Search
  • Follow NativePlanet
Share
» »ಹಿಮಾಚಲ ಪ್ರದೇಶದ ನಾದೌನ್‌‌ನ ಸುತ್ತಮುತ್ತಲಿನ ತಾಣಗಳತ್ತ ಕಣ್ಣಾಯಿಸಿ

ಹಿಮಾಚಲ ಪ್ರದೇಶದ ನಾದೌನ್‌‌ನ ಸುತ್ತಮುತ್ತಲಿನ ತಾಣಗಳತ್ತ ಕಣ್ಣಾಯಿಸಿ

ನಾದೌನ್‌‌ ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಬಿಯಸ್‌ ನದಿ ದಡದಲ್ಲಿರುವ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 508 ಮೀಟರ್‌ ಎತ್ತರದಲ್ಲಿರುವ ಈ ಪ್ರದೇಶವು ತನ್ನ ಸುತ್ತಲೂ ನಯನ ಮನೋಹರ ತಾಣಗಳನ್ನು ಹೊಂದಿದೆ.

ನಾದೌನ್‌ ಸುತ್ತಮುತ್ತಲಿನ ಪ್ರದೇಶಗಳು

ನಾದೌನ್‌ ಸುತ್ತಮುತ್ತಲಿನ ಪ್ರದೇಶಗಳು

PC:Satyamrai7777
ಐತಿಹಾಸಿಕ ದಾಖಲೆಗಳ ಪ್ರಕಾರ, ನಾದೌನ್‌, ನಾದೌನ್‌ ಜಾಗೀರಿನ ಕೇಂದ್ರಸ್ಥಾನವಾಗಿತ್ತು ಮತ್ತು ಕಾಂಗ್ರಾದ ಮಹಾರಾಜ ಸಂಸಾರ್‌ ಚಾಂದ್‌ರ ಆಡಳಿತಕ್ಕೆ ಒಳಪಟ್ಟಿತ್ತು. ಈ ಪ್ರದೇಶದ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿವೆ. ಶ್ರೀ ಗುರುದ್ವಾರ ಸಾಹಿಬ್‌, ಬಿಲ್‌-ಕಾಲೇಶ್ವರ ದೇವಸ್ಥಾನ ಮತ್ತು ಅಮ್ತರ್‌-ನಾದೌನ್‌ ಕೋಟೆ.

ಶ್ರೀ ಗುರುದ್ವಾರ ಸಾಹಿಬ್‌

ಶ್ರೀ ಗುರುದ್ವಾರ ಸಾಹಿಬ್‌

PC:Tari Buttar
ಬಿಯಸ್‌ ನದಿ ತೀರದಲ್ಲಿರುವ ಶ್ರೀ ಗುರುದ್ವಾರ ಸಾಹಿಬ್‌ ಸಿಖ್‌ ಧಾರ್ಮಿಕ ಕೇಂದ್ರವಾಗಿದ್ದು, ನಾದೌನ್‌ಗೆ ಭೇಟಿ ನೀಡುವ ಪ್ರವಾಸಿಗರು ಬಿಲ್‌-ಕಾಲೇಶ್ವರ ದೇವಸ್ಥಾನಕ್ಕೆ ಒಮ್ಮೆ ಹೋಗಲೇಬೇಕು. ಐತಿಹ್ಯಗಳ ಪ್ರಕಾರ, ಈ ದೇವಸ್ಥಾನವು ಪಾಂಡವರಿಂದ ನಿರ್ಮಾಣವಾಗಿದ್ದು. ಶಿವನಿಗೆ ಈ ದೇವಸ್ಥಾನವನ್ನು ಅರ್ಪಿಸಲಾಗಿದೆ. ಪ್ರತಿವರ್ಷ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಅಮ್ತರ್‌-ನಾದೌನ್‌ ಕೋಟೆ

