Search
  • Follow NativePlanet
Share
» »ನೀವು ಕಂಡಿರದ ನೈಸರ್ಗಿಕ ಸ್ಥಳಗಳು ಇಲ್ಲಿವೆ ನೊಡಿ

ನೀವು ಕಂಡಿರದ ನೈಸರ್ಗಿಕ ಸ್ಥಳಗಳು ಇಲ್ಲಿವೆ ನೊಡಿ

By Manjula Balaraj Tantry

ಪ್ರಪಂಚದ ಕೆಲವು ಸ್ಥಳಗಳಲ್ಲಿ ಭಾರತವು ತನ್ನ ಪ್ರಾರಂಭದಿಂದಲೂ ಕೆಲವು ನೈಸರ್ಗಿಕ ರತ್ನಗಳನ್ನು ಬೆಳೆಸುತ್ತಿದೆ. ಅದು ದೇಶದ ಯಾವುದೇ ಭಾಗದಲ್ಲಿಯೂ ಆಗಿರಬಹುದು, ನೀವು ಇಲ್ಲಿ ಉಳಿಯಲು ಕಾರಣವನ್ನು ಕಂಡುಕೊಳ್ಳುವಿರಿ. ಈ ಸಮ್ಮೋಹಿತಗೊಳಿಸುವ ದೇಶದ ಪ್ರತೀ ಸ್ಥಳವು ಅದರ ಅಸ್ತಿತ್ವಕ್ಕೆ ಮತ್ತು ಉಳಿವಿಗೆ ಸಂಭಂದಿಸಿದಂತೆ ಹಲವಾರು ದಂತಕಥೆಗಳನ್ನು ಹೊಂದಿವೆ. ಇಲ್ಲಿಯ ಹಲವಾರು ಇತರ ಸ್ಥಳಗಳು ಗ್ರಹಿಕೆಯನ್ನು ಮೀರಿದವುಗಳಾಗಿದ್ದು ಇವುಗಳನ್ನು ಕೆಲವೇ ಕೆಲವು ಪದಗಳಲ್ಲಿ. ವಿವರಿಸಲಾಗುವುದಿಲ್ಲ. ಈ ಕೆಲವು ಸ್ಥಳಗಳು ಪ್ರವಾಸಿಗರನ್ನು ಪ್ರಯಾಣಿಕರಾಗಿ ಅಥವಾ ಅನ್ವೇಷಕರಾಗಿ ಪರಿವರ್ತಿಸುವುದಕ್ಕೆ ಕಾರಣವಾಗಿವೆ.

