Search
  • Follow NativePlanet
Share
» »"ಟೇಕ್ ಎ ಕಾಲ್"...ಹೋಗಿ ಬನ್ನಿ ನೈನಿತಾಲ್

"ಟೇಕ್ ಎ ಕಾಲ್"...ಹೋಗಿ ಬನ್ನಿ ನೈನಿತಾಲ್

By Vijay

ಬೇಸಿಗೆಯ ಬಿಸಿ ಬಿಸಿ ಧಗೆ ಎಲ್ಲೆಡೆ ತನ್ನ ದರ್ಪು ತೋರುತ್ತಿದ್ದ ಹಾಗೆ ಬಹುತೇಕರಿಗೆ ನೆನಪಾಗುವುದು ತಂಪು ತಂಪಾದ ಗಿರಿಧಾಮಗಳು. ಅಲ್ಲದೆ ಸಾಮಾನ್ಯವಾಗಿ ಬೇಸಿಗೆ ಸಮಯವು ರಜಾ ಸಮಯವಾಗಿರುವುದರಿಂದಲೂ ಸಹ ಪ್ರವಾಸ ಹೊರಡುವಿಕೆಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಆದರೆ ಪ್ರತಿ ವರ್ಷವೂ ಬೇಸಿಗೆಯ ತಾಪ ಕೊಂಚ ಹೆಚ್ಚುತ್ತಲೆ ಇರುವುದರಿಂದ ತಂಪು ಪ್ರದೇಶಗಳನ್ನು ಅರಸಿ ಹೋಗುವುದು ತುಸು ಕಷ್ಟವೆ ಸರಿ.

ಆದರೆ, ಭವ್ಯ ಭಾರತ ದೇಶದ ಕೆಲವು ಪ್ರದೇಶಗಳು ಯಾವ ಸಮಯವೆ ಇರಲಿ ತಮ್ಮಲ್ಲಿರುವ ಕೆಲ ಸ್ಥಳಗಳ ಅತಿ ಹಿತಕರವಾದ ವಾತಾವರಣಗಳಿಂದಾಗಿ ಹೆಚ್ಚು ಜನಪ್ರೀಯವಾಗಿವೆ. ಅಂತಹ ಕೆಲವು ಪ್ರದೇಶಗಳ ಪೈಕಿ ಉತ್ತರಾಖಂಡ ರಾಜ್ಯವೂ ಸಹ ಒಂದು. ಮೊದಲೆ ಹಿಮಾಲಯ ಬುಡದಲ್ಲಿ ನೆಲೆಸಿರುವ ರಾಜ್ಯ ಇದಾಗಿರುವುದರಿಂದ ಇಲ್ಲಿನ ಅನೇಕ ಸ್ಥಳಗಳು ವರ್ಷದ ಎಲ್ಲಾ ಸಮಯ ತಂಪಾಗೆ ಇರುತ್ತವೆ.

ನಿಮಗಿಷ್ಟವಾಗಬಹುದಾದ : ಮುನ್ನಾರ್ ಜನಪ್ರೀಯತೆಯ ಹಿಂದಿರುವ ರಹಸ್ಯ

ಆದರೂ ಕೆಲವು ಸ್ಥಳಗಳು ಆದರ್ಶಮಯ ಪ್ರವಾಸಕ್ಕೆಂದೆ ದೇಶಾದ್ಯಂತ ಹೆಸರುವಾಸಿಯಾಗಿದ್ದು ಅವುಗಳಲ್ಲೊಂದಾಗಿದೆ ನೈನಿತಾಲ್ ಎಂಬ ಸುಂದರ ಹಾಗೂ ರಮಣೀಯ ನೋಟಗಳನ್ನೊಳಗೊಂಡ ಅದ್ಭುತ ಗಿರಿಧಾಮ. ಏಪ್ರಿಲ್-ಮೇ ಸಮಯದಲ್ಲೂ ಅಬ್ಬಬ್ಬಾ ಎಂದರೆ ಗರಿಷ್ಠ ತಾಪಮಾನ 25 ಡಿಗ್ರಿಗಳಾಗಿರಬಹುದಷ್ಟೆ.

