Search
  • Follow NativePlanet
Share
» »ಗೋವಾದಲ್ಲಿರುವ ಈ ಅದ್ಬುತ ಕೋಟೆಗಳಿಗೆ ಭೇಟಿ ಕೊಡಿ

ಗೋವಾದಲ್ಲಿರುವ ಈ ಅದ್ಬುತ ಕೋಟೆಗಳಿಗೆ ಭೇಟಿ ಕೊಡಿ

ಕೋಟೆ ಎಂದ ಕೂಡಲೇ ಒಂದು ಪ್ರ್ಯಾಂತ್ಯವನ್ನು ರಕ್ಷಿಸಲು ಸೇನಾಪಡೆಗಳಿಂದ ರಕ್ಷಿಸಲು ನಿರ್ಮಿಸಲಾದ ಒಂದು ಕಟ್ಟಡ ಎನ್ನುವ ಚಿತ್ರ ಮನಸ್ಸಿಗೆ ಬರುತ್ತದೆ. ಪೋರ್ಚುಗೀಸರ ಅದ್ಬುತವಾದ ನಿರ್ಮಾಣಗಳನ್ನು ನೋಡಲು ಬಯಸಿದರೆ ಖಂಡಿತವಾಗಿಯೂ ನೀವು ಗೋವಾಗೆ ಭೇಟಿ ನೀಡಬೇಕು. ಈ ಕಡಲತೀರ ರಾಜ್ಯದ ವರ್ಣಮಯ ಇತಿಹಾಸವನ್ನು ಅನ್ವೇಷಣೆ ಮಾಡಲು ಇಷ್ಟ ಪಡುವ ಜಗತ್ತಿನಾದ್ಯಂತದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಗೋವಾದ ಕೋಟೆಗಳು ಪ್ರಸುತ ಅವಶೇಷಗಳಾಗಿದ್ದರೂ ಸಹ ಇವು ಇಲ್ಲಿಗೆ ಭೇಟಿ ಕೊಡುವವರನ್ನು ಆಕರ್ಷಿಸುವುದರಲ್ಲಿ ಹಿಂದೆ ಬಿದ್ದಿಲ್ಲ.

ಗೋವಾದ ಪ್ರಸಿದ್ದ ಕೋಟೆಗಳ ಬಗ್ಗೆ ತಿಳಿಯೋಣ

ಚಾಪೋರ ಕೋಟೆ

ಚಾಪೋರ ಕೋಟೆ

ಉತ್ತರ ಗೋವಾದ ಮಾಪುಸಾದಿಂದ ಸುಮಾರು 10 ಕಿ.ಮೀ ದೂರದಲ್ಲಿ ನೆಲೆಸಿರುವ ಚಾಪೋರಾ ಕೋಟೆಯ ಇನ್ನೊಂದು ಹೆಸರು 'ಶಾಹ್ ಪಟ್ಟಣ' ಎಂಬುದಾಗಿದೆ. ಕೋಟೆಯು ಪ್ರಮುಖವಾಗಿ ಬೆರಗುಗೊಳಿಸುವ ವ್ಯಾಗೇಟರ್ ಬೀಚ್, ಮೊರ್ಜಿಮ್ ಬೀಚ್, ಓಜ್ರಾನ್ ಬೀಚ್ ಮತ್ತು ಚಪೋರಾ ನದಿ ಇವುಗಳನ್ನು ಇಲ್ಲಿಂದ ನೋಡಬಹುದಾಗಿದೆ. ಪೋರ್ಚುಗೀಸರು 17 ನೇ ಶತಮಾನದಲ್ಲಿ ಹಿಂದೂ ದಾಳಿಕೋರರನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಉದ್ದೇಶದಿಂದ ಈ ಕೋಟೆಯನ್ನು ನಿರ್ಮಿಸಿದರು.