ಕಮ್ಶೆಟ್

ಕಮ್ಶೆಟ್

ಮಹಾರಾಷ್ಟ್ರದ ಪೂನ ಜಿಲ್ಲೆಯಲ್ಲಿರುವ ಕಮ್ಶೆಟ್, ದೇಶದ ಒಂದು ಕಡಿಮೆ ಅನ್ವೇಷಿತ ಸ್ಥಳಗಳಲ್ಲೊಂದಾಗಿದೆ. ಹೀಗೆ ಇದು ಖಚಿತವಾಗಿಯೂ ಪ್ರವಾಸಿಗರ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರುವಂತಹ ಸ್ಥಳಗಳಾಗಿದ್ದು ಇದು ಪ್ರವಾಸಿಗರನ್ನು ಉತ್ಕಟ ಆಕಾಂಕ್ಷೆಯುಳ್ಳ ಪ್ರಯಾಣಿಕರಾಗಿ ಪರಿವರ್ತಿಸುತ್ತದೆ. ಇದರ ತಂಪಾದ ಅರೆ ಶುಷ್ಕ ವಾತಾವರಣವನ್ನು ವರ್ಷವಿಡೀ ಹೊಂದಿರುವ ತಾಣವಾಗಿದೆ. ಕಮ್ಶೆಟ್ ಒಂದು ಪ್ರಸಿದ್ದ ಪ್ಯಾರಾ ಗೈಡ್ಲಿಂಗ್ ಸ್ಥಳಗಳಲ್ಲೊಂದಾಗಿರುವುದರಿಂದ ಪ್ಯಾರಾಗೈಡ್ಲಿಂಗ್ ಗೆ ಇದು ಒಂದು ಸೂಕ್ತವಾದ ಸ್ಥಳವೆನಿಸಿದೆ. ಗಾಳಿಯಲ್ಲಿ ಎತ್ತರಕ್ಕೆ ಹಾರುವ ಸೌಂದರ್ಯವನ್ನು ಹೊಂದಿರುವ ಸ್ಥಳವನ್ನು ನೋಡುವುದಕ್ಕಿಂತ ಉತ್ತಮವಾದುದು ಇನ್ನೇನಿದೆ? ಕಡಿಮೆ ಜನಸಂದಣಿಯನ್ನು ಹೊಂದಿರುವ ಮತ್ತು ಜಗತ್ತಿನ ಉತ್ಕೃಷ್ಟ ಆನಂದವನ್ನು ಪಡೆಯಬಹುದಾದಂತಹ ಇಂತಹ ಸ್ಥಳಗಳಲ್ಲಿ ಸ್ವಲ್ಪ ಸಮಯವಾದರೂ ಇರಲು ನೀವೇನಾದರೂ ಕನಸು ಕಂಡಿದ್ದಲ್ಲಿ ಕಮ್ಶೆಟ್ ನೀವು ಭೇಟಿ ಕೊಡಲೇ ಬೇಕಾದ ಸ್ಥಳಗಳಲ್ಲೊಂದಾಗಿದೆ. ಪ್ಯಾರಾಗೈಡ್ಲಿಂಗ್ ಹೊರತಾಗಿ, ಇದಕ್ಕೆ ಹತ್ತಿರದಲ್ಲಿರುವ ಕೆಲವು ಬೆರಗುಗೊಳಿಸುವ ಕೆಲವು ಸ್ಥಳಗಳಿಗೆ ಕೂಡಾ ಭೇಟಿ ಕೊಡಬಹುದು ಅವುಗಳಲ್ಲಿ ವಡಿವಾಲೇ ಸರೋವರ, ತೋಕರ್ವಾಡಿ ಸರೋವರ, ಕಾರ್ಲಾ ಮತ್ತು ಬೆಡ್ಸಾ ಗುಹೆಗಳು ಮತ್ತು ವಾಡೇಶ್ವರ್ ಶಿವ ದೇವಾಲಯ ಪ್ರಮುಖವಾದುವುಗಳು.

