Search
  • Follow NativePlanet
Share
» »ಕರ್ನಾಟಕದ ವೈಭವೋಪೇತ ಸಾಂಸ್ಕೃತಿಕ ರಾಜಧಾನಿ ಮೈಸೂರು - ಒಂದು ಒಳನೋಟ.

ಕರ್ನಾಟಕದ ವೈಭವೋಪೇತ ಸಾಂಸ್ಕೃತಿಕ ರಾಜಧಾನಿ ಮೈಸೂರು - ಒಂದು ಒಳನೋಟ.

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯೆಂದೇ ಕರೆಯಲ್ಪಡುವ ಮೈಸೂರು ರಾಜ್ಯದ ಎರಡನೇ ಅತಿ ದೊಡ್ಡ ನಗರವಾಗಿದ್ದು, ತನ್ನ ವೈಭವೋಪೇತ ಹಾಗೂ ಶ್ರೀಮಂತ ರಾಜಮನೆತನದ ವಾತಾವರಣದಿಂದ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ದ ಪ್ರವಾಸಿ ಕೇಂದ್ರವೆನಿಸಿದೆ. ಮೈಸೂರು ನಗರದ ಹಳೆಯ ಪ್ರಪಂಚದ ಮೋಡಿ ಅದರ ಜೊತೆಗೆ ಸುಸಜ್ಜಿತವಾದ ಉದ್ಯಾನಗಳು, ಪಾರಂಪರಿಕ ಮಹಲುಗಳು ಮತ್ತು ನೆರಳಿನ ಮಾರ್ಗಗಳು ಅದರ ಸಂದರ್ಶಕರ ಮನಸ್ಸಿನಲ್ಲಿ ಶಾಶ್ವತವಾದ ನೆನಪನ್ನು ಅಚ್ಚಳಿಯದಂತೆ ಇರಿಸುತ್ತದೆ.

2010 ರಲ್ಲಿ ಕೇಂದ್ರ ನಗರಾಭಿವೃದ್ಧಿ ಪ್ರಾಧಿಕಾರವು ನಡೆಸಿದ ರಾಷ್ಟ್ರವ್ಯಾಪಿ ಅಧ್ಯಯನದ ಪ್ರಕಾರ, ಮೈಸೂರು ಭಾರತದಲ್ಲಿ 'ಎರಡನೇ ಸ್ವಚ್ಛ ನಗರ' ಮತ್ತು ಕರ್ನಾಟಕದಲ್ಲಿ ಮೊದಲನೆಯದು ಎಂದು ಘೋಷಿಸಲಾಯಿತು. ಶ್ರೀಗಂಧದ, ಗುಲಾಬಿ ಮತ್ತು ಇನ್ನಿತರ ಸುಗಂಧಗಳ ಸುವಾಸನೆಗಳು ಮೈಸೂರಿನ ವಾತಾವರಣದಲ್ಲಿ ಸೇರಿ ಮೈಸೂರಿಗೆ ಶ್ರೀಂಗಂಧದ ನಗರವೆಂಬ ಬಿರುದಿಗೆ ಕಾರಣವಾಯಿತು.