ಕ್ರಿ.ಶ.1683ರಲ್ಲಿ ಶಿವಾಜಿಯ ಮಗನಾದ ಶಾಂಬಾಜಿಯಿಂದ ಈ ಕೋಟೆಯು ಎರಡು ಸಲ ಆಕ್ರಮಣಕ್ಕೊಳಗಾಯಿತು. ಮತ್ತು ಕ್ರಿ.ಶ 1739 ರಲ್ಲಿ ಬೋಂಸ್ಲೆಯಿಂದ ಆಕ್ರಮಣಕ್ಕೊಳಗಾಯಿತು 1741 ರಿಂದ ಗೋವಾಕ್ಕೆ ಸ್ವಾತಂತ್ರ್ಯ ಸಿಗುವ ತನಕ ಇದನ್ನು ಪೋರ್ಚುಗೀಸರು ಆಳುತ್ತಿದ್ದರು. ಅವರ ಆಳ್ವಿಕೆಯಲ್ಲಿ ಭೂಗತ ಸುರಂಗಗಳನ್ನು ನಿರ್ಮಿಸಲಾಗಿ ಇವುಗಳು ಪ್ರದೇಶವನ್ನು ಶತ್ರುಗಳಿಂದ ರಕ್ಷಣಾ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ.

ಬಾಣ ಇಡುವ ಸೀಳುಗಳು, ಗನ್ ಪೋರ್ಟ್ ಗಳು ಮತ್ತು ಕೊಲೆರಂಧ್ರಗಳನ್ನು ನಾವು ಕೋಟೆಗಳ ಗೋಡೆಗಳ ಮೇಲೆ ಸಮಾನ ಅಂತರದಲ್ಲಿ. ಗುರುತಿಸಬಹುದು ಬಾಲಿವುಡ್ ನ 'ದಿಲ್ ಚಾಹ್ತಾ ಹೈ'ದ ಶೂಟಿಂಗ್ ಅನ್ನು ಇಲ್ಲಿ ನಡೆಸಿದ್ದಾರೆ ಎನ್ನುವುದು ಕುತೂಹಲವಾದ ಸಂಗತಿಯಾಗಿದೆ.

ವಾಗಟರ್ ಬೀಚ್‌ನಲ್ಲಿರುವ ಒಂದು ಬೆಟ್ಟವು ನಿಮಗೆ ಸಂಪೂರ್ಣವಾಗಿ ಹಾಗೂ ಸುಲಭವಾಗಿ ಚಪೋರಾ ಕೋಟೆಯನ್ನು ತಲುಪಲು ಸಹಾಯ ಮಾಡುತ್ತದೆ.

ಕೊರ್ಜುಯೆಮ್ ಕೋಟೆ

ಕೊರ್ಜುಯೆಮ್ ಕೋಟೆ

ಕೊರ್ಜುಯೆಮ್ ದ್ವೀಪ ಕೋಟೆಯನ್ನು 19ನೇ ಶತಮಾನದಲ್ಲಿ ಪೋರ್ಚುಗೀಸರು ತಮ್ಮ ರಕ್ಷಣೆಗಾಗಿ ನಿರ್ಮಿಸಿಕೊಂಡರು.ಇದು ಇದು ಉತ್ತರ ಗೋವಾದ ಬರ್ಡೇಜ್ ತಾಲೂಕಿನ ಅಲ್ಡೋನಾ ಗ್ರಾಮದಿಂದ ಹೆಚ್ಚು ದೂರದಲ್ಲಿಲ್ಲ, ಸುಮಾರು 6 ಕಿಮೀ ದೂರದಲ್ಲಿದೆ. 'ಕೋರಿಕ್' ಅಂದರೆ ಆಳವಾದ ಅಥವಾ ಕಡಿಮೆ ಎತ್ತರದ ಎನ್ನುವ ಅರ್ಥ ಬರುತ್ತದೆ ಮತ್ತು 'ಜುನ್ವೆಮ್ ' ಅಂದರೆ ದ್ವೀಪವೆಂದೂ ಅರ್ಥೈಸುತ್ತದೆ. ಇದು ಒಂದು ಚೌಕಾಕಾರದ ಕೋಟೆಯಾಗಿದ್ದು ಇದನ್ನು 1551 ರಲ್ಲಿ ಸ್ಥಾಪಿಸಲಾಯಿತು.

