Search
  • Follow NativePlanet
Share
» »ರಹಸ್ಯಮಯ ಗುಹೆ; ಒಳಗೆ ಹೋದವರು ವಾಪಾಸ್ ಬರೋದೇ ಇಲ್ಲ

ರಹಸ್ಯಮಯ ಗುಹೆ; ಒಳಗೆ ಹೋದವರು ವಾಪಾಸ್ ಬರೋದೇ ಇಲ್ಲ

ಭಾರತದಲ್ಲಿ ಎಷ್ಟೋ ರಹಸ್ಯಮಯ ವಿಷಯಗಳಿವೆ. ಅದರ ರಹಸ್ಯವನ್ನು ಕಂಡುಹಿಡಿಯುವ ಪ್ರಯತ್ನ ಇಂದಿಗೂ ಜಾರಿಯಲ್ಲಿದೆ. ಪುರಾತನ ರಹಸ್ಯಗಳನ್ನು ಕಂಡುಹಿಡಿಯುವುದೆಂದರೆ ಅದೇನೂ ಸುಲಭದ ಮಾತಲ್ಲ. ಕೆಲವೊಮ್ಮೆ ಈ ರಹಸ್ಯಗಳನ್ನು ಭೇದಿಸಲು ಹೊರಟ ವ್ಯಕ್ತಿಯೇ ರಹಸ್ಯವಾಗಿ ಬಿಡುತ್ತಾನೆ. ಇಂದಿಗೂ ಕೆಲವು ಐತಿಹಾಸಿಕ ಸ್ಮಾರಕಗಳು, ಕೋಟೆಗಳು, ಗುಹೆಗಳು ಹಲವಾರು ಪ್ರಶ್ನೆಗಳನ್ನು ಮುಂದಿಡುತ್ತದೆ. ವಿಜ್ಞಾನ ಕೂಡಾ ಇದರ ರಹಸ್ಯವನ್ನು ಬೇಧಿಸುವಲ್ಲಿ ವಿಫಲವಾಗಿದೆ. ಇಂದು ನಾವು ನಿಮಗೆ ಒಂದು ರಹಸ್ಯಮಯ ಗುಹೆಯ ಬಗ್ಗೆ ಹೇಳ ಹೊರಟಿದ್ದೇವೆ. ಅಲ್ಲಿ ಹೋದ ವ್ಯಕ್ತಿಗಳು ಕಾಣೆಯಾಗುತ್ತಾರಂತೆ.

ದೀರ್ಘ ಸುಮಂಗಲಿಯಾಗಿರಲು ಈ ದೇವಸ್ಥಾನಕ್ಕೆ ಹೋಗಬೇಕಂತೆ!ದೀರ್ಘ ಸುಮಂಗಲಿಯಾಗಿರಲು ಈ ದೇವಸ್ಥಾನಕ್ಕೆ ಹೋಗಬೇಕಂತೆ!

ಗುಹೆಯೊಳಗೆ ಹೋದವರು ಹೊರಗೆ ಬರೋದಿಲ್ಲ

ಗುಹೆಯೊಳಗೆ ಹೋದವರು ಹೊರಗೆ ಬರೋದಿಲ್ಲ

ಗುಹೆಯೊಳಗೆ ಹೋದ ವ್ಯಕ್ತಿ ಮರಳಿ ಬಾರದಂತಹ ಕಥೆಯನ್ನು ನೀವು ಈ ಹಿಂದೆ ಕೇಳಿರಬಹುದು. ಅಂತಹದ್ದೇ ಒಂದು ಉದಾಹರಣೆ ಚತ್ತೀಸ್‌ಗಡ್‌ದಲ್ಲಿರುವ ಸಿಂಗನ್‌ಪುರ್ ಗುಹೆ. ಸಿಂಗನ್‌ಪುರದಲ್ಲಿ ಸಣ್ಣ ದೊಡ್ಡ ಸುಮಾರು 11 ಗುಹೆಗಳಿವೆ. ಇವುಗಳ ರಹಸ್ಯ ಇಂದಿಗೂ ಯಾರಿಂದಲೂ ತಿಳಿಯಲು ಸಾಧ್ಯವಾಗಿಲ್ಲ. ಇದರ ಒಳಗೆ ಒಂದು ಮ್ಯಾಗ್ನೆಟಿಕ್ ಜಗತ್ತು ಇದೆ ಎನ್ನಲಾಗುತ್ತದೆ. ಇದು ಜನರನ್ನು ತನ್ನತ್ತ ಸೆಳೆಯುತ್ತದೆ. ಇದರ ಒಳಗೆ ಹೋದರು ಸ್ವತಃ ರಹಸ್ಯವಾಗಿಯೇ ಉಳಿದು ಬಿಡುತ್ತಾರೆ.