23-mysorepalace1-1661164325.jpg -Properties

ಈ ನಗರವು 'ಅಥವಾ 'ಐವರಿ ಸಿಟಿ'(ದಂತದ ನಗರ) ಮತ್ತು ಹಲವಾರು ಅರಮನೆಗಳಿಗೆ ನೆಲೆಯಾಗಿರುವ ಮೈಸೂರನ್ನು 'ಅರಮನೆಗಳ ನಗರ' ವೆಂದೂ ಕರೆಯಲಾಗುತ್ತದೆ ಅಲ್ಲದೆ ಭಾರತದಲ್ಲಿ ಅತ್ಯಂತ ಹೆಚ್ಚಾಗಿ ಭೇಟಿ ಕೊಡಲ್ಪಡುವ ಯೋಗ ಕೇಂದ್ರಗಳಿಗೆ ನೆಲೆಯಾಗಿರುವ ಮೈಸೂರನ್ನು 'ಸಿಟಿ ಆಫ್ ಯೋಗ' ಎಂದೂ ಕರೆಯಲಾಗುತ್ತದೆ. ಮೈಸೂರಿನ ಯೋಗ ಕೇಂದ್ರಗಳಿಂದ ನಡೆಸಲಾಗುವ ಅಸ್ಟಾಂಗ ಯೋಗ ಕಾರ್ಯಕ್ರಮಗಳು ಭಾರತದ ಮಾತ್ರವಲ್ಲದೆ ವಿದೇಶದ ಯೋಗ ಉತ್ಸಾಹಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ.

ಸ್ಥಳೀಯ ಸಂಸ್ಕೃತಿ ಮತ್ತು ಆಕರ್ಷಣೆಗಳು - ಮೈಸೂರಿನಲ್ಲಿರುವ ಪ್ರವಾಸಿ ಸ್ಥಳಗಳು.

ಮೈಸೂರಿನಲ್ಲಿರುವ ಸಂಸ್ಕೃತಿ, ಕಲೆ, ಕರಕುಶಲತೆ, ಆಹಾರ ಮತ್ತು ಜೀವನ ಶೈಲಿಯನ್ನು ಒಮ್ಮೆ ನೋಡಿದವರು ಇಲ್ಲಿಯ ಸಂಸ್ಕೃತಿಯ ಗುಣಗಾನ ಮಾಡುವಂತೆ ಮಾಡುತ್ತದೆ. ಈ ನಗರದಲ್ಲಿ ಎಲ್ಲಾ ಜಾತಿ ಪಂಗಡ ಹಾಗೂ ಧರ್ಮದ ಜನರು ವಾಸಿಸುತ್ತಿದ್ದು ಎಲ್ಲಾ ಜೀವನದ ಅಂಶಗಳನ್ನೂ ನಗರವು ಒಳಗೊಂಡಿದ್ದು ಇದನ್ನು ಕಾಸ್ಮೋ ಪಾಲಿಟನ್ ನಗರವನ್ನಾಗಿಸಿದೆ. ಮೈಸೂರು ಜಿಲ್ಲೆಯ ಆಡಳಿತ ಕೇಂದ್ರವಾದ ಮೈಸೂರು ನಗರವು ತನ್ನ ಸಂದರ್ಶಕರಿಗೆ ಹಲವಾರು ಆಕರ್ಷಣೆಗಳನ್ನು ಒದಗಿಸಿಕೊಡುತ್ತದೆ.

ಈ ಆಕರ್ಷಣೆಗಳಲ್ಲಿ ಪರಂಪರೆಯ ಸ್ಮಾರಕಗಳಾದ ಅರಮನೆಗಳಿಂದ ದೇವಾಲಯಗಳು, ವಸ್ತು ಸಂಗ್ರಹಾಲಯಗಳು, ಲೇಕ್ ಗಲು ಮತ್ತು ಉದ್ಯಾನವನಗಳವರೆ ಇದೆ. ನಗರದಲ್ಲಿ ಹಲವಾರು ಅರಮನೆಗಳು ನೆಲೆಸಿರುವುದರಿಂದ ಮೈಸೂರಿಗೆ 'ಅರಮನೆಗಳ ನಗರ' ಎಂಬ ಬಿರುದು ಇದೆ. ಮೈಸೂರು ಅರಮನೆ ಅಥವಾ ಅಂಬಾ ಅರಮನೆಯು ನಗರದಲ್ಲಿರುವ ಅತ್ಯಂತ ಪ್ರಮುಖ ಅರಮನೆಯಾಗಿದ್ದು, ಇದು ಭಾರತದಲ್ಲಿ ಅತ್ಯಂತ ಹೆಚ್ಚು ಭೇಟಿ ಕೊಡಲ್ಪಡುವ ಸ್ಮಾರಕ ಎಂದು ಪರಿಗಣಿಸಲ್ಪಟ್ಟಿದೆ.

