Search
  • Follow NativePlanet
Share
» »ನಾನೆಘಾಟ್ ಬೆಟ್ಟಗಳ ಮಧ್ಯದ ಅದ್ಭುತ

ನಾನೆಘಾಟ್ ಬೆಟ್ಟಗಳ ಮಧ್ಯದ ಅದ್ಭುತ

By Vijay

ಪರ್ವತಾರೋಹಣ, ಟ್ರೆಕ್ಕಿಂಗ್, ರಾಫ್ಟಿಂಗ್, ಪ್ಯಾರಾಗ್ಲೈಡಿಂಗ್ ನಂತಹ ಚಟುವಟಿಕೆಗಳು ಸಾಹಸಪ್ರಧಾನ ಪ್ರವಾಸಿ ಆಕರ್ಷಣೆಗಳಾಗಿವೆ. ಇಂತಹ ಚಟುವಟಿಕೆಗಳು ನಮ್ಮಲ್ಲಿ ಎಲ್ಲೊ ಅವಿತು ಕುಳಿತಿರುವ ಭಯವನ್ನು ಹೋಗಲಾಡಿಸಲು ಸಹಾಯಕವಾಗುತ್ತವೆ. ಆದರೆ ಧೈರ್ಯದಿಂದ ಪ್ರಯತ್ನಿಸಬೇಕಾದುದು ನಮ್ಮ ಕರ್ತವ್ಯ. ಅದರರ್ಥ ಹೇಗೆ ಬೇಕಾದ ಹಾಗೆ ಮಾಡಬೇಕಂತಲ್ಲ. ಇಂತಹ ಚಟುವಟಿಕೆಗಳಲ್ಲಿ ಅಪಾಯವೂ ಇರುವುದರಿಂದ ಸಾಕಷ್ಟು ಜಾಗರೂಕತೆಯನ್ನು ವಹಿಸುವುದೂ ಸಹ ಅಷ್ಟೆ ಅವಶ್ಯಕ.

ವಿಶೇಷ ಲೇಖನ : ಭಾರತದ ಪ್ರಮುಖ ಪ್ಯಾರಾಗ್ಲೈಡಿಂಗ್ ತಾಣಗಳು

ನಾನೆಘಾಟ್ ಬೆಟ್ಟಗಳ ಮಧ್ಯದ ಅದ್ಭುತ

ಚಿತ್ರಕೃಪೆ: Fitrangi

ನಮ್ಮ ದೇಶದಲ್ಲಿ ಸಾಕಷ್ಟು ಅದ್ಭುತವಾಗಿ ರೂಪಗೊಂಡ ಬೆಟ್ಟ ಗುಡ್ಡಗಳ ರಚನೆಯನ್ನು ಕಾಣಬಹುದಾಗಿದೆ. ಇಂದೇನೋ ಬಸ್ಸು, ರೈಲುಗಳ ಮೂಲಕ ಸುಲಭವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಿ ಬಿಡಬಹುದು. ಆದರೆ ಹಿಂದಿನ ಸಮಯದಲ್ಲಿ ಬೆಟ್ಟ ಗುಡ್ಡಗಳ ನಡುವೆ ಸಹಜವಾಗಿ ನಿರ್ಮಿತವಾದ ಮಾರ್ಗಗಳಿಂದ ಇಲ್ಲವೆ ಕೃತಕವಾಗಿ ಸುರಂಗಗಳನ್ನು ನಿರ್ಮಿಸಿ ವ್ಯಾಪಾರ ವಹಿವಾಟಕ್ಕೆ ಸಂಬಂಧಿಸಿದಂತೆ ಜನರು ಸಂಚರಿಸುತ್ತಿದ್ದರು. ಇಂದಿನ ಈ ಲೇಖನದಲ್ಲಿ ಹಿಂದೆ ಸಂಚಾರಕ್ಕೆ ಬಳಸಲ್ಪಡುತ್ತಿದ್ದ ಅಂತಹ ಒಂದು ಮಾರ್ಗವಾಗಿದ್ದ ನಾನೆಘಾಟ್ ಕುರಿತು ತಿಳಿಯಿರಿ.