ಬೇಸಿಗೆಯ ಧಗೆಯಿಂದ ನೀವು ಸ್ವಲ್ಪ ವಿರಾಮ ಬಯಸಿ ನಿಮ್ಮ ಸ್ನೇಹಿತರೊಂದಿಗೊ ಇಲ್ಲವೆ ಕುಟುಂಬದೊಂದಿಗೊ ಒಂದು ಮರೆಯಲಾಗದ ಪ್ರವಾಸ ಹೊರಡುವ ಯೋಚನೆಯಲ್ಲಿದ್ದರೆ ಒಂದೊಮ್ಮೆ ಉತ್ತರಾಖಂಡದ ನೈನಿತಾಲ್ ಗೆ ಭೇಟಿ ನೀಡಲು ಯೋಚಿಸಿ ನೋಡಿ. ಖಂಡಿತವಾಗಿಯೂ ನೀವು ತೆಗೆದುಕೊಂಡ ನಿರ್ಧಾರಕ್ಕೆ ಪರಿತಪಿಸುವ ಅಗತ್ಯ ಬರುವುದಿಲ್ಲ ಬದಲು ಅದಕ್ಕೆ ವಿರುದ್ಧವಾಗಿ ಹೆಮ್ಮೆ ಪಟ್ಟುಕೊಳ್ಳುತ್ತೀರಿ.

ಪ್ರಸ್ತುತ ಲೇಖನದಲ್ಲಿ ನೈನಿತಾಲ್ ಗಿರಿಧಾಮ ಹಾಗೂ ಅಲ್ಲಿಗೆ ತೆರಳುವುದರ ಕುರಿತು ಮಾಹಿತಿಯಿದ್ದು, ಅದು ನಿಮಗೆ ಸಹಾಯಕವಾಗಬಹುದೆಂದು ಆಶಿಸುತ್ತೇವೆ. ಬೇಸಿಗೆಯಲ್ಲೊಂದು ಸುಖಮಯ, ಹಿತಕರ ಹಾಗೂ ತಂಪಾದ ಪ್ರವಾಸ ನಿಮ್ಮದಾಗಲಿ.

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ಸಮುದ್ರ ಮಟ್ಟದಿಂದ ಅಗಾಧ 1938 ಮೀ.ಗಳಷ್ಟು ಎತ್ತರದಲ್ಲಿ ಸ್ಥಿತವಿರುವ ಉತ್ತರಾಖಂಡದ ಸುಂದರ ಗಿರಿಧಾಮ ಪ್ರದೇಶ ನೈನಿತಾಲ್, ತನ್ನ ಹೆಸರನ್ನು ಅಲ್ಲಿರುವ ನೈನಿ ಸರೋವರ/ಕೆರೆಯಿಂದ ಪಡೆದುಕೊಂಡಿದೆ. ನೈನಿ ಕೆರೆ ನೈನಿತಾಲ್ ನ ಅತಿ ಗುರುತರವಾದ ಪ್ರವಾಸಿ ಆಕರ್ಷಣೆಯಾಗಿರುವುದು ವಿಶೇಷ.

ಚಿತ್ರಕೃಪೆ: Abhishek gaur70

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ಉತ್ತರಾಖಂಡದ ಕುಮಾವೂನ್ ಭಾಗದಲ್ಲಿ ಸ್ಥಿತವಿರುವ ನೈನಿತಾಲ್ ಭಾರತದ ಸರೋವರ ರಾಜಧಾನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು ದೇಶದ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಒಂದಾಗಿದೆ. ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ದೇಶೀಯ ಹಾಗೂ ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತದೆ. ವಿಶೇಷವಾಗಿ ಬೇಸಿಗೆಯ ಸಂದರ್ಭದಲ್ಲಿ ಮಧ್ಯ ಹಾಗೂ ದಕ್ಷಿಣ ಭಾರತದಿಂದ ಸಾಕಷ್ಟು ಪ್ರವಾಸಿಗರು ನೈನಿತಾಲ್ ಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Udayanarya

