Search
  • Follow NativePlanet
Share
» »ನವರಾತ್ರಿ 2022: ದುರ್ಗಾ ದೇವಿಯ ಹೆಸರನ್ನು ಹೊಂದಿರುವ ಭಾರತೀಯ ನಗರಗಳು

ನವರಾತ್ರಿ 2022: ದುರ್ಗಾ ದೇವಿಯ ಹೆಸರನ್ನು ಹೊಂದಿರುವ ಭಾರತೀಯ ನಗರಗಳು

ಚೈತ್ರ ನವರಾತ್ರಿಯು ಭಾರತದಲ್ಲಿ ಬರುವ ಹಬ್ಬಗಳಲ್ಲಿ ಪ್ರಮುಖವಾದ ಹಬ್ಬವಾಗಿದ್ದು, ಈ ಸಮಯದಲ್ಲಿ ಭಕ್ತರು ದುರ್ಗಾ ದೇವಿಯನ್ನು ಪೂಜಿಸುತ್ತಾರೆ. ನವರಾತ್ರಿಯು ಹತ್ತಿರವಾಗುತ್ತಿದ್ದಂತೆಯೇ ಇದನ್ನು ಆಚರಿಸುವ ಬಗ್ಗೆ ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೆ ದುರ್ಗಾ ದೇವಿಯ ವಿಷಯವನ್ನೊಳಗೊಂಡ ಹಲವಾರು ಕುತೂಹಲಕಾರಿ ವಿಷಯಗಳಿವೆ ಅದರಲ್ಲಿ ಭಾರತದಲ್ಲಿರುವ ಕೆಲವು ಸ್ಥಳಗಳು ದುರ್ಗಾದೇವಿಯಿಂದಾಗಿ ಹೆಸರು ಪಡೆದಿದೆ ಎಂಬುದು ಒಂದು ಸೋಜಿಗದ ಸಂಗತಿಯಾಗಿದೆ.

ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿ ಮತ್ತು ಅವಳ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಈ ರಜೆಯು ಅತ್ಯಂತ ಆನಂದದಾಯಕವಾಗಿ ಮತ್ತು ಅತ್ಯಂತ ಉತ್ಸಾಹಭರಿತವಾಗಿ ದೇಶದಾದ್ಯಂತ ಆಚರಿಸುಲಾಗುತ್ತದೆ.

durga pooja

ದುರ್ಗಾದೇವಿಯ ಹೆಸರನ್ನು ಹೊಂದಿರುವ ಭಾರತದ ಅತ್ಯುತ್ತಮ ಸ್ಥಳಗಳು

1) ನೈನಿತಾಲ್ ಉತ್ತರಾಖಂಡ್

ಉತ್ತರಾಖಂಡ್ ಪ್ರಸಿದ್ದ ಗಿರಿಧಾಮವಾದ ನೈನಿತಾಲ್ ಗೆ ನೆಲೆಯಾಗಿದೆ. ಈ ಪ್ರದೇಶದ ಪವಿತ್ರತೆ ಮತ್ತು ಈ ಸುಪ್ರಸಿದ್ಧ ಸ್ಥಳದಲ್ಲಿ ದುರ್ಗಾ ಮಾತೆಯ ಅಭಿವ್ಯಕ್ತಿಯಾದ ನೈನಾ ದೇವಿಗೆ ಸಮರ್ಪಿತವಾದ ದೇವಾಲಯದ ಉಪಸ್ಥಿತಿಯಿಂದಾಗಿ ಪಟ್ಟಣಕ್ಕೆ ನೈನಿತಾಲ್ ಎಂಬ ಹೆಸರನ್ನು ನೀಡಲಾಯಿತು.

durga pooja hariyana

2) ಚಂಡೀಘಡ, ಪಂಜಾಬ್ / ಹರ್ಯಾಣ

ನಗರದ ಹೊರವಲಯದಲ್ಲಿ ಚಂಡೀದೇವಿಯ ದೇವಾಲಯದಿಂದಾಗಿ ಈ ನಗರಕ್ಕೆ ಚಂಡೀಘಡ ಎನ್ನುವ ಹೆಸರು ಬಂದಿದ್ದು, ಈ ನಗರವನ್ನು ಭಾರತದ ಸದಾ ಸಂತೋಷದಿಂದ ಇರುವ ನಗರವೆಂದು ಕರೆಯಲಾಗುತ್ತದೆ. ಈ ದೇವಾಲಯವು ವಿಶೇಷವಾಗಿ ಚೈತ್ರ ಮತ್ತು ಶರದ್ ನವರಾತ್ರಿಯ ಸಮಯದಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಭಕ್ತರಿಂದ ಭೇಟಿ ನೀಡಲ್ಪಡುತ್ತದೆ.

