• Follow NativePlanet
Share
» »ನಾಸಿಕ್‍ನ ತ್ರಯಾಂಬಕೇಶ್ವರ ದೇವಾಲಯ

ನಾಸಿಕ್‍ನ ತ್ರಯಾಂಬಕೇಶ್ವರ ದೇವಾಲಯ

Written By:

ನಾಸಿಕ ನಗರವು ಸಾವಿರಾರು ವರ್ಷಗಳ ಸಂಸ್ಕøತಿ ಹಾಗೂ ಚರಿತ್ರೆಗಳಿಗೆ ಸಾಕ್ಷಿಯಾಗಿರುವ ಪ್ರದೇಶ. ಕುಂಭಮೇಳದಿಂದಾಗಿ ದೇಶಿಯ ಹಾಗು ವಿದೇಶಿಯ ಪ್ರವಾಸಿಗರನ್ನು ಆರ್ಕಷಿಸುತ್ತದೆ. ಕ್ರಿ.ಪೂರ್ವದಿಂದ ಈ ಪ್ರದೇಶದ ಕುರಿತು ತನ್ನದೇ ಆದ ಮಹತ್ವವನ್ನು ಪಡೆದಿದೆ.

ರಾಮನು ತನ್ನ ವನವಾಸದಕಾಲದಲ್ಲಿ ಇಲ್ಲಿನ ತಪೋವನದಲ್ಲಿಯೇ ನಿವಾಸವಿದ್ದ ಎಂದೂ ಹಾಗು ಲಕ್ಷ್ಮಣನು... ಶೂರ್ಪನಖಳ ಮೂಗು ಕತ್ತರಿಸಿದ್ದು ಇಲ್ಲೇ ಎಂದು ಹೇಳುತ್ತಾರೆ. ನಾಸಿಕ ಎಂದರೆ ಮೂಗು ಹಾಗಾಗಿ ನಾಸಿಕ ಕತ್ತರಿಸಿದ ಪ್ರದೇಶ ಇದಾದ್ದರಿಂದ ನಾಸಿಕ್ ಎಂದು ಹೆಸರು ಬಂದಿತು ಎಂದು ಹೇಳುತ್ತಾರೆ.

ಸ್ಥಳ ಪುರಾಣದ ಮಾತು ಪಕ್ಕಕ್ಕೆ ಇಟ್ಟರೆ ಈ ನಾಸಿಕ್‍ನಲ್ಲಿ ನೋಡಬೇಕಾಗಿರುವ ಪ್ರದೇಶಗಳು ಬಹಳಷ್ಟಿದೆ. ನಾಸಿಕ್‍ನನ್ನು "ಗ್ರೇಟ್ ಗಾರ್ಡನ್ ಸಿಟಿ" ಎಂದೂ ಕೂಡ ಕರೆಯುತ್ತಾರೆ. ಇಲ್ಲಿ ತ್ರಯಂಬಕೇಶ್ವರನ ದೇವಾಲಯ, ತೊಪೋವನ, ಪಂಚವಟಿ, ಮಿನರಲ್ ಮ್ಯೂಸಿಯಂ, ದ್ರಾಕ್ಷಿ ತೋಟ, ವೈನ್ ತಯಾರಿ, ಅಂಜನೇರಿ ಜಲಪಾತ ಇನ್ನೂ ಹಲವಾರು ಪ್ರವಾಸಿತಾಣಗಳನ್ನು ಇಲ್ಲಿ ಕಾಣಬಹುದಾಗಿದೆ. ಪ್ರಸ್ತುತ ನಾಸಿಕದಲ್ಲಿನ ಪ್ರವಾಸಿತಾಣಗಳ ಬಗ್ಗೆ ತಿಳಿಯೋಣ.....

