Search
  • Follow NativePlanet
Share
» »ಇಲ್ಲಿ ರಾತ್ರಿ ಉಳಿಯಲು ಹೆದರ್ತಾರಂತೆ ಜನ್ರು, ಒಂದು ವೇಳೆ ಉಳ್ಕೊಂಡ್ರೆ ನೀವೂ ಹೀಗಾಗ್ಬಿಡ್ತೀರಾ !

ಇಲ್ಲಿ ರಾತ್ರಿ ಉಳಿಯಲು ಹೆದರ್ತಾರಂತೆ ಜನ್ರು, ಒಂದು ವೇಳೆ ಉಳ್ಕೊಂಡ್ರೆ ನೀವೂ ಹೀಗಾಗ್ಬಿಡ್ತೀರಾ !

ನಮ್ಮ ದೇಶದಲ್ಲಿ ಎಷ್ಟೆಲ್ಲಾ ರಹಸ್ಯಮಯ ಮಂದಿರಗಳಿವೆ. ಆದರೆ ನಾವಿಂದು ಹೇಳಹೊರಟಿರುವುದು ರಾಜಸ್ತಾನದ ರಹಸ್ಯಮಯ ಮಂದಿರದ ಬಗ್ಗೆ ಹಾಗೆ ನೋಡಿದರೆ ರಾಜಸ್ತಾನದಲ್ಲಿ ಅನೇಕ ರಹಸ್ಯಮಯ ಮಂದಿರಗಳಿವೆ. ಅವುಗಳಲ್ಲಿ ರಾಜಸ್ತಾನದ ಬರ್‍ಮೇರ್ ಜಿಲ್ಲೆಯ ಕಿರಾಡೂ ಮಂದಿರವೂ ಒಂದು. ಈ ಮಂದಿರವು ತನ್ನ ರಹಸ್ಯಗಳಿಂದಾಗಿ ವಿಶ್ವದಾದ್ಯಂತ ಪ್ರಸಿದ್ಧಿ ಹೊಂದಿದೆ. ಈ ಮಂದಿರದಲ್ಲಿ ರಾತ್ರಿಯಾಗುತ್ತಿದ್ದಂತೆ ಯಾರೂ ಉಳಿಯುವುದಿಲ್ಲವಂತೆ.

ಕಲ್ಲಾಗುತ್ತಾರೆ ಜನರು ಇಲ್ಲಿ ರಾತ್ರಿ ಉಳಿಯಲು ಹೆದರ್ತಾರಂತೆ ಜನ್ರು, ಒಂದು ವೇಳೆ ಉಳ್ಕೊಂಡ್ರೆ ನೀವೂ ಹೀಗಾಗ್ಬಿಡ್ತೀರಾ !

ಕಲ್ಲಾಗುತ್ತಾರೆ ಜನರು ಇಲ್ಲಿ ರಾತ್ರಿ ಉಳಿಯಲು ಹೆದರ್ತಾರಂತೆ ಜನ್ರು, ಒಂದು ವೇಳೆ ಉಳ್ಕೊಂಡ್ರೆ ನೀವೂ ಹೀಗಾಗ್ಬಿಡ್ತೀರಾ !

ಈ ಊರಿನಲ್ಲಿ ರಾತ್ರಿಯಾದ ನಂತರ ಯಾರಾದರೂ ಉಳಿದರೆ ಅವರು ಕಲ್ಲಾಗುತ್ತಾರಂತೆ. ಹಾಗಾಗಿ ಯಾರೂ ಕೂಡಾ ಕತ್ತಲಾಗುತ್ತಿದ್ದಂತೆ ಅಲ್ಲಿಂದ ಹೊರಟು ಹೋಗುತ್ತಾರೆ. ಉಳಿಯುವ ಧೈರ್ಯ ಮಾಡೋದಿಲ್ಲ.

ಯಾರು ಶಾಪ ನೀಡಿದ್ದು ?

ಯಾರು ಶಾಪ ನೀಡಿದ್ದು ?

ಹಲವು ವರ್ಷಗಳ ಹಿಂದೆ ಈ ಊರಿಗೆ ಓರ್ವ ತಪಸ್ವಿ ಆಗಮಿಸಿದ್ದರು. ಅವರ ಜೊತೆ ಶಿಷ್ಯರ ತಂಡವೇ ಇತ್ತು. ಒಂದು ದಿನ ತಪಸ್ವಿಯು ತನ್ನ ಶಿಷ್ಯಂದಿರನ್ನು ಊರಿನಲ್ಲೇ ಬಿಟ್ಟು ಪರ್ಯಟನೆಗೆ ಹೊರಟರು. ಆ ಸಂದರ್ಭ ಶಿಷ್ಯಂದಿರು ಅನಾರೋಗ್ಯಕ್ಕೀಡಾಗುತ್ತಾರೆ. ಆಗ ಊರಿನವರು ಯಾರೂ ಸಹಾಯ ಮಾಡೋದಿಲ್ಲ.

