Search
  • Follow NativePlanet
Share
» »ಪ್ರವಾಸಿಗರ ಮನ ಸೆಳೆಯುವ ಕೇರಳದ ‘ನೆಹರು ಟ್ರೋಫಿ ಬೋಟ್ ರೇಸ್’

ಪ್ರವಾಸಿಗರ ಮನ ಸೆಳೆಯುವ ಕೇರಳದ ‘ನೆಹರು ಟ್ರೋಫಿ ಬೋಟ್ ರೇಸ್’

ಕೇರಳದಲ್ಲಿ ಬೋಟ್ ರೇಸಿಂಗ್ ಸೀಸನ್ ಆರಂಭ ಓಣಂ ಹಬ್ಬಕ್ಕೆ ಚಾಲನೆಯನ್ನು ಸೂಚಿಸುತ್ತದೆ. ಓಣಂ ಅನ್ನು 'ಹಾರ್ವೆಸ್ಟ್ ಫೆಸ್ಟಿವಲ್' ಎಂದೂ ಕರೆಯಲಾಗುತ್ತದೆ. ಅಂದಹಾಗೆ ಓಣಂ ಹಬ್ಬದ ಸಮಯದಲ್ಲಿ ಆಲೆಪ್ಪಿಯ ಸರೋವರದಲ್ಲಿ ನಡೆಯುವ 'ನೆಹರು ಟ್ರೋಫಿ ಬೋಟ್ ರೇಸ್' ಅತ್ಯಂತ ರೋಮಾಂಚಕಾರಿಯಾಗಿದ್ದು, ಜನಪ್ರಿಯ ಪ್ರಸಿದ್ಧ ಪ್ರವಾಸಿ ಆಕರ್ಷಣೆ ಕೂಡ ಹೌದು. ಪ್ರತಿ ವರ್ಷ ಆಲೆಪ್ಪಿಯ ಪುನ್ನಮಾಡ ಸರೋವರದಲ್ಲಿ ಆಗಸ್ಟ್‌'ನಲ್ಲಿ ನಡೆಯುವ ಓಣಂ ಹಬ್ಬದ ಜೊತೆಗೆ ಈ ರೇಸ್ ನಡೆಸಲಾಗುತ್ತದೆ.

ಕೇರಳದಲ್ಲಿ ನಡೆಯುವ ದೋಣಿ ಸ್ಪರ್ಧೆಗಳ ಪೈಕಿ ಇದು ಅತ್ಯಂತ ಸ್ಪರ್ಧಾತ್ಮಕವಾಗಿದೆ. ಅಷ್ಟೇ ಅಲ್ಲ, ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸಮಯದಲ್ಲಿ ಅಲಪ್ಪುಳ ನಗರದ ಸಮೀಪದಲ್ಲಿರುವ ಪುನ್ನಮಾಡ ಸರೋವರದ ತೀರದಲ್ಲಿ ಸ್ಥಳೀಯ ಮತ್ತು ವಿದೇಶಿ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಸೇರುತ್ತಾರೆ.

