Search
  • Follow NativePlanet
Share
» » ‘ಮೈಸೂರು ಮೃಗಾಲಯ’ ಈ ವಿಷ್ಯದಲ್ಲಿ ದೇಶಕ್ಕೇ ನಂ.1

 ‘ಮೈಸೂರು ಮೃಗಾಲಯ’ ಈ ವಿಷ್ಯದಲ್ಲಿ ದೇಶಕ್ಕೇ ನಂ.1

'ಮೈಸೂರು ಮೃಗಾಲಯ' ಎಂದೇ ಜನಪ್ರಿಯವಾಗಿರುವ ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಈಗ ದೇಶದ ಮೂರನೇ ಅತ್ಯುತ್ತಮ ಮೃಗಾಲಯ ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರವು ಘೋಷಿಸಿದೆ. ಭುವನೇಶ್ವರದಲ್ಲಿ ಮೃಗಾಲಯದ ನಿರ್ದೇಶಕರ ಸಮಾವೇಶವನ್ನು ನಡೆಸಿದ ಕೇಂದ್ರ ಮೃಗಾಲಯ ಪ್ರಾಧಿಕಾರವು ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೇಶಾದ್ಯಂತ ಸುಮಾರು 150 ಮೃಗಾಲಯಗಳಿದ್ದು, ಪಟ್ಟಿಯ ಪ್ರಕಾರ, ಡಾರ್ಜಿಲಿಂಗ್‌ನಲ್ಲಿರುವ ಪದ್ಮಜಾ ನಾಯ್ಡು ಹಿಮಾಲಯನ್ ಝೂಲಾಜಿಕಲ್ ಪಾರ್ಕ್ ಅತ್ಯುತ್ತಮ ಮೃಗಾಲಯ ಎಂದು ಘೋಷಿಸಲ್ಪಟ್ಟಿದೆ. ಹಾಗೆಯೇ ಚೆನ್ನೈನ ಅರಿಗ್ನರ್ ಅಣ್ಣಾ ಝೂಲಾಜಿಕಲ್ ಪಾರ್ಕ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕರ್ನಾಟಕದ ಮೈಸೂರಿನ ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಮೂರನೇ ಸ್ಥಾನದಲ್ಲಿದೆ.

ಇದೀಗ ಮೂರನೇ ಅತ್ಯುತ್ತಮ ಮೃಗಾಲಯವಾಗಿ ಹೊರಹೊಮ್ಮಿದ ಮೈಸೂರು ಮೃಗಾಲಯದ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ...

157 ಎಕರೆ ವಿಸ್ತೀರ್ಣದಲ್ಲಿರುವ ಮೃಗಾಲಯ

157 ಎಕರೆ ವಿಸ್ತೀರ್ಣದಲ್ಲಿರುವ ಮೃಗಾಲಯ

ಮೈಸೂರು ಮೃಗಾಲಯವನ್ನು ಮಹಾರಾಜ ಚಾಮರಾಜೇಂದ್ರ ಒಡೆಯರ್ ಅವರು 1892 ರಲ್ಲಿ ಸ್ಥಾಪಿಸಿದರು. ಸ್ವಾತಂತ್ರ್ಯದ ನಂತರ ಇದನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು. ಮೈಸೂರಿನ ಅರಮನೆಯ ಸಮೀಪದಲ್ಲಿರುವ ಈ ಮೃಗಾಲಯವು 157 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಇದು ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಸಿದ್ಧವಾದ ಮೃಗಾಲಯಗಳಲ್ಲಿ ಒಂದಾಗಿದೆ. ಮೈಸೂರು ಮೃಗಾಲಯದಲ್ಲಿ ಆನೆಗೆ ಮಾಡಿದ ಸಿಸೇರಿಯನ್ ಹೆರಿಗೆಯಿಂದಾಗಿ ಜಾಗತಿಕ ಮನ್ನಣೆ ಸಿಕ್ಕಿತು. ಇದಕ್ಕೆ ಸಮೀಪದಲ್ಲಿರುವ ಕಾರಂಜಿ ಲೇಕ್ ಅನ್ನು 1976 ರಲ್ಲಿ ಮೃಗಾಲಯದ ವ್ಯಾಪ್ತಿಗೆ ಒಳಪಡಿಸಲಾಯಿತು. ಇದು ದೋಣಿ ವಿಹಾರಕ್ಕೆ ಪ್ರಶಾಂತ ಸ್ಥಳವಾಗಿದೆ.

