Search
  • Follow NativePlanet
Share
» »ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ಎಲ್ಲಾ ಧರ್ಮವನ್ನು ಸರಿಸಮಾನವಾಗಿ ಕಾಣುವ ನಮ್ಮ ಭಾರತ ದೇಶದಲ್ಲಿ ಎಷ್ಟೊ ದೇವಾಲಯಗಳು ಪ್ರತಿನಿತ್ಯ ದೈವಾರಾಧನೆಯಿಂದ ವಿಜೃಂಬಿಸುತ್ತಿರುತ್ತದೆ. ಪ್ರತಿ ನಿತ್ಯವು ಭಕ್ತರು ಪೂಜಾರಧನೆಗಳು ಮಾಡುತ್ತಿರುತ್ತಾರೆ. ಅಂತಹ ಪ್ರದೇಶದಲ್ಲಿ ಅತ್ಯಂತ ಪ್ರಸಿದ್ಧಿ

ಎಲ್ಲಾ ಧರ್ಮವನ್ನು ಸರಿಸಮಾನವಾಗಿ ಕಾಣುವ ನಮ್ಮ ಭಾರತ ದೇಶದಲ್ಲಿ ಎಷ್ಟೊ ದೇವಾಲಯಗಳು ಪ್ರತಿನಿತ್ಯ ದೈವಾರಾಧನೆಯಿಂದ ವಿಜೃಂಬಿಸುತ್ತಿರುತ್ತದೆ. ಪ್ರತಿ ನಿತ್ಯವು ಭಕ್ತರು ಪೂಜಾರಧನೆಗಳು ಮಾಡುತ್ತಿರುತ್ತಾರೆ. ಅಂತಹ ಪ್ರದೇಶದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಹೊಂದಿರುವ ದೇವಾಲಯಗಳು ಕೆಲವು ಮಾತ್ರ ರಹಸ್ಯವಾಗಿಯೇ ಉಳಿದಿರುವುದನ್ನು ಕಾಣಬಹುದಾಗಿದೆ. ನಮ್ಮ ಭಾರತ ದೇಶದಲ್ಲಿ ಒಂದಲ್ಲ ಒಂದು ನಿಗೂಢ, ರಹಸ್ಯಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅವುಗಳನ್ನು ಭೇದಿಸಲು ಅನೇಕ ವಿಜ್ಞಾನಿಗಳು, ಸಂಶೋಧಕರು ಪ್ರಯತ್ನ ಮಾಡುತ್ತಿರುತ್ತಾರೆ. ಅವುಗಳಲ್ಲಿ ಕೆಲವು ಉತ್ತರ ಕಂಡು ಹಿಡಿಯಲು ಸಫಲವಾದರೇ ಮತ್ತೇ ಕೆಲವು ಎಂದಿಗೂ ಭೇದಿಸಲಾಗದ ರಹಸ್ಯವನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿರುವ ಅನೇಕ ರಹಸ್ಯ ತಾಣಗಳು ಮನಸ್ಸಿನಲ್ಲಿ ಪ್ರಶ್ನೆಗಳು ಹುಟ್ಟುಹಾಕುತ್ತವೆ.

ಹಾಗಾದರೆ ನಮ್ಮ ದೇಶದಲ್ಲಿ ಇಂದಿಗೂ ಬಗೆಹರಿಸಲಾಗದ 5 ಪ್ರದೇಶಗಳ ಬಗ್ಗೆ ಸಂಕ್ಷೀಪ್ತವಾದ ಮಾಹಿತಿಯನ್ನು ಲೇಖನದ ಮೂಲಕ ಪಡೆಯೋಣ. ನಿಮಗೆ ಭೇದಿಸುವ ಸಾಮಥ್ರ್ಯವಿದ್ದರೆ ಒಮ್ಮೆ ನೀವು ಕೂಡ ಪ್ರಯತ್ನ ಮಾಡಬಹುದು.

