Search
  • Follow NativePlanet
Share
» »ರಾಮ ಜನ್ಮಭೂಮಿಯಲ್ಲಿ ನೋಡಲೇ ಬೇಕಾದ ಸ್ಥಳಗಳಿವು...

ರಾಮ ಜನ್ಮಭೂಮಿಯಲ್ಲಿ ನೋಡಲೇ ಬೇಕಾದ ಸ್ಥಳಗಳಿವು...

By Manjula Balaraj Tantry

ರಾಮ ದೇವರ ಜನ್ಮಸ್ಥಳವಾದ ಅಯೋಧ್ಯೆಯು ಹಿಂದೂ ಧರ್ಮದವರಿಗೆ ಒಂದು ಅತೀ ಪವಿತ್ರವಾದ ಮತ್ತು ಪ್ರಾಮುಖ್ಯತೆ ಇರುವ ಸ್ಥಳವಾಗಿದೆ. ಇಲ್ಲಿನ ದೇವಾಲಯಗಳು ಮತ್ತು ಮಸೀದಿಗಳ ನಾಶದಿಂದಾಗಿ ಹಲವಾರು ವಿವಾದಗಳು ನಡೆದರೂ, ಇದು ಭಾರತದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಉತ್ತರ ಪ್ರದೇಶದ ಸರಾಯು ನದಿಯ ದಂಡೆಯ ಮೇಲಿರುವ ಅಯೋಧ್ಯೆಯು ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಭಾರತದ ಅತ್ಯಂತ ಹಳೆಯ ಸ್ಥಳಗಳಲ್ಲಿ ಒಂದಾಗಿದೆ. ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಭಾರತದ ಹಳೆಯ ಸ್ಥಳಗಳಲ್ಲಿ ಅಯೋಧ್ಯೆ ಕೂಡ ಒಂದಾಗಿದೆ.

ಈ ಪ್ರದೇಶಗಳಿಗೆ ಹೋಗಿ ಸ್ಕೂಬಾ ಡೈವ್ ಮಾಡಲೇ ಬೇಕು ಈ ಪ್ರದೇಶಗಳಿಗೆ ಹೋಗಿ ಸ್ಕೂಬಾ ಡೈವ್ ಮಾಡಲೇ ಬೇಕು

ಸಾಕೇತ ಎಂದೂ ಕರೆಯಲಾಗುತ್ತಿತ್ತು

ಸಾಕೇತ ಎಂದೂ ಕರೆಯಲಾಗುತ್ತಿತ್ತು

ಅಯೋಧ್ಯೆಯನ್ನು ಇದನ್ನು ಸಾಕೇತ ಎಂದೂ ಕೂಡಾ ಕರೆಯಲಾಗುತ್ತಿತ್ತು.ಇದು ಕೋಸಲ ಆಡಳಿತದ ರಾಜಧಾನಿಯಾಗಿತ್ತು.ದೇವಾಲಯದ ಇತಿಹಾಸಗಳ ಬಗ್ಗೆ ಕಲಿಯುವುದರಿಂದ ಹಿಡಿದು ಸುಂದರವಾದ ಘಾಟ್ ನ ಸೌಂದರ್ಯತೆಗಳನ್ನು ಅನ್ವೇಷಿಸುವ ವರೆಗೆ ಅಯೋಧ್ಯೆಯ ಆವರಣದ ಒಳಗೆ ಮಾಡಬೇಕಾದ ಬೇಕಾದಷ್ಟು ವಿಷಯಗಳಿವೆ.ಈ ಕೆಳಗಿನ ಅಯೋಧ್ಯೆಯಲ್ಲಿರುವ ಕೆಲವು ಪ್ರಮುಖ ಸ್ಥಳಗಳನ್ನು ಯಾವುದೇ ಪ್ರವಾಸಿಗರೂ ಕೂಡ ಭೇಟಿ ಮಾಡಲು ತಪ್ಪಿಸಲೇಬಾರದಂತವುಗಳು. ಆದುದರಿಂದ, ಪವಿತ್ರ ಅಯೋಧ್ಯೆಯ ಈ ಸ್ಥಳಗಳ ವಿಶೇಷತೆಗಳ ಬಗ್ಗೆ ತಿಳಿಯೋಣ.

