Search
  • Follow NativePlanet
Share
» »ನಾಗರಪಂಚಮಿಯಂದು ಮಾತ್ರ ತೆರೆಯುತ್ತೆ ಈ ಮಂದಿರ, ದರ್ಶನ ಪಡೆದ್ರೆ ನಾಗದೋಷಗಳೆಲ್ಲಾ ಪರಿಹಾರ

ನಾಗರಪಂಚಮಿಯಂದು ಮಾತ್ರ ತೆರೆಯುತ್ತೆ ಈ ಮಂದಿರ, ದರ್ಶನ ಪಡೆದ್ರೆ ನಾಗದೋಷಗಳೆಲ್ಲಾ ಪರಿಹಾರ

ಭಾರತ ದೇಶದಲ್ಲಿ ನಾಗರಾಜನನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ನಾಗನಿಗೆ ಅದರದ್ದೇ ಆದ ಮಹತ್ವವಿದೆ. ಹಾಗಾಗಿ ದೇಶಾದ್ಯಂತ ನಾಗರಾಜನಿಗೆ ಅನೇಕ ಮಂದಿರಗಳಿವೆ. ನಾಗರ ಪಂಚಮಿಯಂದು ದೇಶಾದ್ಯಂತ ನಾಗರಾಜನ ದೇವಸ್ಥಾನಗಳಲ್ಲಿ ಭಕ್ತರು ತುಂಬಿರುತ್ತಾರೆ. ಇಂದು ನಾವು ಒಂದು ವಿಶೇಷ ನಾಗರಾಜನ ಮಂದಿರದ ಬಗ್ಗೆ ತಿಳಿಸಲಿದ್ದೇವೆ.

ನಾಗರ ಪಂಚಮಿ

ನಾಗರ ಪಂಚಮಿ

ಪ್ರತಿವರ್ಷ ನಾಗರಪಂಚಮಿಯಂದು ಎಲ್ಲಾ ನಾಗದೇವಿ, ನಾಗದೇವತೆಯನ್ನು ಪೂಜಿಸಲಾಗುತ್ತದೆ. ದೇಶದಲ್ಲಿ ಸಾಮಾನ್ಯವಾಗಿ ಎಲ್ಲಾ ನಾಗದೇವಸ್ಥಾನಗಳು ಯಾವಾಗಲೂ ತೆರೆದಿರುತ್ತದೆ. ಆದರೆ ಇಂದು ನಾವು ಕೇವಲ ವರ್ಷಕ್ಕೊಮ್ಮೆ ತೆರೆಯುವ ನಾಗದೇವಸ್ಥಾನವನ್ನು ತಿಳಿಸಲಿದ್ದೇವೆ. ಅದೂ ಕೂಡಾ ನಾಗರಪಂಚಮಿಯಂದು.

ನಾಗರಪಂಚಮಿಯಂದು ಯಾವೆಲ್ಲಾ ದೇವಸ್ಥಾನಕ್ಕೆ ಹೋದರೆ ಒಳ್ಳೆಯದು ನಾಗರಪಂಚಮಿಯಂದು ಯಾವೆಲ್ಲಾ ದೇವಸ್ಥಾನಕ್ಕೆ ಹೋದರೆ ಒಳ್ಳೆಯದು

ನಾಗಚಂದ್ರೇಶ್ವರ ಮಂದಿರ

ನಾಗಚಂದ್ರೇಶ್ವರ ಮಂದಿರ

ಈ ಬಾರಿ ನಾಗರಪಂಚಮಿ ಆಗಸ್ಟ್ 15ರಂದು ಬಂದಿದೆ. ಹಾಗಾಗಿ ನೀವೂ ಕೂಡಾ ಆ ದೇವಸ್ಥಾನದ ದರ್ಶನ ಪಡೆಯಬಹುದು. ಈ ವಿಶೇಷ ದೇವಸ್ಥಾನ ಇರುವುದು ಮಧ್ಯಪ್ರದೇಶದ ಧಾರ್ಮಿಕ ನಗರಿ ಎನ್ನಲಾಗುವ ಉಜ್ಜೈನಿಯಲ್ಲಿ. ಅದುವೇ ನಾಗಚಂದ್ರೇಶ್ವರ ಮಂದಿರ .