ಮೈಸೂರು ಝೂ, ಚಾಮುಂಡೇಶ್ವರಿ ದೇವಾಲಯ, ಮಹಾಬಲೇಶ್ವರ ದೇವಾಲಯ, ಸೈಂಟ್ ಫಿಲೋಮಿನಾ ಚರ್ಚ್, ಬೃಂದಾವನ ಗಾರ್ಡನ್, ಜಗನ್ಮೋಹನ ಅರಮನೆ ಆರ್ಟ್ ಗ್ಯಾಲರಿ, ಲಲಿತ ಮಹಲ್ ಅರಮನೆ, ಜಯಲಕ್ಷ್ಮಿ ವಿಲಾಸ್ ಮಾನ್ಶನ್, ರೈಲ್ವೇ ಮ್ಯೂಸಿಯಂ, ಕಾರಂಜಿ ಲೇಕ್, ಮತ್ತು ಕುಕ್ಕರಹಳ್ಳೀ ಲೇಕ್ ಇವು ಮೈಸೂರಿನ ಕೆಲವು ಆಕರ್ಷಣೆಗಳು.

ಜನರು ಮೈಸೂರಿನ ಆಸುಪಾಸಿನ ಸ್ಥಳಗಳಿಗೆ ಭೇಟಿ ಕೊಡಲೂ ಕೂಡ ಮೈಸೂರಿಗೆ ಧಾವಿಸುತ್ತಾರೆ. ಮೈಸೂರಿನ ಸುತ್ತಮುತ್ತಲಿರುವ ಸ್ಥಳಗಳಲ್ಲಿ ಶ್ರೀರಂಗಪಟ್ಟಣ, ನಂಜನಗೂಡು, ಶಿವನಸಮುದ್ರ ಜಲಪಾತಗಳು, ತಲಕಾಡು, ಮೇಲುಕೋಟೆ, ಸೋಮನಾಥಪುರ, ಹಳೇಬೀಡು, ಬೇಲೂರು, ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಶ್ರವಣ ಬೆಳಗೊಳ ಮತ್ತು ಕೂರ್ಗ್/ ಕೊಡಗು ಇವು ಪ್ರಮುಖವಾದವುಗಳು.

ರಾಮನಗರದಂತಹ ಉಪನಗರಗಳು ರಾಕ್ ಕೈಂಬರ್ ಉತ್ಸಾಹಿಗಳಿಗೆ ಅತ್ಯುತ್ತಮ ಅವಕಾಶಗಳನ್ನು ನೀಡುತ್ತವೆ. ಮೈಸೂರಿನ ಪಕ್ಕದಲ್ಲಿರುವ ಅತ್ಯುತ್ತಮ ಮತ್ತು ಪ್ರಮುಖವಾದ ರಾಕ್ ಕ್ಲೈಂಬಿಂಗ್ ಸ್ಥಳಗಳಲ್ಲಿ ಸಾವಣದುರ್ಗ, ಕಬ್ಬಾಳ್ ದುರ್ಗ, ತುಮಕೂರು, ತುರಹಳ್ಳಿ ಮತ್ತು ಕನಕಪುರ ಪ್ರಮುಖವಾದವುಗಳಾಗಿವೆ. ಬಾದಾಮಿ ಮತ್ತು ಹಂಪಿಯಲ್ಲಿನ ಕಲ್ಲಿನ ರಚನೆಗಳು ಮೈಸೂರು ನಗರಕ್ಕೆ ಭೇಟಿ ನೀಡುವ ರಾಕ್ ಆರೋಹಿಗಳನ್ನು ಆಕರ್ಷಿಸುತ್ತವೆ.

