Search
  • Follow NativePlanet
Share
» » ಎದೆ ಮಟ್ಟದ ನೀರಿನಲ್ಲಿ ನಡೆದು ಹೋದ್ರೆ ಸಿಗುತ್ತೆ ಬೀದರ್‌ನಲ್ಲಿರುವ ಝರಣೀ ನರಸಿಂಹ ಕ್ಷೇತ್ರ

ಎದೆ ಮಟ್ಟದ ನೀರಿನಲ್ಲಿ ನಡೆದು ಹೋದ್ರೆ ಸಿಗುತ್ತೆ ಬೀದರ್‌ನಲ್ಲಿರುವ ಝರಣೀ ನರಸಿಂಹ ಕ್ಷೇತ್ರ

ಇದೊಂದು ವಿಶೇಷ ದೇವಾಲಯವಾಗಿದೆ. ನೀವು ಬೇಕಾದಷ್ಟು ಗುಹಾದೇವಾಲಯವನ್ನು ನೋಡಿರುವಿರಿ. ಆದರೆ ಗುಹೆಯೊಳಗೆ ನೀರಿನ ಕಣಿವೆಯಲ್ಲಿ ನಡೆದುಕೊಂಡು ಹೋಗುವಂತಹ ಕ್ಷೇತ್ರಕ್ಕೆ ಯಾವತ್ತಾದರೂ ಹೋಗಿದ್ದೀರಾ? ಈ ಬಗ್ಗೆ ಗೊತ್ತಾ? ನಾವಿಂದು ಅಂತಹದ್ದೇ ಒಂದು ದೇವಾಲಯವದ ಬಗ್ಗೆ ತಿಳಿಸಲಿದ್ದೇವೆ. ಇಂತಹದ್ದೊಂದು ದೇವಾಲಯವನ್ನು ನಿವು ಬೇರೆಲ್ಲೂ ನೋಡಿರಲಿಕ್ಕಿಲ್ಲ ಅನ್ನಿಸುತ್ತದೆ.

ನರಸಿಂಹಸ್ವಾಮಿ ದೇವಾಲಯ

ನರಸಿಂಹಸ್ವಾಮಿ ದೇವಾಲಯ

PC: Jaideep Rao

ಬೀದರ್‌ನಲ್ಲಿರುವ ನರಸಿಂಹಸ್ವಾಮಿ ದೇವಾಲಯವು ನಿಜಕ್ಕೂ ಒಂದು ವಿಶೇಷ ಹಾಗೂ ಕುತೂಹಲಕಾರಿ ದೇವಸ್ಥಾನವಾಗಿದೆ. ಇಲ್ಲಿ ನೀರಿನೊಳಗೆ ಒಂದು ಕಿ.ಮೀ ದೂರ ಸಾಗಬೇಕು. ಆ ನೀರು ಎದೆ ಮಟ್ಟಕ್ಕೆ ಇರುತ್ತದೆ. ಪುಟ್ಟ ಮಕ್ಕಳಿಗಂತೂ ಇಲ್ಲಿ ನಡೆಯುವುದು ಅಸಾಧ್ಯ. ಹಾಗಾಗಿ ಮಕ್ಕಳನ್ನು ಹೆಗಲಮೇಲೆ ಹೊತ್ತು ಕೊಂಡು ಹೋಗಬೇಕು.

ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!

ಗುಹಾ ದೇವಾಲಯ

ಗುಹಾ ದೇವಾಲಯ

ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ. ಇದೊಂದು ಪವಿತ್ರ ಧಾರ್ಮಿಕ ತಾಣದ ಜೊತೆಗೆ ರೋಮಾಂಚಕತೆಯನ್ನುಂಟು ಮಾಡುವ ಸ್ಥಳವೂ ಆಗಿದೆ. ಗುಹಾ ದೇವಾಲಯವಾಗಿದ್ದು ಗುಹೆಯೊಳಗೆ ನೀರಿನಲ್ಲಿ ನಡೆದುಕೊಂಡು ಹೋಗಬೇಕು.

ಉಗ್ರ ನರಸಿಂಹ

ಉಗ್ರ ನರಸಿಂಹ

ಈ ದೇವಾಲಯದಲ್ಲಿರುವುದು ಉಗ್ರನರಸಿಂಹ. ಇದನ್ನು ಝರಣೀ ನರಸಿಂಹ ಕ್ಷೇತ್ರ ಎಂದೇ ಕರೆಯುತ್ತಾರೆ. ನರಸಿಂಹ ಜಯಂತಿಯಂದು 9 ದಿನಗಳ ಕಾಲ ವಿಜೃಂಭಣೆಯಿಂದ ಉತ್ಸವ ನಡೆಸಲಾಗುತ್ತದೆ.

