Search
  • Follow NativePlanet
Share
» »ಮಹಿಷಾ ಪೀಠವಾಗಿ ಕರೆಯಲಾಗುವ ನೈನಾದೇವಿ ದೇವಾಲಯದ ವಿಶೇಷ...

ಮಹಿಷಾ ಪೀಠವಾಗಿ ಕರೆಯಲಾಗುವ ನೈನಾದೇವಿ ದೇವಾಲಯದ ವಿಶೇಷ...

ನೈನಿತಾಲ್ ಅನ್ನು ಭಾರತ ದೇಶದ ನದಿಗಳ ಜಿಲ್ಲೆ, ಮೂರು ಋಷಿಗಳ ನದಿಗಳು ಎಂದು ಕೂಡ ಕರೆಯಲಾಗುತ್ತದೆ. ನೈನಿತಾಲ್ ಪ್ರದೇಶವು ಹಿಮಾಲಯ ಪರ್ವತದಲ್ಲಿ ಸುಂದರವಾದ ನದಿಗಳ ಮುಮಾವೊನ್ ಬೆಟ್ಟಗಳ ಶ್ರೇಣಿಯಲ್ಲಿದೆ. ಪುರಾಣ ಕಥೆಯ ಪ್ರಕಾರ ಸತಿ ದೇವಿಯ ಎಡ ಕಣ್ಣು ಇಲ್ಲಿ ಬಿದ್ದು, ಕಣ್ಣಿನ ಆಕಾರ ನದಿಯು ಏರ್ಪಟ್ಟಿದೆ ಎಂದು ನಂಬಲಾಗಿದೆ. ಈ ನಂಬಿಕೆಯ ಕಾರಣವಾಗಿ ಈ ಪ್ರದೇಶವನ್ನು ಸಾವಿರಾರು ಹಿಂದೂ ಯಾತ್ರಿಕರು ದರ್ಶಿಸಿ ನೈನಿ ಮಾತಳನ್ನು ಆರಾಧಿಸುತ್ತಿದ್ದಾರೆ. ನೈನಿ ಮಾತಾಳಿಗೆ ಇಲ್ಲಿ ಒಂದು ಸುಂದರವಾದ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ.

1880 ವರ್ಷದಲ್ಲಿ ಇಲ್ಲಿ ಮಂಜಿನ ಬೆಟ್ಟದಲ್ಲಿ ಅತ್ಯಂತ ಎತ್ತರದ ಪುರಾತನವಾದ ದೇವಾಲಯವು ಧ್ವಂಸವಾದ್ದರಿಂದ ಅದರ ಸ್ಥಾನದಲ್ಲಿ ಒಂದು ನೂತನ ದೇವಾಲಯವನ್ನು ನಿರ್ಮಾಣ ಮಾಡಿದರು. ಇಲ್ಲಿ ನೈನಾ ದೇವಿ ಮಾತ್ರವೇ ಅಲ್ಲದೇ, ಮಾತ ಸತಿ ಶಕ್ತಿ ದೇವಿಯಾಗಿ ಕೂಡ ಕರೆದು ಆರಾಧಿಸುತ್ತಾರೆ. ಇಲ್ಲಿ ಗಣೇಶ ಮತ್ತು ಕಾಳಿ ದೇವಿ ದೇವಾಲಯಗಳಿಗೂ ಕೂಡ ಭೇಟಿ ನೀಡಬಹುದು. ದೇವಾಲಯದ ಪ್ರವೇಶ ದ್ವಾರದಲ್ಲಿ ಒಂದು ದೊಡ್ಡದಾದ ವೃಕ್ಷವಿದೆ. ಈ ಪ್ರದೇಶವನ್ನು ಒಂದು ಶಕ್ತಿ ಪೀಠವಾಗಿ ಪೂಜಿಸುತ್ತಾರೆ.

