Search
  • Follow NativePlanet
Share
» » ಭೇಟಿ ನೀಡಲೇಬೇಕಾದ ಭಾರತದ ದೈತ್ಯ ಕೋಟೆಗಳು!

ಭೇಟಿ ನೀಡಲೇಬೇಕಾದ ಭಾರತದ ದೈತ್ಯ ಕೋಟೆಗಳು!

ಭಾರತದ ವಿವಿಧ ಸ್ಥಳಗಳಲ್ಲಿ ಸಾಕಷ್ಟು ಕೋಟೆಗಳಿದ್ದು ಇಂದು ಅವು ಅಪ್ಪಟ ಐತಿಹಾಸಿಕ ಪ್ರವಾಸಿ ಆಕರ್ಷಣೆಗಳಾಗಿ ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರನ್ನು ಸೆಳೆಯುತ್ತವೆ

By Vijay

ತಮ್ಮ ಹಿಂದಿನ ವೈಭವವನ್ನು ಅನಾವರಣಗೊಳಿಸುತ್ತ, ನಡೆದುಹೋದ ಘಟನೆಗಳನ್ನು ವಿವರಿಸುತ್ತ ಇಂದಿಗೂ ತಮ್ಮ ಸದೃಢ ಶಕ್ತಿ ಸಾಮರ್ಥ್ಯಗಳಿಂದ ಕಾಲಕ್ಕೆ ಸೆಡ್ಡು ಹೊಡೆದು ನಿಂತಿರುವ ಐತಿಹಾಸಿಕ ಆಕರ್ಷಣೆಗಳಾದ ಕೋಟೆಗಳು ಮೊದಲಿನಿಂದಲೂ ಚುಂಬಕದಂತೆ ಸೆಳೆವ ಪ್ರವಾಸಿ ತಾಣಗಳು.

ಜಗತ್ತಿನೆಲ್ಲೆಡೆ ಕಂಡುಬರುವಂತೆ ಭಾರತದಲ್ಲೂ ಸಹ ಅಗಾಧವಾದ ಹಾಗೂ ಭದ್ರವಾದ ಗೋಡೆಗಳಿಂದ ಸುತ್ತುವರೆದ ಅನೇಕ ಕೋಟೆಗಳಿವೆ. ಅಲ್ಲದೆ ಭಾರತದಲ್ಲಿ ವಿವಿಧ ಕಾಲ ಹಂತಗಳಲ್ಲಿ ವಿವಿಧ ಸಾಮ್ರಾಜ್ಯಗಳು ಆಳಿರುವುದರಿಂದ ವೈವಿಧ್ಯಮಯ ವಾಸ್ತುಶೈಲಿಯ, ಶಿಲ್ಪಕಲೆಯ ಆಕರ್ಷಕ ಕೋಟೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಹಲವು ನೂರು ವರ್ಷಗಳಾದರೂ ಇಂದಿಗೂ ಕೆಳ ಬೀಳದೆ ಹಾಗೆಯೆ ನಿಂತಿರುವ ಕೋಟೆಗಳನ್ನು ನೋಡಿದಾಗ ಅಂದಿನ ನಮ್ಮ ನಿಪುಣ ನಿರ್ಮಾಣಗಾರರ ನೈಪುಣ್ಯತೆಯ ಬಗ್ಗೆ ಹೆಮ್ಮೆ ಆಗದೆ ಇರಲು ಸಾಧ್ಯವೇ ಇಲ್ಲ. ಅಲ್ಲದೆ ಕೆಲವು ಕೋಟೆಗಳು ತಮ್ಮ ದೈತ್ಯಾಕಾರ ಹಾಗೂ ಅದ್ದೂರಿತನದಿಂದ ಇಂದಿನ ವಾಸ್ತುವಿನ್ಯಾಸಗಾರರನ್ನೂ ಸಹ ಅಚ್ಚರಿಗೊಳಿಸುತ್ತವೆ ಎಂದರೆ ತಪ್ಪಿಲ್ಲ.