ಬ್ರಿಟಿಷರ ಕಾಲದ ಸಂಪತ್ತು

ಬ್ರಿಟಿಷರ ಕಾಲದ ಸಂಪತ್ತು

ಈ ಗುಹೆಯಲ್ಲಿ ಬ್ರಿಟಿಷರ ಕಾಲದ ಸಂಪತ್ತನ್ನು ಇಡಲಾಗಿದೆ ಎನ್ನಲಾಗುತ್ತದೆ. ಇದನ್ನು ಭೇದಿಸಲು ಹೋಗಿ ಅನೇಕರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಇಲ್ಲಿರುವ ಸಂಪತ್ತನ್ನು ಪಡೆಯುವ ಸಲುವಾಗಿ ಯಾರು ಆ ಗುಹೆಯೊಳಗೆ ಹೋಗುತ್ತಾರೋ ಮತ್ತೆ ಹಿಂದಿರುಗಿ ಬರೋದಿಲ್ಲ. ಇದರಲ್ಲಿ ಎಷ್ಟು ನಿಜಾಂಶವಿದೆ ಅನ್ನೋದಕ್ಕೆ ಯಾವುದೇ ಸಾಕ್ಷಿ ಇಲ್ಲ.

ಮೂರು ರಹಸ್ಯಮಯ ಗುಹೆ

ಮೂರು ರಹಸ್ಯಮಯ ಗುಹೆ

ಸಿಂಗನ್‌ಪುರದಲ್ಲಿ 11 ಸಣ್ಣ, ದೊಡ್ಡ ಗುಹೆಗಳು ಇವೆ. ಇದರಲ್ಲಿ ಮೂರು ಗುಹೆಯನ್ನು ಎಲ್ಲದಕ್ಕಿಂತಲೂ ರಹಸ್ಯಮಯ ಗುಹೆ ಎನ್ನಲಾಗುತ್ತದೆ. ಸ್ಥಳಿಯರ ಪ್ರಕಾರ, ಈ ಮೂರು ಗುಹೆಗಳಲ್ಲಿ ಎರಡು ಗುಹೆಯ ಒಳಗೆ ಪ್ರವೇಶಿಸಬಹುದು. ಇಲ್ಲಿ ಪ್ರಾಚೀನಕಾಲದ ಶೈಲಿಯ ಚಿತ್ರಗಳು ಕಾಣಸಿಗುತ್ತದೆ. ಆದರೆ ಮೂರನೇ ಗುಹೆಯೊಳಗೆ ಹೋಗುವುದು ಸಾಧ್ಯವಿಲ್ಲ.