ಮೈಸೂರು ಮೃಗಾಲಯದ ಇತಿಹಾಸ

ಮೈಸೂರು ಮೃಗಾಲಯದ ಇತಿಹಾಸ

ಈ ಮೃಗಾಲಯವನ್ನು ಆರಂಭದಲ್ಲಿ ಅರಮನೆ ಮೃಗಾಲಯ ಎಂದು ಹೆಸರಿಸಲಾಗಿತ್ತು. ರಾಜಮನೆತನದವರು ಮಾತ್ರ ಭೇಟಿ ನೀಡುತ್ತಿದ್ದರು. ಆದರೆ, ಮಹಾರಾಜ ಚಾಮರಾಜೇಂದ್ರ ಒಡೆಯರ್ ನಂತರ ಜನಸಾಮಾನ್ಯರಿಗೂ ಪ್ರವೇಶಕ್ಕೆ ಅನುಮತಿ ನೀಡಿದರು. 1892 ರಲ್ಲಿ ಪ್ರಾರಂಭವಾದ ಮೃಗಾಲಯವು ವಿವಿಧ ರಾಜರು ಮತ್ತು ಸರ್ಕಾರಗಳ ನಿಯಂತ್ರಣದಲ್ಲಿದೆ. 1909 ರಲ್ಲಿ ಮೃಗಾಲಯವನ್ನು ಶ್ರೀ ಚಾಮರಾಜೇಂದ್ರ ಮೃಗಾಲಯ ಎಂದು ಮರುನಾಮಕರಣ ಮಾಡಲಾಯಿತು. ಮಹಾರಾಜ ಚಾಮರಾಜೇಂದ್ರ ಒಡೆಯರ್ ಅವರು ಮೃಗಾಲಯವನ್ನು ನಿರ್ಮಿಸುವಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸಿದ್ದಾರೆ.

ಆದ್ದರಿಂದ ಅವರನ್ನು ಗೌರವಿಸಲು, ಅವರ ಹೆಸರನ್ನು ಅಧಿಕೃತವಾಗಿ ಇಡಲಾಗಿದೆ. ಇಲ್ಲಿಯವರೆಗೆ,ಮಹಾರಾಜರು ಯುರೋಪ್ ದೇಶಗಳು ಮತ್ತು ಆಫ್ರಿಕಾಕ್ಕೆ ಭೇಟಿ ನೀಡಿದಾಗ, ತಮ್ಮನ್ನು ಆಕರ್ಷಿಸುವ ಪ್ರಾಣಿಗಳನ್ನು ತರುತ್ತಿದ್ದರು. ಇವುಗಳಲ್ಲಿ ಜಿರಾಫೆ, ಜಿಂಕೆ, ಕರಡಿಗಳು, ಚಿಂಪಾಂಜಿ ಮತ್ತು ಪ್ರೈಮೇಟ್‌ಗಳು ಸೇರಿವೆ.

