Search
  • Follow NativePlanet
Share
» »ತಿರುಪತಿ ಬಳಿ ಇರುವ ನಾಗಾಲಾಪುರಂಗೆ 2 ದಿನ ಟ್ರೆಕ್ಕಿಂಗ್ ಕೈಗೊಳ್ಳಿ

ತಿರುಪತಿ ಬಳಿ ಇರುವ ನಾಗಾಲಾಪುರಂಗೆ 2 ದಿನ ಟ್ರೆಕ್ಕಿಂಗ್ ಕೈಗೊಳ್ಳಿ

ಚೆನ್ನೈ ಮತ್ತು ಸುತ್ತಮುತ್ತಲಿನ ಅತ್ಯಂತ ಜನಪ್ರಿಯ ಚಾರಣಗಳಲ್ಲಿ ನಾಗಾಲಾಪುರಂ ಟ್ರೆಕ್ ಕೂಡ ಒಂದು. ಚೆನ್ನೈನಿಂದ ಗಮ್ಯಸ್ಥಾನವನ್ನು ತಲುಪಲು ಸರಿಸುಮಾರು 3 ಗಂಟೆಗಳು ತೆಗೆದುಕೊಳ್ಳುತ್ತದೆ. ಸಾಮಾನ್ಯವಾಗಿ ಇದು 2 ದಿನದ ಚಾರಣವಾಗಿದೆ.

ಎಲ್ಲಿದೆ ನಾಗಲಪುರ ?

ಎಲ್ಲಿದೆ ನಾಗಲಪುರ ?

PC: Shanmugamp7

ನಾಗಾಲಾಪುರ ಪಟ್ಟಣದಿಂದ 16 ಕಿ.ಮೀ ದೂರದಲ್ಲಿ ಪುತ್ತೂರಿನಿಂದ 44 ಕಿ.ಮೀ, ಚೆನ್ನೈನಿಂದ 87 ಕಿ.ಮೀ, ತಿರುಪತಿಯಿಂದ 78 ಕಿ.ಮೀ, ಚಿತ್ತೂರಿನಿಂದ 107 ಕಿ.ಮೀ, ವೆಲ್ಲೂರಿನಿಂದ 130 ಕಿ.ಮೀ, ಕಣಿಪಾಕದಿಂದ 120 ಕಿ.ಮೀ ಮತ್ತು ಬೆಂಗಳೂರಿನಿಂದ 288 ಕಿ.ಮೀ, ನಾಗಾಲಾಪುರಂ ಒಂದು ಸಣ್ಣ ಐತಿಹಾಸಿಕ ತಾಣವಾಗಿದ್ದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿದೆ.

ವಾರಾಂತ್ಯದ ರಜಾ ತಾಣ

ವಾರಾಂತ್ಯದ ರಜಾ ತಾಣ

PC: Shmilyshy
ಶ್ರೀ ವೇದಾನಾರಾಯಣ ಸ್ವಾಮಿ ದೇವಸ್ಥಾನ ಮತ್ತು ನಾಗಲಪುರಂ ಟ್ರೆಕ್ಕಿಂಗ್‌ಗೆ ಹೆಸರುವಾಸಿಯಾಗಿದೆ. ಇದನ್ನು ಸಡ್ಡಿ ಕೊಡು ಮ್ಯಾಗುಗು ಎಂದೂ ಕರೆಯಲಾಗುತ್ತದೆ. ಇದು ಚೆನ್ನೈ ಸಮೀಪ ಚಾರಣಕ್ಕಾಗಿ ಜನಪ್ರಿಯ ತಾಣಗಳಲ್ಲಿ ಒಂದಾಗಿದೆ. ಚೆನ್ನೈನ ಸುತ್ತಲೂ ಎರಡು ವಾರದ ಪ್ರವಾಸಕ್ಕೆ ಸೂಕ್ತವಾದ ವಾರಾಂತ್ಯದ ರಜಾ ತಾಣವೂ ಇದಾಗಿದೆ.