ರಾಮ್ ಜನ್ಮಭೂಮಿ

ರಾಮ್ ಜನ್ಮಭೂಮಿ

ರಾಮ್ ಜನ್ಮಭೂಮಿ ಒಂದು ಅಯೋಧ್ಯೆಯ ವರ್ಷದುದ್ದಕ್ಕೂ ಪ್ರಮುಖ ಪ್ರವಾಸೀ ಆಕರ್ಷಣೆಯಾಗಿದೆ. ಈ ಸ್ಥಳವನ್ನು ರಾಮ ದೇವರ ಜನ್ಮ ಸ್ಥಳವೆಂದು ನಂಬಲಾಗುತ್ತದೆ ಮತ್ತು ನಂತರದಿಂದ ಈ ಸ್ಥಳವು ಹಿಂದೂ ಧರ್ಮದ ಯಾತ್ರಾ ಸ್ಥಳವೆಂದು ಪರಿಗಣಿಸಲಾಗುತ್ತದೆ.ಈ ಸ್ಥಳದಲ್ಲಿ ಅನೇಕ ದೇವಾಲಯಗಳಿದ್ದು ಮೊಘಲ್ ಸಾಮ್ರಾಜ್ಯದ ಅವಧಿಯಲ್ಲಿ ಅವರ ಚಕ್ರಾಧಿಪತಿಯಾದ ಬಾಬರ್ ನು ಈ ದೇವಾಲಯವನ್ನು ನಾಶಪಡಿಸಿ ಅದೇ ಜಾಗದಲ್ಲಿ ಮಸೀದಿಯನ್ನು ನಿರ್ಮಾಣ ಮಾಡಿದನು ಎನ್ನಲಾಗುತ್ತದೆ.

ಅಯೋಧ್ಯೆಯ ವಿವಾದದ ಹಿಂದಿನ ಪ್ರಮುಖ ಕಾರಣವೆಂದರೆ ರಾಮ ಜನ್ಮಭೂಮಿ. ಮುಸ್ಲಿಮರ ಆಳ್ವಿಕೆಯಲ್ಲಿ ದೇಗುಲಗಳ ನಾಶ ಮಾಡಿದ ಕಾರಣದಿಂದಾಗಿ ನಂತರದ ದಿನಗಳಲ್ಲಿ ಹಿಂದೂಗಳು ಬಾಬರಿ ಮಸೀದಿ ಧ್ವಂಸ ಮಾಡಿದುದೇ ಇಲ್ಲಿಯ ವಿವಾದಕ್ಕೆ ಪ್ರಮುಖ ಕಾರಣವಾಗಿದೆ. ಈ ಜಾಗವು ವಿವಾದಕ್ಕೆ ಒಳಗಾಗಿದ್ದರೂ ಕೂಡಾ ಈ ಸ್ಥಳಕ್ಕೆ ಅಸಂಖ್ಯಾತ ಹಿಂದೂ ಯಾತ್ರಿಗಳು ಪ್ರತೀ ವರ್ಷ ಭೇಟಿ ಕೊಡುತ್ತಾರೆ.

ಹನುಮಾನ್ ಗರ್ಹಿ

ಹನುಮಾನ್ ಗರ್ಹಿ

PC- Rudra707

ಹನುಮಾನ್ ಗರ್ಹಿ ಒಂದು ನಾಲ್ಕು ಬದಿ ಇರುವ ಕೋಟೆಯಾಗಿದ್ದು ಇದು ಹನುಮಾನ್ ದೇವರಿಗೆ ಅರ್ಪಿತವಾದ ದೇವಾಲಯವನ್ನು ಹೊಂದಿದೆ. ಅಯೋಧ್ಯೆಯ ಒಂದು ಅತ್ಯಂತ ಜನಪ್ರಿಯ ದೇವಾಲಯಗಳಲ್ಲೊಂದಾದ ಈ ದೇವಾಲಯವು ಲಕ್ಷಾಂತರ ಹಿಂದೂ ಭಕ್ತರಿಂದ ಭೇಟಿ ಕೊಡಲ್ಪಡುತ್ತದೆ.

