Search
  • Follow NativePlanet
Share
» »ಮೈಸೂರು ಮೃಗಾಲಯಕ್ಕೊಂದು ಭೇಟಿ

ಮೈಸೂರು ಮೃಗಾಲಯಕ್ಕೊಂದು ಭೇಟಿ

By Vijay

ಪಾರಂಪರಿಕ ನಗರ, ಸಾಂಸ್ಕೃತಿಕ ರಾಜಧಾನಿ ಎಂಬೆಲ್ಲ ಮನ್ನಣೆಗಳಿಸಿರುವ ಮೈಸೂರು ನಗರದ ಹೃದಯ ಭಾಗದಲ್ಲಿ ವನ್ಯಜೀವಿ ಛಾಯಾಚಿತ್ರ ಪ್ರಿಯ ಪ್ರವಾಸಿಗರಿಗೊಂದು ಹೇಳಿ ಮಾಡಿಸಿದಂತಹ ಅದ್ಭುತ ಆಕರ್ಷಣೆಯಿದೆ. ಅದುವೇ ಮೈಸೂರು ಮೃಗಾಲಯ. ಅಧಿಕೃತವಾಗಿ ಶ್ರೀ ಚಾಮರಾಜೇಂದ್ರ ಮೃಗಾಲಯ ಎಂದು ಕರೆಯಲ್ಪಡುವ ಈ ಪ್ರಸಿದ್ಧ ಉದ್ಯಾನ ಭಾರತದ ಪುರಾತನ ಮೃಗಾಲಯಗಳ ಪೈಕಿ ಒಂದಾಗಿದ್ದು ಸುಮಾರು 157 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಸುಸಜ್ಜಿತವಾಗಿ ವಿನ್ಯಾಸಗೊಳಿಸಲ್ಪಟ್ಟಿದೆ.

ಸಾಮಾನ್ಯವಾಗಿ ಮಕ್ಕಳಿಗೆ ಕಾಡು ಅಥವಾ ಕಾಡಲ್ಲಿರುವ ಪ್ರಾಣಿಗಳನ್ನು ನೋಡುವುದು ಎಂದರೆ ತುಂಬಾನೆ ಇಷ್ಟ. ಕೇವಲ ಮಕ್ಕಳೇಕೆ, ಹಿರಿಯರಿಗೂ ಇದು ಖುಷಿ ಕೊಡುವಂತಹ ಸಂಗತಿ. ಆದರೆ ಕಾಡಲ್ಲಿರುವ ವಿವಿಧ ಪ್ರಾಣಿ ಪಕ್ಷಿಗಳನ್ನು ನೋಡಲು ಹೊರಡುವುದು ತುಸು ಕಷ್ಟಕರ. ಅಲ್ಲದೆ ಸಾಕಷ್ಟು ಸಮಯವೂ ಪೋಲು. ಹೀಗಿರುವಾಗ, ಒಂದೆ ಒಂದು ಸ್ಥಳದಲ್ಲಿ ಸಾಕಷ್ಟು ವಿಧ ವಿಧದ ಪ್ರಾಣಿ ಪಕ್ಷಿಗಳನ್ನು ನಿರಾಯಾಸವಾಗಿ ನೋಡುವುದೆಂದರೆ...ಖಂಡಿತವಾಗಿಯೂ ಎಲ್ಲರಿಗೂ ಇಷ್ಟವಾಗುತ್ತದೆ. ಇಂತಹ ಒಂದು ಸುಂದರ ಅನುಭವವನ್ನು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿ ಪಡೆದುಕೊಳ್ಳಬಹುದು.

ಮಂಗಳವಾರವೊಂದನ್ನು ಹೊರತುಪಡಿಸಿ ವಾರದ ಎಲ್ಲ ದಿನವೂ ಈ ಮೃಗಾಲಯ ಭೇಟಿ ನೀಡುವವರಿಗೆಂದು ಬೆಳಿಗ್ಗೆ 8.30 ಘಂಟೆಯಿಂದ ಸಂಜೆ 5.30 ರ ವರೆಗೆ ತೆರೆದಿರುತ್ತದೆ. ಪ್ರವೇಶ ಶುಲ್ಕ ರೂ 50/- ಒಬ್ಬರಿಗೆ. ಇನ್ನೂ ಮೃಗಾಲಯವು ಎರಡು ಕಿ.ಮೀ ಗಳಷ್ಟು ಪಾದಚಾರಿ ಮಾರ್ಗ ಹೊಂದಿರುವುದರಿಂದ ನಡೆಯಲಾಗದವರು ಅಥವಾ ಹಿರಿಯರಿಗೆಂದು ಬ್ಯಾಟರಿ ಚಾಲಿತ ವಾಹನವಿದ್ದು ಅದರ ಸೇವೆಯನ್ನು ಪಡೇಯಬಹುದು.