ಈ ಪ್ರದೇಶವು ಪೂರ್ತಿಯಾಗಿ ಆಧ್ಯಾತ್ಮಿಕ ಪ್ರಭಾವವನ್ನು ಉಂಟು ಮಾಡುತ್ತದೆ. ಪ್ರತಿಯೊಬ್ಬರು ಒಮ್ಮೆಯಾದರು ದರ್ಶಿಸಲೇಬೇಕಾದ ದೇವಾಲಯವಿದು. ಇಲ್ಲಿ ವಸತಿಗಾಗಿ ಅನೇಕ ಹೋಟೆಲ್‍ಗಳು ಕೂಡ ಇವೆ. ಸಮೀಪದಲ್ಲಿ ಅನೇಕ ಆಕರ್ಷಣೆಗಳನ್ನು ಕೂಡ ಕಾಣಬಹುದು.

1.ನೈನಿ ನದಿ

1.ನೈನಿ ನದಿ

PC:Abhishek gaur70

ನೈನಿ ನದಿಯು ನೈನಿತಾಲ್‍ನ ಪ್ರಧಾನವಾದ ಆಕರ್ಷಣೆಯಾಗಿದೆ. ಪ್ರವಾಸಿಗರು ಇಲ್ಲಿ ಬೋಟ್ ವಿಹಾರದಂತಹ ಅನೇಕ ನೀರಿನ ಚಟುವಟಿಕೆಗಳ ಕ್ರೀಡೆಗಳನ್ನು ಇಲ್ಲಿ ಆಡಬಹುದು. ಈ ಪ್ರದೇಶದಲ್ಲಿ ಒಂದು ಪೋಸ್ಟ್ ಆಫೀಸ್, ಬಸ್ ಸ್ಟಾಂಡ್, ಟ್ಯಾಕ್ಸಿ ಸ್ಟಾಂಡ್, ರೈಲ್ವೆ ರಿಜರ್ವೇಷನ್ ಕೌಂಟರ್, ಕೆಲವು ಶಾಪಿಂಗ್ ಸೆಂಟರ್‍ಗಳು ಕೂಡ ಇಲ್ಲಿವೆ.

2.ಹನುಮಾನ್ ಘುರಿ

2.ಹನುಮಾನ್ ಘುರಿ

PC:Nainital Tourism

ಹನುಮಾನ್ ಘುರಿ ಎಂದರೆ ಆಂಜನೇಯಸ್ವಾಮಿ ದೇವಾಲಯ. ಇದು ನೈನಿತಾಲ್‍ನಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ಈ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 1951 ಮೀ ಎತ್ತರದಲ್ಲಿದೆ. ಇಲ್ಲಿಯೇ ಶೀತಲ ದೇವಿ ದೇವಾಲಯ ಹಾಗು ಲೀಲಾ ಸಹಾ ಬಾಪು ಆಶ್ರಮ ಕೂಡ ಇವೆ.

3.ಖೂರ್ಪತಾಲ್

3.ಖೂರ್ಪತಾಲ್

PC:Enjoymusic nainital

ಖೂರ್ಪತಾಲ್ ಎಂಬುದು ಒಂದು ಚಿಕ್ಕದಾದ ಗ್ರಾಮ. ಮೀನನ್ನು ಹಿಡಿಯುವ ಕ್ರೀಡೆಯಲ್ಲಿ ಇದು ಪ್ರಸಿದ್ಧತೆಯನ್ನು ಹೊಂದಿರುವ ಗ್ರಾಮವೇ ಆಗಿದೆ. ನೈನಿತಾಲ್‍ನಿಂದ ಇದು 10 ಕಿ.ಮೀ ದೂರದಲ್ಲಿದೆ. ಸುಂದರವಾದ ಈ ಗ್ರಾಮವು ಸಮುದ್ರ ಮಟ್ಟದಿಂದ 1635 ಮೀ ಎತ್ತರದಲ್ಲಿದೆ. ಫಿಷಿಂಗ್ ಆನಂದಿಸಲು ಒಂದು ಅದ್ಭುತವಾದ ನದಿಯು ಕೂಡ ಇಲ್ಲಿದೆ.