durga1mumbai

3) ಮುಂಬೈ, ಮಹಾರಾಷ್ಟ್ರ

ಮುಂಬೈನ ಮುಂಬಾದೇವಿ ರಸ್ತೆಯಲ್ಲಿರುವ ಮುಂಬಾದೇವಿ ದೇವಾಲಯದಿಂದಾಗಿ ಮುಂಬೈಗೆ ಅದೇ ಹೆಸರು ಬಂದಿದೆ. ಈ ದೇವಾಲಯವು ಜವೇರಿ ಬಜಾರಿಗೆ ಹತ್ತಿರದಲ್ಲಿದೆ. ಈ ದೇವಾಲಯವನ್ನು ಆರಂಭದಲ್ಲಿ ಐದು ಶತಮಾನಗಳ ಹಿಂದೆ ಅಂಬಾ ದೇವಿಯ ಆರಾಧನೆಗಾಗಿ ನಿರ್ಮಿಸಲಾಯಿತು, ಆದರೆ ಕಾಲಾನಂತರದಲ್ಲಿ, ಈ ಹೆಸರು ಮುಂಬಾ ದೇವಿ ಎಂದು ಬದಲಾಯಿತು ಮತ್ತು ಇದರ ಪರಿಣಾಮವಾಗಿ ನಗರವು ಮುಂಬೈ ಎಂದು ಕರೆಯಲ್ಪಟ್ಟಿತು.

durgapoojadelhi

4) ದೆಹಲಿ

ಮೆಹ್ರೌಲಿ ಜಿಲ್ಲೆಯಲ್ಲಿರುವ ಯೋಗಮಾಯಾ ದೇವಾಲಯದ ಕಾರಣ, ಮೊಘಲರು ಆಗಮಿಸುವ ಮುಂಚೆಯೇ ದೆಹಲಿಯ ಕೆಲವು ಪ್ರದೇಶಗಳನ್ನು ಯೊಗ್ನಿಪುರ ಎಂದು ಕರೆಯಲಾಗುತ್ತಿತ್ತು. ಈ ದೇವಾಲಯವನ್ನು ಸುಮಾರು 5000 ವರ್ಷಗಳ ಹಿಂದೆ ಪಾಂಡವ ಸಹೋದರರಿಂದ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ.

dasarapoojapatna andbihar

5) ಪಾಟ್ನಾ, ಬಿಹಾರ್

ಬಿಹಾರಿನ ರಾಜಧಾನಿ ಮತ್ತು ದೊಡ್ಡ ನಗರವಾಗಿರುವ ಪಾಟ್ನಾದಲ್ಲಿ, ಶಿವನ ಪತ್ನಿ ಸತಿ ದೇವಿಯ ಬಲ ತೊಡೆಯು ಹಳೆಯ ಪಾಟ್ನಾ ಇರುವ ನೆಲದ ಮೇಲೆ ಬಿದ್ದಿದೆ ಎಂದು ಶಾಸ್ತ್ರಗಳ ಪ್ರಕಾರ ಹೇಳಲಾಗುತ್ತದೆ. ದೇವಿಯನ್ನು ಆರಾಧಿಸಲು ಅದೇ ಪವಿತ್ರ ಸ್ಥಳದಲ್ಲಿ ಶಕ್ತಿ ಪೀಠವನ್ನು ಸ್ಥಾಪಿಸಲಾಯಿತು. ಈ ಪ್ರಸಿದ್ಧ ಸ್ಥಳವನ್ನು ಪಟನ್ ದೇವಿ ಎಂದು ಕರೆಯಲಾಗುತ್ತಿತ್ತು ಮತ್ತು ಈ ಹೆಸರಿನಿಂದಲೇ ಪಾಟ್ನಾ ನಗರಕ್ಕೆ ಈ ಹೆಸರು ಬಂದಿತು ಎನ್ನಲಾಗುತ್ತದೆ.

ನಿಮ್ಮಂತಹ ಪ್ರಯಾಣಿಕರು ಉತ್ತಮ ಪ್ರಯಾಣದ ಅನುಭವವನ್ನು ಹೊಂದಲು ನಾವು ಸಹಾಯ ಮಾಡುವ ದೈನಂದಿನ ಪ್ರಯಾಣದ ವಿಷಯ ಮತ್ತು ಸಲಹೆಗಳಿಗಾಗಿ ಫೇಸ್ಬುಕ್ ಮತ್ತುಇನ್ಸ್ಟಾಗ್ರಾಂ ನಲ್ಲಿ ನಮ್ಮೊಂದಿಗೆ ಸಂಪರ್ಕ ಸಾಧಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X