ಮೈಸೂರು ಮೃಗಾಲಯದಲ್ಲಿ ಒಟ್ಟಾರೆಯಾಗಿ 150 ಕ್ಕೂ ಅಧಿಕ ಬಗೆಯ ಪ್ರಾಣಿ ಪಕ್ಷಿಗಳನ್ನು ಕಾಣಬಹುದಾಗಿದೆ. ಇತ್ತೀಚಿಗಷ್ಟೆ ಶ್ರೀಲಂಕಾ ದೇಶದಿಂದ ಹಸಿರು ಅನಾಕೊಂಡಾ ಹೆಬ್ಬಾವುಗಳನ್ನು ಇಲ್ಲಿ ಕರೆತರಲಾಗಿದೆ. ಪ್ರಸ್ತುತ ಲೇಖನವು ಮೈಸೂರು ಮೃಗಾಲಯದ ಕೆಲ ಪ್ರಾಣಿ ಪಕ್ಷಿಗಳ ಚಿತ್ರ ಸವಾರಿಯನ್ನು ಮಾಡಿಸುತ್ತದೆ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯದ ಪ್ರವೇಶ ದ್ವಾರ.

ಚಿತ್ರಕೃಪೆ: Punithsureshgowda

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಮೃಗಾಲಯದಲ್ಲಿರುವ ರಾಯಲ್ ಬೆಂಗಾಲ್ ಹುಲಿ.

ಚಿತ್ರಕೃಪೆ: Dhar

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಮೃಗಾಲಯದಲ್ಲಿ ಕಂಡುಬರುವ ಗೌರ್ (ಕಾಡೆತ್ತು/ವನವೃಷಭ).

ಚಿತ್ರಕೃಪೆ: VasuVR

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಕಾಡಿನ ರಾಜ ಎಂದೆ ಖ್ಯಾತಿ ಪಡೆದ ಏಷಿಯಾದ ಸಿಂಹ....

ಚಿತ್ರಕೃಪೆ: Mutyalarao

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಅಫ್ರಿಕಾ ಮೂಲದ ಬಬೂನ್ ಕೋತಿ.

ಚಿತ್ರಕೃಪೆ: VasuVR

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಎರಡು ಕೊಂಬುಗಳುಳ್ಳ ಖಡ್ಗಮೃಗ ಅಥವಾ ಘೇಂಡಾಮೃಗ.

ಚಿತ್ರಕೃಪೆ: VasuVR

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಭಾರತೀಯ ಗ್ರೇಟ್ ಹಾರ್ನ್ ಬಿಲ್ ಪಕ್ಷಿ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಬಿಳಿ ಹಾಗೂ ಗುಲಾಬಿ ವರ್ಣದ ಫ್ಲೆಮಿಂಗೊ ಹಕ್ಕಿ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಜಗತ್ತಿನ ಹಾರಬಹುದಾದ ಅತಿ ದೊಡ್ಡ ಹಕ್ಕಿ ಕ್ರೇನ್ ಪಕ್ಷಿ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಒಂದು ರೀತಿಯ ವಿಭಿನ್ನವಾದ ಹಕ್ಕಿ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಗಂಭೀರವಾಗಿ ವಿರಮಿಸುತ್ತಿರುವ ಮೃಗಾಲಯದಲ್ಲಿನ ಕಾಡೆಮ್ಮೆ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಘಂಟೆಗೆ 90 ಕ್ಕೂ ಅಧಿಕ ಕಿ.ಮೀ ಸಾಗಬಲ್ಲ ಚಿರತೆ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಮೃಗಾಲಯದಲ್ಲಿ ಕಂಡುಬರುವ ಭಾರತೀಯ ತೋಳ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಮೃಗಾಲಯದಲ್ಲಿರುವ ಸ್ಲಾತ್ ಕರಡಿ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಸ್ವಚ್ಛಂದವಾಗಿ ಮೇಯುತ್ತಿರುವ ಜಿಂಕೆಗಳು.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ತಂಪಾದ ಜೌಗು ಪ್ರದೇಶದಲ್ಲಿ ಕಾಲ ಕಳೆಯುತ್ತಿರುವ ಬಾತುಗಳು.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ನಿಗದಿಪಡಿಸಲಾದ ವಿಶಾಲವಾದ ಸ್ಥಳದಲ್ಲಿ ಜೀವನ ಸಾಗಿಸುತ್ತಿರುವ ಆನೆಗಳು.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