ಮೃಗಾಲಯ ಮೊದಲು ಇಷ್ಟು ದೊಡ್ಡದಾಗಿರಲಿಲ್ಲ

ಮೃಗಾಲಯ ಮೊದಲು ಇಷ್ಟು ದೊಡ್ಡದಾಗಿರಲಿಲ್ಲ

ಮೈಸೂರು ಮೃಗಾಲಯ ದೊಡ್ಡದಾಗಿ ಆರಂಭವಾಗಲಿಲ್ಲ. ಮೊದಲಿಗೆ, ಮೃಗಾಲಯವು ಕೇವಲ 10.9 ಎಕರೆ ಭೂಮಿಯನ್ನು ಹೊಂದಿತ್ತು. ಕ್ರಮೇಣ ಕಾಲಾನಂತರದಲ್ಲಿ, ಹೆಚ್ಚಿನ ಭೂಮಿಯನ್ನು ಪಡೆದು ಹೆಚ್ಚಿನ ಪ್ರಾಣಿಗಳಿಗೆ ಆಶ್ರಯ ನೀಡಲಾಯಿತು. ಮೈಸೂರು ಮಹಾರಾಜರು ಮತ್ತು ಸರ್ಕಾರವು ಒಟ್ಟಾಗಿ ತೋಟಗಳನ್ನು ಬೆಳೆಸಿದರು ಹಾಗೂ ಪೋಷಿಸಿದರು. ಮೃಗಾಲಯದ ಅಧಿಕೃತ ನಿಯಂತ್ರಣವನ್ನು 1948 ರಲ್ಲಿ ತೋಟಗಾರಿಕೆ ಇಲಾಖೆಗೆ, ನಂತರ 1972 ರಲ್ಲಿ ಅರಣ್ಯ ಇಲಾಖೆಗೆ ವರ್ಗಾಯಿಸಲಾಯಿತು. 2001 ರಲ್ಲಿ, ಕರ್ನಾಟಕದ ಮೃಗಾಲಯ ಪ್ರಾಧಿಕಾರದ ಅಡಿಯಲ್ಲಿ ರಾಜ್ಯದ ಎಲ್ಲಾ ಮೃಗಾಲಯಗಳ ಕ್ಲಬ್ಬಿಂಗ್ ನಡೆಯಿತು.

ಮೃಗಾಲಯದಲ್ಲಿರುವ ಸಸ್ಯ ಮತ್ತು ಪ್ರಾಣಿಗಳು

ಮೃಗಾಲಯದಲ್ಲಿರುವ ಸಸ್ಯ ಮತ್ತು ಪ್ರಾಣಿಗಳು

ಮೈಸೂರು ಮೃಗಾಲಯವು ಗೊರಿಲ್ಲಾ ಮತ್ತು ಮೂರು ಜಾತಿಯ ಘೇಂಡಾಮೃಗಗಳನ್ನು ಹೊಂದಿರುವ ಭಾರತದ ಏಕೈಕ ಮೃಗಾಲಯವಾಗಿದೆ. ಅತಿ ಹೆಚ್ಚು ಆನೆಗಳನ್ನು ಸಹ ನಾವು ಮೃಗಾಲಯದಲ್ಲಿ ಕಾಣಬಹುದು. ಮೃಗಾಲಯವು ಚಿಂಪಾಂಜಿಗಳು ಮತ್ತು ಒರಾಂಗುಟನ್‌ಗಳ ಮನೆಯಾಗಿದೆ. ಮೈಸೂರು ಮೃಗಾಲಯದಲ್ಲಿ ನೀವು ಕಾಣುವ ಇತರ ವಿಶಿಷ್ಟ ಪ್ರಾಣಿಗಳೆಂದರೆ ಜಿರಾಫೆಗಳು, ಜೀಬ್ರಾಗಳು, ಬಿಳಿ ಜಿಂಕೆಗಳು, ಆಫ್ರಿಕನ್ ಆನೆಗಳು, ಕರಡಿಗಳು, ಮುಳ್ಳುಹಂದಿಗಳು, ಘೇಂಡಾಮೃಗಗಳು, ಟ್ಯಾಪಿರ್, ನೀರುನಾಯಿಗಳು ಇತ್ಯಾದಿ.