ವಿಶೇಷ ಪ್ರತಿಮೆ

ವಿಶೇಷ ಪ್ರತಿಮೆ

ಇದನ್ನು ಕೇವಲ ನಾಗರ ಪಂಚಮಿಯಂದು ಮಾತ್ರ ತೆರೆಯಲಾಗುತ್ತದೆ. 11ನೇ ಶತಮಾನದ ಒಂದು ವಿಶಿಷ್ಠ ಪ್ರತಿಮೆ ಇಲ್ಲಿದೆ. ಇದನ್ನು ನೇಪಾಳದಿಂದ ತಂದಿದ್ದುಎನ್ನಲಾಗುತ್ತದೆ. ಈ ಪ್ರತಿಮೆಯ ವಿಶೇಷತೆಯೆಂದರೆ ಇಲ್ಲಿ 10ಹೆಡೆಯ ನಾಗರಾಜನ ಮೇಲೆ ಶಿವ ಪಾರ್ವತಿಯರು ವಿರಾಜಮಾನರಾಗಿದ್ದಾರೆ.

ತಲೆ ತುಂಡಾದ ದೇವಿಯನ್ನು ಪೂಜಿಸುವ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?ತಲೆ ತುಂಡಾದ ದೇವಿಯನ್ನು ಪೂಜಿಸುವ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

 ದೋಷ ನಿವಾರಣೆಯಾಗುತ್ತದೆ

ದೋಷ ನಿವಾರಣೆಯಾಗುತ್ತದೆ

ವಿಷ್ಣುವಿನ ಬದಲು ಶಿವ ಸರ್ಪದ ಮೇಲೆ ವಿರಾಜಮಾನವಾಗಿರುವ ದೇಶದಲ್ಲೇ ಏಕೈಕ ಮಂದಿರ ಇದಾಗಿದೆ. ಈ ಮಂದಿರಕ್ಕೆ ಭೇಟಿ ನೀಡಿದರೆ ಯಾವುದೇ ದೋಷ ಕೂಡಾ ನಿವಾರಣೆಯಾಗುತ್ತಂತೆ. ನಾಗರಾಜನ ಮೇಲಿರುವ ಇರುವ ಶಿವನ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನಾಗರಪಂಚಮಿಯಂದು ಈ ದೇವಾಲಯಕ್ಕೆ ಆಗಮಿಸುತ್ತಾರೆ.

ವರ್ಷದಲ್ಲೇ ಒಮ್ಮೆ ಮಾತ್ರ ತೆರೆಯಲಾಗುವುದು

ವರ್ಷದಲ್ಲೇ ಒಮ್ಮೆ ಮಾತ್ರ ತೆರೆಯಲಾಗುವುದು

ಶ್ರಾವಣದ ಶುಕ್ಷ ಪಂಚಮಿಯಾದ ನಾಗರಪಂಚಮಿಯ ಮೊದಲ ದಿನ ರಾತ್ರಿ 12ಗಂಟೆಗೆ ಮಂದಿರವನ್ನು ತೆರೆಯಲಾಗುತ್ತದೆ. ನಾಗರ ಪಂಚಮಿಯಂದು ರಾತ್ರಿ 12ಗಂಟೆಗೆ ಪೂಜೆ ಮಾಡಿ ಮತ್ತೆ ಆ ಮಂದಿರವನ್ನು ಮುಚ್ಚಲಾಗುತ್ತದೆ. ಈ ದಿನ ನಾಗರಾಜ ತಕ್ಷಕ್ ಸ್ವತಃ ದೇವಸ್ಥಾನದಲ್ಲಿ ಆಸೀನರಾಗಿರುತ್ತಾರೆ ಎನ್ನಲಾಗುತ್ತದೆ.

ಪುರಾತನ ದೇವಾಲಯ

ಪುರಾತನ ದೇವಾಲಯ

ಇದೊಂದು ಪುರಾತನ ದೇವಾಲಯವಾಗಿದ್ದು ಇದನ್ನು 1050 ವರ್ಷಗಳ ಹಿಂದೆ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಪ್ರತಿವರ್ಷ ನಾಗರ ಪಂಚಮಿಯಂದು ಸುಮಾರು 2ಲಕ್ಷ ಜನರು ಇಲ್ಲಿಗೆ ಆಗಮಿಸುತ್ತಾರಂತೆ. ನಾಗನ ದರ್ಶನಕ್ಕಾಗಿ ಪಂಚಮಿಯ ಒಂದು ದಿನ ಮೊದಲ ರಾತ್ರಿಯೇ ಜನರು ಇಲ್ಲಿಗೆ ಆಗಮಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X