Search
  • Follow NativePlanet
Share
» »ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022

ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022

2022 ರ ಮೈಸೂರು ದಸರಾದ ದಿನಾಂಕಗಳನ್ನು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 05, ರವರೆಗೆ ನಿಗದಿಪಡಿಸಲಾಗಿದೆ.

ದಸರಾ ಹಬ್ಬದ ಸಮಯದಲ್ಲಿ ಮೈಸೂರಿಗೆ ಭೇಟಿಕೊಡುವುದಕ್ಕಿಂತ ಉತ್ತಮವಾದ ಸ್ಥಳ ಇನ್ನೊಂದು ಇದೆಯೇ ? ಇಲ್ಲಿ ಇದನ್ನು ನಾಡ ಹಬ್ಬವೆಂಬ ಹೆಮ್ಮೆಯಿಂದ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ಹತ್ತು ದಿನಗಳ ಕಾಲ ಆಚರಿಸಲಾಗುವ ಈ ಪಾರಂಪರಿಕ ಹಬ್ಬದ ಸಮಯದಲ್ಲಿ ಮೈಸೂರು ನೋಡಲು ಸುಂದರ ಸ್ಥಳವಾಗಿ ಮಾರ್ಪಾಡಾಗುತ್ತದೆ ಈ ಸಮಯದಲ್ಲಿ ದೊಡ್ಡದಾದ ಮೈದಾನಗಳಲ್ಲಿ ಮೇಳಗಳನ್ನು ಆಯೋಜಿಸಲ್ಪಡುವುದರ ಜೊತೆಗೆ ಸಂಗೀತ ಕಚೇರಿಗಳು, ನೃತ್ಯ ಪ್ರದರ್ಶನಗಳು, ಕ್ರೀಡಾ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ಸಮಯದಲ್ಲಿ ಪ್ರಪಂಚದಾದ್ಯಂತದ ಪ್ರವಾಸಿಗರು ಸಮಯದಲ್ಲಿ ಮೈಸೂರಿಗೆ ಆಗಮಿಸುತ್ತಾರೆ. ದಸರಾ ಸಮಯದಲ್ಲಿ ಹೆಮ್ಮೆಯಿಂದ ಆಚರಿಸಲಾಗುವ ಮೈಸೂರು ದಸರಾದ ಮನಮೋಹಕ ದೃಶ್ಯಗಳನ್ನು ಕಣ್ಣಾರೆ ಕಂಡು ಅದರ ಆನಂದವನ್ನು ಅನುಭವಿಸಬಹುದಾಗಿದೆ. 400 ವರ್ಷಗಳಷ್ಟು ಹಳೆಯದಾದ ಮಹಾರಥೋತ್ಸವವನ್ನು ವೀಕ್ಷಿಸಲು ನೀವು ಯೋಜಿಸುತ್ತಿದ್ದರೆ ಮೈಸೂರು ದಸರಾಕ್ಕಾಗಿ ಈ ಪ್ರಯಾಣದ ಸಲಹೆಗಳನ್ನು ನೆನಪಿನಲ್ಲಿಡಿ!

mysoredesherra

ದಸರಾ ಸಮಯದಲ್ಲಿ ಮೈಸೂರು ಅರಮನೆ

ಮೈಸೂರು ದಸರಾ ಸಮಯದಲ್ಲಿ ನೀವು ತಪ್ಪಿಸಿಕೊಳ್ಳಲೇಬಾರದಾಗಿರುವ ಕೆಲವು ವಿಷಯಗಳು!

ಮೈಸೂರು ಮಹಾರಾಜರ ನೇತೃತ್ವದಲ್ಲಿ ಅಲಂಕೃತವಾದ ಆನೆಗಳ ಮೆರವಣಿಗೆಯೊಂದಿಗೆ ಉತ್ಸವವು ಪ್ರಾರಂಭವಾಗುತ್ತದೆ, ಇದು ದೀಪಾಲಂಕೃತವಾಗಿರುವ ಮೈಸೂರು ಅರಮನೆಯಿಂದ ಪ್ರಾರಂಭವಾಗಿ ದಸರಾ ಮೈದಾನದವರೆಗೆ ಸಾಗುತ್ತದೆ.