ವಿಶೇಷ ಲೇಖನ : ರಾಯಗಡ್ ಕೋಟೆಯ ಹಗ್ಗ ಪ್ರವಾಸ

ನಾನೆಘಾಟ್ ಬೆಟ್ಟಗಳ ಮಧ್ಯದ ಅದ್ಭುತ

ಚಿತ್ರಕೃಪೆ: Miline

ನಾನೆಘಾಟ್ ಮೂಲತಃ ಒಂದು ಘಾಟ್ ಪ್ರದೇಶವಾಗಿದ್ದು ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯಲ್ಲಿರುವ ಜುನ್ನಾರ್ ಎಂಬ ಪಟ್ಟಣದ ಬಳಿ ಇದನ್ನು ಕಾಣಬಹುದಾಗಿದೆ. ಕ್ರಿ.ಪೂ 200 ಹಾಗೂ190 ರ ಈ ಪ್ರದೇಶದಲ್ಲಿ ಪ್ರವರ್ಧಮಾನದಲ್ಲಿದ್ದ ಶಾತವಾಹನರ ಸಮಯದಲ್ಲಿ ಈ ಘಾಟ್ ಅನ್ನು ವ್ಯಾಪಾರ ಸಂಬಂಧಿ ಸಂಚಾರ ಮಾರ್ಗವಾಗಿ ಬಳಸಲಾಗುತ್ತಿತ್ತು. ಈ ಅಂಶವು ಇಲ್ಲಿರುವ ಗುಹಾ ರಚನೆಗಳಲ್ಲಿ ಕೆತ್ತಲಾದ ಶಾತವಾಹನರದೆನ್ನಲಾದ ಶಾಸನಗಳಿಂದ ತಿಳಿದುಬರುತ್ತದೆ. ಇಂತಹ ಅದ್ಭುತವಾದ ಘಾಟಿಗೆ ಟ್ರೆಕ್ ಹೊರಡುವುದು ಹೆಚ್ಚು ಪ್ರಖ್ಯಾತಿ ಪಡೆದ ಚಟುವಟಿಕೆಯಾಗಿದೆ.

ನಾನೆಘಾಟ್ ಬೆಟ್ಟಗಳ ಮಧ್ಯದ ಅದ್ಭುತ

ಗುಹಾ ಗೋಡೆಯಲ್ಲಿ ಕೆತ್ತಲಾಗಿರುವ ಶಾಸನ
ಚಿತ್ರಕೃಪೆ: Chetan Karkhanis

ಇಲ್ಲಿರುವ ಗುಹಾ ರಚನೆಗಳಲ್ಲಿ ಶಾತವಾಹನರ ಶಾಸನಗಳನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಮೌರ್ಯ ಸಾಮ್ರಾಜ್ಯದ ಅವನತಿಯ ನಂತರ ಪ್ರವರ್ಧಮಾನಕ್ಕೆ ಬಂದವರೆ ಶಾತವಾಹನರು. ಶಾತವಾಹನರ ಪ್ರಭಾವಶಾಲಿ ಮಹಿಳೆಯಾಗಿದ್ದ ಹಾಗೂ ದೊರೆ ಶತಕರ್ಣಿಯ ಮಡದಿಯಾಗಿದ್ದ ನಾಗನಿಕಾ ಎಂಬುವವಳು ಈ ಗುಹಾ ರಚನೆಯ ನಿರ್ಮಾಣ ಉಸ್ತುವಾರಿ ವಹಿಸಿದ್ದಳೆಂದು ಇತಿಹಾಸದಿಂದ ತಿಳಿದುಬರುತ್ತದೆ. ಅಕ್ಷರಶಃ ನಾನೆಘಾಟ್ ಅನ್ನು ಅರ್ಥೈಸಿದಾಗ ನಾಣ್ಯ ಘಾಟ್ ಎಂಬರ್ಥ ಬರುತ್ತದೆ. ಅಂದರೆ ಆ ಸಮಯದಲ್ಲಿ ವ್ಯಾಪಾರಿಗಳು ನಾಣ್ಯಗಳನ್ನು ಟಾಲ್ ಶುಲ್ಕದಂತೆ ನೀಡಿ ಇಲ್ಲಿಂದ ಸಂಚರಿಸುತ್ತಿದ್ದರು ಎನ್ನಲಾಗಿದೆ.

