಧ ಖಾಲಿಯಾಗಿರುತ್ತದೆ. ರಾಧಳ ಅಭರಣಗಳೆಲ್ಲಾ ಅಸ್ತವ್ಯಸ್ಥವಾಗಿರುತ್ತದೆ. ಇದೆಲ್ಲಾ ಹೇಗೆ ನಡೆಯುತ್ತಿದೆ ಎಂಬ ಪ್ರೆಶ್ನೆಗೆ ಉತ್ತರ ರಹಸ್ಯವಾಗಿಯೇ ಇದೆ. ಇತ್ತೀಚೆಗೆ ಈ ನಿಗೂಢವನ್ನು ಛೇಧಿಸುವ ಸಲುವಾಗಿ ಒಂದು ಪ್ರಮುಖವಾದ ಚಾನೆಲ್ ಅವರು ಪ್ರಯತ್ನ ಮಾಡಿದರು.

13.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

13.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

ಆ ಚಾನೆಲ್ ಅವರ ಪ್ರಕಾರ, ರಾತ್ರಿ ಆ ದೇವಾಲಯಕ್ಕಿರುವ 2 ದ್ವಾರಗಳನ್ನು ಮುಚ್ಚಿ, ಆ ವನಕ್ಕೆ ಇರುವ ಪ್ರಧಾನ ದ್ವಾರವನ್ನು ಮುಚ್ಚುತ್ತಾರೆ. ದೇವಾಲಯದ ನಿರ್ವಹಕರು, ಚಾನೆಲ್ ಅವರಿಗೆ ದೇವಾಲಯದ ವನಕ್ಕೆ ಪ್ರವೇಶ ನೀಡದೇ ಇರುವ ಕಾರಣದಿಂದ ಕ್ಯಾಮೆರಾದ ಜೊತೆಗೆ ಈಚೆಯೇ ಕಾವಲು ಕಾದುದ್ದರಿಂದ ಕೊಳಲಿನ ಶಬ್ಧಗಳು, ಗೆಜ್ಜೆಗಳ ಶಬ್ಧಗಳು ಅವರಿಗೆ ಕೇಳಿಸಲಿಲ್ಲ.

14.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

14.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

ಆದರೆ ದೇವಾಲಯದ ಪೂಜಾರಿಯು ದೇವಾಲಯದ ದ್ವಾರವನ್ನು ತೆಗೆದಾಗ ಒಳಗೆ ಮೊದಲೇ ಹೇಳಿದಂತೆ ಅಸ್ತವಸ್ಯಸ್ಥವಾಗಿದ್ದವಂತೆ. ಅದನ್ನು ಕಂಡ ಚಾನೆಲ್ ಅವರು ಅಶ್ಚರ್ಯ ಪಟ್ಟರು ಎಂದು ಹೇಳಲಾಗಿದೆ. ಈ ನಿಧಿವನ್‍ನಲ್ಲಿರುವ ಮರಗಳು ಕೂಡ ಗೋಪಿಕೆಯರನ್ನಾಗಿ ಪರಿರ್ವತನೆಯಾಗಿ ಶ್ರೀ ಕೃಷ್ಣನ ಜೊತೆಗೆ ಇರುತ್ತಾರೆ ಎಂದು ಹೇಳಲಾಗುತ್ತದೆ.

15.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

15.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

ಆ ಮರಗಳು ಬೆಳಗಿನ ಜಾವ ಯಥಾ ಸ್ಥಿತಿ ಮಾರ್ಪಾಟಾಗುತ್ತವೆ ಎಂದು ನಂಬಲಾಗಿದೆ. ಈ ವನದಲ್ಲಿ ಒಂದು ಕೊಳ ಕೂಡ ಇದೆ. ಇದನ್ನು "ವಿಶಾಖ ಕುಂಡ" ಎಂದೂ ಕೂಡ ಕರೆಯುತ್ತಾರೆ. ಕೃಷ್ಣನ ಜೊತೆ ನೃತ್ಯ ಮಾಡುವ ಸಂದರ್ಭದಲ್ಲಿ ವಿಶಾಖ ಎಂಬ ಗೋಪಿಕೆಗೆ ದಾಹವಾಯಿತಂತೆ.

 16.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

16.ಈ ಶ್ರೀ ಕೃಷ್ಣಾಲಯದಲ್ಲಿ ರಾತ್ರಿಯ ಸಮಯದಲ್ಲಿ ಏನಾಗುತ್ತದೆ ಗೊತ್ತ?

ಆಗ ಶ್ರೀ ಕೃಷ್ಣನು ತನ್ನ ಕೊಳಲಿನಿಂದ ಬಾವಿಯನ್ನು ಸೃಷಿ ಮಾಡಿದನಂತೆ. ಅಂದಿನಿಂದ ಈ ಕೊಳಕ್ಕೆ ವಿಶಾಖ ಕೊಂಡ ಎಂದು ಕರೆಯಲಾಯಿತು. ಈ ಸ್ಥಳಕ್ಕೆ ಇಂದಿಗೂ ಕೃಷ್ಣನು ಬರುತ್ತಾನೆಯೇ? ಗೋಪಿಕೆಯರ ಜೊತೆಗೆ ಇಂದಿಗೂ ನೃತ್ಯ ಮಾಡುತ್ತಾನೆಯೇ ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಇಂದಿಗೂ ರಹಸ್ಯವಾಗಿಯೇ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X