Search
  • Follow NativePlanet
Share
» »ಈ ದೇವಾಲಯದಲ್ಲಿ ಎಣ್ಣೆಯಿಂದಲ್ಲ, ಬರೀ ನೀರಿನಿಂದ ದೀಪ ಬೆಳಗಿಸ್ತಾರಂತೆ !

ಈ ದೇವಾಲಯದಲ್ಲಿ ಎಣ್ಣೆಯಿಂದಲ್ಲ, ಬರೀ ನೀರಿನಿಂದ ದೀಪ ಬೆಳಗಿಸ್ತಾರಂತೆ !

ಸಾಮಾನ್ಯವಾಗಿ ದೇವಸ್ಥಾನದಲ್ಲಾಗಲಿ ಮನೆಯ ದೇವರಿಗೆ ಯಾವ ದೀಪವನ್ನು ಹಚ್ಚುತ್ತೇವೆ. ಶುದ್ಧ ತುಪ್ಪದಿಂದ ದೀಪ ಹಚ್ಚುತ್ತಾರೆ. ಇಲ್ಲವಾದರೆ ಎಣ್ಣೆಯನ್ನು ಬಳಸಿ ದೀಪ ಹಚ್ಚಲಾಗುತ್ತದೆ. ಆದರೆ ಇಂದು ನಾವು ಹೇಳಹೊರಟಿರುವುದು ಒಂದು ವಿಶೇಷ ದೇವಸ್ಥಾನದ ಬಗ್ಗೆ. ಇಲ್ಲಿ ಬರೀ ನೀರಿನ ದೀಪ ಹಚ್ಚಲಾಗುತ್ತದಂತೆ.

ಎಲ್ಲಿದೆ ಈ ಮಂದಿರ

ಎಲ್ಲಿದೆ ಈ ಮಂದಿರ

ಮಧ್ಯಪ್ರದೇಶದ ತೆಹಸಿಲ್‌ ಜಿಲ್ಲೆಯಲ್ಲಿರುವ ಗ್ರಾಮ್‌ಧಡಿಯಾದಲ್ಲಿ ಗಾಢಿಯಾಘಾಟ್‌ ಎನ್ನುವ ದೇವಿಯ ಮಂದಿರದ ಬಗ್ಗೆ ತಿಳಿಸಲಿದ್ದೇವೆ. ದೂರದೂರದಿಂದ ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಈ ಮಂದಿರದಲ್ಲಿ ಸುಮಾರು ೫ ವರ್ಷದಿಂದ ದೀಪ ಉರಿಸಲಾಗುತ್ತದೆ. ಅದು ತುಪ್ಪ ಅಥವಾ ಎಣ್ಣೆಯಿಂದ ದೀಪ ಉರಿಸಲಾಗುತ್ತಿಲ್ಲ. ಬದಲಾಗಿ ನೀರಿನಿಂದ ಉರಿಸಲಾಗುತ್ತದೆ.

ನೀರಿನ ದೀಪ

ನೀರಿನ ದೀಪ

ದೀಪಕ್ಕೆ ನೀರು ಹಾಕಿದ ನಂತರವು ದೀಪ ಸರಿಯಾಗಿ ಉರಿಯುತ್ತದೆ. ಅದಕ್ಕೆ ನೀರು ಹಾಕಿದರೂ ಅದು ಮಾಮೂಲಿಯಾಗಿಯೇ ಉರಿಯುತ್ತದೆ. ಮಳೆಗಾಲದಲ್ಲಿ ಈ ಮಂದಿರದಲ್ಲಿ ದೀಪ ಹಚ್ಚಲಾಗುವುದಿಲ್ಲ. ಹಾಗೂ ಯಾವ ಭಕ್ತರು ಅಲ್ಲಿಗೆ ಬರೋದಿಲ್ಲ. ಯಾಕೆಂದರೆ ಮಳೆಗಾಲದಲ್ಲಿ ಈ ಮಂದಿರ ನೀರಿನಲ್ಲಿ ಮುಳುಗುತ್ತಂತೆ.

ದೇವಿಯ ವಿರಾಮದ ಸಮಯ

ದೇವಿಯ ವಿರಾಮದ ಸಮಯ

ಮಳೆಗಾಲದಲ್ಲಿ ಯಾಕೆ ಮಂದಿರ ಮುಳುಗುತ್ತದೆ ಎನ್ನುವುದರ ಹಿಂದೆಯೂ ಒಂದು ಕಾರಣವಿದೆ. ಆ ಸಂದರ್ಭದಲ್ಲಿ ದೇವಿಯ ಆರಾಮ ಮಾಡುವ ಸಮಯವಂತೆ. ಹಾಗಾಗಿ ಮಂದಿರ ನೀರಿನಲ್ಲಿ ಮುಳುಗುತ್ತದೆ.

ಮನೋಕಾಮನೆಯನ್ನು ಈಡೇರುತ್ತದೆ

ಮನೋಕಾಮನೆಯನ್ನು ಈಡೇರುತ್ತದೆ

ನವರಾತ್ರಿಯ ಮೊದಲ ದಿನ ಇಲ್ಲಿ ನೀರಿನ ದೀಪ ಹಚ್ಚಲಾಗುತ್ತದೆ. ಅದು ಮುಂದಿನ ವರ್ಷದ ವರೆಗೆ ಬೆಳಗುತ್ತಾ ಇರುತ್ತಂತೆ. ಈ ಮಂದಿರದಲ್ಲಿ ಆರತಿಯ ಸಂದರ್ಭ ಯಾವುದೇ ಭಕ್ತರು ಭಕ್ತಿಯಿಂದ ಬೇಡಿಕೊಂಡರೆ ದೇವಿಯು ಅವರ ಮನೋಕಾಮನೆಯನ್ನು ಈಡೇರಿಸುತ್ತಾರೆ ಎನ್ನುತ್ತಾರೆ.

ಯಾಕೆ ನೀರಿನ ದೀಪ ಹಚ್ಚಲಾಗುತ್ತದೆ

ಯಾಕೆ ನೀರಿನ ದೀಪ ಹಚ್ಚಲಾಗುತ್ತದೆ

ಇದರ ಹಿಂದೆ ಒಂದು ಕಥೆ ಇದೆ. ಈ ದೇವಸ್ಥಾನ ಪೂಜಾರಿಯ ಕನಸಿನಲ್ಲಿ ದೇವಿ ಬಂದು ನೀರಿನ ದೀಪ ಹಚ್ಚುವಂತೆ ಹೇಳಿದಳಂತೆ. ಪೂಜಾರಿ ಬೆಳಗ್ಗೆ ದೇವಸ್ಥಾನಕ್ಕೆ ಹೋದಾಗ ಎಣ್ಣೆಯ ಬದಲಿಗೆ ನೀರು ಹಾಕಿ ದೀಪ ಹಚ್ಚಿದಾಗ ದೀಪ ಉರಿಯಲು ಪ್ರಾರಂಭಿಸಿತಂತೆ. ಈ ಮಾತನ್ನು ಊರಿನವರಿಗೂ ತಿಳಿಸಿದಾಗ ಯಾರೂ ನಂಬಲಿಲ್ಲ. ಆಸರೆ ಜನರು ಸ್ವತಃ ಕಣ್ಣಾರೆ ಈ ಚಮತ್ಕಾರವನ್ನು ನೋಡಿದಾಗ ನಂಬಲೇ ಬೇಕಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X