ಬಿಳಿ ಮತ್ತು ನೀಲಿ ನವಿಲುಗಳು, ಸಿಲ್ವರ್ ಮತ್ತು ಗೋಲ್ಡನ್ ಫೆಸೆಂಟ್, ಹಾರ್ನ್ ಬಿಲ್, ಹಾರಲಾಗದ ಎಮು ಮತ್ತು ಆಸ್ಟ್ರಿಚ್, ಸ್ಪೂನ್ ಬಿಲ್, ಪೆಲಿಕನ್, ಬಣ್ಣದ ಕೊಕ್ಕರೆ, ಗಾಢ ಬಣ್ಣದ ಫ್ಲೆಮಿಂಗೊಗಳು, ಭಾರತದ ಅತಿದೊಡ್ಡ ಪಕ್ಷಿಯಾದ ಸಾರಸ್ ಕ್ರೇನ್ಸ್, ಲವ್ ಬರ್ಡ್ಸ್, ವಿವಿಧ ರೀತಿಯ ಗಿಳಿಗಳು, ರಣಹದ್ದುಗಳು, ಹದ್ದುಗಳು ಇತ್ಯಾದಿಗಳನ್ನು ಇಲ್ಲಿ ಕಾಣಬಹುದು. ಅಷ್ಟೇ ಅಲ್ಲ, ನಾಗರಹಾವು, ಕಿಂಗ್ ಕೋಬ್ರಾ, ಹೆಬ್ಬಾವು, ಮೊಸಳೆಗಳು, ಅಲಿಗೇಟರ್‌ಗಳು ಮತ್ತು ಸ್ಟಾರ್ ಸ್ಟಡೆಡ್ ಆಮೆಗಳಂತಹ ಸರೀಸೃಪಗಳನ್ನು ನಾವಿಲ್ಲಿ ನೋಡಬಹುದು.

ಈ ಪಟ್ಟಿ ಇಲ್ಲಿಗೆ ಮುಗಿಯುವುದಿಲ್ಲ. ಮೃಗಾಲಯವು ಬಹಳ ಅಪರೂಪದ ಪ್ರಾಣಿಗಳನ್ನು ಹೊಂದಿದೆ. ಅವುಗಳೆಂದರೆ ಕೆಂಪು ಕಾಂಗರೂಗಳು, ಲೆಮರ್‌ಗಳು, ಸೂರ್ಯನ ಕರಡಿ, ಹೆಣ್ಣು ಚಿಂಪಾಂಜಿ, ಬಿಂಟುರಾಂಗ್, ಭಾರತೀಯ ರೈನೊಸರ್, ಹನುಮಾನ್ ಲಾಂಗುರ್‌ಗಳು, ಬಿಳಿ ನವಿಲು, ಭಾರತೀಯ ಸಿಂಹಗಳು, ಜೀಬ್ರಾ, ರಿಯಾ, ಕೆಂಪು ಐಬಿಸ್ ಮತ್ತು ಬಬೂನ್‌ಗಳು. ಮೃಗಾಲಯದಲ್ಲಿ ಮೂವತ್ತೈದು ಜಾತಿಯ ವಿಶಿಷ್ಟ ಅಲಂಕಾರಿಕ ಸಸ್ಯಗಳನ್ನು ಮತ್ತು ಭಾರತ ಮತ್ತು ವಿದೇಶಗಳ 85 ಜಾತಿಯ ಮರಗಳನ್ನು ನೋಡಬಹುದಾಗಿದೆ.

ಈ ಸಮಯದಲ್ಲಿ ಭೇಟಿ ಕೊಡಿ

ಈ ಸಮಯದಲ್ಲಿ ಭೇಟಿ ಕೊಡಿ

ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಮೃಗಾಲಯವು ಬೆಳಗ್ಗೆ 8:30 ರಿಂದ ಸಂಜೆ 5:30 ರವರೆಗೆ ತೆರೆದಿರುತ್ತದೆ. ಬೆಳಗ್ಗೆ 11:00 ಗಂಟೆಗೆ ಮೊದಲು ಅಥವಾ 3:00 ಗಂಟೆಯ ನಂತರ ಹೋಗಿ. ಏಕೆಂದರೆ ಮಧ್ಯಾಹ್ನದ ಸಮಯದಲ್ಲಿ, ಹೆಚ್ಚಿನ ಪ್ರಾಣಿಗಳು ಮತ್ತು ಪಕ್ಷಿಗಳು ಒಳಗೆ ಇರುತ್ತವೆ. ಇದರಿಂದಾಗಿ ಪ್ರವಾಸಿಗರು ಅವುಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ.