ಅಮ್ತರ್‌-ನಾದೌನ್‌ ಕೋಟೆ

PC: Ashishverma.pu
ಅಮ್ತರ್‌-ನಾದೌನ್‌ ಕೋಟೆಯು ಪ್ರಮುಖ ಪ್ರವಾಸಿ ತಾಣವಾಗಿದ್ದು ನಾದೌನ್‌ನ ಗುಡ್ಡ ಪ್ರದೇಶವಾಗಿದೆ. ಈ ಕೋಟೆಯು ಇಂದಿಗೂ ಕೆಲವು ಹಳೆಯ ಪೇಂಟಿಂಗ್‌ ಅನ್ನು ಹೊಂದಿದೆ. ಅಮ್ತರ್‌-ನಾದೌನ್‌ ಕೋಟೆಯಲ್ಲಿ ಕಟೋಚ್‌ ರಾಜಮನೆತನದ ರಾಜನಾಗಿದ್ದ ಮಹಾರಾಜ ಸಂಸಾರ್‌ ಚಂದ್‌ರ ಕಾಲದ ಪೇಂಟಿಂಗ್‌ಗಳನ್ನು ನೋಡಬಹುದು. ಇದು ಕಟೋಚ್‌ ರಾಜಮನೆತನದ ರಾಜನಾಗಿದ್ದ ಮಹಾರಾಜ ಸಂಸಾರ್‌ ಚಂದ್‌ರ ಇತಿಹಾಸವನ್ನು ಸಾರುತ್ತದೆ. ಕೋಟೆಯು ಅಳಿವಿನಂಚಿಗೆ ಸಾಗುತ್ತಿದ್ದರೂ ದೇಶದ ವಿವಿಧೆಡೆಯಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಪೀರ್‌-ಸಾಹೇಬ್‌ ಸಮಾಧಿ‌

ಪೀರ್‌-ಸಾಹೇಬ್‌ ಸಮಾಧಿ‌

PC:Tari Buttar
ನಾದೌನ್‌ನಲ್ಲಿನ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು ಭರ್ಮೊತಿ ಹಳ್ಳಿಯಲ್ಲಿರುವ ಪೀರ್‌-ಸಾಹೇಬ್‌ ಸಮಾಧಿ‌. ಇತಿಹಾಸದ ಪ್ರಕಾರ, ಇಲ್ಲಿನ ಜನಪ್ರಿಯ ಸಂತರಾದ ಸೈ ಫಜಲ್‌ ಶಾಹ್‌ ಅವರು ತಮ್ಮ ಹಲವು ಪವಾಡಗಳಿಂದಾಗಿ ಜನಪ್ರಿಯರಾಗಿದ್ದರು. ಈ ಸ್ಮಾರಕವನ್ನು ಅವರ ನೆನಪಿಗಾಗಿ ಕಟೋಚ್‌ ರಾಜ ಸಂಸಾರ್‌ ಚಂದ್‌ ನಿರ್ಮಿಸಿದ್ದ. ಈ ರಾಜನೂ ಕೂಡಾ ಸಂತರ ಪವಾಡಗಳಿಗೆ ಮರುಳಾಗಿದ್ದ. ಹಿಂದೂ ಕ್ಯಾಲೆಂಡರಿನ ಪ್ರಕಾರ ಮಾಘ ಮಾಸದಂದು ಅಥವಾ ಫೆಬ್ರುವರಿ 2 ರಂದು ಅವರ ನೆನಪಿಗಾಗಿ ಬೃಹತ್‌ ಪ್ರಮಾಣದ ಭಂಡಾರವನ್ನು ತೆರೆಯಲಾಗುತ್ತದೆ ಅಂದರೆ ಊಟವನ್ನು ನೀಡಲಾಗುತ್ತದೆ. ಈ ಅವಧಿಯಲ್ಲಿ ಕುಸ್ತಿಯೂ ಕೂಡಾ ನಡೆಯುತ್ತದೆ.

 ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC:Biswarup Ganguly

ಶಕ್ತಿಪೀಠಗಳಲ್ಲಿ ಒಂದಾದ ಜ್ವಾಲಾಜಿ ದೇವಸ್ಥಾನವು ನಾದೌನ್‌ಗೆ ಹತ್ತಿರದಲ್ಲಿದೆ . ಇಲ್ಲಿಗೆ ಭೇಟಿ ನೀಡಬಹುದು. ಈ ಸ್ಥಳವು ಬಿಯಾಸ್ ನದಿಯ ಸಮೀಪದಲ್ಲಿ ಹರಿಯುತ್ತಿರುವ ಮಹಾಸೇರ್ ಮೀನುಗಾರಿಕೆಯ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುತ್ತದೆ. ಇನ್ನೊಂದು ಆಕರ್ಷಣೆಯೆಂದರೆ ಈ ಸ್ಥಳದಿಂದ ದೆಹ್ರಾ ವರೆಗೆ ರಾಫ್ಟಿಂಗ್ ಮತ್ತು ಗಾಳ ಹಾಕಿ ಮೀನು ಹಿಡಿಯುವವರಿಗೆ ಸುಂದರ ಕ್ಯಾಂಪಿಂಗ್ ತಾಣಗಳಿವೆ.

