Search
  • Follow NativePlanet
Share
» »ಈ ಊರಲ್ಲಿ ಜನರು ಕೋಳಿಯನ್ನು ಸಾಕೋದಿಲ್ಲ, ಮಂಚದಲ್ಲಿ ಮಲಗೋದಿಲ್ಲ, ಇಲ್ಲಿ ಎಲ್ಲವೂ ಮೈಲಾರಲಿಂಗ!

ಈ ಊರಲ್ಲಿ ಜನರು ಕೋಳಿಯನ್ನು ಸಾಕೋದಿಲ್ಲ, ಮಂಚದಲ್ಲಿ ಮಲಗೋದಿಲ್ಲ, ಇಲ್ಲಿ ಎಲ್ಲವೂ ಮೈಲಾರಲಿಂಗ!

ಇದೊಂದು ವಿಚಿತ್ರ ಊರು. ಈ ಊರಿನಲ್ಲಿ ಜನರು ಕೋಳಿಯನ್ನು ಸಾಕೋದಿಲ್ಲ. ಮಂಚಗಳೂ ಇಲ್ಲ . ಇಂದು ನಾವು ಹೇಳ ಹೊರಟಿರುವುದು ಒಂದು ವಿಶೇಷ ಆಚರಣೆಗಳನ್ನು, ನಂಬಿಕೆಗಳನ್ನು ಹೊಂದಿರುವ ಊರಿನ ಬಗ್ಗೆ. ಇದಕ್ಕೆ ಕಾರಣ ಏನು, ಈ ಊರಿನ ವಿಶೇಷತೆ ಏನು ಅನ್ನೋದು ನಿಮಗೆ ಗೊತ್ತಾ?

ಮೈಲಾಪುರ

ಮೈಲಾಪುರ

ಕುದುರೆ ಸವಾರಿ ನಿಷೇಧಿಸಲಾಗಿದೆ. ಊರಿನ ಯಾವುದೇ ವ್ಯಕ್ತಿ ಮಂಚದಲ್ಲಿ ಮಲಗುವಂತಿಲ್ಲ. ಈ ಊರಿನಲ್ಲಿ ಮೈಲಾರ ಲಿಂಗೇಶ್ವರನನ್ನು ಮಾತ್ರ ಪೂಜಿಸಬೇಕು. ಬೇರೆ ಯಾವ ದೇವರನ್ನು ಪೂಜಿಸಬಾರದು. ಅಂತಹ ಒಂದು ವಿಶೇಷ ಊರೇ ಯಾದಗಿರಿ ಜಿಲ್ಲೆಯ ಮೈಲಾಪುರ.

ವಿಶೇಷ ಆಚರಣೆ

ವಿಶೇಷ ಆಚರಣೆ

PC: youtube

ಇಲ್ಲಿ ಬಹಳ ಹಿಂದಿನಿಂದಲೂ ಈ ಆಚರಣೆಗಳನ್ನು ಪಾಲಿಸಲಾಗುತ್ತಿದೆ. ಇಲ್ಲಿನ ಆಚರಣೆಯ ಹಿಂದೆ ಒಂದೊಂದು ನಂಬಿಕೆ ಇದೆ. ಅಂತಹ ವಿಶೇಷ ಆಚರಣೆ ಏನು ಅನ್ನೋದನ್ನು ತಿಳಿಯೋಣ.

 ಮನೆಗಳಲ್ಲಿ ಮಂಚಗಳಿಲ್ಲ

ಮನೆಗಳಲ್ಲಿ ಮಂಚಗಳಿಲ್ಲ

PC: youtube

ಇಲ್ಲಿನ ಜನರು ಮಂಚದಲ್ಲಿ ಮಲಗೋದಿಲ್ಲ. ಇಲ್ಲಿ ವೃದ್ಧರು, ಬಾಣಂತಿಯರೂ ಸಹ ಮಂಚದ ಮೇಲೆ ಮಲಗೋದಿಲ್ಲ. ಅದಕ್ಕೆ ಕಾರಣ ಮೈಲಾರಲಿಂಗನ ಆಸನವು ಮಂಚವಾಗಿದೆ. ಹಾಗಾಗಿ ಮಂಚದಲ್ಲಿ ಮಲಗಿದರೆ ದೇವರಿಗೆ ಸಮಾನವಾಗಿ ಕುಳಿತಂತಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಅದಕ್ಕಾಗಿ ಯಾರೂ ಮಂಚದಲ್ಲಿ ಮಲಗೋದಿಲ್ಲ.