ಹೂವುಗಳ ಕಣಿವೆ ಯಮ್ತಾಂಗ್

ಹೂವುಗಳ ಕಣಿವೆ ಯಮ್ತಾಂಗ್

ನೀವು ಸ್ವರ್ಗ ಸದೃಶ್ಯವಾದ ಸೌಂದರ್ಯದೊಂದಿಗೆ ಸುತ್ತಲೂ ಸುವಾಸನೆಯಿಂದ ಕೂಡಿದ ವಾತಾವರಣವನ್ನು ಅನುಭವಿಸಬೇಕೆಂದಿದ್ದಲ್ಲಿ ನೀವು ಯಮ್ತಾಂಗ್ ಹೂವುಗಳ ಕಣಿವೆಗೆ ಈ ಋತುವಿನಲ್ಲಿ ಭೇಟಿ ಕೊಡಬಹುದಾಗಿದೆ. ಸಿಕ್ಕಿಂ ರಾಜ್ಯದ ಗ್ಯಾಂಗ್ಟೋಕ್ ನಿಂದ 150 ಕಿ.ಮೀ ದೂರದಲ್ಲಿದ್ದು ಈ ಸುಂದರವಾದ ಕಣಿವೆಯು ಆಕಾಶದೆತ್ತರದ ಪರ್ವತಗಳು ಮತ್ತು ಗಸಗಸೆ, ಐರಿಸ್, ಮತ್ತು ಪ್ರಿಮುಲಾ ಹೂವುಗಳಿಂದ ಆವರಿಸಲ್ಪಟ್ಟ ಗದ್ದೆಗಳಿಂದ ಸುತ್ತುವರಿಯಲ್ಪಟ್ಟಿವೆ.ವಸಂತ ಕಾಲದಲ್ಲಿ ಈ ಕಣಿವೆಯು ವರ್ಣರಂಜಿತ ಹೂವುಗಳು ಮತ್ತು ಸಮೃದ್ದ ಸಸ್ಯವರ್ಗದೊಂದಿಗೆ ಹೂ ಬಿಡುವುದಕ್ಕೆ ಪ್ರಾರಂಭಿಸುತ್ತದೆ. ಈ ಸ್ಥಳವು ನಿಮ್ಮನ್ನು ಭೇಟಿ ಕೊಡಲೇಬೇಕೆಂದು ಒತ್ತಾಯಿಸುವ ಸ್ಥಳಗಳಲ್ಲಿ ಒಂದಾಗಿದೆ. ಮುಂಜಾನೆ ಬೇಗ ಎದ್ದು ಇಲ್ಲಿಯ ಸ್ವರ್ಗದಂತಿರುವ ಪರಿಸರ ಮತ್ತು ನಯವಾದ ಹುಲ್ಲುಗಾವಲಿನ ಮೇಲೆ ನಡೆದಾಡುವ ಅನುಭವವನ್ನು ಯಾರು ಪ್ರೀತಿಸದೇ ಇರಲು ಸಾಧ್ಯ? ಯಮ್ತಾಂಗ್ ಹೂವುಗಳ ಕಣಿವೆಯು ವನ್ಯ ಜೀವಿಧಾಮಗಳು ಮತ್ತು ಬಿಸಿನೀರಿನ ಬುಗ್ಗೆಗಳಿಗೆ ನೆಲೆಯಾಗಿದೆ. ಆದುದರಿಂದ ನಿಮ್ಮಲ್ಲಿ ನೀವು ಈ ಸುಂದರವಾದ ಸ್ಥಳಗಳಲ್ಲಿ ಅಲೆದಾಡುವ ಚಟವನ್ನು ಹೆಚ್ಚಿಸಿಕೊಂಡು ಇಲ್ಲಿಗೆ ಪ್ರವಾಸಿಗರಾದರೆ ಹೇಗಿರಬಹುದು?