ಕೋಟೆಯ ಮೂಲೆ ಮೂಲೆಗಳಲ್ಲಿಯೂ ರಾಂಪಾರ್ಟ್ ಗಳಿಂದ ವಿನ್ಯಾಸಗೊಳಿಸಲಾಗಿದ್ದು ದನ್ನು ಕೋಟೆಯ ಪ್ರತಿಯೊಂದು ಮೂಲೆಯಲ್ಲಿಯೂ ಇರುವ ಇಳಿಜಾರಿನಂತಹ ಮೆಟ್ಟಿಲುಗಳ ಮೂಲಕ ತಲುಪಬಹುದು. ಗೋವಾದ ಭೂದೃಶ್ಯಗಳನ್ನು ಇಲ್ಲಿಂದ ನೋಡುವುದೇ ಕಣ್ಣಿಗೆ ರಸದೌತಣವನ್ನು ನೀಡುತ್ತದೆ ಎಂದರೆ ತಪ್ಪಾಗಲಾರದು. ಕೋಟೆಯು ಮೂರು ಕೊಠಡಿಗಳನ್ನು ಮತ್ತು ಒಂದು ಸಣ್ಣ ಪ್ರಾರ್ಥನಾ ಮಂದಿರದ ಜೊತೆಗೆ ಒಂದು ಬಾವಿಯನ್ನು ಹೊಂದಿದೆ

ಕೋರ್ಜುಯೆಂ ಕೋಟೆಯು ಹಿಂದೆ ಸೈಂಟ್ ಆಂಟೋನಿಯ ಪ್ರಾರ್ಥನಾ ಮಂದಿರವಾಗಿತ್ತು ಎನ್ನಲಾಗುತ್ತದೆ. ಕೋಟೆಯನ್ನುಲ್ಯಾಟರೈಟ್ ಕಲ್ಲುಗಳಿಂದ ಆಳದಿಂದಲೂ ಅಸಾಧಾರಣವಾಗಿ ನಿರ್ಮಿಸಲಾಗಿದ್ದು, ಉಳಿಸಿಕೊಂಡಿರುವ ಎರಡು ಒಳನಾಡುಗಳಲ್ಲಿ ಕೋಟೆಗಳಲ್ಲಿ ಈ ಕೋಟೆಯೂ ಒಂದು ಎನ್ನುವುದು ಎಂಬ ಹೆಮ್ಮೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ ಈ ಕೋಟೆಯು ಸುಂದರ ಮನಮೋಹಕ ಮತ್ತು ಹಸಿರು ಹೊದಿಕೆಯಿಂದ ಆವರಿಸಲ್ಪಟ್ಟಿದೆ.

ಈ ಕೋಟೆಯನ್ನು ತಲುಪುವುದು ಅಷ್ಟೇನು ಕಷ್ಟದ ಕೆಲಸವೇನಲ್ಲ. ಗೋವಾದ ಪ್ರಧಾನ ತೂಗು ಸೇತುವೆ ಹಾಗೂ ಅತ್ಯಂತ ಗಮನಸೆಳೆಯುವ. ಕೇಬಲ್ ತೂಗು ಸೇತುವೆಯ ಮೂಲಕ ಅಲ್ಡೋನಾದಿಂದ ಕೊರ್ಜುಯೆಮ್‌ಗೆ ಸುಲಭವಾದ ನೌಕಾಯಾನವಾಗಿದೆ.

