Search
  • Follow NativePlanet
Share
» »ಹಿಮಾಚಲ ಪ್ರದೇಶದ ನಹಾನ್‌ನಲ್ಲಿ ಏನೇನೆಲ್ಲಾ ಇದೆ ಗೊತ್ತಾ?

ಹಿಮಾಚಲ ಪ್ರದೇಶದ ನಹಾನ್‌ನಲ್ಲಿ ಏನೇನೆಲ್ಲಾ ಇದೆ ಗೊತ್ತಾ?

ಇಲ್ಲಿ ಸುಕೇತಿ ಫಾಸಿಲ್‌ ಪಾರ್ಕ್‌, ಸಿಂಬಲವಾರ ವನ್ಯಧಾಮ ಮತ್ತು ರೇಣುಕಾ ವನ್ಯಧಾಮವಿದೆ, ನಹಾನ್‌ನಲ್ಲಿ ಹಲವು ಕೋಟೆಗಳು, ದೇವಸ್ಥಾನಗಳು ಮತ್ತು ಕೆರೆಗಳಿವೆ.

ಹಿಮಾವೃತ ಪರ್ವತ ಶ್ರೇಣಿಗಳು ಮತ್ತು ದಟ್ಟ ಹಸಿರು ಪರ್ವತಗಳಿಂದ ಆವೃತವಾದ ರಮಣೀಯ ಪ್ರವಾಸಿ ತಾಣ ನಹಾನ್‌. ಹಿಮಾಚಲ ಪ್ರದೇಶದ ಶಿವಾಲಿಕ್‌ ಪರ್ವತದ ತುದಿಯಲ್ಲಿದೆ. ರಾಜ ಕರಮ್ ಪ್ರಕಾಶ್‌ರವರು 1621ರಲ್ಲಿ ನಹಾನ್‌ ಅನ್ನು ಕಂಡುಹಿಡಿದರು. ರಕ್ಷಾಬಂಧನ ಹಬ್ಬದ ಸಂದರ್ಭದಲ್ಲಿ ಇಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯವನ್ನು ಇವರು ಆರಂಭಿಸಿದರು. ಈ ಸಂಪ್ರದಾಯವನ್ನು ಇಂದಿಗೂ ಇಲ್ಲಿ ಆಚರಿಸಲಾಗುತ್ತಿದೆ. ಈಗ ನಹಾನ್‌ ಎಂದು ಕರೆಯಲ್ಪಡುವ ಈ ಪ್ರದೇಶದಲ್ಲೇ ನಹಾರ್ ಎಂಬ ಸಂಗಾತಿಯನ್ನು ಹೊಂದಿದ್ದ ಸಂತರೊಬ್ಬರು ಇಲ್ಲಿ ವಾಸವಾಗಿದ್ದರಂತೆ. ನಹಾರ್ ಎಂದರೆ ಕೊಲಬೇಡ ಎಂದರ್ಥ.

ಐತಿಹಾಸಿಕ ಘಟನೆ

ಐತಿಹಾಸಿಕ ಘಟನೆ

PC: Harvinder Chandigarh
ಐತಿಹಾಸಿಕ ಘಟನೆಯೊಂದರ ಆಧಾರದ ಮೇಲೆ ಈ ಪ್ರದೇಶಕ್ಕೆ ಈ ಹೆಸರು ಬಂದಿದೆ. ಒಬ್ಬ ರಾಜ ಸಿಂಹವನ್ನು ಕೊಲ್ಲಲು ಬಂದಾಗ ಸಂತ ನಹಾರ್ ಎಂದರಂತೆ. ಅಂದರೆ ಕೊಲಬೇಡ ಎಂದು ಹೇಳಿದರಂತೆ. ಆ ಸಂತರ ಹೆಸರು ಬಾಬಾ ಭಂವರಿ ದಾಸ್‌. ಸಮುದ್ರ ಮಟ್ಟದಿಂದ 932 ಮೀಟರು ಎತ್ತರದಲ್ಲಿರುವ ನಹಾನ್‌ ಪ್ರಮುಖ ಪ್ರವಾಸಿ ತಾಣವಾಗಿದೆ.

ರೇಣುಕಾ ವನ್ಯಧಾಮ

ರೇಣುಕಾ ವನ್ಯಧಾಮ

PC: Harvinder Chandigarh
ಇಲ್ಲಿ ಸುಕೇತಿ ಫಾಸಿಲ್‌ ಪಾರ್ಕ್‌, ಸಿಂಬಲವಾರ ವನ್ಯಧಾಮ ಮತ್ತು ರೇಣುಕಾ ವನ್ಯಧಾಮವಿದೆ, ನಹಾನ್‌ನಲ್ಲಿ ಹಲವು ಕೋಟೆಗಳು, ದೇವಸ್ಥಾನಗಳು ಮತ್ತು ಕೆರೆಗಳಿವೆ. ರೇಣುಕಾ ಕೆರೆಯು ಹಿಮಾಚಲ ಪ್ರದೇಶದ ಕೆರೆಗಳಲ್ಲೇ ಅತ್ಯಂತ ದೊಡ್ಡದಾಗಿದ್ದು ಸುಮಾರು 3214 ಮೀ. ವಿಸ್ತಾರವಾಗಿದೆ. ಐತಿಹ್ಯಗಳ ಪ್ರಕಾರ, ಋಷಿಮುನಿ ಜಮದಗ್ನಿ ಮತ್ತು ಅವರ ಪುತ್ರ ಪರಶುರಾಮರಿಗೂ ಈ ಪ್ರದೇಶಕ್ಕೂ ಸಂಬಂಧವಿದೆ.