ನೆಹರು ಟ್ರೋಫಿ ಬೋಟ್ ರೇಸ್‌ ಇತಿಹಾಸ

ನೆಹರು ಟ್ರೋಫಿ ಬೋಟ್ ರೇಸ್‌ ಇತಿಹಾಸ

ನೆಹರು ಟ್ರೋಫಿ ಬೋಟ್ ರೇಸ್‌'ನ ಇತಿಹಾಸ ನೋಡುವುದಾದರೆ 1952 ರಲ್ಲಿ ಭಾರತದ ಮೊದಲ ಪ್ರಧಾನಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರು ಅವರು ಅಲಪ್ಪುಳಕ್ಕೆ ಭೇಟಿ ನೀಡಿದ್ದರು. ಅವರ ಭೇಟಿಯನ್ನು ಗೌರವಿಸಲು ಹಾವಿನ ದೋಣಿಗಳೊಂದಿಗೆ ರೇಸ್ ನಡೆಸಲಾಯಿತು. ಈ ಸಂದರ್ಭದಲ್ಲಿ ನೆಹರು ಅವರು ಎಲ್ಲಾ ಭದ್ರತಾ ಪ್ರೋಟೋಕಾಲ್‌'ಗಳನ್ನು ನಿರ್ಲಕ್ಷಿಸಿ ದೋಣಿಗಳಲ್ಲಿ ಒಂದಕ್ಕೆ ಹಾರಿದರು ಎಂದು ವರದಿಯಾಗಿದೆ. ಬಳಿಕ ಜನರಿಗೆ ಕೃತಜ್ಞತೆ ಸಲ್ಲಿಸಲು ಬೆಳ್ಳಿ ಹಾವಿನ ದೋಣಿಯ ಟ್ರೋಫಿಯನ್ನು ನೀಡಿದರು. ಅಂದಿನಿಂದ ಈ ಬೋಟ್ ರೇಸ್ ಕೇರಳದ ಸಾಕಷ್ಟು ಜನಪ್ರಿಯತೆ ಪಡೆಯಿತು. ಅಂದಿನಿಂದ ಈ ಇವೆಂಟ್'ಗೆ ನೆಹರು ಟ್ರೋಫಿ ಸ್ನೇಕ್ ಬೋಟ್ ರೇಸ್ ಎಂದು ಕರೆಯಲಾಯಿತು.

ಸೆ.4 ರಂದು ನೆಹರು ಟ್ರೋಫಿ ಬೋಟ್ ರೇಸ್‌

ಸೆ.4 ರಂದು ನೆಹರು ಟ್ರೋಫಿ ಬೋಟ್ ರೇಸ್‌

ಸಾಮಾನ್ಯವಾಗಿ ಪ್ರತಿ ವರ್ಷ ಆಗಸ್ಟ್‌'ನ ಎರಡನೇ ಶನಿವಾರದಂದು ಈ ರೇಸ್ ನಡೆಯುತ್ತದೆ. ಆದರೆ ಈ ವರ್ಷ ಪ್ರಸಿದ್ಧ ನೆಹರು ಟ್ರೋಫಿ ಬೋಟ್ ರೇಸ್ ಸೆಪ್ಟೆಂಬರ್ 4 ರಂದು ಅಲಪ್ಪುಳ ಜಿಲ್ಲೆಯ ಪುನ್ನಮಾಡ ಸರೋವರದಲ್ಲಿ ನಡೆಯಲಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ 2020 ಮತ್ತು 2021 ರಲ್ಲಿ ಈ ರೇಸ್ ನಡೆಸಲು ಸಾಧ್ಯವಾಗಲಿಲ್ಲ. 2018 ಮತ್ತು 2019 ರಲ್ಲಿ ಪ್ರವಾಹದ ಕಾರಣದಿಂದ ನವೆಂಬರ್‌'ಗೆ ಮುಂದೂಡಲಾಗಿತ್ತು. ಈ ವರ್ಷದ ನೆಹರು ಟ್ರೋಫಿ ಬೋಟ್ ರೇಸ್‌'ನ ಟಿಕೆಟ್‌ಗಳು ಆಲೆಪ್ಪಿಯ ಸರ್ಕಾರಿ ಕಚೇರಿಗಳಲ್ಲಿ ಲಭ್ಯವಿದೆ. ಆನ್‌'ಲೈನ್‌'ನಲ್ಲಿ ಟಿಕೆಟ್‌ ಮಾರಾಟವೂ ಆರಂಭವಾಗಿದೆ.