ನಮ್ಮದೆ ಆದ ಇತಿಹಾಸ ಸಾರುವ ಈ ಅದ್ಭುತ ರಚನೆಗಳನ್ನು ಒಮ್ಮೆಯಾದರೂ ಜೀವನದಲ್ಲಿ ನೋಡಿ ಆನಂದಿಸಲೇಬೇಕು. ಎಲ್ಲ ಕೋಟೆಗಳನ್ನು ನೋಡುವುದು ಕಷ್ಟಸಾಧ್ಯವಿದ್ದರೂ ತಮ್ಮದೆ ಆದ ಪ್ರಭಾವದಿಂದ ಹೆಸರುವಾಸಿಯಾದ ಕೆಲವು ಆಯ್ದ ಕೋಟೆಗಳನ್ನು ನೋಡಲೇಬೇಕು. ಈ ಲೇಖನದಲ್ಲಿ ಆಯ್ದ ಆದರೆ ಅತ್ಯದ್ಭುತವಾದ ಕೋಟೆ ಯಾವುವು ಹಾಗೂ ಎಲ್ಲಿವೆ ಎಂಬುದರ ಕುರಿತು ತಿಳಿಸಲಾಗಿದೆ.

ರಾಜಸಾಮಂದ್

ರಾಜಸಾಮಂದ್

ರಾಜಸ್ಥಾನ ರಾಜ್ಯವು ಕೋಟೆಗಳ ನಾಡು ಎಂದರೂ ತಪ್ಪಾಗಲಾರದು. ಮಹಾರಾಷ್ಟ್ರ ಸೇರಿದಂತೆ ರಾಜಸ್ಥಾನದಲ್ಲಿಯೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೋಟೆಗಳು ಇರುವುದನ್ನು ಕಾಣಬಹುದು. ಆದ್ದರಿಂದಲೆ ಇದು ರಾಜ ಛಾಯೆ ಹೊಂದಿರುವ ನಾಡಾಗಿದ್ದು ರಾಜಸ್ಥಾನ ಎಂದು ಕರೆಯಲ್ಪಡುತ್ತದೆ. ಕುಂಬಲಗಡ್ ಕೋಟೆ. ಮೇವಾರ, ರಾಜಸಾಮಂದ್ ಜಿಲ್ಲೆ, ರಾಜಸ್ಥಾನ.

ಚಿತ್ರಕೃಪೆ: Sujay25

ಆಕರ್ಷಕ

ಆಕರ್ಷಕ

ರಾಜಸ್ಥಾನದ ಚಿತ್ತೋರ್ಗಢ್ ಜಿಲ್ಲೆಯ ಚಿತ್ತೋರ್ಗಢ್ ನಗರದಲ್ಲಿರುವ ಚಿತ್ತೋರ್ಗಢ್ ಕೋತೆ. ಒಮ್ಮೆಯಾದರೂ ನೋಡಲೇಬೇಕಾದ ಭವ್ಯ ಕೋಟೆ ತಾಣ.

ಚಿತ್ರಕೃಪೆ: Ssjoshi111

ಜೈಪುರ

ಜೈಪುರ

ಅಂಬರ/ಅಮೇರ್ ಎಂತಲೂ ಕರೆಯಲ್ಪಡುವ ಈ ಕೋಟೆ ರಾಜಸ್ಥಾನದ ಜೈಪುರದಿಂದ ಹನ್ನೊಂದು ಕಿ.ಮೀ ದೂರದಲ್ಲಿರುವ ಅಮೇರ್ ಎಂಬ ಚಿಕ್ಕ ಪಟ್ಟಣದಲ್ಲಿದೆ.

ಚಿತ್ರಕೃಪೆ: Srshiva2

ಜೋಧಪುರ

ಜೋಧಪುರ

ರಾಜಸ್ಥಾನ ರಾಜ್ಯದ ಪ್ರವಾಸಿ ತಾಣವಾದ ಜೋಧಪುರದಲ್ಲಿ ಈ ಅದ್ಭುತ ಮೆಹ್ರಾನ್ಗಢ್ ಕೋಟೆಯಿದೆ.