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ಬೃಹದೀಶ್ವರ ದೇವಾಲಯ,ತಂಜಾವೂರು
ಬೃಹದೀಶ್ವರ ದೇವಾಲಯವು ತಮಿಳುನಾಡು ರಾಜ್ಯದಲ್ಲಿನ ತಂಜಾವೂರಿನಲ್ಲಿದೆ. ಇದನ್ನು 11 ನೇ ಶತಮಾನದಲ್ಲಿ ಚೋಳರು ನಿರ್ಮಾಣ ಮಾಡಿದರು. ಇದು ಆ ಪರಮೇಶ್ವರನ ದೇವಾಲಯವಾಗಿದೆ, ಅಂದರೆ ಇದೊಂದು ಶಿವಾಲಯ. ಭಾರತ ದೇಶದಲ್ಲಿಯೇ ಅತಿ ದೊಡ್ಡದಾದ ದೇವಾಲಯವಾಗಿ ಬೃಹದೀಶ್ವರ ದೇವಾಲಯವು ಪ್ರಸಿದ್ಧಿಯನ್ನು ಪಡೆದಿದೆ. ಈ ದೇವಾಲಯವನ್ನು 30 ಲಕ್ಷ ಟನ್ನಗಳಷ್ಟು ಗ್ರಾನೈಟ್‍ಅನ್ನು ಬಳಸಿ ನಿರ್ಮಾಣ ಮಾಡಿದ್ದಾರೆ.

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ಸುಮಾರು 66 ಎತ್ತರದಲ್ಲಿರುವ ಈ ಗ್ರಾನೈಟ್ ನಿರ್ಮಾಣವು ಕೊನೆಯಲ್ಲಿ ಒಂದು ಕುಂಭವು ಇರುತ್ತದೆ, ಅಂದರೆ ವೃತ್ತಾಕಾರದಲ್ಲಿ ಕೆತ್ತನೆ ಮಾಡಿದ ಶಿಲಾನಿರ್ಮಾಣವನ್ನು ಇಲ್ಲಿ ಕಾಣಬಹುದು. ಇಲ್ಲಿನ ವಿಚಿತ್ರವೆನೆಂದರೆ ಆ ಕುಂಭವು ಸುಮಾರು 80 ಟನ್ನಗಳಷ್ಟು ಭಾರವಿರುತ್ತದೆ. ಅದನ್ನು ಒಂದೇ ಗ್ರಾನೈಟ್ ಕಲ್ಲಿನಿಂದ ನಿರ್ಮಾಣ ಮಾಡಿರುವುದು ವಿಶೇಷವೇ ಸರಿ.

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ಆದರೆ ಅಷ್ಟು ಭಾರವಾದ ಗ್ರಾನೈಟ್ ಅನ್ನು ಹೇಗೆ ನಿರ್ಮಾಣ ಮಾಡಿದರು. ದೇವಾಲಯದ ಕೊನೆಯ ಟವರ್ 66 ಮೀ ಎತ್ತರದಲ್ಲಿ ಹೇಗೆ ಎತ್ತಿಕೊಂಡು ಇಟ್ಟರು ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಏಕೆಂದರೆ 11 ನೇ ಶತಮಾನದ ಆ ದಿನಗಳಲ್ಲಿ ಕ್ರೇನ್ ಆಗಲಿ ಮಿಷಿನ್‍ಗಳಾಗಲೀ ಯಾವುದು ಇರಲಿಲ್ಲ. ಅಷ್ಟು ಎತ್ತರದಲ್ಲಿ ಹೇಗೆ ಇಟ್ಟರು? ಉತ್ತರ ನಿಮಗೆ ಗೊತ್ತೆ?

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ವೀರಭದ್ರ ಸ್ವಾಮಿ ದೇವಾಲಯ,ಲೇಪಾಕ್ಷಿ
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ 16 ನೇ ಶತಮಾನದಲ್ಲಿ ನಿರ್ಮಾಣ ಮಾಡಿದ ವೀರಭದ್ರ ಸ್ವಾಮಿ ದೇವಾಲಯ ಇಂದಿಗೂ ರಹಸ್ಯಗಳ ತವರೂರು. ಇದು ಅನಂತಪುರಂ ಜಿಲ್ಲೆಯ ಲೇಪಾಕ್ಷಿಯಲ್ಲಿ ಕೇಂದ್ರಿಕೃತವಾಗಿದೆ. ಇಲ್ಲಿ ಮೊದಲ ವಿಶೇಷವೆನೆಂದರೆ ದೇವಾಲಯದಲ್ಲಿನ ಸ್ತಂಭಗಳು. ಹಾಗೆಯೇ ಈ ದೇವಾಲಯದಲ್ಲಿನ ಅಪರೂಪ ಶಿಲ್ಪಕಲೆಗಳ ಸೌಂದರ್ಯವೆಂದೇ ಹೇಳಬಹುದು.