ಅದೃಶ್ಯವಾಗಿ ವಾಸಿಸುತ್ತಿದ್ದಾರೆ ಸಂತರು

ಅದೃಶ್ಯವಾಗಿ ವಾಸಿಸುತ್ತಿದ್ದಾರೆ ಸಂತರು

ರಾಯ್‌ಗಡದ ರಾಜ ಲೋಕೇಶ್ ಬಹದ್ದೂರ್ ಸಿಂಗ್‌ನಿಂದ ಹಿಡಿದು ಬ್ರಿಟಿಷ್ ಅಧಿಕಾರಿ ರಾಬರ್ಟ್‌ಸನ್ ಸಾವು ಈ ಗುಹೆಗೆ ಸಂಬಂಧಿಸಿದ ವಿಷಯವನ್ನು ಇನ್ನಷ್ಟು ಬಲಪಡಿಸುತ್ತದೆ. ಈ ಗುಹೆಯಲ್ಲಿ ಸಂತರು ತಪಸ್ಸು ಮಾಡುತ್ತಿದ್ದರು. ಆ ಸಂತರು ಇಂದಿಗೂ ಅದೃಶ್ಯ ರೂಪದಲ್ಲಿ ಆ ಗುಹೆಯೊಳಗೆ ವಾಸಿಸುತ್ತಿದ್ದಾರೆ ಎನ್ನಲಾಗುತ್ತದೆ. ಯಾರೇ ದುರುದ್ದೇಶದಿಂದ ಆ ಗುಹೆಯೊಳಗೆ ಪ್ರವೇಶಿಸಿದಲ್ಲಿ ಆ ಸಂತರು ಅವರಿಗೆ ಶಿಕ್ಷೆಯನ್ನು ನೀಡುತ್ತಾರೆ ಎನ್ನಲಾಗುತ್ತದೆ.

ಸ್ಥಳೀಯರು ಗುಟ್ಟಾಗಿಟ್ಟಿದ್ದಾರೆ

ಸ್ಥಳೀಯರು ಗುಟ್ಟಾಗಿಟ್ಟಿದ್ದಾರೆ

ದೇವಿ ದೇವತೆಗಳನ್ನು ಪ್ರಸನ್ನಗೊಳಿಸಲು ಈ ಗುಹೆಯ ಹೊರಗೆ ಪೂಜೆಗಳನ್ನು ಮಾಡಿಸಲಾಗುತ್ತಿತ್ತು, ಆದರೆ ಕೆಲವು ವರ್ಷಗಳ ಹಿಂದಿನಿಂದ ಈ ಪೂಜೆಯನ್ನು ನಿಲ್ಲಿಸಲಾಗಿದೆ. ಈ ಬಗ್ಗೆ ಸ್ಥಳೀಯರು ಏನನ್ನೂ ಹೇಳು ತಿಲ್ಲ. ಈ ಗುಹೆ ಮಾತ್ರವಲ್ಲದೆ ಇಲ್ಲಿ ಪ್ರಾಣಿಗಳ ಗುಹೆ ಕೂಡಾ ಇದೆ. ಅಲ್ಲಿ ಸಿಂಹ ಕೂಡಾ ವಾಸಿಸುತ್ತಿತ್ತು ಎನ್ನಲಾಗುತ್ತದೆ.

ಸಿಂಗನ್‌ಪುರ್‌ ಗುಹೆಗೆ ಹೋಗುವುದು ಹೇಗೆ?

ಸಿಂಗನ್‌ಪುರ್‌ ಗುಹೆಗೆ ಹೋಗುವುದು ಹೇಗೆ?

ರಾಯ್‌ಗಡದಿಂದ ಸುಮಾರು 21 ಕಿ.ಮೀ ದೂರದಲ್ಲಿ ಈ ಗುಹೆಗಳಿವೆ. ರಾಯ್‌ಗಡ್‌ದಿಂದ ಸ್ಥಳೀಯ ವಾಹನದ ಮೂಲಕ ಸಿಂಗನ್‌ಪುರ್‌ಗೆ ತಲುಪಬಹುದು. ಸಿಂಗನ್‌ಪುರ್‌ದಿಂದ ಗುಹೆಯ ಬಳಿ ಹೋಗಬೇಕಾದರೆ ನಿಮಗೆ 2 ಕಿ.ಮೀ ನಡೆದುಕೊಂಡು ಹೋಗಬೇಕು. ಒಂಧು ವೇಳೆ ವಿಮಾನದಲ್ಲಿ ಹೋಗುವುದಾದರೆ ರಾಯ್‌ಗಡ ಏರ್‌ಪರ್ಟ್‌ಗೆ ಹೋಗಿಯೇ ಹೋಗಬೇಕು.

Read more about: historical caves chhattisgarh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X