ರೀಸ್ ಮಾಗೋಸ್ ಕೋಟೆ

ರೀಸ್ ಮಾಗೋಸ್ ಕೋಟೆ

ಗೋವಾದ ಅತ್ಯಂತ ಉತ್ತಮವಾಗಿ ನಿರ್ವಹಿಸಲ್ಪಟ್ಟ ಕೋಟೆಯನ್ನು ನೋಡಿ ಆಶ್ಚರ್ಯಪಡುವಿರಾ? ಹೌದು ಗೋವಾದಲ್ಲಿ 1551 ಮತ್ತು 1554 ರ ನಡುವೆ ಪೊರ್ಚುಗೀಸ್ ವೈಸರಾಯ್ ಆಗಿದ್ದ ಅಫೊನ್ಸೊ ಡಿ ನೊರೊನ್ಹಾ ಈ ಕೋಟೆಯನ್ನು ನಿರ್ಮಿಸಿದರು. ಈ ಕೋಟೆಯು ರಿಸ್ ಮಾಗೋಸ್ ಚರ್ಚ್ ನ ಹತ್ತಿರದಲ್ಲಿಯೇ ಇದ್ದು ಇದು ಮಾಂಡವಿ ನದಿಯು ಕೂಡುವ ಸ್ಥಳದಲ್ಲಿಯ ಒಂದು ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಭಾರತೀಯ ಪುರಾತತ್ವ ಇಲಾಖೆಯು ಈ ಕೋಟೆಯನ್ನು ಗೋವಾದ ಪಾರಂಪರಿಕ ಕೇಂದ್ರವಾಗಿ ಪುನರುಜ್ಜೀವನಗೊಳಿಸಲು ಸಹಾಯ ಮಾಡಿತು.ಕೋಟೆಯ ಎಲ್ಲಾ ಬದಿಗಳ ನೋಟವು ಅಸಾಧಾರಣವಾಗಿದೆ ಮತ್ತು ಅತ್ಯುತ್ತಮ ಪ್ರಕೃತಿಯ ದೃಶ್ಯವನ್ನು ಹೊಂದಿದೆ. ನಿಮ್ಮ ಗೋವಾ ಹಾಲಿಡೇ ಆಲ್ಬಮ್ ಅನ್ನು ತುಂಬಲು ನೀವು ಸಾಧ್ಯವಾದಷ್ಟು ಫೋಟೋಗಳನ್ನು ಇಲ್ಲಿ ಕ್ಲಿಕ್ಕಿಸಬಹುದಾಗಿದೆ.

ಅಗುಡಾ ಕೋಟೆ

ಅಗುಡಾ ಕೋಟೆ

ಮಾಂಡೋವಿ ನದಿಯ ಮುಖಭಾಗದಲ್ಲಿ ನೆಲೆಸಿರುವ ಅಗುಡಾ ಕೋಟೆಯು ಭವ್ಯ ಅರಬ್ಬೀ ಸಮುದ್ರದ ಬಹುಕಾಂತೀಯ ನೋಟವನ್ನು ಒದಗಿಸುತ್ತದೆ.ಶತ್ರುಗಳಿಂದ ರಕ್ಷಣೆ ಪಡೆಯಲು ಈ ಕೋಟೆಯನ್ನು ಈ ಜಾಗದಲ್ಲಿ ನಿರ್ಮಿಸಿರುವುದರ ಮುಖ್ಯ ಉದ್ದೇಶವಾಗಿದೆ. 1612 ರಲ್ಲಿ ನಿರ್ಮಿತವಾದ ಈ ಕೋಟೆಯು ನಾಲ್ಕು ಅಂತಸ್ತಿನ ಪೋರ್ಚುಗೀಸರ ದೀಪಸ್ತಂಭವನ್ನು ಹೊಂದಿದ್ದು ಇದಕ್ಕೆ ಭೇಟಿ ಕೊಡುವುದು ಒಂದು ಅದ್ಬುತ ಅನುಭವವನ್ನು ನೀಡುತ್ತದೆ. ಅಲೆಗಳು ಈ ಕೋಟೆಯ ಗೋಡೆಗಳಿಗೆ ಬಡಿಯುತ್ತಾ ಸಮುದ್ರದಲ್ಲಿ ತೇಲಾಡುವಂತೆ ಕಾಣುವ ಹಡಗುಗಳನ್ನು ನೋಡುವುದೇ ಒಂದು ರೋಚಕ ಅನುಭವವನ್ನು ನೀಡುತ್ತದೆ ಇವೆಲ್ಲವುಗಳು ಸೇರಿ ಈ ಸ್ಥಳವನ್ನು ಒಂದು ಸುಂದರ ಪ್ರವಾಸಿ ತಾಣವನ್ನಾಗಿಸಿದೆ.

