Search
  • Follow NativePlanet
Share
» »ನೀವೂ ನೋಡ್ಬೇಕು ನಲ್ಲಮಲ ಗಿರಿಧಾಮ

ನೀವೂ ನೋಡ್ಬೇಕು ನಲ್ಲಮಲ ಗಿರಿಧಾಮ

ನಲ್ಲಮಲ ಬೆಟ್ಟವು ನಿಸರ್ಗ ಸೌಂದರ್ಯದಿಂದ ಕೂಡಿರುವ ಒಂದು ಸುಂದರ ತಾಣ. ಪರರಿಸರ ಪ್ರೇಮಿಗಳಿಗೆ ಈ ತಾಣ ಇಷ್ಟವಾಗದೆ ಇರದು. ಪೂರ್ವ ಘಟ್ಟ ಪ್ರದೇಶಗಳಿಂದ ಆವೃತ್ತಗೊಂಡಿರುವ ಈ ಗಿರಿಧಾಮ ನೋಡುಗರಿಗೊಂದು ರಸದೌತಣವನ್ನು ಉಣಿಸುತ್ತದೆ.

By Divya Pandit

ನಲ್ಲಮಲ ಬೆಟ್ಟವು ನಿಸರ್ಗ ಸೌಂದರ್ಯದಿಂದ ಕೂಡಿರುವ ಒಂದು ಸುಂದರ ತಾಣ. ಪರರಿಸರ ಪ್ರೇಮಿಗಳಿಗೆ ಈ ತಾಣ ಇಷ್ಟವಾಗದೆ ಇರದು. ಪೂರ್ವ ಘಟ್ಟ ಪ್ರದೇಶಗಳಿಂದ ಆವೃತ್ತಗೊಂಡಿರುವ ಈ ಗಿರಿಧಾಮ ನೋಡುಗರಿಗೊಂದು ರಸದೌತಣವನ್ನು ಉಣಿಸುತ್ತದೆ. ಕೆಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳು ಗಿರಿಧಾಮದಲ್ಲಿರುವುದರಿಂದ ಇದರ ಶ್ರೇಷ್ಠತೆ ಹೆಚ್ಚಿದೆ. ಆಂಧ್ರ ಪ್ರದೇಶ ಆವೃತ್ತಿಯಲ್ಲಿ ಬರುವ ಈ ಸ್ಥಳ ಅನೇಕ ಐತಿಹಾಸಿಕ ಪುರಾವೆಯನ್ನು ಒಳಗೊಂಡಿದೆ. ಇಲ್ಲಿ ಕಂಡುಬರುವ ವಿಶೇಷ ಆಕಾರದ ಬಂಡೆಗಳು ಜ್ವಾಲಾಮುಖಿಯಿಂದ ಉಂಟಾಗಿದೆ ಎನ್ನಲಾಗುತ್ತದೆ. ಬೈರವ ಕುಂಡ ಮತ್ತು ಗುಂಡ್ಲಬ್ರಹ್ಮೇಶ್ವರ ಎರಡು ನಲ್ಲಮಲದಲ್ಲಿರುವ ಅತಿ ಎತ್ತರವಾದ ಬೆಟ್ಟಗಳು.

Nallamala Hills

Nallamala Hills
Photo Courtesy: Rajib Ghosh

ಇಲ್ಲಿಯ ಪ್ರಮುಖ ಆಕರ್ಷಣೆ
ಶ್ರೀಶೈಲಮ್ ನಗರ ಆವೃತ್ತಿಯಲ್ಲಿ ಬರುವ ನಲ್ಲಮಲ ಗಿರಿಧಾಮ. ಇದರಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇಗುಲವಿದೆ. ಇದನ್ನು ಹನ್ನೆರಡು ಜ್ಯೋತೀರ್ಲಿಂಗದಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇಲ್ಲಿರುವ ಇನ್ನೊಂದು ದೇಗುಲವೆಂದರೆ ಬ್ರಹ್ಮರಂಬ ದೇಗುಲ. ಇದನ್ನು ಭಾರತದಲ್ಲೇ ಅತಿ ಹೆಚ್ಚು ಶಕ್ತಿಯನ್ನು ಹೊಂದಿರುವ ಶಕ್ತಿ ಪೀಠ ಎಂದು ಕರೆಯುತ್ತಾರೆ. ಇಷ್ಟೇ ಅಲ್ಲದೆ ನಲ್ಲಮಲದಲ್ಲಿ ವಿಶೇಷವಾದ ನಾಲ್ಕು ವಿಭಿನ್ನ ಪುಣ್ಯ ಕ್ಷೇತ್ರಗಳನ್ನು ನೋಡಬಹುದು. ಅವುಗಳೆಂದರೆ ತ್ರಿಪುರಂತಕಮ್, ಸಿದ್ಧಾವತಮ್, ಆಲಂಪುರ ಮತ್ತು ಉಮಾಮಹೇಶ್ವರ. ಇವು ಈ ಬೆಟ್ಟದ ಧಾರ್ಮಿಕ ಹಿರಿಮೆಯನ್ನು ಹೆಚ್ಚಿಸಲು ಕಾರಣವಾಗಿದೆ.