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ಬೆಳ್ಳನೆಯ ಹಿಮಾಲಯ ಪರ್ವತಗಳ ಮಧ್ಯೆ ಹಸಿರು ವನರಾಶಿಗಳಿಂದ ಕಂಗೊಳಿಸುವ ನೈನಿತಾಲ್ ಹಿಮಾಲಯ ಭಾಗದ ಮಾಣಿಕ್ಯದಂತಿದ್ದು ಅಪರಿಮಿತವಾದ ಪ್ರಾಕೃತಿಕ ಸಂಪತ್ತಿನಿಂದ ಸಂಪದ್ಭರಿತವಾಗಿದೆ.

ಚಿತ್ರಕೃಪೆ: Ekabhishek

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ಕೇವಲ ಪ್ರವಾಸಿ ತಾಣವಾಗಲ್ಲದೆ ಧಾರ್ಮಿಕ ಆಕರ್ಷಣೆಯಾಗಿಯೂ ನೈನಿತಾಲ್ ಸಾಕಷ್ಟು ಜನರನ್ನು ಆಕರ್ಷಿಸುತ್ತದೆ. ಕಾರಣ ನೈನಿ ಕೆರೆಯ ತಟದಲ್ಲಿರುವ ನೈನಾ ದೇವಿಯ ದೇಗುಲ. ಹಲವು ಪುರಾಣ ಪುಣ್ಯ ಕಥೆ, ದಂತ ಕಥೆಗಳಲ್ಲಿ ನೈನಿತಾಲ್ ಕುರಿತು ಉಲ್ಲೇಖವಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Ekabhishek

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ಇಲ್ಲಿರುವ ನೈನಿ ದೇವಿಯ ದೇವಾಲಯವು ಪವಿತ್ರ 64 ಶಕ್ತಿಪೀಠಗಳ ಪೈಕಿ ಒಂದೆಂದು ನಂಬಲಾಗಿದ್ದು ಸತಿ ದೇವಿಯ ನಯನಗಳು ಅಂದರೆ ಕಣ್ಣುಗಳು ಇಲ್ಲಿ ಬಿದ್ದಿದ್ದವೆನ್ನಲಾಗಿದೆ. ಆ ಕಾರಣದಿಂದಾಗಿಯೆ ಈ ತಾಣಕ್ಕೆ ನಯನ (ಕಣ್ಣು) ಹಾಗೂ ತಲ್ (ಕೆರೆ) ಕೂಡಿ ನೈನಿತಾಲ್ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.

ಚಿತ್ರಕೃಪೆ: Vipin8169

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ನೈನಿತಾಲ್ ಗಿರಿಧಾಮಗಳಲ್ಲಿ ಹಿತಕರವೆನಿಸುವ ಶಾಂತ ವಾತಾವರಣವಿದ್ದು ಸಾಕಷ್ಟು ಸಮಯವನ್ನು ಆನಂದಮಯವಾಗಿ ಕಳೆಯಬಹುದಾಗಿದೆ. ರಿಸಾರ್ಟು, ಹೋಟೆಲುಗಳಿದ್ದು ಅವುಗಳಲ್ಲಿ ತಂಗಿ ನೈನಿತಾಲ್ ಹಾಗೂ ಅದರ ಸುತ್ತಮುತ್ತಲಿನ ಸುಂದರವಾದ ಪ್ರದೇಶಗಳಿಗೆ ಭೇಟಿ ನೀಡಿ ಸುಂದರ ಅನುಭವವನ್ನು ಕಟ್ಟಿಕೊಳ್ಳಬಹುದು.