ನಾನೆಘಾಟ್ ಬೆಟ್ಟಗಳ ಮಧ್ಯದ ಅದ್ಭುತ

ಚಿತ್ರಕೃಪೆ: HellFire

ಶಾತವಾಹನರ ಸಾಧನೆಗಳ ಕುರಿತು ಇಲ್ಲಿನ ಗುಹಾ ರಚನೆಗಳಲ್ಲಿ ಕೆತ್ತಲಾಗಿರುವುದನ್ನೂ ಸಹ ಗಮನಿಸಬಹುದಾಗಿದೆ. ಆದ್ದರಿಂದ ಈ ಪ್ರದೇಶದ ಇತಿಹಾಸಕ್ಕೆ ಸಂಬಂಧಿಸಿದಂತೆ ತಿಳಿಯಲು ನಾನೆಘಾಟ್ ಅದ್ಭುತವಾದ ಕೊಡುಗೆಯನ್ನೆ ನೀಡಿದೆ ಎಂದು ಹೇಳಬಹುದು. ಅಲ್ಲದೆ ಇಲ್ಲಿನ ಗುಹಾ ರಚನೆಗಳಲ್ಲಿ ಯಮ, ಇಂದ್ರ, ಸೂರ್ಯ ಹಾಗೂ ಚಂದ್ರ ದೇವತೆಗಳ ಹೆಸರನ್ನು ಉಲ್ಲೇಖಿಸಿರುವುದನ್ನು ಕಾಣಬಹುದು. ಅಲ್ಲದೆ ಶಾತವಾಹನರ ಕಾಲದಲ್ಲಿ ಭಾಗವತ ಹಾಗೂ ಹಿಂದುತ್ವವು ಪ್ರಭಾವಶಾಲಿಯಾಗಿತ್ತೆಂಬುದಕ್ಕೆ ಸಂಕರ್ಷಣ ಹಾಗೂ ವಾಸುದೇವರ ಹೆಸರುಗಳನ್ನು ಉಲ್ಲೇಖಿಸಿರುವುದನ್ನು ಇಲ್ಲಿ ಕಾಣಬಹುದು.

ವಿಶೇಷ ಲೇಖನ : ಮಾಲ್ಶೇಜ್ ಘಾಟ್ ಬೆಟ್ಟಗಳ ಮಧ್ಯದ ದಾರಿ

ನಾನೆಘಾಟ್ ಬೆಟ್ಟಗಳ ಮಧ್ಯದ ಅದ್ಭುತ

ಚಿತ್ರಕೃಪೆ: Sameer Tendolkar

ನಾನೆಘಾಟ್ ಪ್ರತಿ ಋತುಮಾನದಲ್ಲೂ ವಿಶೇಷವಾಗಿ ಕಾಣುತ್ತದೆ. ಮಳೆಗಾಲದ ಸಂದರ್ಭದಲ್ಲಿ ಏರುವಾಗ ಜಾಗರೂಕತೆ ವಹಿಸಬೇಕು. ನಾನೆಘಾಟ್ ಅನ್ನು ವೈಶಾಕರೆ ಎಂಬ ಹಳ್ಳಿಯ ಮೂಲಕ ತಲುಪಬಹುದು. ರಾಜ್ಯ ಸರ್ಕಾರಿ ಬಸ್ಸುಗಳ ಮೂಲಕ ಮಾಲ್ಶೇಜ್ ಘಾಟ್ ಗೆ ಹೋಗುವ ಬಸ್ಸುಗಳಲ್ಲಿ ಪ್ರಯಾಣಿಸಿ ವೈಶಾಕರೆ ಹಳ್ಳಿಯನ್ನು ತಲುಪಬಹುದು. ನಂತರ ಅದೆ ರಸ್ತೆಯಲ್ಲಿ ಸುಮಾರು ಅರ್ಧ ಘಂಟೆಯಷ್ಟು ನಡೆದು ನಾನೆಘಾಟ್ ಏರುವ ಮಾರ್ಗವನ್ನು ತಲುಪಿ ಅಲ್ಲಿಂದ ನಾನೆಘಾಟ್ ಅನ್ನು ಪ್ರವೇಶಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X