ಬಿಳಿಗಿರಿರಂಗ ಬೆಟ್ಟಗಳು, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಇವುಗಳು ಟ್ರಕ್ಕರ್ ಗಳಿಗೆ ಅತ್ಯಂತ ಮೆಚ್ಚಿನ ಸ್ಥಳವಾಗಿದೆ ಗಾಳಹಾಕಿ ಮೀನು ಹಿಡಿಯುವವರು ಮೈಸೂರಿನ ಹೊರವಲಯದಲ್ಲಿರುವ ಕಾವೇರಿ ಮೀನುಗಾರಿಕೆ ಶಿಬಿರಕ್ಕೆ ಭೇಟಿ ನೀಡುತ್ತಾರೆ. ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ, ಬಿ ಆರ್ ಹಿಲ್ಸ್ ಅಭಯಾರಣ್ಯ ಮತ್ತು ರಂಗನತಿಟ್ಟು ಪಕ್ಷಿಧಾಮ ಪಕ್ಷಿ ವೀಕ್ಷಕರಿಗೆ ಸ್ವರ್ಗವಾಗಿದೆ.

ಮೈಸೂರು ನಗರವು ದಂತದ ಕೆಲಸ, ಶ್ರೀಮಂತ ರೇಷ್ಮೇ, ಶ್ರೀಗಂಧದ ವಸ್ತುಗಳು, ಮರದ ಕೆತ್ತನೆಗಳು ಮುಂತಾದವುಗಳಿಗೆ ಹೆಸರುವಾಸಿಯಾಗಿದೆ. ಹತ್ತು ದಿವಸಗಳ ಕಾಲ ನಡೆಸಲಾಗುವ ಮೈಸೂರು ದಸರವು ಇಲ್ಲಿಯ ಅತ್ಯಂತ ಪ್ರಸಿದ್ದ ಆಚರಣೆಯಾಗಿದ್ದು, ಇದನ್ನು ಮೈಸೂರಿನ ಜನರಿಂದ ಅತ್ಯಂತ ಉಲ್ಲಾಸ ಮತ್ತು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ.

1mysore-22-1469172142-1661164335.jpg -Properties

ಮೈಸೂರಿಗೆ ಸಂಬಂಧಪಟ್ಟ ದಂತಕಥೆಗಳು ಮತ್ತು ಪುರಾಣಗಳು

ದೇವಿ ಭಾಗವತದ ಪ್ರಕಾರ ಪ್ರಾಚೀನ ಕಾಲದಲ್ಲಿ ಮೈಸೂರನ್ನು ರಾಕ್ಷಸರ ಅರಸ ಮಹಿಷಾಸುರ ಆಳುತ್ತಿದ್ದನೆನ್ನಲಾಗುತ್ತದೆ ಆದುದರಿಂದ ಈ ಊರಿಗೆ ಮಹಿಷ - ಊರು ಎಂಬ ಹೆಸರು ಬಂತೆನ್ನಲಾಗುತ್ತದೆ. ನಗರದ ಉತ್ತರ ಭಾಗದಲ್ಲಿರುವ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಹಾಗೂ ಈ ಪ್ರ್ಯಾಂತ್ಯದ ಜನರ ಇಷ್ಟ ದೈವವಾಗಿ ಪೂಜಿಸಲ್ಪಡುವ ದೇವಿ ಚಾಮುಂಡಿಯಿಂದ ಈ ರಾಕ್ಷಸನು ಕೊಲ್ಲಲ್ಪಟ್ಟ ಎಂದೂ ನಂಬಲಾಗುತ್ತದೆ. ಮಹಿಷ - ಊರು ಕಾಲಕ್ರಮೇಣ ಕನ್ನಡದಲ್ಲಿ ಮೈಸೂರು ಎಂದು ಕರೆಯಲ್ಪಟ್ಟು ನಂತರ ಇದು ಮೈಸೂರು ಎಂಬ ಹೆಸರನ್ನು ಪಡೆಯಿತು.