ರಾಣಿ ತಾಲ್

ರಾಣಿ ತಾಲ್

PC: Harvinder Chandigarh
ನಹಾನ್‌ನ ಮಧ್ಯದಲ್ಲಿರುವುದು ರಾಣಿ ತಾಲ್‌, ಇಲ್ಲಿ ವಿಶಾಲವಾದ ದೇವಸ್ಥಾನ ಮತ್ತು ಕೊಳವಿದೆ. ರಾಣಿ ತಾಲ್‌ ಅನ್ನು ರಾಣಿಯ ಕೆರೆ ಎಂದೂ ಕರೆಯಲಾಗುತ್ತದೆ. ನಹಾನ್‌ ಆಳುತ್ತಿದ್ದ ರಾಜರ ಕುಟುಂಬ ಬಳಸುತ್ತಿದ್ದ ಕೆರೆ ಇದಾಗಿತ್ತು. ಇತ್ತೀಚೆಗೆ ಈ ಪ್ರದೇಶವನ್ನು ಸಾರ್ವಜನಿಕ ಪಿಕ್‌ನಿಕ್‌ ತಾಣ ಎಂದು ಪರಿಗಣಿಸಲಾಗಿದೆ. ರಾಣಿ ತಾಲ್ ಕೆರೆಯಲ್ಲಿ ಚೆಂದವಾಗಿ ಸಾಗುವ ಬಾತುಕೋಳಿಗಳು ಮತ್ತು ರಾಣಿ ತಾಲ್‌ ಉದ್ಯಾನವು ಇಲ್ಲಿನ ಮೆರುಗನ್ನು ಹೆಚ್ಚಿಸಿದೆ.

ಜೈತಕ್‌ ಕೋಟೆ

ಜೈತಕ್‌ ಕೋಟೆ

ಯುವಕರಿಗೆ ಮಾಲ್ ರಸ್ತೆಯು ಇನ್ನೊಂದು ಆಕರ್ಷಕ ತಾಣವಾಗಿದೆ. ನಹಾನ್‌ನಲ್ಲಿರುವ ಅತ್ಯಂತ ಪುರಾತನ ಕೋಟೆಗಳಲ್ಲಿ ಜೈತಕ್‌ ಕೂಡಾ ಒಂದು. ಇದನ್ನು ಗೂರ್ಖಾ ಮುಖ್ಯಸ್ಥ ರಂಜೋರ್ ಸಿಂಗ್‌ ಥಾಪಾ ಮತ್ತು ಆತನ ಬೆಂಬಲಿಗರು ನಿರ್ಮಿಸಿದ್ದರು. ನಹಾನ್‌ ಕೋಟೆಗೆ ದಾಳಿ ಮಾಡಿ ಜೈತಕ್‌ ಕೋಟೆಯನ್ನು ಜೈತಕ್‌ ಗುಡ್ಡದ ಮೇಲೆ ನಿರ್ಮಿಸಿದರು. ನಹಾನ್‌ ಕೋಟೆಯನ್ನು ನಾಶ ಮಾಡಿದ ಸಾಮಗ್ರಿಗಳಿಂದಲೇ ಹೊಸ ಕೋಟೆಯನ್ನು ಅವರು ಕಟ್ಟಿದರು. ಇನ್ನು ಜಗನ್ನಾಥ ದೇವಸ್ಥಾನ, ರೇಣುಕಾ ದೇವಸ್ಥಾನ ಮತ್ತು ತ್ರಿಲೋಕಪುರ ದೇವಸ್ಥಾನಗಳು ಇಲ್ಲಿನ ಪ್ರಮುಖ ಆಕರ್ಷಕ ತಾಣಗಳು. ರಂಜೋನ್‌ ಅರಮನೆ ಮತ್ತು ಪಕ್ಕಾ ತಲಾಬ್‌ಗಳು ನಹಾನ್‌ನ ಐತಿಹಾಸಿಕ ಮಹತ್ವವುಳ್ಳ ಸ್ಥಳಗಳು. ಚಾರಣ ಮತ್ತು ಪರ್ವತಾರೋಹಣಕ್ಕೆ ಸೂಕ್ತ ತಾಣಗಳೆಂದರೆ ಜಮು ಪೀಕ್‌ ಮತ್ತು ಚೂರಧಾರ್ ಪೀಕ್‌.

ತಲುಪುವುದು ಹೇಗೆ?

ಪ್ರವಾಸಿಗರು ನಹಾನ್‌ಗೆ ಹೋಗಲು ವಿಮಾನ, ರಸ್ತೆ ಮತ್ತು ರೈಲಿನ ಸಹಾಯ ಪಡೆಯಬಹುದು. ನಹಾನ್‌ಗೆ ವರ್ಷದ ಯಾವುದೇ ದಿನವೂ ಹೋಗಬಹುದು. ಬೇಸಿಗೆಗಾಲವು ಮಾರ್ಚ್‌ನಲ್ಲಿ ಆರಂಭವಾಗಿ ಜೂನ್‌ ತನಕ ಇರುತ್ತದೆ. ಮಾಗಿಕಾಲದಲ್ಲಿ ಚಾರಣ ಮತ್ತು ಸುತ್ತಲಿನ ಪ್ರದೇಶ ನೋಡಲು ಅತ್ಯುತ್ತಮ ವಾತಾವರಣವಿರುತ್ತದೆ. ಚಳಿಗಾಲ ವಿಪರೀತ ಶೀತ ಮತ್ತು ಮಂಜಿನಿಂದಾವೃತವಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X