Search
  • Follow NativePlanet
Share
» »ಅರ್ಜುನ ದ್ರೋಣಾಚಾರ್ಯರಿಗೆ ಅರ್ಪಿಸಿದ ತಾಣ ಇಲ್ಲಿದೆ

ಅರ್ಜುನ ದ್ರೋಣಾಚಾರ್ಯರಿಗೆ ಅರ್ಪಿಸಿದ ತಾಣ ಇಲ್ಲಿದೆ

ರಾಜಸ್ಥಾನದಲ್ಲಿರುವ ನಗೌರ್ ಒಂದು ಐತಿಹಾಸಿಕ ನಗರವಾಗಿದೆ. ಈ ನಗರವು ನಾಗಾ ಕ್ಷತ್ರೀಯರಿಂದ ಸ್ಥಾಪಿತವಾಗಿದೆ. ನಗೌರ್ ಜಿಲ್ಲೆಯ ಜಿಲ್ಲಾಡಳಿತ ಪ್ರದೇಶವಾಗಿರುವ ಇದು ಜನಪ್ರಿಯ ಪ್ರವಾಸಿ ತಾಣಗಳಾದ ಬಿಕಾನೇರ್ ಮತ್ತು ಜೋಧಪುರ್ ಮಧ್ಯದಲ್ಲಿ ನೆಲೆಸಿದೆ. ಪುರಾಣ ಮತ್ತು ಇತಿಹಾಸದಲ್ಲಿ ನಗೌರ್ ನ ಪಾತ್ರ ಈ ಪ್ರದೇಶದ ಇತಿಹಾಸವು ನಮ್ಮನ್ನು ಮಹಾಭಾರತದ ಕಾಲಕ್ಕೆ ಕರೆದೊಯ್ಯುತ್ತದೆ. ಅಹಿಛಾತ್ರಪುರ ರಾಜ್ಯವು, ಪ್ರಸ್ತುತ ನಗೌರ್ ಜಿಲ್ಲೆಯ ಕೆಲಭಾಗಗಳನ್ನು ಆವರಿಸಿತ್ತು ಎನ್ನಲಾಗಿದೆ. ಪುರಾಣಗಳ ಪ್ರಕಾರ, ಅರ್ಜುನನು ಅಹಿಛಾತ್ರಪುರವನ್ನು ವಶಪಡಿಸಿಕೊಂಡು, ತನ್ನ ಗುರುವಾದ ದ್ರೋಣಾಚಾರ್ಯರಿಗೆ ಅರ್ಪಿಸಿದ್ದನು ಎನ್ನಲಾಗಿದೆ.

 ನಗೌರ್ ಕೋಟೆ

ನಗೌರ್ ಕೋಟೆ

PC: Rituraj.bharti

ಮರುಳಿನ ಕೋಟೆಯಾದ, ನಗೌರ್ ಕೋಟೆಯು ಪ್ರಸಿದ್ಧವಾದ ತಾಣವಾಗಿದೆ. ನಾಗವಂಶಿಗಳಿಂದ ಎರಡನೇ ಶತಮಾನದಲ್ಲಿ ಇದು ನಿರ್ಮಿಸಲ್ಪಟ್ಟಿದೆ. ಈ ಕೋಟೆಯಲ್ಲಿ ಸುಂದರವಾದ ಉದ್ಯಾನಗಳು, ಅರಮನೆಗಳು, ಕಾರಂಜಿಗಳು ಮತ್ತು ದೇವಸ್ಥಾನಗಳನ್ನು ನೋಡಬಹುದಾಗಿದೆ. ಕೋಟೆಯನ್ನು ಹೊರತುಪಡಿಸಿ ಇಲ್ಲಿರುವ ತರ್ಕೀನ್ ದರ್ಗಾವು ಕೂಡ ಪ್ರೇಕ್ಷಣೀಯ ಸ್ಥಳವಾಗಿದೆ. ಮುಸ್ಲಿಮ್ ಬಾಂಧವರಿಗೆ ಈ ದರ್ಗಾವು ಅತ್ಯಂತ ಪವಿತ್ರ ಧಾರ್ಮಿಕ ಸ್ಥಳವಾಗಿದೆ. ಪ್ರವಾಸಿಗರು, ನಗರದ ಕಮ್ಲಾ ಟಾವರ್ ಹಿಂಬದಿಯಲ್ಲಿರುವ ಜೈನ ಗಾಜಿನ ದೇವಸ್ಥಾನವನ್ನು ನೋಡಬಹುದು. ಇದೊಂದು ಅನನ್ಯವಾಗಿರುವ ರಚನೆಯಾಗಿದ್ದು ಸಂಪೂರ್ಣವಾಗಿ ಗಾಜಿನಿಂದ ಮಾಡಲ್ಪಟ್ಟಿದೆ. ಒಳಾಂಗಣವನ್ನು ಅದ್ಭುತವಾಗಿ ಗಾಜಿನಿಂದ ವಿನ್ಯಾಸಗೊಳಿಸಲಾಗಿದ್ದು, ಈ ದೇವಸ್ಥಾನದ ಒಟ್ಟಾರೆ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. 24 ಜೈನ ತೀರ್ಥಂಕರರ ರಚನೆಯನ್ನು ಈ ದೇವಸ್ಥಾನದಲ್ಲಿ ಕಾಣಬಹುದಾಗಿದೆ.