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

1910ರಲ್ಲಿ ಒಬ್ಬ ಬ್ರಿಟೀಷ್ ಇಂಜಿನಿಯರ್ ವಿಭಿನ್ನವಾದ ಈ ಸ್ತಂಭವನ್ನು ಕಂಡು ಆಶ್ಚರ್ಯಗೊಂಡು, ಆ ಸ್ತಂಭ ಹಾಗೂ ನೆಲವನ್ನು ಮುಚ್ಚಲು ಪ್ರಯತ್ನಿಸಿದನು. ಇದರಿಂದಾಗಿ ಆ ದೇವಾಲಯದ ಕಟ್ಟಡವು ಚಿದ್ರ ಚಿದ್ರವಾಗಲು ಪ್ರಾರಂಭವಾದುದನ್ನು ಗಮನಿಸಿ ಆ ಕೆಲಸವನ್ನು ಕೈಬಿಟ್ಟನು. ಆ ಸ್ತಂಭದ ಬಗ್ಗೆ ಎಷ್ಟೊ ಪರಿಶೋಧನೆ ಮಾಡಿದರೂ ಕೂಡ ಆ ನಿರ್ಮಾಣ ರಹಸ್ಯವನ್ನು ಕಂಡುಹಿಡಿಯಲು ಅವನಿಗೆ ಸಾಧ್ಯವಾಗಲಿಲ್ಲ.

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ಹಾಗೆಯೇ ಮತ್ತೊಂದು ವಿಚಿತ್ರವೆನೆಂದರೆ ದೇವಾಲಯದ ಪ್ರಾಂಗಣದಲ್ಲಿ ಒಂದು ಕಲ್ಲಿನ ಮೇಲೆ ಪಾದಮುದ್ರೆ ಇದೆ. ಅದು ಸುಮಾರು 3 ಅಡಿ ಇದೆ. ಆದರೆ ಈ ದೇವಾಲಯದ ನಿರ್ಮಾಣ ಸಮಯದಲ್ಲಿ ಈ ಪಾದಮುದ್ರೆ ಇರಲಿಲ್ಲ, ಅಷ್ಟೇ ಅಲ್ಲ ಆ ಪಾದಗಳ ಒಂದು ಭಾಗದಿಂದ ನೀರು ಯಾವಾಗಲೂ ಹೊರಹೊಮ್ಮುತ್ತಿರುತ್ತದೆ.

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ಅನಂತ ಪದ್ಮನಾಭ ದೇವಾಲಯ
ಕೇರಳದ ತಿರುವನಂತಪುರದಲ್ಲಿರುವ ಈ ದೇವಾಲಯವನ್ನು ಯಾರು ನಿರ್ಮಿಸಿದರೊ? ಹೇಗೆ ನಿರ್ಮಿಸಿದರೊ? ಎಂಬ ವಿಷಯ ಇಂದಿಗೂ ಯಾರಿಗೂ ತಿಳಿದಿಲ್ಲ. ಪ್ರಪಂಚದಲ್ಲಿ ಸಂಪತ್ತಿಗೆ ಅತ್ಯಂತ ಹೆಚ್ಚು ಪ್ರಸಿದ್ಧಿಯನ್ನು ಪಡೆದ ಈ ದೇವಾಲಯದಲ್ಲಿ ಸುಮಾರು 22 ಬಿಲಿಯನ್ ಡಾಲರ್ ಬೆಲೆಯುಳ್ಳ ಬಂಗಾರ ಹಾಗೂ ವಜ್ರಾಭರಣಗಳಿವೆ.