ಚಿತ್ರಕೃಪೆ: Sanjoy Ghosh

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ನೈನಿ ಶೃಂಗ ಅಥವಾ ಚೈನಾ ಪೀಕ್ ಎನ್ನುವ ತಾಣ ನೈನಿತಾಲ್ ನ ಅತಿ ಎತ್ತರದ ಭೂಪ್ರದೇಶವಾಗಿದ್ದು ಇಲ್ಲಿಂದ ನೈನಿತಾಲ್ ಸುತ್ತಮುತ್ತಲಿನ ಗಮ್ಯ ವಾತಾವರಣವನ್ನು, ಸುಂದರ ಪ್ರಕೃತಿಯನ್ನು ಮನಃಪೂರ್ವಕ ನೋಡಿ ಕಣ್ತುಂಬಿಸಿಕೊಳ್ಳಬಹುದಾಗಿದೆ.

ಚಿತ್ರಕೃಪೆ: Manoj Khurana

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ಅಲ್ಲದೆ ನೈನಿ ಕೆರೆಯ ಒಂದು ಬದಿಯಲ್ಲಿರುವ ಗೋವಿಂದ ವಲ್ಲಭ ಪಂತ ಮಾರ್ಗ ಅಥವಾ ಹೆಚ್ಚು ಜನಪ್ರೀಯವಾಗಿ ಕರೆಸಿಕೊಳ್ಳುವ ಮಾಲ್ ರೋಡ್ ವಿಶೇಷ ಆಕರ್ಷಣೆಯಾಗಿದ್ದು ಸಾಕಷ್ಟು ಹೋಟೆಲುಗಳು, ವೈವಿಧ್ಯಮಯ ಅಂಗಡಿ ಮುಗ್ಗಟ್ಟುಗಳು ಹಾಗೂ ವಾಣಿಜ್ಯ ಕಚೇರಿಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Sanjoy

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ನೈನಿ ಕೆರೆಯಲ್ಲಿ ದೋಣಿ ವಿಹಾರದ ಸೌಲಭ್ಯವೂ ಇದ್ದು ಅದರ ಸಂಪೂರ್ಣ ಅನುಭೂತಿಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ನೈನಿತಾಲ್ ಪ್ರಾಣಿ ಸಂಗ್ರಹಾಲಯ ಇಲ್ಲಿ ನೋಡಬಹುದಾದ ಮತ್ತೊಂದು ಆಕರ್ಷಕ ಪ್ರವಾಸಿ ವಿಹಾರವಾಗಿದೆ.

ಚಿತ್ರಕೃಪೆ: draskd

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ಈ ಪ್ರಾಣಿ ಸಂಗ್ರಹಾಲಯದಲ್ಲಿ ಹಿಮಾಲಯ ಕರಡಿ, ಹಿಮಚಿರತೆ, ಹಿಮ ಹದ್ದು ಹೀಗೆ ವೈವಿಧ್ಯಮಯ ಹಾಗೂ ವಿಶಿಷ್ಟವಾದ ಹಿಮಾಲಯ ಭಾಗದಲ್ಲಿ ಮಾತ್ರ ಕಂಡು ಬರುವ ಪ್ರಾಣಿ ಪಕ್ಷಿಗಳನ್ನು ನೋಡಿ ಆನಂದಿಸಬಹುದು.

ಚಿತ್ರಕೃಪೆ: Varanya Prakash

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ಪಂತನಗರ ವಾಯು ನಿಲ್ದಾಣ ನೈನಿತಾಲ್ ನಿಂದ 70 ಕಿ.ಮೀ ದೂರದಲ್ಲಿದ್ದು ನೈನಿತಾಲ್ ಗೆ ಹತ್ತಿರದಲ್ಲಿರುವ ವಾಯುನೆಲೆ ಹೊಂದಿದೆ. ಇಲ್ಲಿ ಕೇವಲ ವಿಮಾನಗಳ ಹಾರಾಟವಿರುವುದರಿಂದ ದೆಹಲಿ ವಾಯು ನಿಲ್ದಾಣ ಇದಕ್ಕೆ (ನೈನಿತಾಲ್) ಹತ್ತಿರದಲ್ಲಿರುವ ವಾಯು ನ್ಲೆ ಎಂದೆ ಹೇಳಬಹುದು. ದೆಹಲಿ ಸುಮಾರು 300 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Nvvchar