 ಕುದುರೆ ಸಾಕುವುದಿಲ್ಲ

ಕುದುರೆ ಸಾಕುವುದಿಲ್ಲ

ಈ ಊರಿನಲ್ಲಿ ಕುದುರೆ ಸವಾರಿ ಮಾಡುವುದಿಲ್ಲ. ಕುದುರೆ ಸಾಕುವುದಿಲ್ಲ. ಯಾಕೆಂದರೆ ಮೈಲಾರಲಿಂಗನ ವಾಹನವು ಕುದುರೆಯಾಗಿದೆ. ಹಾಗಾಗಿ ತಾವು ಕುದರೆ ಮೇಲೆ ಕುಳಿತರೆ ದೇವರಿಗೆ ದರ್ಪ ತೋರಿದಂತಾಗುತ್ತದೆ ಎನ್ನುವ ನಂಬಿಕೆಯಿಂದ ಜನರು ಕುದುರೆ ಸವಾರಿ ಮಾಡೋದಿಲ್ಲ.

ಕೋಳಿ ಸಾಕೋದಿಲ್ಲ

ಕೋಳಿ ಸಾಕೋದಿಲ್ಲ

ಸಾಮಾನ್ಯವಾಗಿ ಪ್ರತಿಯೊಂದು ಊರಿನಲ್ಲೂ ಕೋಳಿಯನ್ನು ಸಾಕುತ್ತಾರೆ. ಆದರೆ ಇಲ್ಲಿ ಕೋಳಿ ಸಾಕೋದಿಲ್ಲ ಯಾಕೆಂದರೆ ಇಲ್ಲಿ ಮೈಲಾರ ಲಿಂಗನ ಗಂಟೆಯ ನಾದವೇ ಮೊದಲು ಕೇಳಬೇಕು. ಕೋಳಿಯ ಕೂಗು ಕೇಳಿಸಬಾರದು ಎನ್ನುವ ಕಾರಣಕ್ಕೆ ಯಾರು ಕೋಳೀಯನ್ನು ಸಾಕೋದಿಲ್ಲ.

ಮೈಲಾರ ಲಿಂಗೇಶ್ವರ

ಮೈಲಾರ ಲಿಂಗೇಶ್ವರ

PC: youtube

ಗುಹೆಯೊಳಗಿರುವ ಗುಡಿಯಲ್ಲಿ ಕುದುರೆ ಮೇಲೆ ಕುಳಿತಿರುವ ಭಂಗಿಯಲ್ಲಿ ಮೈಲಾರ ಲಿಂಗೇಶ್ವರನಿದ್ದಾನೆ. ಮೈಲಾಪುರವು ಇಲ್ಲಿನ ವಿಶೇಷ ಆಚರಣೆಯಿಂದಲೇ ಪ್ರಸಿದ್ಧಿ ಹೊಂದಿದೆ. ಮೈಲಾರಲಿಂಗೇಶ್ವರನಿಗೆ ಲಕ್ಷಾಂತರ ಭಕ್ತರು ಇದ್ದಾರೆ. ಊರಿನ ಜನರು ನೆಮ್ಮದಿಯಿಂದ ಇದ್ದಾರೆ.

ವರ್ಷದ ಜಾತ್ರೆ

ವರ್ಷದ ಜಾತ್ರೆ

PC: youtube

ಜನವರಿ 14. ಮಕರ ಸಂಕ್ರಮಣದಂದು ಮೈಲಾರ ಲಿಂಗೇಶ್ವರ ಜಾತ್ರೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಬಂಡೆಕಲ್ಲಿನಲ್ಲಿ ಉದ್ಭವಿಸಿರುವ ಮೈಲಾರ ಮೂರ್ತಿ ಇದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X