Search
  • Follow NativePlanet
Share
» »ಈ ವನದಲ್ಲಿ ಇಂದಿಗೂ ರಾಧಾಕೃಷ್ಣರು ನಾಟ್ಯ ಮಾಡ್ತಾರೆ...ಮರಗಳು ಗೋಪಿಕೆಯರಾಗ್ತವಂತೆ!

ಈ ವನದಲ್ಲಿ ಇಂದಿಗೂ ರಾಧಾಕೃಷ್ಣರು ನಾಟ್ಯ ಮಾಡ್ತಾರೆ...ಮರಗಳು ಗೋಪಿಕೆಯರಾಗ್ತವಂತೆ!

ರಾಧಾ ಕೃಷ್ಣ ಇಂದಿಗೂ ರಾಸಲೀಲೇ ಆಡುತ್ತಾರೆ ಅಂದರೆ ನೀವು ನಂಬುತ್ತೀರಾ? ಆದರೆ ಮಥುರಾದಲ್ಲಿನನ ವೃಂದಾವನದಲ್ಲಿ ಇಂದಿಗೂ ರಾಧಾಕೃಷ್ಣ ಗೋಪಿಕೆಯರ ಜೊತೆ ನೃತ್ಯ ಮಾಡುತ್ತಾರಂತೆ. ಇದಕ್ಕೆ ಸಂಬಂಧಿಸಿದ ಕೆಲವು ಮಾಹಿತಿ ಇಲ್ಲಿದೆ.

ಈ ಸ್ಥಂಭ ಯಾರ ತೋಳಲ್ಲಿ ಫಿಟ್ ಆಗುತ್ತದೆಯೋ ಅವರ ಆಸೆ ಈಡೇರುತ್ತದಂತೆ!ಈ ಸ್ಥಂಭ ಯಾರ ತೋಳಲ್ಲಿ ಫಿಟ್ ಆಗುತ್ತದೆಯೋ ಅವರ ಆಸೆ ಈಡೇರುತ್ತದಂತೆ!

ದ್ವಾಪರ ಯುಗದಿಂದ ರಹಸ್ಯ

ದ್ವಾಪರ ಯುಗದಿಂದ ರಹಸ್ಯ

PC: Dwivedi Ashok
ಉತ್ತರ ಪ್ರದೇಶದ ಮಥುರ ಜಿಲ್ಲೆಯಲ್ಲಿ ವೃಂದಾವನದಲ್ಲಿರುವ ನಿಧಿವನದ ರಹಸ್ಯ ದ್ವಾಪರಯುಗದ ರಾಧಾ ಹಾಗೂ ಕೃಷ್ಣರ ಕುರಿತಾಗಿದೆ. ಶ್ರೀಕೃಷ್ಣ ರಾಧೆಯನ್ನು ಭೇಟಿಯಾಗಲು ಇಲ್ಲಿಗೆ ಬರುತ್ತಾ ಇರುತ್ತಾರೆ ಎನ್ನುವುದು ಇಲ್ಲಿನ ಸ್ಥಳೀಯರ ನಂಬಿಕೆ.

ಅದೃಶ್ಯ ರೂಪದಲ್ಲಿ ಕಾವಲು ಕಾಯ್ತಾರೆ

ಅದೃಶ್ಯ ರೂಪದಲ್ಲಿ ಕಾವಲು ಕಾಯ್ತಾರೆ

PC:Rishabh gaur
ಅಷ್ಟೇ ಅಲ್ಲದೆ ರಾಧಾಕೃಷ್ಣರು ಗೋಪಿಕೆಯರ ಜೊತೆ ಸೇರಿಕೊಂಡು ರಾತ್ರಿ ಇಡೀ ನಾಟ್ಯ ಕೂಡಾ ಮಾಡ್ತಾರೆ ಜೊತೆಗೆ ಕೃಷ್ಣನ ಭಟರು ರಾಧಾಕೃಷ್ಣರ ಏಕಾಂತಕ್ಕೆ ಭಂಗವುಂಟಾಗದಂತೆ ನೋಡಿಕೊಳ್ಳುವ ಸಲುವಾಗಿ ಅದೃಶ್ಯ ರೂಪದಲ್ಲಿ ಕಾವಲು ಕಾಯುತ್ತಿರುತ್ತಾರೆ ಎನ್ನುವುದು ಇಲ್ಲಿನ ಜನರ ನಂಬಿಕೆ.

ಪಕ್ಷಿಗಳೂ ಕೂಡಾ ಹೋಗೋದಿಲ್ಲ

ಪಕ್ಷಿಗಳೂ ಕೂಡಾ ಹೋಗೋದಿಲ್ಲ

PC: आशीष भटनागर
ಸೂಯ್ತಾಸ್ತವಾದ ನಂತರ ಇಲ್ಲಿನ ದೇವಸ್ಥಾನದ ಪ್ರಧಾಣ ದ್ವಾರವನ್ನು ಮುಚ್ಚಲಾಗುತ್ತದೆ. ಅಷ್ಟೇ ಅಲ್ಲದೆ ನಿಧಿವನದ ದ್ವಾರವನ್ನು ಬಾಗಿಲು ಹಾಕಿ ಬೀಗ ಹಾಕಲಾಗುತ್ತದೆ. ಇಲ್ಲಿಗೆ ಮನುಷ್ಯರು ಮಾತ್ರವಲ್ಲ ಪಕ್ಷಿಗಳು ಕೂಡಾ ಸುಳಿಯುವುದಿಲ್ಲ.