4.ಟಿಫಿನ್ ಟಾಪ್

4.ಟಿಫಿನ್ ಟಾಪ್

PC:Nainital Tourism Tiffin Top

ಟಿಫಿನ್ ಟಾಪ್ ಎಂಬುದು ಒಂದು ಪಿಕ್ನಿಕ್ ಸ್ಪಾಟ್. ನೈನಿತಾಲ್‍ಗೆ ಸುಮಾರು 4 ಕಿ.ಮೀ ದೂರದಲ್ಲಿದೆ. ಇದನ್ನೇ ಡೋರೊತಿ ಸಿಟ್ ಎಂದು ಕೂಡ ಕರೆಯುತ್ತಾರೆ. ಈ ಪ್ರದೇಶವು ಸಮುದ್ರ ಮಟ್ಟದಿಂದ ಸುಮಾರು 7520 ಮೀ ಎತ್ತರದಲ್ಲಿ ಆಯರ್ಪಟ್ಟ ಎಂಬ ಶಿಖರದ ಮೇಲೆ ಇದೆ. ಇಲ್ಲಿಂದ ಪ್ರವಾಸಿಗರು ಅದ್ಭುತವಾದ ಹಿಮಾಲಯ ಪರ್ವತ ಶ್ರೇಣಿಗಳ ಸೌಂದರ್ಯವನ್ನು ನೋಡಬಹುದು.

5.ನೈನಿತಾಲ್ ಝೂ

5.ನೈನಿತಾಲ್ ಝೂ

PC:Jöshua Barnett

ನೈನಿತಾಲ್ ಝೂ ಒಂದು ಪ್ರಸಿದ್ಧವಾದ ಪ್ರವಾಸಿ ಆಕರ್ಷಣೆಯಾಗಿದೆ. ಸಮುದ್ರ ಮಟ್ಟದಿಂದ ಇದು 2100 ಮೀ ಎತ್ತರದಲ್ಲಿದೆ. ಈ ಝೂನಲ್ಲಿ ವಿವಿಧ ಬಗೆಯ ಪ್ರಾಣಿಗಳಿವೆ. ಈ ಝೂ ಸೋಮವಾರದ ದಿನದಂದು ಪ್ರವಾಸಿಗರಿಗೆ ಪ್ರವೇಶವನ್ನು ನೀಡುವುದಿಲ್ಲ. ಬಸ್ ಸ್ಟಾಂಡ್‍ನಿಂದ ಈ ಝೂ 1 ಕಿ.ಮೀ ದೂರದಲ್ಲಿಯೇ ಇದೆ.

6.ಹೇಗೆ ಸೇರಿಕೊಳ್ಳಬೇಕು?

6.ಹೇಗೆ ಸೇರಿಕೊಳ್ಳಬೇಕು?

ನೈನಿತಾಲ್‍ಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಪಂತ್ ನಗರ ವಿಮಾನ ನಿಲ್ದಾಣ. ಇದು ನೈನಿತಾಲ್‍ಗೆ ಸುಮಾರು 55 ಕಿ.ಮೀ ದೂರದಲ್ಲಿದೆ. ದೆಹಲಿ ವಿಮಾನ ನಿಲ್ದಾಣದಿಂದ ಇಲ್ಲಿಗೆ ಅನೇಕ ವಿಮಾನದ ಸೇವೆಗಳು ಸಂಪರ್ಕ ಸಾಧಿಸುತ್ತವೆ. ನೈನಿತಾಲ್‍ಗೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಕಾಥ್ ಗೊಡಂ ರೈಲ್ವೆ ನಿಲ್ದಾಣ. ಇದು ನೈನಿತಾಲ್‍ನಿಂದ ಕೇವಲ 23 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಲಕ್ನೋ, ಆಗ್ರಾಗಳಿಗೆ ನೇರವಾಗಿ ರೈಲುಗಳು ಸಂಪರ್ಕ ಸಾಧಿಸುತ್ತದೆ. ಪ್ರವಾಸಿಗರು ಖಾಸಗಿ ಅಥವಾ ಸರ್ಕಾರಿ ವಾಹನದ ಮೂಲಕವು ನೈನಿತಾಲ್‍ಗೆ ಸೇರಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X