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ಈ ಸಂಪತ್ತು ಎಲ್ಲವೂ ಕೂಡ ಅನಂತ ಪದ್ಮನಾಭ ದೇವಾಲಯದ ನೆಲ ಮಾಳಿಗೆಯಲ್ಲಿರುವ 5 ಕೊಠಡಿಗಳದಾಗಿದೆ. ಇನ್ನೂ ಅಲ್ಲಿ ತೆರವು ಎಂದು 3 ಕೊಠಡಿಗಳಿವೆ. ಆದರೆ ಅವುಗಳಲ್ಲಿನ ಒಂದು ಕೊಠಡಿಯ ಪ್ರವೇಶ ದ್ವಾರವು ದೊಡ್ಡ ದೊಡ್ಡ ಸರ್ಪಗಳ ಶಿಲ್ಪಗಳಿಂದ ಅಲಂಕೃತವಾಗಿದೆ. ಅವುಗಳನ್ನು ನಾಗಬಂಧ ಎಂದು ನಮ್ಮ ಪುರಾಣಗಳು ಹೇಳುತ್ತವೆ.

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ಆ ಕೊಠಡಿಯನ್ನು ತೆಗೆಯಬೇಕಾದರೆ ಕೆಲವು ಮಂತ್ರಗಳಿಂದ ಮಾತ್ರ ಸಾಧ್ಯವಾಗುವಂತಹುದು. ಒಂದು ವೇಳೆ ಬಲವಂತವಾಗಿ ಆ ಕೊಠಡಿಯ ದ್ವಾರವನ್ನು ತೆಗೆದರೆ ದೊಡ್ಡ ಪ್ರಮಾಣದ ಹಾನಿ ಸಂಭವಿಸುತ್ತದೆ ಎಂದು ಪುರಾಣಗಳು ತಿಳಿಸುತ್ತವೆ. ಇಷ್ಟಕ್ಕೂ ಆ ಕೊಠಡಿಯಲ್ಲಿ ಏನಿದೆ? ಆ ಕೊಠಡಿಗೆ ನಾಗಬಂಧನವನ್ನು ಏಕೆ ಇದೆ? ಎಂಬುದು ಇಂದಿಗೂ ಕೂಡ ರಹಸ್ಯವಾಗಿಯೇ ಉಳಿದಿದೆ.

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ಕೋನಾರ್ಕ್ ಸೂರ್ಯಾ ದೇವಾಲಯ

ಈ ದೇವಾಲಯವನ್ನು ಕ್ರಿ.ಶ 1236 ರಿಂದ 1264ರ ಮಧ್ಯ ಕಾಲದಲ್ಲಿ ಗಂಗರ ವಂಶಕ್ಕೆ ಸೇರಿದ ಲಾಂಗುಲ ನರಸಿಂಹದೇವ ಎಂಬ ರಾಜನು ನಿರ್ಮಿಸಿದನು ಎಂದು ಅಲ್ಲಿನ ಆಧಾರದ ಮೂಲಕ ದೊರೆಯುತ್ತದೆ. ಈ ದೇವಾಲಯವನ್ನು 7 ಕುದುರೆ ಹಾಗೂ 24 ಚಕ್ರಗಳನ್ನು ಹೊಂದಿರುವ ರಥದ ಮಾದರಿಯಲ್ಲಿ ನಿರ್ಮಿಸಿದ್ದಾರೆ.

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ಆದರೆ ಈ ದೇವಾಲಯದಲ್ಲಿ ಕೆಲವು ಭಾಗವನ್ನು 18 ನೇ ಶತಮಾನದಲ್ಲಿ ಕೆಲವು ದಾಳಿಕೋರರು ಭಿನ್ನ ಮಾಡಿದರು ಎಂದು ಚರಿತ್ರಗಾರರು ಹೇಳುತ್ತಾರೆ. ಆ ಭಿನ್ನವಾದ ಸ್ಥಳದಲ್ಲಿ ಸುಮಾರು 52 ಟನ್‍ಗಳಷ್ಟು ಆಯಸ್ಕಾಂತ ಇತ್ತು ಎಂದು ಹೇಳುತ್ತಾರೆ.