ತೆರೆಖೋಲ್ ಕೋಟೆ

ತೆರೆಖೋಲ್ ಕೋಟೆ

ಹದಿನೇಳನೇ ಶತಮಾನದಲ್ಲಿ ಸಾವಂತವಾಡಿಯ ರಾಜ ಮಹಾರಾಜ ಸಾವಂತ್ ಭೋಂಸ್ಲೆ ಅವರು ಈ ಕೋಟೆಯನ್ನು ನಿರ್ಮಿಸಿದರು ಈ ಕೋಟೆಯು ತೆರೆಖೋಲ್ ನದಿಯಲ್ಲಿದೆ. ಪೋರ್ಚುಗೀಸ್ ವೈಸರಾಯ್ ಡೊಮ್ ಪೆಡ್ರೊ ಮಿಗುಯೆಲ್ ಡಿ ಅಲ್ಮೇಡಾ ವಶಪಡಿಸಿಕೊಂಡಿದ್ದರಿಂದ ಇದನ್ನು 1764 ರಲ್ಲಿ ಮರುನಿರ್ಮಿಸಲಾಯಿತು. ಸೈಂಟ್ ಆಂಟೋನಿಯ ಸುಂದರವಾದ ಚರ್ಚ್ ಅನ್ನು ಹೊಂದಿರುವ ಕೋಟೆಯ ಅಂಗಳವು ನಿಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ಸಮಯ ಕಳೆಯಲು ಒಂದು ಸುಂದರವಾದ ಸ್ಥಳವಾಗಿದೆ.

ಇದನ್ನು ಪಾರಂಪರಿಕ ಹೋಟೆಲ್, ಫೋರ್ಟ್ ಟಿರಾಕೋಲ್ ಹೆರಿಟೇಜ್ ಹೋಟೆಲ್ ಆಗಿ ಪರಿವರ್ತಿಸಲಾಗಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು, ಇದನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಸಾರ್ವಜನಿಕರಿಗೆ ಪ್ರವೇಶಿಸಲು ಅನುಮತಿಸಲಾಗಿದೆ.

ಸಿಂಕ್ವೆರಿಮ್ ಕೋಟೆ

ಸಿಂಕ್ವೆರಿಮ್ ಕೋಟೆ

ಪಣಜಿಯಿಂದ 18 ಕಿ.ಮೀ ದೂರದಲ್ಲಿರುವ ಹಾಗೂ ಕ್ರಿ.ಶ 1612 ರಲ್ಲಿ ನಿರ್ಮಿಸಲಾದ ಸಿಂಕ್ವೆರಿಮ್ ಕೋಟೆಯು ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿದೆ, ಇದು ಸಿಂಕ್ವೆರಿಮ್ ಕೋಟೆಯು ಕೆಳಭಾಗದಲ್ಲಿ ಅಗುಡಾ ಕೋಟೆಯ ಒಂದು ವಿಸ್ತಾರಭಾಗವಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಸಿಂಕ್ವೆರಿಮ್ ಬೀಚ್ ಕಡಲತೀರವು ಎರಡು ಭಾಗಗಳಾಗಿ ಬೇರ್ಪಡಲು ಈ ಕೋಟೆಯು ಕಾರಣವಾಗಿದೆ.


ಕಡಲತೀರದಲ್ಲಿ ಜಲಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಿಮ್ಮ ಗೋವಾ ಪ್ರಯಾಣಕ್ಕೆ ಎಂದೆಂದಿಗೂ ಆನಂದಿಸಲು ಸಂತೋಷದ ಕ್ಷಣಗಳನ್ನು ಕಳೆಯಲು ಈ ಕೋಟೆಯನ್ನೂ ಸೇರಿಸಬಹುದು. ಆಹಾರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಹಡಗುಗಳನ್ನು ದಾಟಲು ಇದು ನಿಲುಗಡೆಯಾಗಿದೆ.