ಸಕಲೇಶಪುರ

ಸಕಲೇಶಪುರ

ಈ ಸೌಂದರ್ಯದ ಭಂಡಾರವು ಕರ್ನಾಟಕದ ಹಾಸನ ಜಿಲ್ಲೆಯಲ್ಲಿದೆ. ಸಕಲೇಶಪುರವು ಕಡಿಮೆ ಪ್ರಸಿದ್ದವಾದ ಗಿರಿಧಾಮವಾಗಿದ್ದು,ಇದು ಆಫ್ಬೀಟ್ ಪ್ರಯಾಣಿಕರು ಮತ್ತು ಅಸಾಂಪ್ರದಾಯಿಕ ಪ್ರಯಾಣಿಕರಿಂದ ಮಾತ್ರ ಭೇಟಿ ಕೊಡಲ್ಪಡುವ ತಾಣವಾಗಿದೆ. ಪಶ್ಚಿಮ ಘಟ್ಟಗಳ ಭಾಗವಾಗಿರುವ ಈ ಪ್ರದೇಶವು ಭವ್ಯವಾದ ಸೌಂದರ್ಯ ಮಾತ್ರವಲ್ಲದೆ ಸ್ವರ್ಗದಂತಿರುವ ಬೆಟ್ಟಗಳು ಮತ್ತು ಕಾಡುಗಳನ್ನು ಹೊಂದಿದ್ದು ಇದರಲ್ಲಿ ಕಡಿಮೆ ಏನನ್ನು ಅಪೇಕ್ಷಿಸಲು ಸಾಧ್ಯ? ಸಕಲೇಶಪುರದ ಗಿರಿಧಾಮಕ್ಕೂ ಇತರ ಪ್ರಸಿದ್ದ ಗಿರಿಧಾಮಗೂ ವಿಭಿನ್ನತೆ ಏನೆಂದರೆ ಈ ಗಿರಿಧಾಮವು ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ವಾತಾವರಣ ಮತ್ತು ಕಡಿಮೆ ಜನಸಂದಣಿಯ ಪರಿಸರವನ್ನು ಹೊಂದಿದೆ. ಪ್ರಕೃತಿಯ ಈ ಮುಗ್ದ ವಾತಾವರಣದ ಸಾರವು ನಿಮ್ಮನ್ನು ಸಕಲೇಶಪುರದ ಗಡಿಗಳಿಗೆ ಮತ್ತು ಇಲ್ಲಿಯ ಸುಂದರ ಭೂದೃಶ್ಯಗಳಿಗೆ ಮತ್ತು ಕಾಡುಗಳಿಗೆ ನಿಮ್ಮನ್ನು ಕರೆದೊಯ್ಯುತ್ತದೆ. ಆದುದರಿಂದ ಸಕಲೇಶಪುರದ ಒಂದು ಊಹಿಸಲಸಾಧ್ಯವಾದ ನೈಸರ್ಗಿಕ ಜಗತ್ತಿನಲ್ಲಿ ಪ್ರವಾಸಕ್ಕೆ ಏಕೆ ಆಯೋಜಿಸಬಾರದು?

ಮೌಂಟ್ ಅಬು

ಮೌಂಟ್ ಅಬು

PC- Babipal197414

ಹೌದು ಇಲ್ಲೊಂದು ಸ್ಥಳವು ಖಚಿತವಾಗಿಯು ಅದ್ಬುತವಾಗಿದ್ದು ಮತ್ತು ಎಲ್ಲೂ ಕಾಣದೇ ಇರುವ ಭವ್ಯತೆಯನ್ನು ಹೊಂದಿದ್ದು ರಾಜಸ್ಥಾನದ ಶಿಮ್ಲಾ ಎಂದು ಕರೆಯಲ್ಪಡುತ್ತದೆ. ಪ್ರಪಂಚದ ಪ್ರತಿಯೊಂದೂ ಮರುಭೂಮಿಯೂ ಸೌಂದರ್ಯವನ್ನು ಹೊಂದಿರುವುದಿಲ್ಲ ಮತ್ತು ಪ್ರಯಾಣಿಗರನ್ನು ಮಂತ್ರಮುಗ್ದರನ್ನಾಗಿಸುವುದಿಲ್ಲ. ಇದರಲ್ಲಿ ಮೌಂಟ್ ಅಬು ಇಂತಹುದೇ ಒಂದು ಸ್ಥಳವಾಗಿದ್ದು ಸುತ್ತಮುತ್ತಲೂ ಸುಂದರವಾದ ಪರಿಸರವನ್ನು ಮತ್ತು ಮನಮೋಹಕ ಭೂದೃಶ್ಯಗಳನ್ನು ರಾಜಸ್ಥಾನದ ಮರುಭೂಮಿಯ ಮಧ್ಯೆ ಹೊಂದಿದೆ. ಇದು ರಾಜಸ್ಥಾನ ರಾಜ್ಯದ ಅರಾವಳಿ ಶ್ರೇಣಿಯಲ್ಲಿರುವ ಸಿರೋಹೀ ಜಿಲ್ಲೆಯಲ್ಲಿದ್ದು ಅನೇಕ ಆಶ್ಚರ್ಯಗಳನ್ನು ಬೆಟ್ಟಗಳು, ಸರೋವರಗಳು, ತೋಟಗಳು ತೊರೆಗಳು, ಕಾಡುಗಳು ಮತ್ತು ಜಲಪಾತಗಳನ್ನು ಹೊಂದಿದೆ ಇವೆಲ್ಲವನ್ನು ಹೊಂದಿರುವ ಮೌಂಟ್ ಅಬು ನಿಸ್ಸಂದೇಹವಾಗಿಯೂ ಭಾರತದ ಒಂದು ಅಸಾಧಾರಣವಾದ ಸೌಂದರ್ಯವಾಗಿದೆ.