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ಆ ಆಯಸ್ಕಾಂತವು ಗರ್ಭಗುಡಿಯಲ್ಲಿರುವ ಸ್ವಾಮಿಯ ವಿಗ್ರಹವನ್ನು ಗಾಳಿಯಲ್ಲಿ ತೇಲುವ ಹಾಗೆ ಮಾಡುತ್ತಿತ್ತು ಎಂದು ಚರಿತ್ರಕಾರರು ಹೇಳುತ್ತಾರೆ. ಆದರೆ ಆ ಆಯಸ್ಕಾಂತವನ್ನು ಏಕೆ ನಾಶ ಪಡಿಸಿದರು? ಎಂಬ ವಿಷಯ ಯಾರಿಗೂ ಗೊತ್ತಿಲ್ಲ. ಆದರೆ ಈ ಗುಡಿಯಲ್ಲಿರುವ ರಥ ಚಕ್ರಗಳಲ್ಲಿ ವಿಜ್ಞಾನವು ಅಡಗಿದೆ. ಏಕೆಂದರೆ ಸನ್ ಡಯಲ್ ಇಂದಿಗೂ ಕೂಡ ವೇಳಾಪಟ್ಟಿಯನ್ನು ತಿಳಿಸುತ್ತದೆ. ನಮ್ಮ ಭಾರತದೇಶದ ನೈಪುಣ್ಯತೆಯು ಎಷ್ಟೊ ಮಾಹಿಮಾನ್ವಿತವಾದುದು ಎಂಬುದನ್ನು ಇದರಿಂದ ತಿಳಿಯುತ್ತದೆ.

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ಕೈಲಾಸ ದೇವಾಲಯ
ಮಹಾರಾಷ್ಟ್ರದ ಎಲ್ಲೊರ ಗುಹೆಯಲ್ಲಿದೆ ಕೈಲಾಸ ದೇವಾಲಯವಿದೆ. ಈ ದೇವಾಲಯವನ್ನು ಯಾವಾಗ ನಿರ್ಮಿಸಿದರು? ಯಾರು ನಿರ್ಮಿಸಿದರು ಎಂಬುದಕ್ಕೆ ಸರಿಯಾದ ಆಧಾರಗಳಿಲ್ಲ. ಕೆಲವು ಮಂದಿ ಚರಿತ್ರಕಾರರ ಲೆಕ್ಕದ ಪ್ರಕಾರ ಕಿ.ಶ 6 ನೇ ಶತಮಾನದಲ್ಲಿ ಈ ಪ್ರದೇಶವನ್ನು ಆಳಿದ ರಾಷ್ಟ್ರಕೂಟ ಸಾಮ್ರಾಜ್ಯಕ್ಕೆ ಸೇರಿದ ರಾಜರು ನಿರ್ಮಿಸಿರಬಹುದು ಎಂದು ಊಹಿಸಲಾಗಿದೆ.

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ವಿಶೇಷವೆನೆಂದರೆ ಈ ದೇವಾಲಯವೆಲ್ಲಾ ಒಂದೇ ಕಲ್ಲಿನಲ್ಲಿ ನಿರ್ಮಿಸಿರುವುದಾಗಿದೆ. ಒಂದು ಗ್ರಾನೈಟ್ ಬೆಟ್ಟದ ಮೇಲಿನಿಂದ ಕೆತ್ತಿರುವುದು ಎಂದು ಚರಿತ್ರಕಾರರು ಲೆಕ್ಕ ಹಾಕಿದ್ದಾರೆ. ಈ ದೇವಾಲಯವು ಅತ್ಯಂತ ದೊಡ್ಡದಾಗಿದೆ. ಕೈಲಾಸ ದೇವಾಲಯವನ್ನು ಪ್ರಪಂಚದಲ್ಲಿಯೇ ಏಕ ಶಿಲ ಫಲಕದಿಂದ ನಿರ್ಮಿಸಿದ ಕಟ್ಟಡವಾಗಿ ಖ್ಯಾತಿ ಪಡೆದಿದೆ.

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ಈ ದೇವಾಲಯವನ್ನು ನಿರ್ಮಿಸುವುದಕ್ಕೆ ಸುಮಾರು 4 ಲಕ್ಷ ಟನ್ ಕಲ್ಲಿನಿಂದ ನಿರ್ಮಿಸಿರುವುದಾಗಿದೆ ಎಂದು ಕೆಲವು ಆಧಾರಗಳು ತಿಳಿಸುತ್ತವೆ. ಕೆಲವು ಸಾವಿರ ವರ್ಷಗಳ ಹಿಂದೆ ಇಂತಹ ದೊಡ್ಡ ದೇವಾಲಯವನ್ನು ಹೇಗೆ ನಿರ್ಮಿಸಿದರು? ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದು ಬಿಟ್ಟಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X