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ನೈನಿತಾಲ್ ನಿಂದ 35 ಕಿ.ಮೀ ದೂರದಲ್ಲಿ ಕಾಠ್ಗೋದಾಮ್ ರೈಲು ನಿಲ್ದಾಣವಿದ್ದು ಇಲ್ಲಿಂದ ನೈನಿತಾಲ್ಗೆ ಟ್ಯಾಕ್ಸಿ, ಬಸ್ಸುಗಳ ಮೂಲಕ ಸುಲಭವಾಗಿ ತೆರಳಬಹುದು. ಅಲ್ಲದೆ ದೆಹಲಿಯಿಂದ ಖಾಸಗಿ ಬಸ್ಸುಗಳು ನೈನಿತಾಲ್ ಗೆ ತೆರಳಲು ದೊರೆಯುತ್ತವೆ.

ಚಿತ್ರಕೃಪೆ: Peter Davis

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ಭೀಮತಲ್ : ನೈನಿತಾಲ್ ನಿಂದ ಸುಮಾರು 22 ಕಿ.ಮೀ ಗಳಷ್ಟು ದೂರದಲ್ಲಿ ಭೀಮತಲ್ ಎಂಬ ಹೆಸರಿನ ಪ್ರಸಿದ್ಧ ಕೆರೆಯಿದೆ. ಇದೂ ಸಹ ಒಂದು ಸುಂದರ ಪ್ರವಾಸಿ ಆಕರ್ಷಣೆಯಾಗಿದ್ದು ನೈನಿತಾಲ್ ಗ್ ಭೇಟಿ ಕೊಡುವ ಪ್ರವಾಸಿಗರು ಇಲ್ಲಿಯೂ ಬರುತ್ತಾರೆ. ಪಂಚ ಪಾಂಡವರಲ್ಲಿ ಒಬ್ಬನಾದ ಭೀಮನ ನಂತರ ಕೆರೆಗೆ ಈ ಹೆಸರು ಬಂದಿದೆ.

ಚಿತ್ರಕೃಪೆ: draskd

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ದೋಣಿ ವಿಹಾರವೂ ಲಭ್ಯವಿರುವ ಈ ಕೆರೆಯು ನೈನಿತಾಲ್ ಕೆರೆಗಿಂತ ದೊಡ್ಡದಾಗಿದ್ದು ಕೆರೆಯ ಮಧ್ಯದಲ್ಲಿ ಮತ್ಸ್ಯಾಗಾರವೊಂದಿದೆ. ಇದು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದು ದೋಣಿಯ ಮೂಲಕ ಈ ಮತ್ಸ್ಯ ಸಂಗ್ರಹಾಲಯಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Manoj Khurana

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ನೈನಿತಾಲ್ ನಿಂದ ಸುಮಾರು 18 ಕಿ.ಮೀ ದೂರದಲ್ಲಿ ಜಿಯೋಲಿಕೋಟ್ ಎಂಬ ಸ್ಥಳವಿದೆ. ಇದು ತನ್ನಲ್ಲಿರುವ ಬ್ರಿಟೀಷ್ ಕಾಲದ ಗ್ರಾಮದ ಕುಟಿರಗಳಿಗೆ ಹೆಸರುವಾಸಿಯಾಗಿದ್ದು ನೈಸರ್ಗಿಕ ಸಮ್ಪತ್ತಿನಿಂದ ಮಿನುಗುತ್ತದೆ. ಬಣ್ಣಬಣ್ಣದ ಚಿಟ್ಟೆ ಇಷ್ಟಪಡುವವರಿಗೆ, ಜೇನು ಕೃಷಿ ನೋಡಬಯಸುವವರಿಗೆ, ಪರಿಸರ ಪ್ರಿಯರಿಗೆ ಈ ಸ್ಥಳ ಹೇಳಿ ಮಾಡಿಸಿದಂತಿದೆ.