ಜನರೆಲ್ಲಾ ಕಲ್ಲಾಗಲಿ ಎಂದು ಶಾಪ ನೀಡಿದ ತಪಸ್ವಿ

ಜನರೆಲ್ಲಾ ಕಲ್ಲಾಗಲಿ ಎಂದು ಶಾಪ ನೀಡಿದ ತಪಸ್ವಿ

ಜನರೆಲ್ಲಾ ಕಲ್ಲಾಗಲಿ ಎಂದು ಶಾಪ ನೀಡಿದ ತಪಸ್ವಿ ಪರ್ಯಟನೆಯಿಂದ ಬಂದ ತಪಸ್ವಿ ತನ್ನ ಶಿಷ್ಯಂದಿರ ಪರಿಸ್ಥಿತಿ ಕಂಡು ಮರುಗುತ್ತಾರೆ. ಅವರಿಗೆ ಯಾರೂ ಸಹಾಯ ಮಾಡದ್ದನ್ನು ಕಂಡು ಕ್ರೋಧಿತರಾದ ತಪಸ್ವಿ ಈ ಊರಿನವರ ಮನಸ್ಸು ಕಲ್ಲು ಮನಸ್ಸು ಎಂದು ಹೇಳಿ ಎಲ್ಲರೂ ಕಲ್ಲುಗಳಾಗಲಿ ಎಂದು ಶಪಿಸುತ್ತಾರೆ.

ಷರತ್ತು ಮುರಿದ ಮಹಿಳೆ

ಷರತ್ತು ಮುರಿದ ಮಹಿಳೆ

ಷರತ್ತು ಮುರಿದ ಮಹಿಳೆಆ ಊರಿನಲ್ಲಿ ಒಬ್ಬಳು ಮುದುಕಿ ಇರುತ್ತಾಳೆ. ಆಕೆ ಶಿಷ್ಯಂದಿರಿಗೆ ಸಹಕರಿಸಿರುತ್ತಾಳೆ. ತಪಸ್ವಿ ಆಕೆಯನ್ನು ಊರು ಬಿಟ್ಟು ಹೋಗು ಇಲ್ಲವಾದಲ್ಲಿ ನೀನೂ ಕಲ್ಲಾಗುವುದಾಗಿ ಹೇಳುತ್ತಾನೆ. ಆದರೆ ಹಿಂದಿರುಗಿ ನೋಡಬಾರದು ಎಂದು ಷರತ್ತು ಹಾಕುತ್ತಾನೆ.

 ಇಂದಿಗೂ ಕಲ್ಲಿನ ರೂಪದಲ್ಲಿರುವ ಮಹಿಳೆ

ಇಂದಿಗೂ ಕಲ್ಲಿನ ರೂಪದಲ್ಲಿರುವ ಮಹಿಳೆ

ಊರು ಬಿಟ್ಟು ಹೊರಟ ಮುದುಕಿ ಊರು ದಾಟಲು ಸ್ವಲ್ಪ ದೂರದಲ್ಲೇ ತಪಸ್ವಿ ಹೇಳಿದ ಮಾತು ನಿಜವೋ, ಸುಳ್ಳೋ ಎಂದು ಪರೀಕ್ಷಿಸಲು ಹಿಂದಿರುಗಿ ನೋಡುತ್ತಾಳೆ. ಆಗ ಮುದುಕಿ ಅಲ್ಲೇ ಕಲ್ಲಾಗುತ್ತಾಳೆ. ಹಾಗಾಗಿ ಆ ಮಹಿಳೆಯ ಕಲ್ಲು ಈಗಲೂ ಊರಿನ ಸ್ವಲ್ಪ ದೂರದಲ್ಲಿ ಈಗಲೂ ಕಾಣ ಸಿಗುತ್ತದೆ. ಆ ಮಹಿಳೆಯ ಕಲ್ಲೇ ಅಲ್ಲಿ ನಡೆದಿರುವ ಕಥೆಗೆ ಸಾಕ್ಷಿ ಎನ್ನಲಾಗುತ್ತದೆ.

ಮಹಾಬಲೇಶ್ವರಕ್ಕೆ ಹೋದ್ರೆ ಇದನ್ನೆಲ್ಲಾ ಮಿಸ್ ಮಾಡೋಕಾಗುತ್ತಾ?ಮಹಾಬಲೇಶ್ವರಕ್ಕೆ ಹೋದ್ರೆ ಇದನ್ನೆಲ್ಲಾ ಮಿಸ್ ಮಾಡೋಕಾಗುತ್ತಾ?

ಶಿವ, ವಿಷ್ಣುವಿನ ದೇವಾಲಯ

ಶಿವ, ವಿಷ್ಣುವಿನ ದೇವಾಲಯ

ಕಿರಾಡು ಗ್ರಾಮದ ನಿವಾಸಿಗಳು ದೈವಭಕ್ತರಾಗಿದ್ದು, ಶಿವನ ನಿಜವಾದ ಭಕ್ತರಾಗಿದ್ದಾರೆ ಹಾಗಾಗಿ ಇಲ್ಲಿನ ದೇವಾಲಯಗಳಲ್ಲಿ ಕೆಲವು ಶಿವನಿಗೆ ಸಮರ್ಪಿಸಲಾಗಿದೆ. ಇಲ್ಲಿನ ದೇವಸ್ಥಾನದ ವಾಸ್ತು ಶೈಲಿಯು ಸೋಲಂಕಿ ಶೈಲಿಯಲ್ಲಿ ನಿರ್ಮಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X