"ಮೀರ್ ಕ್ಯಾಟ್" ಎಂದು ಕರೆಯಲ್ಪಡುವ ಒಂದು ವಿಶಿಷ್ಟ ಸಸ್ತನಿ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಸಾಮಾನ್ಯವಾಗಿ ರಾತ್ರಿಅ ಸಮಯದಲ್ಲಿ ಮೇಯುತ್ತ ದಿನವಿಡಿ ವಿಶ್ರಮಿಸುವ ಕಡವೆಗಳು.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಗಾಜಿನ ಮನೆಯಲ್ಲಿ ಇಡಲಾದ ಒಂದು ಬಗೆಯ ಹಾವು.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ನೋಡಲು ಆಕರ್ಷಕವಾಗಿ ಕಾಣುವ ವೈನ್ ಹಾವು.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಇತರೆ ಹಾವುಗಳನ್ನು ತಿಂದು ಬದುಕುವ ವಿಷ್ಪುರಿತ ಕಾಳಿಂಗ ಸರ್ಪ ಅಥವಾ ಕಿಂಗ್ ಕೋಬ್ರಾ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಶ್ರೀಲಂಕಾದಿಂದ ಕರೆತರಲಾಗಿರುವ ಹಸಿರು ಅನಾಕೊಂಡಾ ಹಾವು.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಕೊಳದಿಂದ ತುಸು ದೂರದಲ್ಲಿ ವಿರಮಿಸುತ್ತಿರುವ ಮೊಸಳೆ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಸುಡು ಬಿಸಿಲಿನಲ್ಲಿ ತಂಪಾದ ನೀರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮೊಸಳೆ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಒಂದು ವಿಶಾಲವಾದ ಪ್ರದೇಶವು ಗಿಡಮರಗಳಿಂದ ತುಂಬಿದ್ದು ಮೇಲ್ಭಾಗದಿಂದ ಸಂಪೂರ್ಣವಾಗಿ ಜಾಳಿಗೆಯನ್ನು ಹೊಂದಿದೆ. ಇಲ್ಲಿ ಪಕ್ಷಿಗಳು ಸ್ವಚ್ಛಂದವಾಗಿ ಗಿಡದಿಂದ ಗಿಡಕ್ಕೆ ಹಾರುತ್ತಿರುವುದನ್ನು ನೀವು ಗಮನಿಸಬಹುದು. ಇದಕ್ಕೆಂದೆ ಕಬ್ಬಿಣದ ಸರಪಳಿಗಳ ಪರದೆಯ ಪ್ರವೇಶ ದ್ವಾರವಿದೆ. ಪಕ್ಷಿಗಳ ಜೊತೆಯಲ್ಲೆ ನೀವು ಒಬ್ಬರಾಗಿರುವ ಅನುಭವ ನಿಮ್ಮದಾಗುತ್ತದೆ ಈ ಸ್ಥಳವನ್ನು ಪ್ರವೇಶಿಸಿದಾಗ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಈ ಸ್ಥಳದಲ್ಲಿ ಕಂಡುಬರುವ ಪಕ್ಷಿಗಳು.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ವಿರಮಿಸುತ್ತಿರುವ ಹಕ್ಕಿಗಳು.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಮತ್ತೊಂದು ನೋಟ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಕೊಕ್ಕರೆ, ಬಾತು, ಹೆಬ್ಬಾತು ಹೀಗೆ ವಿಧ ವಿಧದ ಹಕ್ಕಿಗಳು ವಾಸವಾಗಿವೆ ಇಲ್ಲಿ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಪೆಲಿಕನ್ ಹಕ್ಕಿಗಳು.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಪೆಲಿಕನ್ ಹಕ್ಕಿಗಳು.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ದೈತ್ಯಾಕಾರದ ಪೆಲಿಕನ್ ಹಕ್ಕಿಗಳು.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಕೆಮೆನ್ ಎಂದೆ ಕರೆಯಲ್ಪಡುವ ತುಸು ಚಿಕ್ಕ ಗಾತ್ರದ ಮೊಸಳೆ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ನೀರಾನೆ ಅಥವಾ ಹಿಪ್ಪೊ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಅಚ್ಚಲ್ಲಿ ನಿರ್ಮಿಸಿದಂತೆ ಅತಿ ಸುಂದರ ವರ್ಣಗಳಿಂದ ಕೂಡಿರುವ ಒಂದು ಹಕ್ಕಿ.

ಮೈಸೂರು ಮೃಗಾಲಯ:

ಮೈಸೂರು ಮೃಗಾಲಯ:

ಎತ್ತರ ಕಾಯದ ಜಿರಾಫೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X