ಚಿತ್ರಕೃಪೆ: Sagarika Bose

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ನೈನಿತಾಲ್ ನಿಂದ 30 ಕಿ.ಮೀ ಹಾಗು ಭೀಮತಲ್ ನಿಂದ ಸುಮಾರು 4 ಕಿ.ಮೀ ನಲ್ಲಿದೆ ನೌಕುಚಿಯಾತಲ್. ಇದು ಸಹ ಒಂದು ಕೆರೆ. ಆದರೆ ಇದು ಸ್ಥಿತವಿರುವ ದಟ್ಟವಾದ ಹಸಿರಿನ ವನರಾಶಿ ಮಾತ್ರ ಕಣ್ಣಿಗೆ ಕಟ್ಟುವಂತಿದೆ. ಒಮ್ಮೆ ಇ ವಾತಾವರಣ ನೊಡಿದರೆ ಸಾಕು ಎಂದಿಗೂ ಹಿಂತಿರುಗಿ ಹೊಗದ ಮನಸ್ಸು ಉಂಟಾಗುತ್ತದೆ. ಅಷ್ಟು ಚೆಂದವಾಗಿದೆ ಈ ಕೆರೆ ಹಾಗೂ ಸುತ್ತಮುತ್ತಲಿನ ಪ್ರಕೃತಿಕ ಸೊಬಗು.

ಚಿತ್ರಕೃಪೆ: sandeepachetan.com travel photography

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ಕೆರೆಯು ಒಂಭತ್ತು ಕಡೆ ಅಂಚುಗಳನ್ನು ಹೊಂದಿರುವುದರಿಂದ ಇದಕ್ಕೆ ನೌ (ಒಂಭತ್ತು) ಕುಚಿಯಾತಲ್ ಎಂಬ ಹೆಸರು ಬಂದಿದೆ. ಹಸಿರು ರಾಶಿಯ ನಡುವೆ ಕಂಗೊಳಿಸುವ ಈ ಕೆರೆಯಲ್ಲಿ ಹಾಯಾದ ದೋಣಿ ವಿಹಾರದ ಸೌಲಭ್ಯವೂ ಸಹ ಇದೆ.

ಚಿತ್ರಕೃಪೆ: Dr Satendra

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ಇನ್ನೊಂದು ಆಕರ್ಷಣೆ ಎಂದರೆ ಇಲ್ಲಿರುವ ಆಂಜನೇಯನ ದೇವಾಲಯ. ಸುಂದರ ಹನುಮನ ಪ್ರತಿಮೆ ಹೊಂದಿರುವ ಈ ದೇವಾಲಯಕ್ಕೆ ಯಾರೂ ಭೇಟಿ ನೀಡದೆ ಮರಳಲಾರರು.

ಚಿತ್ರಕೃಪೆ: Manoj Khurana

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ಮತ್ತೊಂದು ಅದ್ಭುತ ಪರಿಸರವಿರುವ ತಾಣಕ್ಕೆ ಭೇಟಿ ನೀಡಲು ಮನಸಿದೆಯೆ? ಇದೂ ಸಹ ಕೆರೆ ಪ್ರದೇಶವಾಗಿದ್ದು ಸುತ್ತಲು ಅಪರಿಮಿತವಾದ ಹಚ್ಚ ಹಸಿರಿನ ದಟ್ಟವಾದ ಗಿಡ ಮರಗಳಿಂದ ಕೂಡಿದ ಪ್ರದೇಶವಾಗಿದೆ. ಇದನ್ನು ಸಾತ್ ತಲ್ ಎಂದು ಕರೆಯುತ್ತಾರೆ.