ಚಿತ್ರಕೃಪೆ: Knowledge Seeker

ಹೇಗಿದೆ ನೋಡಿ

ಹೇಗಿದೆ ನೋಡಿ

ವಿಶ್ವ ಪಾರಂಪರಿಕ ತಾಣ ಎಂಬ ಖ್ಯಾತಿಗೆ ಒಳಗಾದ ರಾಜಸ್ಥಾನ ರಾಜ್ಯದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲೊಂದಾದ ಜೈಸಲ್ಮೇರ್‍ ನಲ್ಲಿ ಈ ಕೋಟೆಯಿದೆ.

ಚಿತ್ರಕೃಪೆ: Ggia

ಮಧ್ಯಪ್ರದೇಶ

ಮಧ್ಯಪ್ರದೇಶ

ಮಧ್ಯಪ್ರದೇಶ ರಾಜ್ಯದ ಟಿಕಂಗಢ್ ಜಿಲ್ಲೆಯಲ್ಲಿರುವ ಓರಛಾ ಎಂಬಲ್ಲಿ ಜಹಾಂಗೀರ್ ಮಹಲ್ ಎಂಬ ಹೆಸರಿನ ಈ ಕೋಟೆಯನ್ನು ಕಾಣಬಹುದು.

ಚಿತ್ರಕೃಪೆ: ShivaRajvanshi

ನರ್ಮದಾ ನದಿ ತಟ

ನರ್ಮದಾ ನದಿ ತಟ

ಮಧ್ಯ ಪ್ರದೇಶ ರಾಜ್ಯದ ಖರಗೋನ್ ಜಿಲ್ಲೆಯ ಮಹೇಶ್ವರ ಎಂಬ ನಗರದಲ್ಲಿರುವ ನರ್ಮದಾ ನದಿ ತಟದ ಅದ್ಭುತ ಮಹೇಶ್ವರ ಕೋಟೆ.

ಚಿತ್ರಕೃಪೆ: Lukas Vacovsky

ಅತ್ಯದ್ಭುತ

ಅತ್ಯದ್ಭುತ

ಮಧ್ಯ ಭಾರತದಲ್ಲಿರುವ ಮಧ್ಯ ಪ್ರದೇಶ ರಾಜ್ಯದ ಬಲು ಆಕರ್ಷಕ ಕೋಟೆಯಾದ ಗ್ವಾಲಿಯರ್ ಕೋಟೆ ಒಂದು ಅಸಾಮಾನ್ಯ ಕೋಟೆಯಾಗಿದ್ದು ಎಂಟನೇಯ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಅದ್ಭುತ ರಚನೆಯಾಗಿದೆ. ಇಂದು ಈ ಕೋಟೆ ಹಲವು ಸಂಕೀರ್ಣಗಳಿಂದ ಕೂಡಿದ್ದು ಅದ್ಭುತ ಪ್ರವಾಸಿ ಆಕರ್ಷಣೆಯಾಗಿ ಪ್ರವಾಸಿಗರ ಗಮನಸೆಳೆಯುತ್ತದೆ.

ಚಿತ್ರಕೃಪೆ: Yasirarafatbhat

ಆಂಧ್ರಪ್ರದೇಶ

ಆಂಧ್ರಪ್ರದೇಶ

ಏಳನೇಯ ಶತಮಾನದಲ್ಲಿ ನಿರ್ಮಿತ ಗುತ್ತಿ ಬೆಟ್ಟ ಕೋಟೆಯು ತನ್ನ ಐತಿಹಾಸಿಕತೆಯಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಆಂಧ್ರದ ಅನಂತಪುರ ಜಿಲ್ಲೆಯ ಗುತ್ತಿ ಎಂಬ ಪಟ್ಟಣದಲ್ಲಿ ಈ ಕೋಟೆಯಿದೆ.