ಜೈನ ಗಾಜಿನ ದೇವಸ್ಥಾನ

ಜೈನ ಗಾಜಿನ ದೇವಸ್ಥಾನ

ನಗರದ ಕಮ್ಲಾ ಟಾವರ್ ಹಿಂಬದಿಯಲ್ಲಿರುವ ಜೈನ ಗಾಜಿನ ದೇವಸ್ಥಾನವನ್ನು ನೋಡಬಹುದು. ಇದೊಂದು ಅನನ್ಯವಾಗಿರುವ ರಚನೆಯಾಗಿದ್ದು ಸಂಪೂರ್ಣವಾಗಿ ಗಾಜಿನಿಂದ ಮಾಡಲ್ಪಟ್ಟಿದೆ. ಒಳಾಂಗಣವನ್ನು ಅದ್ಭುತವಾಗಿ ಗಾಜಿನಿಂದ ವಿನ್ಯಾಸಗೊಳಿಸಲಾಗಿದ್ದು, ಈ ದೇವಸ್ಥಾನದ ಒಟ್ಟಾರೆ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. 24 ಜೈನ ತೀರ್ಥಂಕರರ ರಚನೆಯನ್ನು ಈ ದೇವಸ್ಥಾನದಲ್ಲಿ ಕಾಣಬಹುದಾಗಿದೆ.

ಇತರ ಪ್ರವಾಸಿ ತಾಣಗಳು

ಇತರ ಪ್ರವಾಸಿ ತಾಣಗಳು

PC: Premsukhdidel

ಇಲ್ಲಿರುವ ಮತ್ತೊಂದು ಸುಪ್ರಸಿದ್ಧ ತಾಣವೆಂದರೆ, ಸಾಯಿಜಿ ಕಾ ಟಂಕಾ. ನಗೌರ್ ತನ್ನಲ್ಲಿರುವ, ಹದಿ ರಾನಿ ಮಹಲ್, ದೀಪಕ್ ಮಹಲ್, ಅಕ್ಬರಿ ಮಹಲ್ ಮತ್ತು ರಾನಿ ಮಹಲ್ ಗಳಂತಹ ಅರಮನೆಗಳಿಂದಲೂ ಸಹ ಪ್ರಸಿದ್ಧವಾಗಿದೆ. ಈ ಅರಮನೆಗಳು ತಮ್ಮ ವಾಸ್ತುಶಿಲ್ಪ ಹಾಗು ಸುಂದರ ವಿನ್ಯಾಸಗಳಿಂದಾಗಿ ಹೆಸರುವಾಸಿಯಾಗಿವೆ. ಪ್ರವಾಸಿಗರು ನಗೌರ್ ನಲ್ಲಿ ಅಮರ್ ಸಿಂಗ್ ರಾಥೋರ್ ಸ್ಮಾರಕ, ಬನ್ಸಿವಾಲಾ ದೇವಸ್ಥಾನ, ನಾಥ್ ಜಿ ಕಿ ಛತ್ರಿ ಮತ್ತು ಬರ್ಲಿ ಗೂ ಕೂಡ ಭೇಟಿ ನೀಡಬಹುದಾಗಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Jaisingh rathore

ಹವಾಮಾನ ಅತ್ಯಲ್ಪ ಪ್ರಮಾಣದ ಮಳೆಯ ಪರಿಣಾಮವಾಗಿ, ನಗೌರ್ ನ ವಾತಾವರಣವು ವರ್ಷಪೂರ್ತಿ ಒಣ ಹಾಗು ಉಷ್ಣಮಯವಾಗಿರುತ್ತದೆ. ಬೇಸಿಗೆ, ಮಳೆಗಾಲ ಮತ್ತು ಚಳಿಗಾಲ ಮೂರು ಮುಖ್ಯ ಋತುಗಳಾಗಿವೆ. ಅಕ್ಟೋಬರ್ ಮತ್ತು ನವಂಬರ್ ಮಧ್ಯದ ಅವಧಿಯು ಸಾಧಾರಣವಾಗಿ ಹಿತಕರವಾಗಿರುವುದರಿಂದ ಭೇಟಿ ನೀಡಲು ಉತ್ತಮ ಸಮಯವಾಗಿದೆ..

ನಗೌರ್ ತಲುಪುವುದು ಹೇಗೆ?

ನಗೌರ್ ತಲುಪುವುದು ಹೇಗೆ?

PC: Rituraj.bharti

ನಗೌರ್ ನಗರಿಯು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಸಂಪರ್ಕವನ್ನು ಹೊಂದಿದೆ. ಇದಕ್ಕೆ ಹತ್ತಿರದ ವಾಯು ನಿಲ್ದಾಣವು ಜೋಧಪುರ್ ನಲ್ಲಿದೆ. ಅಂತಾರಾಷ್ಟ್ರೀಯ ಪ್ರವಾಸಿಗರು ಈ ಪ್ರದೇಶವನ್ನು, ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಮೂಲಕ ತಲುಪಬಹುದಾಗಿದೆ. ಈ ಪ್ರಮುಖ ಸ್ಥಳಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ರೈಲಿನ ಮುಖಾಂತರವೂ ನಗೌರ್ ಅನ್ನು ತಲುಪಬಹುದಾಗಿದೆ. ನಗೌರ್ ರೈಲು ನಿಲ್ದಾಣವು ಜೈಪುರ್, ಜೋಧಪುರ್, ಬಿಕಾನೇರ್ ಮತ್ತು ದೆಹಲಿಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇನ್ನು ರಸ್ತೆಯ ಮುಖಾಂತರ ಅಜ್ಮೇರ್, ಜೈಪುರ್, ಜೋಧಪುರ್, ಬಿಕಾನೇರ್ ಮತ್ತು ದೆಹಲಿಗಳಿಂದ ನಗೌರ್ ಗೆ ಬಸ್ಸುಗಳು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more