ಚಿತ್ರಕೃಪೆ: draskd

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ಇಲ್ಲಿ ಒಟ್ಟು ಏಳು ಕೆರೆಗಳು ಒಂದಕ್ಕೊಂದು ಆಂತರಿಕವಾಗಿ ಜೋಡಣೆಯಾಗಿರುವುದರಿಂದ ಇದಕ್ಕೆ ಸಾತ್ ತಲ್ ಎಂಬ ಹೆಸರು ಬಂದಿದೆ. ದೊಣಿ ವಿಹಾರ ಲಭ್ಯವಿರುವ ಈ ಕೆರೆಯು ನೈನಿತಾಲ್ ನಿಂದ ಸುಮಾರು 40 ಕಿ.ಮೀ ಗಳಷ್ಟು ಅಂತರದಲ್ಲಿದೆ.

ಚಿತ್ರಕೃಪೆ: draskd

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ನೀವು ಪಕ್ಷಿಪ್ರಿಯ ಛಾಯಾಗ್ರಾಹಕರಾಗಿದ್ದಲ್ಲಿ ಈ ಕೆರೆಗೆ ಒಮ್ಮೆಯಾದರೂ ಭೆಟಿ ನೀಡಲೇಬೇಕು. ಏಕೆಂದರೆ ಇಲ್ಲಿ ಒಂದಕ್ಕಿಂತ ಒಂದು ಭಿನ್ನವಾದ ಹಾಗೂ ನೊಡಲು ಅಷ್ಟೆ ಆಕರ್ಷಕವಾದ ವೈವಿಧ್ಯಮಯ ಪಕ್ಷಿಗಳನ್ನು ಗಮನಿಸಬಹುದು.

ಚಿತ್ರಕೃಪೆ: Koshy Koshy

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ನೈನಿತಾಲ್ ಗಿರಿಧಾಮದಿಂದ 50 ಕಿ.ಮೀ ದೂರದಲ್ಲಿರುವ ಮುಕ್ತೇಶ್ವರ ಉತ್ತರಾಖಂಡ ರಾಜ್ಯದ ನೈನಿತಾಲ್ ಜಿಲ್ಲೆಯ ಒಂದು ಸುಂದರ ಪ್ರವಾಸಿ ಕೇಂದ್ರವಾಗಿ ಹೆಸರುವಾಸಿಯಾಗಿದೆ. ಮುಕ್ತೇಶ್ವರ ಪ್ರಮುಖವಗಿ ತನ್ನ ಪ್ರಕೃತಿ ವೈಭವ, ಹಿತಕರವಾದ ವಾತಾವರಣ ಹಾಗೂ ರುಚಿಕರವಾದ ಹಣ್ಣಿನ ತೋಟಗಳಿಗಾಗಿ ಪ್ರಸಿದ್ಧವಾಗಿದೆ.

ಚಿತ್ರಕೃಪೆ: wikipedia

ತಂಪು ತಂಪಾದ ನೈನಿತಾಲ್:

ತಂಪು ತಂಪಾದ ನೈನಿತಾಲ್:

ಅಲ್ಲದೆ ಮುಕ್ತೇಶ್ವರದಿಂದ ಹಿಮಾಲಯ ಪರ್ವತ ಶ್ರೇಣಿಗಳ ಕೆಲ ಪ್ರಮುಖ ಶಿಖರಗಳಾದ ನಂದಾ ದೇವಿ, ನಂದಾ ಘಂಟಿ, ನಂದಾ ಕೋಟ್, ತ್ರಿಶೂಲ್ ಹಾಗೂ ಪಾಂಚಚುಲಿಗಳ 180 ಡಿಗ್ರಿ ಕೋನದಲ್ಲಿ ವಿಸ್ತೃತವಾಗಿ ಕಾನಬಹುದು.

ಚಿತ್ರಕೃಪೆ: draskd

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X