ಕ್ಯಾಬೋ ಡಿ ರಾಮಾ ಕೋಟೆ

ಕ್ಯಾಬೋ ಡಿ ರಾಮಾ ಕೋಟೆ

ನಮ್ಮ ಮಹಾಕಾವ್ಯ ರಾಮಾಯಣದಲ್ಲಿ ಬರುವ ರಾಮ ಮತ್ತು ಸೀತೆ ಅಯೋಧ್ಯೆಯಿಂದ 14 ವರ್ಷಗಳ ಕಾಲ ವನವಾಸಕ್ಕೆ ಹೋದಾಗ ಈ ಕೋಟೆಯಲ್ಲಿ ತಂಗಿದ್ದರು ಎಂದು ನಿಮಗೆ ತಿಳಿದಿದೆಯೇ?ಕ್ಯಾಬೋ ಡಿ ರಾಮಾ ಕಡಲತೀರದ ಮಂತ್ರಮುಗ್ಧಗೊಳಿಸುವ ನೋಟವು ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಕಡಲತೀರವು ತನ್ನ ಪ್ರಶಾಂತ ವಾತಾವರಣಕ್ಕೆ ಹೆಸರುವಾಸಿಯಾಗಿರುವ ಈ ಸ್ಥಳಕ್ಕೆ ನಿಮ್ಮ ಎಲ್ಲಾ ಚಿಂತೆಗಳನ್ನು ದೂರ ಮಾಡುವ ಶಕ್ತಿ ಇದೆ ಎನ್ನುವುದು ಸಹಜ.

ರಾಚೋಲ್ ಕೋಟೆ

ರಾಚೋಲ್ ಕೋಟೆ

ಮಾರ್ಗೋವೊದಾ ಈಶಾನ್ಯ ಭಾಗದಲ್ಲಿ ನೆಲೆಸಿರುವ ಇದು ವಿಜಯನಗರ ಮತ್ತು ಬಿಜಾಪುರ ಸಾಮ್ರಾಜ್ಯಗಳ ನಡುವೆ ಯುದ್ದಗಳನ್ನು ನಡೆಸಿರುವುದಕ್ಕೆ ಹೆಸರುವಾಸಿಯಾಗಿದೆ. ಮುಸ್ಲೀಮರ ವಿರುದ್ದ ಮಿಲಿಟರಿ ಬೆಂಬಲ್ಕ್ಕೆ ಪ್ರತಿಯಾಗಿ ಇದನ್ನು 1520 ರಲ್ಲಿ ಪೋರ್ಚುಗೀಸರಿಗೆ ಹಸ್ತಾಂತರಿಸಲಾಯಿತು ಮತ್ತು ಅದರ ಸುಂದರ ಪ್ರತಿಭೆಗಾಗಿ ಹೆಚ್ಚು ಪ್ರಶಂಸಿಸಲ್ಪಟ್ಟಿದೆ. ಸದ್ಯಕ್ಕೆ, ಅಲ್ಲಿ ಕೇವಲ ಒಂದು ಹೆಬ್ಬಾಗಿಲು ಮಾತ್ರ ಇದ್ದು, ಅದು ರಾಚೋಲ್ ಸೆಮಿನರಿಯನ್ನು ಕರೆದೊಯ್ಯುತ್ತದೆ.