ನಾಸಿಕ್‍ನ ತ್ರಯಾಂಬಕೇಶ್ವರ ದೇವಾಲಯ

ನಾಸಿಕ್‍ನ ತ್ರಯಾಂಬಕೇಶ್ವರ ದೇವಾಲಯ

ತಪೋವನ ಶೂರ್ಪನಖಳ ಮೂಗು (ನಾಸಿಕ) ಅನ್ನು ಕತ್ತರಿಸಿದ ಪ್ರದೇಶ ಇದಾಗಿದೆ. ರಾಮಾಯಣವನ್ನು ಹೊಂದಿರುವ ಪವಿತ್ರವಾದ ಭೂಮಿ ಎಂದೇ ಹೇಳಬಹುದು. ಇಲ್ಲಿ ರುಚಿಕರವಾದ ಚೇಪೆಕಾಯಿ ದೊರೆಯುತ್ತದೆ ಎಂತೆ....

PC:Indi Samarajiva


ನಾಸಿಕ್‍ನ ತ್ರಯಾಂಬಕೇಶ್ವರ ದೇವಾಲಯ

ನಾಸಿಕ್‍ನ ತ್ರಯಾಂಬಕೇಶ್ವರ ದೇವಾಲಯ

ತ್ರಯಂಬಕೇಶ್ವರ ದೇವಾಲಯ ತ್ರಯಂಬಕೇಶ್ವರ ದೇವಾಲಯವು ನಾಸಿಕ್‍ನಿಂದ ಸ್ವಲ್ಪ ಕಿ.ಮೀ ದೂರದಲ್ಲಿದೆ. ಈ ದೇವಾಲಯಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುವ ಒಂದು ಆಧ್ಯಾತ್ಮಿಕ ತಾಣವಾಗಿದೆ. ದೇಶದಲ್ಲಿನ ಪರಮಶಿವನ ಲಿಂಗವು 4 ಜ್ಯೋತ್ಯಿರ್ ಲಿಂಗಗಳಲ್ಲಿ ಒಂದಾಗಿದೆ. ಈ ದೇವಾಲಯದ ಗೋಡೆಗಳ ಮೇಲೆ ಆರ್ಕಷಣೀಯ ರೀತಿಯಲ್ಲಿ ಭಗವದ್ಗಿತೆಯಲ್ಲಿನ ಶ್ಲೋಕಗಳನ್ನು ಕಾಣಬಹುದಾಗಿದೆ. ವಿಶೇಷವೆನೆಂದರೆ ಪ್ರಖ್ಯಾತ ಸಿನಿರಂಗ ಪಿತಾಮಹನಾದ ದಾದಾ ಪಾಲ್ಕೆ ಇಲ್ಲಿಯೇ ಜನಿಸಿದವರು.

PC:Nilesh.shintre

ನಾಸಿಕ್‍ನ ತ್ರಯಾಂಬಕೇಶ್ವರ ದೇವಾಲಯ

ನಾಸಿಕ್‍ನ ತ್ರಯಾಂಬಕೇಶ್ವರ ದೇವಾಲಯ

ಪಂಚವಟಿ ಪಂಚವಟಿಯಲ್ಲಿ ಕಾಲರಾಮ ದೇವಾಲಯ ಅತ್ಯಂತ ಪ್ರಸಿದ್ಧವಾದುದು. ಕಾಲಾರಾಮ ದೇವಾಲಯ ನಾಸಿಕದಲ್ಲಿನ ಪ್ರಧಾನ ಆಕರ್ಷಣೆಯಾಗಿದೆ. ಈ ದೇವಾಲಯವನ್ನು 1794 ರಲ್ಲಿ ಗೋಪಿಕಾಬಾಯಿ ಪೇಶ್ವೆ ನಿರ್ಮಾಣ ಮಾಡಿದರು. ಈ ದೆವಾಲಯವು ತ್ರಯಂಬಕೇಶ್ವರ ದೇವಾಲಯವನ್ನು ಹೋಲುವಂತೆ ಇದೆಯಂತೆ. ಈ ದೇವಾಲಯವನ್ನು ಸಂಪೂರ್ಣವಾಗಿ ಕಪ್ಪು ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದ ಶಿಖರವು ಸುಮಾರು 70 ಅಡಿ ಎತ್ತರದಲ್ಲಿದೆ. ಇದರಲ್ಲಿ ರಾಮ, ಲಕ್ಷ್ಮಣ, ಸೀತಾ ಮಾತೆಯ ವಿಗ್ರಹಗಳನ್ನು ಕಾಣಬಹುದಾಗಿದೆ. ಇಲ್ಲಿಯೇ ಒಂದು ಗಣಪತಿ, ಅಂಜನೇಯ ಮತ್ತು ವಿಠಲನ ದೇವಾಲಯ ಕೂಡ ಇದೆ.