ಔಲಿ

ಔಲಿ

ಇದು ಹಿಮಪ್ರಿಯರಿಗೆ ಮತ್ತು ಸೈಯರ್ ಗಳಿಗೆ ಒಂದು ಅತ್ಯುನ್ನತವಾದ ಸ್ಥಳವಾಗಿದೆ. ಔಲಿ ಉತ್ತರಖಾಂಡ್ ನ ಒಂಡು ಅದ್ಬುತವಾಗಿದೆ. ಮತ್ತು ಚಮೋಲಿ ಜಿಲ್ಲೆಯಲ್ಲಿದ್ದು ಇದು ಹಿಮಾಲಯದ ಪರ್ವತಗಳಿಂದ ಮರೆಯಾಗಿದೆ. ಈ ಸ್ವರ್ಗದಂತಿರುವ ಸೌಂದರ್ಯವನ್ನು ಯಾರೂ ಸಾಧಾರಣವಾಗಿ ನಿರ್ಲಕ್ಷಿಸುವಂತಿಲ್ಲ ಮತ್ತು ಇದೊಂದು ಭಾರತದ ಕಡಿಮೆ ಜನಸಂದಣಿಯನ್ನು ಹೊಂದಿರುವ ಸ್ಥಳವೆಂದು ಪರಿಗಣಿಸಲಾಗುತ್ತದೆ ಮತ್ತು ಪ್ರಕೃತಿ ಪ್ರಿಯರಿಗೆ ಒಂದು ಪರಿಪೂರ್ಣವಾದ ಪ್ಯಾಕೇಜ್ ಎಂದೆನಿಸಿದೆ. ಈ ಪರ್ವತಗಳ ಕಡಿದಾದ ಇಳಿಜಾರುಗಳಲ್ಲಿ ನಿಮ್ಮ ತಾಳ್ಮೆ ಮತ್ತು ಸಹಿಷ್ಣುತೆಯನ್ನು ಪರೀಕ್ಷಿಸಿದರೆ ಹೇಗೆ? ಅಲ್ಲದೆ ನೀವು ಇಲ್ಲಿ ಹತ್ತಿರವಿರುವ ಕೆಲವು ಆಸಕ್ತಿದಾಯಕ ಸ್ಥಳಗಳನ್ನು ಹೊಂದಿರುವ ಸರೋವರಗಳು, ದೇವಾಲಯಗಳು, ಮತ್ತು ನದಿಗಳಿಗೂ ಭೇಟಿ ಕೊಡಬಹುದು.