ಇದೇ ಪ್ರವಾಸಿಗರ ಆಕರ್ಷಣೆ

ಇದೇ ಪ್ರವಾಸಿಗರ ಆಕರ್ಷಣೆ

ನೆಹರು ಟ್ರೋಫಿ ಬೋಟ್ ರೇಸ್ ಅತ್ಯಂತ ಜನಪ್ರಿಯವಾದುದಾದರೂ, ಇದು ಈ ಅವಧಿಯಲ್ಲಿ ನಡೆಯವ ಏಕೈಕ ದೋಣಿ ಸ್ಪರ್ಧೆಯಲ್ಲ. ಇತರ ದೋಣಿ ರೇಸ್‌'ಗಳನ್ನು ವೀಕ್ಷಿಸಲು ಸಹ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಈ ಸಮಯದಲ್ಲಿ ಇಡೀ ಪ್ರದೇಶವು ಸಾವಿರಾರು ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಅಲಂಕೃತ ದೋಣಿಗಳು, ಅದ್ಭುತವಾದ ಫ್ಲೋಟ್‌ಗಳು ಕಣ್ಮನ ಸೆಳಯುತ್ತವೆ. ನೆಹರು ಟ್ರೋಫಿ ಬೋಟ್ ರೇಸ್‌'ಗೆ ಪೂರ್ವಭಾವಿಯಾಗಿ, ಪುರುಷರು ಮತ್ತು ಮಹಿಳೆಯರು ವಂಚಿಪ್ಪಾಟು ಎಂದು ಕರೆಯಲ್ಪಡುವ ಗೀತೆಗೆ ತರಬೇತಿ ಕೊಡುತ್ತಾರೆ.

ಹೋಗುವುದು ಹೇಗೆ?

ಹೋಗುವುದು ಹೇಗೆ?

ನೆಹರು ಟ್ರೋಫಿ ಬೋಟ್ ರೇಸ್‌ ನೋಡುವವರು ಕೊಚ್ಚಿ ನಗರಕ್ಕೆ (ಕೆಲವೊಮ್ಮೆ ಕೊಚ್ಚಿನ್ ಎಂದೂ ಸಹ ಉಲ್ಲೇಖಿಸಲಾಗುತ್ತದೆ) ಬನ್ನಿ. ಅಲಪ್ಪುಳದಿಂದ ಸುಮಾರು 85 ಕಿ.ಮೀ ದೂರದಲ್ಲಿರುವ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಕೊಚ್ಚಿಯ ವಿಮಾನನಿಲ್ದಾಣದಿಂದ ಕಾರಿನಲ್ಲಿ ಸುಮಾರು ಒಂದು ಗಂಟೆಯ ಪ್ರಯಾಣ ತೆಗೆದುಕೊಳ್ಳುತ್ತದೆ. ನೀವು ಅಲಪ್ಪುಳಕ್ಕೆ ರೈಲಿನಲ್ಲಿ ಕೂಡ ತೆರಳಬಹುದು. ಅಲ್ಲಿಂದ ಪುನ್ನಮಾಡ ಸರೋವರಕ್ಕೆ ಸುಮಾರು 7 ಕಿ.ಮೀ.ಇದೆ.

ಈ ಬೋಟ್ ರೇಸ್’ಗಳು ಗೊತ್ತಾ?

ಈ ಬೋಟ್ ರೇಸ್’ಗಳು ಗೊತ್ತಾ?

*ಚಂಪಕುಲಂ ಮೂಲಂ ಬೋಟ್ ರೇಸ್ ಇದು ರಾಜ್ಯದ ಅತ್ಯಂತ ಜನಪ್ರಿಯ ರೇಸ್'ಗಳಲ್ಲಿ ಒಂದಾಗಿದೆ. ನೆಹರು ಟ್ರೋಫಿ ಬೋಟ್ ರೇಸ್‌'ನಂತೆ, ಈ ರೇಸ್ ಸಮಯದಲ್ಲಿ ಸುಂದರವಾದ ಫ್ಲೋಟ್‌ಗಳು, ಅಲಂಕೃತ ದೋಣಿಗಳನ್ನು ನೋಡಬಹುದು.

* ಆರನ್ಮುಳ ಉತ್ರತ್ತಾಡಿ ವಲ್ಲಂಕಾಳಿ ರೇಸ್'ನಲ್ಲಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ ರೋವರ್‌'ಗಳು ತಮ್ಮ ಹಾವಿನ ದೋಣಿಗಳನ್ನು ಆರನ್ಮುಳದ ಪಂಭಾ ನದಿಯ ಶಾಂತ ನೀರಿನ ಮೇಲೆ ತೆಗೆದುಕೊಂಡುಹೋಗುತ್ತಾರೆ. ಇದನ್ನು ನೋಡಿ ನೀವು ಮಂತ್ರಮುಗ್ಧರಾಗುವುದು ಖಚಿತ.