ಮರ್ಮ್ ಗೊವಾ ಕೋಟೆ

ಮರ್ಮ್ ಗೊವಾ ಕೋಟೆ

ವಾಸ್ಕೋ ಬಂದರನ್ನು ಸಾಲ್ಸೆಟ್ ನ ವಾಯುವ್ಯ ಬಿಂದುವಿನಲ್ಲಿ ನೆಲೆಗೊಂಡಿರುವ ಈ ಕೋಟೆಯಿಂದ ರಕ್ಷಿಸಲಾಗಿದೆ. ಕೋಟೆಯ ಅವಶೇಷಗಳು ಈಗ ಪ್ರಾರ್ಥನಾ ಮಂದಿರ ಮತ್ತು ಕೋಟೆಯ ಗೋಡೆಯ ಉಪಸ್ಥಿತಿಯ ಬಗ್ಗೆ ಮಾತ್ರ ಮಾತನಾಡುತ್ತವೆಯಾದರೂ, ಇದು ಆರಂಭದಲ್ಲಿ ಪ್ರಾರ್ಥನಾ ಮಂದಿರ, ಐದು ಜೈಲುಗಳು ಮತ್ತು ದೈತ್ಯಾಕಾರದ ಕೋಟೆಗಳನ್ನು ಒಳಗೊಂಡಿತ್ತು. ಪೋರ್ಚುಗೀಸ್ ಹಡಗುಗಳಿಗೆ ಮರ್ಮುಗೊವ ಒಂದು ಮಹತ್ವದ ಬಂದರಾಗಿತ್ತು. ದಕ್ಷಿಣ ಗೋವಾ ಬಾರ್ ಅನ್ನು ರಕ್ಷಿಸಲು ಡೊಮ್ ಫ್ರಾನ್ಸಿಸ್ಕೋ ಡ ಗಾಮಾ ಇದನ್ನು ನಿರ್ಮಿಸಿದನು. ಇದು ಖಂಡಿತವಾಗಿಯೂ ಭೇಟಿಗೆ ಅರ್ಹವಾಗಿದೆ!

ಅಂಜೆಡಿವಾ ಕೋಟೆ

ಅಂಜೆಡಿವಾ ಕೋಟೆ

ಇದು ಗೋವಾದ ತುತ್ತತುದಿಯಲ್ಲಿರುವ ಅಂಜದೀಪ್ ದ್ವೀಪದಲ್ಲಿರುವ ನೌಕಾ ಕೋಟೆಯಾಗಿದೆ. ಇದನ್ನು ವಾಸ್ಕೋ ಡ ಗಾಮ ಮತ್ತು ಗ್ಯಾಸ್ಪರ್ ಡ ಗಾಮನ ಸಲಹೆಯಂತೆ ಪೋರ್ಚುಗಲ್ ರಾಜನು ನಿರ್ಮಿಸಿದನು. ಅಂಜದೀಪ್ ದ್ವೀಪದಲ್ಲಿ ಸಮುದ್ರದ ತಳಪಾಯದಲ್ಲಿ ತನ್ನ ಉಪಸ್ಥಿತಿಯನ್ನು ಕಂಡುಕೊಳ್ಳುವ ಈ, ಕೋಟೆಗೆ ಸಾರ್ವಜನಿಕರಿಗೆ ಪ್ರವೇಶಿಸಲು ಸಾಧ್ಯವಿಲ್ಲ. 1961ರ ಡಿಸೆಂಬರ್ 18ರಂದು ನಡೆದ ಗೋವಾ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಈ ಕೋಟೆಯನ್ನು ಭಾರತೀಯ ಪಡೆಗಳು ವಶಪಡಿಸಿಕೊಂಡಿದ್ದನ್ನು ತಿಳಿದು ನೀವು ಆಶ್ಚರ್ಯಚಕಿತರಾಗುತ್ತೀರಿ. ಕೋಟೆಯನ್ನು ವಶಪಡಿಸಿಕೊಳ್ಳುವುದನ್ನು 'ಆಪರೇಷನ್ ವಿಜಯ್' ಎಂದು ಕರೆಯಲಾಗುತ್ತಿತ್ತು..

ಗೋವಾದಲ್ಲಿಯ ಕೋಟೆಗಳ ಬಗ್ಗೆ ಹೇಳುವುದಾದರೆ ಬಹಳಷ್ಟಿದೆ ಪ್ರವಾಸಿಗರು ತಮ್ಮ ಬಿಡುವಿನ ಸಮಯ ಅಥವಾ ರಜಾದಿನಗಳನ್ನು ಈ ಸುಂದರ ಸ್ಥಳಗಳಲ್ಲಿ ಕಳೆದು ಅವಿಸ್ಮರಣೀಯ ನೆನಪನ್ನು ತಮ್ಮೊಂದಿಗೆ ಒಯ್ಯಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X