Search
  • Follow NativePlanet
Share
» »ಈ ಚಮತ್ಕಾರಿ ಸ್ಥಳಗಳ ರಹಸ್ಯಗಳನ್ನು ವಿಜ್ಞಾನಿಗಳಿಂದಲೂ ಕಂಡುಹಿಡಿಯಲಾಗಿಲ್ಲ

ಈ ಚಮತ್ಕಾರಿ ಸ್ಥಳಗಳ ರಹಸ್ಯಗಳನ್ನು ವಿಜ್ಞಾನಿಗಳಿಂದಲೂ ಕಂಡುಹಿಡಿಯಲಾಗಿಲ್ಲ

ನಮ್ಮ ದೇಶದಲ್ಲಿ ಎಷ್ಟೆಲ್ಲಾ ರಹಸ್ಯಮಯ ಸ್ಥಳಗಳಿವೆ. ಅಂತಹ ರಹಸ್ಯಮಯ ಸ್ಥಳಗಳಲ್ಲಿ ಕೆಲವು ಗುಜರಾತ್‌ನಲ್ಲಿದೆ. ಗುಜರಾತ್‌ನಲ್ಲಿ ಎಷ್ಟೆಲ್ಲಾ ಪ್ರವಾಸಿ ತಾಣಗಳಿವೆಯೋ ಅಂತೆಯೇ ಅನೇಕ ಚಮತ್ಕಾರಿ ಸ್ಥಳಗಳೂ ಇವೆ. ಇಲ್ಲಿನ ಈ ಚಮತ್ಕಾರಗಳನ್ನು ವಿಜ್ಞಾನಿಗಳಿಗೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಜನರು ಇದರಹಿಂದೆ ಧಾರ್ಮೀಕ ಕಾರಣಗಳಿವೆ ಎಂದು ಹೇಳುತ್ತಾರೆ.

ಜೂಲ್ತಿ ಮಿನಾರ್

ಜೂಲ್ತಿ ಮಿನಾರ್

PC: Palak gajrawala

ಜೂಲ್ತಿ ಮಿನಾರ್ ಅಹಮದಾಬಾದ್‌ನಲ್ಲರುವ ಸೀದಿ ಬಶೀರ್ ಮಸ್ಜಿದ್‌ನ್ನು ಜೂಲ್ತಿ ಮಿನಾರ್ ಎನ್ನುತ್ತಾರೆ. ಯಾಕೆಂದೆ ಇದರ ಒಂದು ಮಿನಾರ್‌ನ್ನು ಅಲುಗಾಡಿಸಿದರೆ ಉಳಿದ ಮಿನಾರ್‌ಗಳೂ ಅಲುಗಾಡುತ್ತವೆ. ಇದನ್ನು ಕಂಡುಹಿಡಿಯಲು ಇಂಜಿನಿಯರ್‌ಗಳೂ ಆರ್ಕಿಟೆಕ್ಟರ್‌ಗೂ ಈ ರಹಸ್ಯವನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಒಬ್ಬೊಬ್ಬರು ಒಂದು ಕಾರಣ ಹೇಳುತ್ತಾರೆ. ಆದರೆ ಯಾರಿಗೂ ಇದರ ನಿಜವಾದ ರಹಸ್ಯ ತಿಳಿದಿಲ್ಲ. ಈ ಮಿನಾರ್‌ನ ಸುತ್ತಲೂ ಶೋಧನೆ ನಡೆಸಲಾಯಿತು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಭೂಕಂಪನದಿಂದಾಗಿ ಇಲ್ಲಿನ ಭೂಮಿ ಅಲುಗಾಡಿದರೂ ಈ ಮಿನಾರ್ ಮಾತ್ರ ಅಲುಗಾಡಿಲ್ಲ.

ಈ ದೇವಾಲಯದ ಬಾಗಿಲು ತೆರೆದ ಮೇಲೆ ಇಲ್ಲಿನ ಊರಿನ ಜನರು ಒಗ್ಗರಣೆ ಹಾಕುವಂತಿಲ್ಲ !ಈ ದೇವಾಲಯದ ಬಾಗಿಲು ತೆರೆದ ಮೇಲೆ ಇಲ್ಲಿನ ಊರಿನ ಜನರು ಒಗ್ಗರಣೆ ಹಾಕುವಂತಿಲ್ಲ !