25-1443185620-brindavan2-1661164345.jpg -Properties

ಮೈಸೂರಿನ ಇತಿಹಾಸದ ಕಡೆಗೆ ಒಂದು ಪಕ್ಷಿ ನೋಟ

ಕ್ರಿ.ಪೂ 245 ರ ಪ್ರಾಚೀನ ಸಾಹಿತ್ಯದಲ್ಲಿ ಕಂಡು ಬರುವ ಹೇಳಿಕೆಗಳ ಪ್ರಕಾರ, ಮೈಸೂರು ಅಶೋಕ ರಾಜನ ಅತ್ಯಂತ ಪ್ರಮುಖ ಪ್ರದೇಶವಾಗಿತ್ತು ಎನ್ನಲಾಗುತ್ತದೆ. ಆದಾಗ್ಯೂ, ಮೈಸೂರಿನ ಮಹತ್ವದ ಐತಿಹಾಸಿಕ ದಾಖಲೆಗಳನ್ನು 10 ನೇ ಶತಮಾನದ ಯಿಂದ ಕಾಣಬಹುದು. ಈ ದಾಖಲೆಗಳ ಪ್ರಕಾರ, ಮೈಸೂರು 2 ನೇ ಶತಮಾನದಿಂದ 1004 ರವರೆಗೆ ಗಂಗ ರಾಜವಂಶದ ಆಳ್ವಿಕೆಯಲ್ಲಿತ್ತು ಎನ್ನಲಾಗುತ್ತದೆ.

ಸುಮಾರು ಒಂದು ಶತಮಾನದ ಕಾಲ ಈ ಪ್ರದೇಶವನ್ನು ಆಳಿದ ಚೋಳರು ಆಳಿದರು ನಂತರ ಮೈಸೂರು ಚಾಲುಕ್ಯ ರಾಜವಂಶದ ಆಳ್ವಿಕೆಗೆ ಒಳಪಟ್ಟಿತು, ಅವರು 10 ನೇ ಶತಮಾನದ ವರೆಗೆ ಈ ಸ್ಥಳವನ್ನು ಆಳಿದರು. 10 ನೇ ಶತಮಾನದಲ್ಲಿ ಚೋಳರು ಮತ್ತೆ ಮೈಸೂರಿನಲ್ಲಿ ಅಧಿಕಾರಕ್ಕೆ ಬಂದರು ಆದರೆ 12 ನೇ ಶತಮಾನದಲ್ಲಿ ಹೊಯ್ಸಳರಿಂದ ಪದಚ್ಯುತಗೊಂಡರು.

ಹೊಯ್ಸಳರು ಮೈಸೂರಿನಲ್ಲಿ ಹಲವಾರು ದೇವಾಲಯಗಳನ್ನು ನಿರ್ಮಿಸಿದರು ಮತ್ತು ಅಸ್ತಿತ್ವದಲ್ಲಿರುವ ದೇವಾಲಯಗಳನ್ನು ವಿಸ್ತರಿಸಿದರು. ವಿಜಯನಗರ ಸಾಮ್ರಾಜ್ಯದ ಸಾಮಂತರಾದ ಮೈಸೂರು ಯದುವಂಶವು ಕ್ರಿ.ಶ.1399 ರಲ್ಲಿ ಮೈಸೂರಿನ ಅರಸರಾದರು. ಯಾದವ ರಾಜವಂಶದ ಉತ್ತರಾಧಿಕಾರಿ ಎಂದು ನಂಬಲಾದ ಯದುವಂಶವು ಕಾಲಾಂತರದಲ್ಲಿ ಒಡೆಯರ್ ರಾಜವಂಶವಾಯಿತು.