ರಾಧಾಕೃಷ್ಣ ನಾಟ್ಯ ನೋಡಿದವರು ಮತಿಸ್ಥೀಮಿತ ಕಳೆದುಕೊಳ್ಳುತ್ತಾರೆ

ರಾಧಾಕೃಷ್ಣ ನಾಟ್ಯ ನೋಡಿದವರು ಮತಿಸ್ಥೀಮಿತ ಕಳೆದುಕೊಳ್ಳುತ್ತಾರೆ

PC:Rasa Lila Dance
ಒಂದು ವೇಳೆ ಈ ಕಟ್ಟುಪಾಡನ್ನು ಧಿಕ್ಕರಿಸಿ ರಾಧಾಕೃಷ್ಣರ ನೃತ್ಯವನ್ನು ಯಾರಾದರೂ ನೋಡಿದ್ದೇ ಆದಲ್ಲಿ ಅವರು ಸಾವನ್ನಪ್ಪುತ್ತಾರೆ ಇಲ್ಲವಾದರೆ ಮತೀಹೀನರಾಗುತ್ತಾರೆ ಎನ್ನುವುದನ್ನು ಜನರು ನಂಬುತ್ತಾರೆ. ಆ ವನದ ಎದುರಿಗೆ ಮನೆಕೂಡಾ ಕಟ್ಟಿಸೋದಿಲ್ಲ. ಈಗಾಗಲೇ ಅಲ್ಲಿ ಮನೆ ಇರುವವರು ರಾತ್ರಿಯಾಗುತ್ತಿದ್ಧಂತೆ ವನದ ಬದಿಗೆ ಇರುವ ಮನೆಯ ಕಿಟಕಿಯನ್ನು ಮುಚ್ಚುತ್ತಾರೆ.

ಕೊಳಲಿನ ಸದ್ದು ಕೇಳಿಸುತ್ತದೆ

ಕೊಳಲಿನ ಸದ್ದು ಕೇಳಿಸುತ್ತದೆ

ರಾತ್ರಿ ಹೊತ್ತಿಗೆ ಕೊಳಲಿನ ಸದ್ದು ಕೇಳಿಸುತ್ತದೆದ. ಜೊತೆಗೆ ಕಾಲಿನ ಗೆಜ್ಜೆಯ ಸದ್ದು ಕೂಡಾ ಕೇಳಿಸುತ್ತದೆ ಎನ್ನುತ್ತಾರೆ ಸ್ಥಳೀಯರು. ರಾಧಾಕೃಷ್ಣರು ಗೋಪಿಕೆಯ ಜೊತೆ ನೃತ್ಯಮಾಡುತ್ತಿರುವಾಗ ಆ ಸದ್ದು ಕೇಳಿಸುತ್ತದೆ ಎನ್ನಲಾಗುತ್ತದೆ.

ಮರಗಳೇ ಗೋಪಿಕೆಯರಾಗುತ್ತವೆ

ಮರಗಳೇ ಗೋಪಿಕೆಯರಾಗುತ್ತವೆ

PC: youtube

ಈ ನಿಧಿವನದಲ್ಲಿರುವ ಮರಗಳ ವಿಶೇಷತೆ ಏನೆಂದರೆ, ಎಲ್ಲಾ ಮರಗಳ ಕಾಂಡಗಳು ಒಂದೇ ರೀತಿ ಇರುತ್ತದೆ. ಈ ವನಕ್ಕೆ ನೀರು ಹಾಕದಿದ್ದರೂ ಯಾವಾಗಲೂ ಇಲ್ಲಿನ ಗಿಡ ಮರಗಳು ಹಸಿರಾಗಿಯೇ ಇರುತ್ತದೆ. ರಾತ್ರಿ ಹೊತ್ತಿನಲ್ಲಿ ಈ ಮರಗಳೇ ಗೋಪಿಕೆಯರಾಗಿ ಮಾರ್ಪಾಡಾಗಿ ರಾಧಾಕೃಷ್ಣರ ಜೊತೆ ನೃತ್ಯ ಮಾಡುತ್ತವೆ ಎಂದು ಹೇಳಲಾಗುತ್ತದೆ.

ರಂಗ ಮಹಲ್ ಅಲಂಕರಿಸಲಾಗುತ್ತದೆ.

ರಂಗ ಮಹಲ್ ಅಲಂಕರಿಸಲಾಗುತ್ತದೆ.

ನಿಧಿವನದೊಳಗೆ ಇರುವ ರಂಗಮಹಲ್‌ನಲ್ಲಿ ರಾಧಾಕೃಷ್ಣರು ನೃತ್ಯ ಮಾಡುತ್ತಾರೆ ಎನ್ನುತ್ತಾರೆ ಇಲ್ಲಿನ ಪೂಜಾರಿಯರು. ಅದಕ್ಕಾಗಿ ನಿಧಿವನದ ದ್ವಾರ ಮುಚ್ಚುವ ಮೊದಲು ಅಲ್ಲಿನ ರಂಗ ಮಹಲ್‌ನ್ನು ಅಲಂಕರಿಸಲಾಗುತ್ತದೆ. ಮಂಚ, ಹಾಲು, ಸಹಿ ತಿನಿಸು, ಹಣ್ಣುಗಳು, ತಾಂಬೂಲ, ಸೀರೆ, ಕೆಲವು ಅಲಂಕರಿಕಾ ಸಾಮಾಗ್ರಿಯನ್ನು ಇಡಲಾಗುತ್ತದೆ.

Read more about: temple uttar pradesh mathura
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X