ಈ ಊರಲ್ಲಿ ಜನರು ಕೋಳಿಯನ್ನು ಸಾಕೋದಿಲ್ಲ, ಮಂಚದಲ್ಲಿ ಮಲಗೋದಿಲ್ಲ, ಇಲ್ಲಿ ಎಲ್ಲವೂ ಮೈಲಾರಲಿಂಗ!ಈ ಊರಲ್ಲಿ ಜನರು ಕೋಳಿಯನ್ನು ಸಾಕೋದಿಲ್ಲ, ಮಂಚದಲ್ಲಿ ಮಲಗೋದಿಲ್ಲ, ಇಲ್ಲಿ ಎಲ್ಲವೂ ಮೈಲಾರಲಿಂಗ!

ಝರಣೀ ನರಸಿಂಹ ಕ್ಷೇತ್ರ

ಝರಣೀ ನರಸಿಂಹ ಕ್ಷೇತ್ರ

ಶಿವ ಹಾಗೂ ನರಸಿಂಹ ಇಬ್ಬರೂ ಇಲ್ಲಿದ್ದಾರೆ. ಈ ಗುಹೆಯಲ್ಲಿ ಹರಿಯುವ ನೀರು ಎಲ್ಲಿಂದ ಬರುತ್ತೆ ಎನ್ನುವುದು ಯಾರಿಗೂ ಗೊತ್ತಿಲ್ಲವಂತೆ. ಒಟ್ಟಾರೆ ಎದೆ ಮಟ್ಟದ ನೀರಿನಲ್ಲಿ ನಡೆಯುವುದು ಕುತೂಹಲಕಾರಿಯೂ, ಸಾಹಸಮಯವೂ ಆಗಿದೆ. ಭಕ್ತರಿಗಂತೂ ಈ ನೀರಿನಲ್ಲಿ ನಡೆಯುವುದು ಮಜಾ ನೀಡುತ್ತದೆ.

 ಜರಾಸುರ ಸಂಹಾರ

ಜರಾಸುರ ಸಂಹಾರ

ನರಸಿಂಹನು ಶಿವನ ಭಕ್ತನಾದ ಜರಾಸುರನನ್ನು ವಧಿಸುವಾಗ ಆತನ ಕೊನೆಯ ಇಚ್ಛೆಯಂತೆ ಈ ಗುಹೆಯಲ್ಲಿ ನೆಲೆಸಿದನು. ಜರಾಸುರನು ನೀರಾಗಿ ನರಸಿಂಹನ ಪಾದದ ಬಳಿ ಹರಿಯಲಾರಂಭಿಸಿದನು. ಹಾಗಾಗಿ ಈ ಕ್ಷೇತ್ರವನ್ನು ಝರಣೀ ನರಸಿಂಹ ಕ್ಷೇತ್ರ ಎನ್ನಲಾಗುತ್ತದೆ. ಗುಹೆಯ ಕೊನೆಯಲ್ಲಿ ಒಂದು ಕಲ್ಲಿನ ಗೋಡೆಯ ಮೇಲೆ ನರಸಿಂಹದ ಕೆತ್ತಿದ ಚಿತ್ರವಿದೆ.

 250 ವರ್ಷ ಹಳೆಯ ಈ ಬಾವಿಯ ನೀರು ಕುಡಿದ್ರೆ ಜಗಳವಾಗುತ್ತಂತೆ ! 250 ವರ್ಷ ಹಳೆಯ ಈ ಬಾವಿಯ ನೀರು ಕುಡಿದ್ರೆ ಜಗಳವಾಗುತ್ತಂತೆ !

ಚರ್ಮವ್ಯಾದಿ ಗುಣವಾಗುತ್ತದೆ

ಚರ್ಮವ್ಯಾದಿ ಗುಣವಾಗುತ್ತದೆ

ಅಂದಿನಿಂದ ಇಲ್ಲಿ ನೀರು ಹರಿಯುತ್ತಲೇ ಇದೆ. ಇಲ್ಲಿನ ನೀರು ಯಾವತ್ತೂ ಭತ್ತಿಲ್ಲ. ಈ ನೀರಿನಲ್ಲಿ ಸಲ್ಫರ್ ಇದೆ. ಇದು ಚರ್ಮದ ಸಮಸ್ಯೆಗಳನ್ನು ಹೊಂದಿರುವ ಜನರನ್ನು ಗುಣಪಡಿಸುವುದು ಎಂದು ಹೇಳಲಾಗುತ್ತದೆ.. ಸಂತಾನ ಪ್ರಾಪ್ತಿಗಾಗಿ ಹೆಚ್ಚಿನ ಜನರು ಇಲ್ಲಿಗೆ ಆಗಮಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X