ಇಲ್ಲಿ ಅರಮನೆಯನ್ನು ಲಕ್ಷಗಟ್ಟಲೆ ದೀಪಗಳಿಂದ ಬೆಳಗಿಸಿ ಅಲಂಕಾರ ಮಾಡಲಾಗುತ್ತದೆ ಈ ವೈಭವೋಪೇತ ದೃಶ್ಯವನ್ನು ದಸರಾ ಸಮಯದಲ್ಲಿ ನೋಡಲು ಮರೆಯಬಾರದು

1880 ರಿಂದ ಪ್ರತಿ ವರ್ಷವೂ ವಸ್ತು ಪ್ರದರ್ಶನ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತದೆ ಪ್ರದರ್ಶನವು ಸಂತೋಷದ ಆಟಕ್ಕೆ ಸಂಬಂಧಿಸಿದ ಸವಾರಿಗಳು, ಗ್ಯಾಸ್ಟ್ರೊನೊಮಿಕ್ ಟ್ರೀಟ್‌ಗಳು, ಶಾಪಿಂಗ್ ಮತ್ತು ಇನ್ನೂ ಅನೇಕ ಖರೀದಿ ಮಾಡಬಹುದಾದಂತಹ ಅಂಗಡಿಗಳನ್ನು ಹೊಂದಿರುವುದನ್ನು ಕಾಣಬಹುದಾಗಿದೆ. ಆದುದರಿಂದ ಇದೂ ಸಹ ಇಲ್ಲಿ ಈ ಸಮಯದಲ್ಲಿ ಭೇಟಿ ಕೊಡಲೇಬೇಕಾದುದಾಗಿದೆ.

ಉತ್ಸವದ ಕೊನೆಯ ದಿನದ ಬೆರಗುಗೊಳಿಸುವ ಮೆರವಣಿಗೆಯು ಶ್ರೀಮಂತವಾದ ವೇಷಭೂಷಣಳಿಂದ ಅಲಂಕೃತವಾದ ಆನೆಗಳು, ಹೂವಿನ ಮಾಲೆಗಳಿಂದ ಅಲಂಕೃತವಾದ ವಿಗ್ರಹಗಳು, ಸೈನಿಕರು ಮತ್ತು ಅಶ್ವಸೈನ್ಯವು ಹಿತ್ತಾಳೆಯ ಬ್ಯಾಂಡ್‌ಗಳ ಲಯದ ಜೊತೆಗೆ ಬೀದಿಗಳಲ್ಲಿ ಮೆರವಣಿಗೆ ಮಾಡುವ ದೃಶ್ಯಗಳು ಮನಸೂರೆಗೊಳಿಸುತ್ತವೆ.

ಮೈಸೂರು ದಸರಾಗೆ ಹೊರಡುವ ಸಮಯದಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಸಲಹೆಗಳು

ದಸರಾ ಸಮಯದಲ್ಲಿ ಮೈಸೂರು ದೇಶ ವಿದೇಶಗಳ ಪ್ರವಾಸಿಗರನ್ನು ತನ್ನಲ್ಲಿಗೆ ಆಕರ್ಷಿಸುತ್ತದೆ ಆದುದರಿಂದ ನಿಮ್ಮ ಪ್ರಯಾಣ ಟಿಕೇಟು ಮತ್ತು ಹೋಟೇಲುಗಳನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಬೇಕಾಗುತ್ತದೆ.

ನಗರದ ನಕ್ಷೆಯ ಮುದ್ರಿತ ಪ್ರತಿಯನ್ನು ತೆಗೆದುಕೊಂಡು ಹೋಗಿ ಮತ್ತು ಯಾವುದೇ ಸಹಾಯಕ್ಕಾಗಿ ಅಪರಿಚಿತರ ಬದಲು ಹೆಸರಾಂತ ಅಂಗಡಿ ಮಾಲೀಕರನ್ನು ಸಂಪರ್ಕಿಸಿ.

mysoredusherra

ಮೈಸೂರು ದಸರಾ ಸಮಯದಲ್ಲಿಯ ಮೆರವಣಿಗೆ

ಪಾರ್ಕಿಂಗ್ ನ ತೊಂದರೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ದಸರಾ ಹಬ್ಬದ ಸಮಯದಲ್ಲಿ ಆಟೋ ರಿಕ್ಷಾ ಅಥವಾ ಕಾಲ್ನಡಿಗೆಯಲ್ಲಿ ಸುತ್ತಾಡುವುದಕ್ಕೆ ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ.