ಕ್ರಿ.ಶ 1584ರಲ್ಲಿ ಬೆಟ್ಟದ ಚಾಮರಾಜ ಒಡೆಯರ್ ಅವರು ಮೈಸೂರಿನ ಕೋಟೆಯನ್ನು ಪುನರ್ ನಿರ್ಮಾಣಗೊಳಿಸಿ ಅದನ್ನು ಅವರ ಪ್ರಧಾನ ಕಚೇರಿಯನ್ನಾಗಿಸಿದರು. 1610 ರಲ್ಲಿ ಅವರು ತಮ್ಮ ರಾಜಧಾನಿಯನ್ನು ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಸ್ಥಳಾಂತರಿಸಿದರು. 1761 ರಿಂದ 1799 ರ ಅವಧಿಯಲ್ಲಿ ಮೈಸೂರನ್ನು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಆಳಿದರು. 1799 ರಲ್ಲಿ ಟಿಪ್ಪು ಸುಲ್ತಾನನ ಮರಣದ ನಂತರ, ಮೈಸೂರು ಮತ್ತೆ ಒಡೆಯರ್‌ಗಳ ರಾಜಧಾನಿಯಾಯಿತು.

ನಾಲ್ಕನೇ ಕೃಷ್ಣರಾಜ ಒಡೆಯರ್ ((1895-1940),ಅವರ ಅತ್ಯುತ್ತಮ ಯೋಜನೆಯ ಪ್ರಕಾರ, ಮೈಸೂರನ್ನು ವಿಶಾಲವಾದ ರಸ್ತೆಗಳು, ವಿಶಾಲವಾದ ರಸ್ತೆಗಳು, ಭವ್ಯವಾದ ಕಟ್ಟಡಗಳು ಮತ್ತು ಉದ್ಯಾನಗಳು ಮತ್ತು ಸರೋವರಗಳೊಂದಿಗೆ ಸುಂದರವಾದ ನಗರವಾಗಿ ಪರಿವರ್ತಿಸಿದರು.

stones-1536749933-1661164363.jpg -Properties

ಮೈಸೂರಿನ ಹವಾಮಾನ

ಕಾವೇರಿ ಮತ್ತು ಕಬಿನಿ ನದಿಗಳ ನಡುವೆ ಕರ್ನಾಟಕದ ದಕ್ಷಿಣಕ್ಕೆ ಸಮುದ್ರ ಮಟ್ಟದಿಂದ ಸರಿ ಸುಮಾರು 770 ಮೀಟರ್ ಎತ್ತರದಲ್ಲಿ ನೆಲೆಸಿರುವ ಮೈಸೂರು, ಪ್ರವಾಸಿಗರಿಗೆ ಮಧ್ಯಮ ಹವಾಮಾನವನ್ನು ನೀಡುತ್ತದೆ.

08-mysore-palace-1661164353.jpg -Properties

ಮೈಸೂರು ತಲುಪುವುದು ಹೇಗೆ?

ಬೆಂಗಳೂರಿನಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಮೈಸೂರಿಗೆ ರಸ್ತೆ ಮತ್ತು ರೈಲಿನಿಂದ ಸುಲಭವಾಗಿ ಪ್ರವೇಶಿಸಬಹುದು. ಮೈಸೂರು ವಿಮಾನ ನಿಲ್ದಾಣ ಅಥವಾ ಮಂಡಕಳ್ಳಿ ವಿಮಾನ ನಿಲ್ದಾಣವು ದೇಶೀಯ ವಿಮಾನ ನಿಲ್ದಾಣವಾಗಿದೆ ಮತ್ತು ಇದು ಅನೇಕ ಭಾರತೀಯ ನಗರಗಳಿಗೆ ನಿಯಮಿತ ವಿಮಾನಗಳನ್ನು ನಿರ್ವಹಿಸುತ್ತದೆ. ರೋಮಾಂಚಕ ಬೀದಿಗಳು ಮತ್ತು ಅದರ ಶ್ರೀಮಂತ ಇತಿಹಾಸದೊಂದಿಗೆ, ಮೈಸೂರು ನಿಜವಾಗಿಯೂ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X