ನಗಾರಿಯ ಬೆಟ್ಟ

ನಗಾರಿಯ ಬೆಟ್ಟ

ಇದೊಂದು ಪ್ರವಾಸಿಗರ ಧಾರ್ಮಿಕ ಸ್ಥಳವಾಗಿದೆ. ಇಲ್ಲಿನ ವಿಶೇಷ ಎಂದರೆ ಇಲ್ಲಿ ನಮಿಸುತ್ತಿದ್ದಂತೆ ಡೋಲ್‌ ಹೊಡೆಯುವ ಸದ್ದು ಕೇಳಿಸುತ್ತದೆ. ಗಿರ್ನಾರ್‌ನ ದಕ್ಷಿಣದಲ್ಲಿ ಜುನಾಡ್‌ಘಡ್‌ನಿಂದ ಸುಮಾರು 2 ಕಿ.ಮೀ ದೂರದಲ್ಲಿದೆ.

ತುಳಸಿಶಾಮ್ ಕುಂಡ

ತುಳಸಿಶಾಮ್ ಕುಂಡ

PC:Gazal world

ಈ ತೀರ್ಥ ಕ್ಷೇತ್ರವು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಪ್ರತಿ ವೇಳೆ ನೀರಿನಿಂದ ತುಂಬಿರುತ್ತದೆ. ಅಲ್ಲದೆ ಬಿಸಿ ನೀರಿನಿಂದ ಕೂಡಿರುತ್ತದೆ. ಈ ಕುಂಡದಲ್ಲಿ ವಿಷ್ಣುವಿಗೂ ಸಂಬಂಧವಿದೆ ಎನ್ನಲಾಗುತ್ತದೆ.

ಚಿಕ್ಕಮಗಳೂರಿನಲ್ಲಿದ್ದಾಳೆ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮ ಚಿಕ್ಕಮಗಳೂರಿನಲ್ಲಿದ್ದಾಳೆ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮ

ಟುವಾ ಟಿಂಬ

ಟುವಾ ಟಿಂಬ

ಗೋದ್ರಾದಿಂದ 15 ಕಿ.ಮೀ ದೂರದಲ್ಲಿರುವ ಟುವಾ ಟಿಂಬ ಇಲ್ಲಿನ ಒಂದು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಇದು ಒಂದು ಬಿಸಿನೀರಿನ ಕುಂಡವಾಗಿದೆ. ಇಲ್ಲಿನ ಬಿಸಿನೀರಿನ ಕುಂಡದಲ್ಲಿ ಸ್ನಾನ ಮಾಡುವುದರ ಧಾರ್ಮಿಕ ಮಹತ್ವವಿದೆ. ಪೌರಾಣಿಕ ಕಥೆಯ ಪ್ರಕಾರ ರಾಮ ಹಾಗೂ ಪಾಂಡವರು ಇಲ್ಲಿಗೆ ಭೇಟಿ ನೀಡಿದ್ದರು. ರಾಮನ ಬಿಲ್ಲಿನಿಂದಾಗಿ ಈ ಕುಂಡ ನಿರ್ಮಾಣವಾಗಿ ಬಿಸಿನೀರು ಬರಲಾರಂಭಿಸಿತು ಎನ್ನಲಾಗುತ್ತದೆ.

ರಹಸ್ಯಮಯ ಕಲ್ಲು

ರಹಸ್ಯಮಯ ಕಲ್ಲು

ಅಮರಲಿ ಜಿಲ್ಲೆಯ ಬಾಬ್ರಾ ನಗರದ 7 ಕಿ.ಮೀ ದೂರದಲ್ಲಿ ಕರಿಯಾಣ ಹಳ್ಳಿಯಲ್ಲಿ ಬೆಟ್ಟದಲ್ಲಿ ಒಂದು ಆಕರ್ಷಣೀಯ ಸ್ಥಳವಿದೆ. ಇಲ್ಲಿನ ಕಲ್ಲಿನಲ್ಲಿ ಗಂಟೆ ಹೊಡೆಯುವ ಸದ್ದು ಕೇಳಿಸುತ್ತದೆ. ಇಲ್ಲಿ ಅನೇಕ ಗ್ರೈನೆಟ್ ಕಲ್ಲುಗಳಿವೆ. ಆದರೆ ಈವರೆಗೂ ಅದರ ರಹಸ್ಯ ಬಹಿರಂಗಪಡಿಸಲಾಗಿಲ್ಲ. ಇದಕ್ಕೆ ಸಂಬಂಧಿಸಿದ ಒಂದು ಪೌರಾಣಿಕ ಕಥೆ ಇದೆ. ಪ್ರಾಚೀನ ಕಾಲದಲ್ಲಿ ಸ್ವಾಮಿ ನಾರಾಯಣ ಆಗಮಿಸಿದ್ದರು. ಪೂಜೆಯ ಸಂದರ್ಭದಲ್ಲಿ ಇಲ್ಲಿನ ಕಲ್ಲನ್ನು ಗಂಟೆಯ ರೂಪದಲ್ಲಿ ಬಳಸಿದರು ಎನ್ನಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X