ವೇದಾನಾರಾಯಣ ದೇವಸ್ಥಾನ

ವೇದಾನಾರಾಯಣ ದೇವಸ್ಥಾನ

PC: Bhaskaranaidu
ಶ್ರೀ ವೇದನಾರಾಯಣ ದೇವಸ್ಥಾನವು ವಿಷ್ಣುವಿಗೆ ಸಮರ್ಪಿತವಾದ ಭವ್ಯ ದೇವಾಲಯವಾಗಿದ್ದು, ವಿಜಯನಗರ ಸಾಮ್ರಾಜ್ಯದ ಕೃಷ್ಣ ದೇವಾರಾಯನು ತನ್ನ ತಾಯಿ ನಾಗಾಲಾ ದೇವಿಯ ನೆನಪಿಗಾಗಿ ಇದನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ದೇವಾಲಯವು ವಿಜಯನಗರ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ. ಇಲ್ಲಿನ ಮುಖ್ಯ ದೇವರ ವಿಗ್ರಹವು ಪಶ್ಚಿಮಾಭಿಮುಖವಾಗಿದೆ. ಈ ಪವಿತ್ರ ಸ್ಥಳದಲ್ಲಿ ವೇದನಾರಾಯಣ ಸ್ವಾಮಿಯ ಪತ್ನಿಯರಾದ ಶ್ರೀದೇವಿ ಮತ್ತು ಭೂದೇವಿಯನ್ನು ಎರಡೂ ಕಡೆ ಇಡಲಾಗಿದೆ. ವಿಷ್ಣು ಮತ್ಸ್ಯಅವತಾರದಲ್ಲಿದ್ದಾನೆ.

ನಾಗಾಲಾಪುರ ಜಲಪಾತ

ನಾಗಾಲಾಪುರ ಜಲಪಾತ

PC: Facebook
ನಾಗಾಲಪುರ ಜಲಪಾತವು ಚೆನ್ನೈನಿಂದ ಸುಂದರವಾದ ಒಂದು ದಿನದ ಟ್ರೆಕ್ ಅನ್ನು ಒದಗಿಸುತ್ತದೆ. ಇದು ಜಲಪಾತಗಳ ಸುಂದರ ನೋಟವನ್ನು ನೀಡುವುದರ ಜೊತೆಗೆ, ಪ್ರಾರಂಭಿಕರಿಗೆ ಸುಲಭವಾದ ಚಾರಣ ಮಾರ್ಗಗಳನ್ನು ಹೊಂದಿದೆ. ಅನುಭವಿ ಚಾರಣಿಗರಿಗೆ ಕೆಲವು ಕಡಿದಾದ ಚಾರಣ ಮಾರ್ಗಗಳೂ ಇವೆ. ಈ ನೈಸರ್ಗಿಕ ಅರಣ್ಯವು ಅಂತಿಮ ಅನುಭವಕ್ಕಾಗಿ ಪರಿಪೂರ್ಣ ಮಿಶ್ರಣವನ್ನು ನೀಡುತ್ತದೆ.

ಟ್ರೆಕ್ಕಿಂಗ್ ಮಾರ್ಗ

ಟ್ರೆಕ್ಕಿಂಗ್ ಮಾರ್ಗ

PC: Chordic
12 ಕಿಮೀ ಉದ್ದದ ಟ್ರೆಕ್ಕಿಂಗ್ ಮಾರ್ಗವು ಸಾಮಾನ್ಯವಾಗಿ ಪೂರ್ಣ ದಿನದ ಚಟುವಟಿಕೆಯಾಗಿದೆ. ಕೆಲವು ಜನರು ರಾತ್ರಿ ಹೊತ್ತಿನಲ್ಲಿ ಶಿಬಿರದಲ್ಲಿರು ತಂಗುತ್ತಾರೆ. ಜಲಪಾತಕ್ಕೆ ಒಂದು ಮಾರ್ಗವಾಗಿ ಸಾಮಾನ್ಯವಾಗಿ 2 ರಿಂದ 2.5 ಗಂಟೆಗಳವರೆಗೆ ಮಣ್ಣಿನ ಮಾರ್ಗ ಮತ್ತು ಜಾರು ಮಾರ್ಗವನ್ನು ತೆಗೆದುಕೊಳ್ಳುತ್ತದೆ. ಹಾದಿಯಲ್ಲಿರುವ ದಟ್ಟವಾದ ಮರಗಿಡಗಳು ನೈಸರ್ಗಿಕ ನೆರಳನ್ನು ಒದಗಿಸುತ್ತದೆ, ಇಲ್ಲವಾದಲ್ಲಿ ಬಿಸಿಲಿನ ಸಮಯದಲ್ಲಿ ಇಲ್ಲಿ ಚಾರಣ ಮಾಡುವುದು ಕಷ್ಟ.