ಚಿತ್ರಕೃಪೆ: Imrx100

ಕಡಪ

ಕಡಪ

ಆಂಧ್ರಪ್ರದೇಶದ ಕಡಪ ಜಿಲ್ಲೆಯ ಜಮ್ಮಲಮಡುಗು ಮಂಡಲದಲ್ಲಿರುವ ಗಂಡಿಕೋಟ ಬೆಟ್ಟ ಕೋಟೆಯು ನೋಡಲು ಸಾಕಷ್ಟು ರೋಮಾಂಚಕಾರಿಯಾಗಿದೆ.

ಚಿತ್ರಕೃಪೆ: Gagan Josan

ಹೈದರಾಬಾದ್

ಹೈದರಾಬಾದ್

ತೆಲಂಗಾಣ ರಾಜ್ಯದ ರಾಜಧಾನಿ ನಗರವಾದ ಹೈದರಾಬಾದ್ ನಗರದ ಬಳಿ ಸ್ಥಿತವಿರುವ ಗೋಲ್ಕೊಂಡಾ ಕೋಟೆ ನಗರದ ಪ್ರಮುಖ ಐತಿಹಾಸಿಕ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.

ಚಿತ್ರಕೃಪೆ: Masrur Ashraf

ಯಾದಾದ್ರಿ

ಯಾದಾದ್ರಿ

ತೆಲಂಗಾಣದ ರಾಜಧಾನಿ ನಗರ ಹೈದರಾಬಾದ್ ನಗರಕ್ಕೆ ಹತ್ತಿರದಲ್ಲಿರುವ ಯಾದಾದ್ರಿ ಭುವನಗಿರಿ ಜಿಲ್ಲೆಯ ಭುವನಗಿರಿ ಕೋಟೆ. ಈ ಬೆಟ್ಟ ಕೋಟೆಯು ನೋಡಲು ಬಲು ಆಕರ್ಷಕವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Sunny Cloud

ಕರ್ನಾಟಕ

ಕರ್ನಾಟಕ

ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ಬೀದರ್ ನಗರದಲ್ಲಿ ಬಹಮನಿ ಸುಲ್ತಾನರಿಂದ ಕಟ್ಟಲ್ಪಟ್ಟ ಕೋಟೆಯನ್ನು ಕಾಣಬಹುದಾಗಿದೆ. ಹಿಂದೆ ಬೀದರ್ ಜಿಲ್ಲೆಯು ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಈ ಸಂದರ್ಭದಲ್ಲಿ ಇವರ ಸಾಮ್ರಾಜ್ಯದಲ್ಲಿ ಬೀದರ್, ಗೋಲ್ಕೊಂಡಾ, ಬಿಜಾಪುರ, ಗುಲ್ಬರ್ಗ ಮತ್ತು ಬಿರಾರ್ ಸಂಸ್ಥಾನಗಳೂ ಸೇರಿಕೊಂಡಿದ್ದವು ಎಂಬುದನ್ನು ಗಮನಿಸಬಹುದು. ಪ್ರಸ್ತುತ ಬೀದರ್ ಕೋಟೆಯ ಇತಿಹಾಸವನ್ನು ಅಲ್ ಆ ಉದ್ ದಿನ್ ಬಹಮನ್ ಶಾ ನ ಮೂಲಕ ತಿಳಿಯಬಹುದಾಗಿದೆ.

ಚಿತ್ರಕೃಪೆ: Santosh3397

ಉತ್ತರ ಕನ್ನಡ ಜಿಲ್ಲೆ

ಉತ್ತರ ಕನ್ನಡ ಜಿಲ್ಲೆ

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಸುಂದರ ಪ್ರದೇಶದಲ್ಲಿ ಈ ಕೋಟೆಯನ್ನು ಕಾಣಬಹುದಾಗಿದೆ. ಹಿಂದೆ ಅಂದರೆ ಐತಿಹಾಸಿಕವಾಗಿ ಹಲವು ಯುದ್ಧಗಳಿಗೆ ತವರಾಗಿರುವ ಈ ಕೋಟೆಯು ತನ್ನ ಅದ್ಭುತ ವಾಸ್ತುಶೈಲಿಯಿಂದ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Lisa.davis