* ಪಾಯಿಪ್ಪಾಡ್ ಜಲೋತ್ಸವಂ ಆಲಪ್ಪುಳ ಸಮೀಪದ ಪಾಯಿಪ್ಪಾಡ್ ನದಿಯಲ್ಲಿ ನಡೆಯುತ್ತದೆ. ಇದು ಕೇರಳದ ಅತ್ಯಂತ ಹಳೆಯ ಬೋಟ್ ರೇಸ್‌'ಗಳಲ್ಲಿ ಒಂದಾಗಿದೆ. ಇಲ್ಲಿ ರೋವರ್‌'ಗಳನ್ನು ಹುರಿದುಂಬಿಸಲು ದೊಡ್ಡ ಜನಸಮೂಹವೇ ಬರುತ್ತದೆ. ಈ ಸಮಯದಲ್ಲಿ ವಾಟರ್ ಫ್ಲೋಟ್ ಮೆರವಣಿಗೆಗಳು, ವಿಸ್ತಾರವಾಗಿ ಅಲಂಕರಿಸಿದ ದೋಣಿಗಳು ಮತ್ತು ಅನೇಕ ಜಾನಪದ ಕಲಾ ಪ್ರದರ್ಶನಗಳನ್ನು ನೋಡಬಹುದು.

* ಶ್ರೀ ನಾರಾಯಣ ಜಯಂತಿ ಬೋಟ್ ರೇಸ್ ಕೇರಳದ ಇತರ ದೋಣಿ ಸ್ಪರ್ಧೆಗಳಿಗಿಂತ ಭಿನ್ನವಾಗಿದೆ. ಈ ರೇಸ್ ಕುಮರಕೊಮ್ ಬೋಟ್ ರೇಸ್ ಎಂದು ಹೆಚ್ಚು ಜನಪ್ರಿಯವಾಗಿದೆ. ಈ ಸಮಯದಲ್ಲಿ ಕುಮರಕೊಮ್ ಗ್ರಾಮಕ್ಕೆ ಭೇಟಿ ನೀಡಿದ ಪ್ರಸಿದ್ಧ ಭಾರತೀಯ ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳನ್ನು ಸ್ಮರಿಸಲಾಗುವುದು. 1903 ರಲ್ಲಿ, ನೃತ್ಯ ಮತ್ತು ಸಂಗೀತ ಪ್ರದರ್ಶನಗಳೊಂದಿಗೆ ದೋಣಿಗಳ ಭವ್ಯವಾದ ಮೆರವಣಿಗೆಯೂ ಇತ್ತು. ಕುಮಾರಕೋಮ್ ಗ್ರಾಮದಲ್ಲಿ ಶ್ರೀ ನಾರಾಯಣ ಗುರು ಜಯಂತಿಯಂದು ರೇಸ್ ನಡೆಯುತ್ತದೆ. ಕುಮಾರಕೋಮ್ ದ್ವೀಪಗಳ ಸಮೂಹವನ್ನು ಒಳಗೊಂಡಿದೆ. ಕೊಟ್ಟಾಯಂ ನಗರದಿಂದ ಸುಮಾರು 14 ಕಿ.ಮೀ ದೂರದಲ್ಲಿದೆ.

* ಇಂದಿರಾಗಾಂಧಿ ಬೋಟ್ ರೇಸ್ ಭಾರತದ ದಿವಂಗತ ಪ್ರಧಾನಿ ಮತ್ತು ಜವಾಹರಲಾಲ್ ನೆಹರು ಅವರ ಏಕೈಕ ಪುತ್ರಿಯಾದ ಇಂದಿರಾ ಗಾಂಧಿ ಅವರ ಸ್ಮರಣಾರ್ಥ ನಡೆಸಲಾಗುತ್ತದೆ. ಈ ಓಟವು ಕೇರಳದ ಎರಡನೇ ಅತಿದೊಡ್ಡ ನಗರವಾದ ಕೊಚ್ಚಿಯ ಕೇಂದ್ರ ಮತ್ತು ಮುಖ್ಯ ಭೂಭಾಗವಾದ ಎರ್ನಾಕುಲಂನ ಮರೈನ್ ಡ್ರೈವ್‌'ನಲ್ಲಿ ನಡೆಯುತ್ತದೆ.

Read more about: ಕೇರಳ kerala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X