ಯಾವಾಗ ಭೇಟಿ ಸೂಕ್ತ

ಯಾವಾಗ ಭೇಟಿ ಸೂಕ್ತ

PC:Ashish3724
ಪ್ರವಾಸಿಗರು ಬೇಸಿಗೆಯ ಸಮಯದಲ್ಲಿ ನಾದೌನ್ ಗೆ ಭೇಟಿ ನೀಡಬಹುದು. ಇದು ಮೇ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ ಮತ್ತು ಜುಲೈ ವರೆಗೂ ಇರುತ್ತದೆ. ಹವಾಮಾನವು ಆಹ್ಲಾದಕರವಾಗಿ ಉಳಿಯುತ್ತದೆ ಎಂದು ಚಳಿಗಾಲವು ಈ ಸ್ಥಳಕ್ಕೆ ಭೇಟಿ ನೀಡಲು ಅನುಕೂಲಕರವಾಗಿರುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Karl and Ali
ನಾದೌನ್‌ಗೆ ಸಾಕಷ್ಟು ಬಸ್ಸುಗಳ ಸೌಲಭ್ಯವಿದೆ. ಖಾಸಗಿ ಮತ್ತು ಸರ್ಕಾರಿ ಬಸ್‌ ಸೇವೆಯು ಶಿಮ್ಲಾ, ಚಂಡೀಗಢದಿಂದ ಹೋಶಿಯಾರ್‌ಪುರದ ರಾಷ್ಟ್ರೀಯ ಹೆದ್ದಾರಿ 88 ಮತ್ತು 70 ರ ಮೂಲಕ ಲಭ್ಯವಿದೆ. ನಾದೌನ್‌ನಲ್ಲಿ ಸಾಕಷ್ಟು ಟ್ಯಾಕ್ಸಿಗಳು ಲಭ್ಯವಿದ್ದು, ಸುತ್ತಲಿನ ಪ್ರದೇಶವನ್ನು ಸುತ್ತಲು ಅನುಕೂಲಕರವಾಗಿದೆ

ನಾದೌನ್‌ನಿಂದ 25 ಕಿ.ಮೀ ದೂರದಲ್ಲಿರುವ ಜ್ವಾಲಾಮುಖಿ ರೈಲ್ವೆ ಸ್ಟೇಷನ್‌ ಪ್ರಮುಖ ರೈಲು ನಿಲ್ದಾಣ.. ಇನ್ನೊಂದು ರೈಲು ನಿಲ್ದಾಣವೆಂದರೆ ನಾದೌನ್‌ನಿಂದ 44 ಕಿ.ಮೀ ದೂರದಲ್ಲಿರುವ ಕಾಂಗ್ರಾ ರೈಲ್ವೆ ನಿಲ್ದಾಣ. ಈ ರೈಲು ನಿಲ್ದಾಣಗಳಿಂದ ನಾದೌನ್‌ಗೆ ಟ್ಯಾಕ್ಸಿ ಅಥವಾ ಬಸ್‌ಗಳ ಮೂಲಕ ಪ್ರಯಾಣಿಸಬಹುದು.

ಗಗ್ಗಲ್‌ ವಿಮಾನ ನಿಲ್ದಾಣವು ನಾದೌನ್‌ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಅತ್ಯಂತ ಸಮೀಪದ ವಿಮಾನ ನಿಲ್ದಾಣ. ಭಾರತದ ಪ್ರಮುಖ ನಗರಗಳಾದ ಚಂಡೀಗಢ, ದೆಹಲಿ ಮತ್ತು ಕುಲುವಿನಿಂದ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ಅಥವಾ ಕ್ಯಾಬ್‌ಗಳನ್ನು ಪಡೆದು ನಾದೌನ್‌ಗೆ ವಿಮಾನ ನಿಲ್ದಾಣದಿಂದ ಪ್ರಯಾಣಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X