ನೀರಿನ ಕೊಳಗಳು

ನೀರಿನ ಕೊಳಗಳು

PC: Shanmugamp7
ಹಲವಾರು ನೀರಿನ ಕೊಳಗಳು ಜಲಪಾತದ ಮಧ್ಯದಲ್ಲಿದೆ. ಅವುಗಳು ಸಣ್ಣ ವಿರಾಮಕ್ಕಾಗಿ ಉತ್ತಮ ತಾಣಗಳಾಗಿವೆ. ಮುಖ್ಯ ಜಲಪಾತ ಸ್ಫಟಿಕ ಸ್ಪಷ್ಟ ನೀರಿನೊಂದಿಗೆ ಕೆಳಭಾಗದಲ್ಲಿ ಒಂದು ದೊಡ್ಡ ಕೊಳವನ್ನು ಹೊಂದಿದೆ. ಈ ಕೊಳವು ಸುಮಾರು 40 ಅಡಿ ಆಳದಲ್ಲಿದೆ ಎಂದು ನಂಬಲಾಗಿದೆ. ಇಲ್ಲಿ ಈಜಾಡುವಾಗ ಮಾತ್ರ ಜಾಗರೂಕತೆಯಿಂದ ಇರಬೇಕು.

 ಕೋನೆ ಅಣೆಕಟ್ಟು

ಕೋನೆ ಅಣೆಕಟ್ಟು

PC: Shanmugamp7
ಕೋನೆ ಅಣೆಕಟ್ಟು ನಾಗಾಲಾಪುರ ಜಲಪಾತದಿಂದ 6 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಟ್ರೆಕ್ಕಿಂಗ್ ಆರಂಭವಾಗುತ್ತದೆ. ಇದು ಕಡಿವೇಡು ಎಂಬ ಹಳ್ಳಿಯಿಂದ 2 ಕಿ.ಮೀ ದೂರದಲ್ಲಿದೆ. ತಿರುಪತಿಯಿಂದ 72 ಕಿ.ಮೀ ಮತ್ತು ನಾಗಾಪುರಂ ಪಟ್ಟಣದಿಂದ 10 ಕಿ.ಮೀ ದೂರದಲ್ಲಿದೆ.

 ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Ravi S. Ghosh
ಚೆನ್ನೈನಿಂದ ನಾಗಾಲಪುರಕ್ಕೆ ರೈಲಿನ ಮೂಲಕ 2 ಗಂಟೆಗಳೊಳಗೆ ತಲುಪಬಹುದು. ಹತ್ತಿರದ ರೈಲು ನಿಲ್ದಾಣ ವೆಪಗುಂಟ. ನಾಗಾಲಪುರವು ತಿರುಪತಿ ವಿಮಾನ ನಿಲ್ದಾಣದಿಂದ ಸುಮಾರು 23 ಕಿ.ಮೀ ದೂರದಲ್ಲಿದೆ. ಚೆನ್ನೈನಿಂದ ನಾಗಾಲಪುರಕ್ಕೆ ರಸ್ತೆ ಮಾರ್ಗವಾಗಿ ಪ್ರಯಾಣಿಸಲು ನೀವು ಬಯಸಿದರೆ, ಚೆನ್ನೈನಿಂದ ನಾಗಲಾಪುರಂಗೆ ಟ್ಯಾಕ್ಸಿಗಳು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X