ಅನುಕರಣೆಯ ಅಥವಾ ನಕಲಿ ವಸ್ತುಗಳ ಖರೀದಿಯನ್ನು ತಪ್ಪಿಸಲು ಕರಕುಶಲ ವಸ್ತುಗಳು, ರೇಷ್ಮೆ ಸೀರೆಗಳು ಮತ್ತು ಇತರ ಸಂಬಂಧಿತ ವಸ್ತುಗಳನ್ನು ಸರ್ಕಾರದಿಂದ ಅನುಮೋದಿತ ಮಳಿಗೆಗಳಿಂದ ಖರೀದಿಸಿ.

ದೇವಾಲಯಗಳಿಗೆ ಈ ಸಮಯದಲ್ಲಿ ಭೇಟಿ ನೀಡುವಾಗ, ಅಲ್ಲಿ ವಿಶೇಷ ಪ್ರವೇಶ ಟಿಕೇಟಿನ ಸೌಲಭ್ಯ ವಿದ್ದಲ್ಲಿ, ಅದನ್ನು ತೆಗೆದುಕೊಳ್ಳಿ ಇದರಿಂದ ಉದ್ದನೆಯ ಸರತಿ ಸಾಲುಗಳನ್ನು ತಪ್ಪಿಸಲು, ಅನುಕೂಲವಾಗುತ್ತದೆ.

ಮಾರ್ಗ, ವಸತಿ ಮತ್ತು ಸಮಯ!

mysoredusherra

ಮೈಸೂರನ್ನು ತಲುಪುವುದು ಹೇಗೆ?: ಮೈಸೂರು ರೈಲು ಮತ್ತು ವಾಯುಮಾರ್ಗಗಳಿಂದ ಉತ್ತಮವಾಗಿ ಭಾರತದ ಪ್ರಮುಖ ನಗರಗಳಿಂದ ಉತ್ತಮವಾಗಿ ಸಂಪರ್ಕಿಸಲ್ಪಟ್ಟಿದೆ. ಹಾಗೂ ಬೆಂಗಳೂರಿನಿಂದ ಮೈಸೂರಗೆ ರಸ್ತೆಯ ಮೂಲಕ 145ಕಿಮೀ ಅಂತರವಿದ್ದು ಸುಲಭವಾಗಿ ತಲುಪಬಹುದಾಗಿದೆ.

ಈ ಸ್ಥಳಕ್ಕೆ ಭೇಟಿ ಕೊಡಲು ಉತ್ತಮವಾದ ಸಮಯ:ಮೈಸೂರಿಗೆ ದಸರಾ ಸಮಯದಲ್ಲಿ ಹಬ್ಬದ ಕಡೆಯ ನಾಲ್ಕು ದಿನ ಹೆಚ್ಚು ವಿಶೇಷವಾಗಿರುತ್ತದೆ. (2022 ರಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 05,)

ವಸತಿ ಸೌಲಭ್ಯ: ಹೆಚ್ಚಿನ ನೂಕುನುಗ್ಗಲು ಇರುವುದರಿಂದ ಮುಂಗಡವಾಗಿ-ಬುಕ್ಕಿಂಗ್ ಪ್ರಯತ್ನಿಸಿ.

ಮೈಸೂರು ದಸರಾ ಸಮಯದಲ್ಲಿ ನೆನಪಿಟ್ಟುಕೊಳ್ಳಬೇಕಾದ ಈ ವಿಷಯಗಳು 2022 ರ ಮೈಸೂರು ದಸರಾ ಸಮಯದಲ್ಲಿ ನಿಮಗೆ ಉಪಯುಕ್ತವಾಗುತ್ತವೆ ಎಂದು ಆಶಿಸುತ್ತಾ . ನಿಮ್ಮ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X