PC:World8115


ನಾಸಿಕ್‍ನ ತ್ರಯಾಂಬಕೇಶ್ವರ ದೇವಾಲಯ

ನಾಸಿಕ್‍ನ ತ್ರಯಾಂಬಕೇಶ್ವರ ದೇವಾಲಯ

ಪಾಂಡವಲೋನಿ ಇದು ಒಂದು ಕಾಲದಲ್ಲಿ ಪಾಂಡವರು ನಿವಾಸಿಸಿದ್ದ ಒಂದು ಗುಹೆಯಾಗಿದೆ. ಇದು ಪಾಂಡವರು ಇರುತ್ತಿದ್ದ ಗುಹೆ. ಪಾಂಡವಲೋನಿ ನಾಸಿಕ್-ಮುಂಬೈನ ರಹದಾರಿಯಲ್ಲಿ ಇದೆ. ಪಾಂಡವಲೋನಿ ಗುಹೆಗಳು ಸುಮಾರು 20 ಶತಮಾನಕ್ಕಿಂತ ಹಳೆಯದು. ನಾಸಿಕ್‍ನ ತ್ರಿವಂಶಿ ಪರ್ವತದ ಮೇಲೆ ಇದೆ. ಇಲ್ಲಿ ಸುಮಾರು 24 ಗುಹೆಗಳಿವೆ. ಅವುಗಳನ್ನು ಜೈನ ರಾಜರು ನಿರ್ಮಾಣ ಮಾಡಿದರು ಎಂದು ಗುರುತಿಸಲಾಗಿದೆ.

PC:Katyare

ನಾಸಿಕ್‍ನ ತ್ರಯಾಂಬಕೇಶ್ವರ ದೇವಾಲಯ

ನಾಸಿಕ್‍ನ ತ್ರಯಾಂಬಕೇಶ್ವರ ದೇವಾಲಯ

ದ್ರಾಕ್ಷಿತೋಟಗಳು ಈ ನಾಸಿಕ್ ನಗರದಲ್ಲಿ ಗಂಗಾಪುರಕ್ಕೆ ಸಮೀಪದಲ್ಲಿ ವಿಸ್ತಾರಗೊಂಡ ದಾಕ್ಷಿತೋಟ ಈ ಪ್ರದೇಶಕ್ಕೆ ಹೈಲೈಟ್ ಎಂದೇ ಹೇಳಬಹುದು. ಇಲ್ಲಿನ ದ್ರಾಕ್ಷಿ ಗೊಂಚಲುಗಳು ಪ್ರವಾಸಿಗರ ಬಾಯಿಯಲ್ಲಿ ನೀರೂರಿಸದೆ ಬಿಡದು. ಈ ತೋಟದಲ್ಲಿ ಕೆಂಪಾದ ದ್ರಾಕ್ಷಿಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇದರಿಂದ ತಯಾರಿಸಿದ ಮದ್ಯ ಕೂಡ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.

PC:Pablo Ares Gastesi

ನಾಸಿಕ್‍ನ ತ್ರಯಾಂಬಕೇಶ್ವರ ದೇವಾಲಯ

ನಾಸಿಕ್‍ನ ತ್ರಯಾಂಬಕೇಶ್ವರ ದೇವಾಲಯ

ವಿಮಾನ ಮಾರ್ಗದ ಮೂಲಕ
ನಾಸಿಕ್‍ಗೆ ಸಮೀಪದ ವಿಮಾನ ನಿಲ್ದಾಣವೆಂದರೆ ನಾಸಿಕ್‍ನ ಓಜಾರ್ ಏರ್ ಫೋರ್ಟ್. ಇಲ್ಲಿಂದ ನಾಸಿಕ್ ಪಟ್ಟಣಕ್ಕೆ 25 ಕಿ.ಮೀ ದೂರದಲ್ಲಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more