ಹಾಗಾಗಿ ಬೆಳಗ್ಗೆ ಅಥವಾ ಸಂಜೆಯ ಸಮಯದಲ್ಲಿ ಮೃಗಾಲಯಕ್ಕೆ ಭೇಟಿ ನೀಡಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಪಕ್ಷಿಗಳು ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಸಸ್ತನಿಗಳು ಸಕ್ರಿಯವಾಗಿರುತ್ತವೆ. ಮಧ್ಯಾಹ್ನದ ವೇಳೆ ಮೃಗಾಲಯಕ್ಕೆ ಭೇಟಿ ನೀಡುವವರು ಯಾವುದೇ ಪ್ರಾಣಿಗಳನ್ನು ನೋಡಲು ಸಾಧ್ಯವಾಗದಿರಬಹುದು. ಏಕೆಂದರೆ ಆ ಸಮಯದಲ್ಲಿ ಬಿಸಿಲಿನಿಂದಾಗಿ ಹಗಲಿನಲ್ಲಿ ಪ್ರಾಣಿಗಳು ವಿಶ್ರಾಂತಿ ಪಡೆಯಲು ಬಯಸುತ್ತವೆ.

ಮೃಗಾಲಯಕ್ಕೆ ಭೇಟಿ ನೀಡುವವರಿಗೆ ಟಿಪ್ಸ್

ಮೃಗಾಲಯಕ್ಕೆ ಭೇಟಿ ನೀಡುವವರಿಗೆ ಟಿಪ್ಸ್

*ಸುಲಭ ಪ್ರವೇಶಕ್ಕಾಗಿ ಮೃಗಾಲಯದಾದ್ಯಂತ ಸೈನ್‌ಬೋರ್ಡ್‌ಗಳಿವೆ. ನೀವು ಯಾವುದೇ ಪ್ರಾಣಿಗಳನ್ನು ನೋಡಲು ಮಿಸ್ ಮಾಡಬಾರದೆಂದರೆ ಅದನ್ನು ಅನುಸರಿಸಿ.

*ಪಾರ್ಕ್ ಒಳಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಅನುಮತಿಸಲಾಗುವುದಿಲ್ಲ. ಪ್ರತಿ ನೂರು ಮೀಟರ್‌ಗಳಿಗೆ ಆರ್‌ಒ ವಾಟರ್ ಪ್ಯೂರಿಫೈಯರ್‌ಗಳಿವೆ.

*ನೀವು ದಾರಿಯುದ್ದಕ್ಕೂ ವಿಶ್ರಾಂತಿ ಕುರ್ಚಿಗಳನ್ನು ಸಹ ಕಾಣಬಹುದು.

ಮೃಗಾಲಯಕ್ಕೆ ಹೋಗುವುದು ಹೇಗೆ?

ಮೃಗಾಲಯಕ್ಕೆ ಹೋಗುವುದು ಹೇಗೆ?

ಮೈಸೂರು ಬಸ್ ನಿಲ್ದಾಣದಿಂದ 3 ಕಿಮೀ ದೂರದಲ್ಲಿದೆ ಮೃಗಾಲಯ. ಮೈಸೂರು ಅರಮನೆಯಿಂದಾದರೆ 2 ಕಿಮೀ ದೂರದಲ್ಲಿದೆ. ಅರಮನೆ ಮತ್ತು ಮೃಗಾಲಯದ ನಡುವೆ ಕುದುರೆ ಬಂಡಿಗಳು ಓಡಾಡುತ್ತವೆ. ಇದಲ್ಲದೆ, ಸ್ಥಳೀಯ ಬಸ್ಸುಗಳು ಮತ್ತು ಆಟೋ-ರಿಕ್ಷಾಗಳು ಸುಲಭವಾಗಿ ಲಭ್ಯವಿವೆ. ಖಾಸಗಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರೆ, ಮೃಗಾಲಯದ ಪ್ರವೇಶದ್ವಾರದಲ್ಲಿ ಪಾರ್ಕಿಂಗ್ ಸೌಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X