ಕಲ್ಲಿನ ಕೋಟೆ

ಕಲ್ಲಿನ ಕೋಟೆ

ಚಿತ್ರದುರ್ಗದ ಕಲ್ಲಿನ ಕೋಟೆಯು ಸಾಕಷ್ಟು ಐತಿಹಾಸಿಕ ಪ್ರಾಮುಖ್ಯತೆ ಪಡೆದಿರುವ ಸ್ಥಳವಾಗಿದೆ. ಏಳು ಸುತ್ತಿನ ಈ ಕೋಟೆಯು ಇಂದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

ಚಿತ್ರಕೃಪೆ: veeresh.dandur

ತುಮಕೂರು

ತುಮಕೂರು

ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿಯು ಒಂದು ಆಕರ್ಷಕ ಪ್ರವಾಸಿ ತಾಣವಾಗಿದೆ. ಇಲ್ಲಿ ಭೇಟಿ ನೀಡಬಹುದಾದ ಹಲವು ಸ್ಥಳಗಳ ಪೈಕಿ ಮಧುಗಿರಿ ಕೋಟೆಯೂ ಸಹ ಒಂದು. ಸುತ್ತಮುತ್ತಲಿನ ಪ್ರದೇಶಗಳಿಂದ ವಾರಾಂತ್ಯಗಳಂದು ಸಾಕಷ್ಟು ಯುವ ಪ್ರವಾಸಿಗರು ಈ ಕೋಟೆಯನ್ನು ಏರಲೆಂದು ಇಲ್ಲಿಗೆ ಬರುತ್ತಾರೆ.

ಚಿತ್ರಕೃಪೆ: Sangrambiswas

ಮಹಾರಾಷ್ಟ್ರ

ಮಹಾರಾಷ್ಟ್ರ

ಮಹಾರಾಷ್ಟ್ರದ ಮಾಥೇರಾನ್ ಮತ್ತು ಪನ್ವೇಲ್ ಪ್ರದೇಶಗಳ ಮಧ್ಯದಲ್ಲಿ ಈ ಬೆಟ್ಟ ಕೋಟೆಯಿರುವುದನ್ನು ಕಾಣಬಹುದು. ಇರ್ಶಾಲ್ವಾಡಿ ಇದಕ್ಕೆ ಹತ್ತಿರದಲ್ಲಿರುವ ಗ್ರಾಮವಾಗಿದ್ದು ಇಲ್ಲಿಂದ ಎರಡು ಘಂಟೆಗಳಷ್ಟು ಚಾರಣದ ಮೂಲಕ ಈ ಬೃಹತ್ ಬೆಟ್ಟ ಕೋಟೆಯನ್ನು ಏರಬಹುದು. ಮೊನಚಾದ ಬಂಡೆ ಹಾಗೂ ಅದರ ಮೇಲೆ ಹತ್ತುತ್ತಿರುವ ಇರುವೆಗಳಂತೆ ಗೋಚರಿಸುವ ಪ್ರವಾಸಿಗರನ್ನು ಕಾಣಬಹುದು.