Nallamala Hills

Mallela Thirtham
Photo Courtesy: Raghavendra Bashamalla

ಕುಂಬುಂಮ್ ಲೇಕ್
ಏಷ್ಯಾದಲ್ಲಿಯೇ ಅತ್ಯಂತ ಪ್ರಾಚೀನವಾದ ಮಾನವ ನಿರ್ಮಿತ ಲೇಕ್(ಕೆರೆ)ಎಂದು ಹೇಳಲಾಗುತ್ತದೆ. ನಲ್ಲಮಲ ಗಿರಿಯಲ್ಲಿರುವ ಈ ಕೆರೆ 15ನೇ ಶತಮಾನದಿಂದಲೂ ಒಂದು ಆಕರ್ಷಕ ಪ್ರವಾಸ ತಾಣವಾಗಿತ್ತು. ಇಲ್ಲಿರುವ ಎರಡು ಪ್ರಮುಖ ನದಿಗಳೆಂದರೆ ಕೃಷ್ಣಾ ನದಿ ಮತ್ತು ಪೆನ್ನಾರ್ ನದಿ. ಇವು ಬಂಡೆಗಳ ಮಧ್ಯದಿಂದ ಹರಿದು ಬಂದು ಭೂಮಿಗೆ ಧುಮುಕುವುದನ್ನು ನೋಡುತ್ತಿದ್ದರೆ ಚಿತ್ರ ಪಟದಲ್ಲಿ ಚಿತ್ರ ಬಿಡಿಸಿದಂತೆ ಕಾಣುತ್ತದೆ.

Nallamala Hills

Hemareddy Mallamma Temple
Photo Courtesy: Vjvikram

ಅಹೋಬಿಲಮ್
ಇಲ್ಲಿಯ ಇನ್ನೊಂದು ಪ್ರಮುಖ ಸ್ಥಳ ಅಹೋಬಿಲಮ್. ಚಾರಣಕ್ಕೆ ಸೂಕ್ತವಾದ ಈ ಸ್ಥಳದಲ್ಲಿ 9 ನರಸಿಂಹ ದೇಗಲವಿದೆ. ಚಾರಣ ಪ್ರಿಯರು ಈ ಬೆಟ್ಟವನ್ನು ಹತ್ತಿಕೊಂಡು ದೇವರ ದರ್ಶನ ಮಾಡಬಹುದು.

Nallamala Hills

Cumbum Lake
Photo Courtesy: praveen

ನಾಗಾರ್ಜುನಸಾಗರ ಅರಣ್ಯ
ಇದು ದಟ್ಟ ಅರಣ್ಯ ಪ್ರದೇಶವಾಗಿದ್ದುದರಿಂದ ಭಾರತದಲ್ಲಿಯೇ ಅತಿದೊಡ್ಡ ಹುಲಿ ಸಂರಕ್ಷಣಾ ಸ್ಥಳ ಎಂದು ಘೋಷಿಸಲಾಗಿದೆ. ಇಲ್ಲಿಯ ಐದು ಜಿಲ್ಲೆಗಳಿಗೆ ಈ ಪ್ರದೇಶ ಹರಡಿಕೊಂಡಿದೆ. ಬೆಟ್ಟದಲ್ಲಿ ಅನೇಕ ಬಗೆಯ ವನ್ಯ ಮೃಗಗಳಿವೆ. ಒಟ್ಟಿನಲ್ಲಿ ಪರಿಸರ ಪ್ರೇಮಿಗಳಿಗೆ ದಟ್ಟವಾದ ಕಾಡಿನಲ್ಲಿ ಚಾರಣ ಹಾಗೂ ದೇವರ ದರ್ಶನ ಪಡೆಯಲು ಇದೊಂದು ಸೂಕ್ತ ಸ್ಥಳ ಎಂದು ಹೇಳಬಹುದು.

Read more about: hill
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X