ಗುಲ್ ಮಾರ್ಗ್

ಗುಲ್ ಮಾರ್ಗ್

ಸ್ವರ್ಗದಂತಿರುವ ಪ್ರಕೃತಿಯ ಬಗ್ಗೆ ನಾವು ಹೇಳುತ್ತಿರಬೇಕಾದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಈ ಭೂಮಿಯಲ್ಲಿರುವ ಸ್ವರ್ಗದ ಬಗ್ಗೆ ಚರ್ಚಿಸದೇ ಇರಲು ಸಾಧ್ಯವಿಲ್ಲ. ಈ ಅದ್ಬುತವಾದ ಭೂಮಿಯಲ್ಲಿ ಪ್ರತಿಯೊಂದು ಸ್ಥಳವೂ ಭೇಟಿಗೆ ಯೋಗ್ಯವಾಗಿದ್ದರೂ ಕೂಡಾ ಪ್ರವಾಸಿಗರ ಹೃದಯವನ್ನು ಕದಿಯುವಂತಹ ಕೆಲವು ಸ್ಥಳಗಳು ಇಲ್ಲಿವೆ. ಅಂತಹವುಗಳಲ್ಲಿ ಗುಲ್ ಮಾರ್ಗ್ ಕೂಡಾ ಒಂದಾಗಿದ್ದು, ನೀವು ಪ್ರಕೃತಿಯ ಹೊಸ ರೂಪ ಮತ್ತು ಸ್ವಭಾವವನ್ನು ನೋಡಲು ಬಯಸುತ್ತಿದ್ದಲ್ಲಿ, ಈ ಸ್ಥಳವು ನಿಮ್ಮ ಪ್ರಯಾಣ ಪಟ್ಟಿಯಲ್ಲಿ ಇದು ಮೊದಲ ಸ್ಥಾನದಲ್ಲಿರಬೇಕಾದುದಾಗಿದೆ. ಗುಲ್ ಮಾರ್ಗ್ ಹಿಮಾಲಯದ ಪಿರ್ ಪಾಂಜಲ್ ಪರ್ವತ ಶ್ರೇಣಿಯ ಬಾರಮುಲ್ಲಾ ಜಿಲ್ಲೆಯಲ್ಲಿದೆ ಮತ್ತು ಬೇಸಿಗೆ ಕಾಲದಲ್ಲಿ ಅರಳುತ್ತಿರುವ ಹೂವುಗಳ ಹುಲ್ಲುಗಾವಲಿಗೆ ಹೆಸರುವಾಸಿಯಾಗಿದೆ. ಚಳಿಗಾಲದಲ್ಲಿ ಹಿಮದ ಚೆಂಡು ಮತ್ತು ಬೇಸಿಗೆಯಲ್ಲಿ ವರ್ಣರಂಜಿತ ಹೂವುಗಳನ್ನು ಹೊಂದಿರುವ ಗುಲ್ ಮಾರ್ಗ್ ಖಚಿತವಾಗಿಯೂ ಸ್ವರ್ಗವನ್ನು ಹೋಲುವಂತಹ ಸ್ಥಳವಾಗಿದೆ.

ಚಿರಾಪುಂಜಿ

ಚಿರಾಪುಂಜಿ

PC- Himanshu Tyagi

ಮೇಘಾಲಯದ ಪೂರ್ವದ ಖಾಸಿ ಪರ್ವತಗಳಲ್ಲಿ ನೆಲೆಸಿರುವ ಚಿರಾಪುಂಜಿಯು ಭೂಮಿಯಲ್ಲಿಯ ಅತ್ಯಂತ ತೇವ ಭರಿತ ಸ್ಥಳವಾಗಿದೆ. ಅತ್ಯಂತ ಹೆಚ್ಚಿನ ಮಳೆಯ ಕಾರಣದಿಂದಾಗಿ ಈ ಪ್ರಾಂತ್ಯದ ಸುತ್ತಲೂ ದಟ್ಟವಾದ ಹಸಿರುಮಯ ಸಸ್ಯವರ್ಗದಿಂದ ಆವರಿಸಲ್ಪಟ್ಟಿದೆ. ಈ ಜಾಗದಲ್ಲಿ ಜೀವಂತ ಮೂಲ ಸೇತುವೆಗಳನ್ನು ನೀವು ಕಾಣಬಹುದು. ನೀವು ಅತಿವಾಸ್ತವಿಕ ಸ್ಥಳಗಳನ್ನು ಹುಡುಕಲು ಒಂದು ಪ್ರಯಾಣವನ್ನು ಕೈಗೊಂಡಿದ್ದರೆ ಸುತ್ತಲೂ ಹರಿದ್ವರ್ಣ ಪರಿಸರವನ್ನು ಹೊಂದಿರುವ ಚಿರಾಪುಂಜಿಯು ಭಾರತದ ಒಂದು ಭೇಟಿ ಕೊಡಲೇಬೇಕಾದ ಸ್ಥಳವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X