ಚಿತ್ರಕೃಪೆ: Belasd

ಮುರುದ್

ಮುರುದ್

ಮುರುದ್ ಜಂಜೀರಾ ಎಂಬುದು ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯಲ್ಲಿರುವ ಮುರುದ್ ಎಂಬ ಕರಾವಳಿ ಹಳ್ಳಿಯಲ್ಲಿರುವ ಒಂದು ಪ್ರಸಿದ್ಧ ಕೋಟೆಯಾಗಿದೆ. ಒಂದಾನೊಂದು ಕಾಲದಲ್ಲಿ ಸಿದ್ಧಿ ಸಾಮ್ರಾಜ್ಯದವರ ಆಳ್ವಿಕೆಗೆ ಒಳಪಟ್ಟಿದ್ದ ಈ ಕೋಟೆಯು ಮರಾಠರ, ಪೋರ್ಚುಗೀಸರ, ಡಚ್ಚರ ಮತ್ತು ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪೆನಿಯವರ ದಾಳಿಗಳನ್ನು ತಡೆದುಕೊಂಡು ಅಜೇಯವಾಗಿ ಮತ್ತು ಒಂದು ಚೂರು ಮಂಕಾಗದಂತೆ ಇಂದಿಗೂ ಉಳಿದುಕೊಂಡಿರುವ ಏಕೈಕ ಕೋಟೆಯಾಗಿದೆ. ಈ ಕೋಟೆಯ ಸಮಕಾಲೀನ ಕೋಟೆಗಳೆಲ್ಲವು ಈಗಾಗಲೆ ಮಣ್ಣಲ್ಲಿ ಮಣ್ಣಾಗಿ ಹೋಗಿವೆ.

ಚಿತ್ರಕೃಪೆ: Ishan Manjrekar

ಕೇರಳ

ಕೇರಳ

ಈ ಸುಂದರ ಕೋಟೆಯು ಸಾಕಷ್ಟು ಜನಪ್ರೀಯತೆಗಳಿಸುತ್ತಿದೆ. ಕಾರಣ ಇದರ ಸುತ್ತಮುತ್ತಲಿರುವ ಅದ್ಭುತ ಹಸಿರಿನ ಸೌಂದರ್ಯ ಅದೂ ಮಳೆಗಾಲದ ಸಮಯದಲ್ಲಿ ವಿಶೇಷವಾಗಿ. ಅದಕ್ಕೆ ಮತ್ತಷ್ಟು ಇಂಬು ನೀಡುವಂತಿದೆ ಅರಬ್ಬಿ ಸಮುದ್ರದ ಕಣ್ಮನ ಸೆಳೆಯುವ ನೋಟ. ಕಡಲ ತೀರವು ಮಲೀನಗೊಂಡಿಲ್ಲ, ಚಿಕ್ಕ ಪುಟ್ಟ ಬಂಡೆಗಳ ಮೇಲೆ ಅಲೆಗಳು ಹಾಯುವಾಗ ಆ ಸಮಯದಲ್ಲಿ ಅಲ್ಲಿ ನಿಂತು ಅದರ ಆನಂದ ಪಡೇಯುವುದೆಂದರೆ ಬಹುತೇಕರಿಗೆ ಬಲು ಪ್ರೀತಿ. ಹೆಚ್ಚು ವಾಣಿಜ್ಯಿಕರಣಗೊಳ್ಳದಿರುವುದು ಮತ್ತೊಂದು ವಿಶೇಷತೆ. ಚಳಿಗಾಲ ಇಲ್ಲಿಗೆ ತೆರಳಲು ಪ್ರಶಸ್ತವಾಗಿದ್ದರೂ ಮಳೆಗಾಲದಲ್ಲಿ ಇದು ಸಿಂಗರಿಸಿಕೊಳ್ಳುವ ರೀತಿ ಮತ್ತಷ್ಟು ಮನಮೋಹಕವಾಗಿರುತ್ತದೆ.

ಚಿತ್ರಕೃಪೆ: Joseph D'Mello

ಪುಣೆ

ಪುಣೆ

ಮಹಾರಾಷ್ಟ್ರ ರಾಜ್ಯವು ಸಾಮಾನ್ಯವಾಗಿ ಬೆಟ್ಟದ ಮೇಲೆ ನಿರ್ಮಿತವಾದ ಕೋಟೆಗಳಿಗೆ ದೇಶದಲ್ಲೆ ಪ್ರಸಿದ್ಧಿ ಪಡೆದಿರುವ ರಾಜ್ಯ. ಪುಣೆಯಲ್ಲಿ ಬರುವ ಒಂದು ರೋಮಾಂಚಕ ಕೋಟೆಯ ಹೆಸರೆ ರಾಜಗಡ್ ಕೋಟೆ.

ಚಿತ್ರಕೃಪೆ: Abhishek Thakur

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X