ದಂತ ಕಥೆಗಳ ಪ್ರಕಾರ ಹನುಮಂತ ದೇವರು ಅಯೋಧ್ಯೆಯನ್ನು ರಾಕ್ಷಸರು ಮತ್ತು ಇನ್ನಿತರ ದುಷ್ಟಶಕ್ತಿಗಳ ಆಕ್ರಮಣದಿಂದ ರಕ್ಷಿಸಲು ಈ ದೇವಾಲಯದ ಗುಹೆಯಲ್ಲಿ ವಾಸಿಸುತ್ತಿದ್ದರೆನ್ನಲಾಗುತ್ತದೆ.ಮುಖ್ಯ ದೇವಾಲಯವನ್ನು ತಲುಪಲು ನಿಮಗೆ 76 ಮೆಟ್ಟಿಲುಗಳನ್ನು ದಾಟಬೇಕಾಗುತ್ತದೆ. ಇಲ್ಲಿ ಹನುಮಂತ ದೇವರ ತಾಯಿಯಾದ ಮಾ ಅಂಜನಿಯವರ ತೊಡೆಯಲ್ಲಿ ಹನುಮಂತ ದೇವರು ಕುಳಿತಿರುವ ಪ್ರತಿಮೆ ಇದೆ. ಈ ದೇವಾಲಯವನ್ನು ಅಯೋಧ್ಯೆಯ ರಾಜನಿಂದ ನಿರ್ಮಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ.

ತೇತಾ ಕೇ ಠಾಕೂರ್

ತೇತಾ ಕೇ ಠಾಕೂರ್

PC- Vishwaroop2006
ಅಯೋಧ್ಯೆಯಲ್ಲಿರುವ ತ್ರೇತಾ ಕೆ ಠಾಕೂರ್ ದೇವಾಲಯವು ರಾಮನು ಅಶ್ವಮೇಧ ಯಾಗವನ್ನು ಮಾಡಿದ ಸ್ಥಳವೆಂದು ನಂಬಲಾಗುತ್ತದೆ. ಆದುದರಿಂದ ಈ ದೇವಾಲಯವು ರಾಮ ದೇವರಿಗೆ ಅರ್ಪಿತವಾಗಿದೆ.ಇದನ್ನು ಕಪ್ಪು ಮರಳಿನ ಕಲ್ಲಿನಿಂದ ಕೆತ್ತಲಾಗಿದೆ ಮತ್ತು ಇದು ನಗರದುದ್ದಕ್ಕೂ ಹರಿಯುವ ಸರಯೂ ನದಿಯ ದಡದಲ್ಲಿ ನೆಲೆಸಿದೆ. ಇಂದು ಈ ಜಾಗದಲ್ಲಿ ಹೊಸ ದೇವಾಲಯದ ನಿರ್ಮಾಣವಾಗಿದ್ದು,ರಾಮ ದೇವರ ಅನೇಕ ಪ್ರತಿಮೆಗಳು ಮತ್ತು ಅವರ ಸಹೋದರರಾದ ಲಕ್ಷ್ಮಣ, ಭರತ ಮತ್ತು ಶತುಘ್ನ ಇವರ ಪ್ರತಿಮೆಗಳನ್ನೂ ಇಲ್ಲಿ ಸ್ಥಾಪಿಸಲಾಗಿದೆ. ಆದುದರಿಂದ ಈ ಸುಂದರವಾದ ತಾಣದ ಸುತ್ತ ಮುತ್ತ ಹೋಗಲು ಒಂದು ಪ್ರವಾಸಕ್ಕೆ ಯೋಜಿಸಿದರೆ ಹೇಗಿರಬಹುದು?

ಕನಕ್ ಭವನ್

ಕನಕ್ ಭವನ್

PC- Shalini Tomar

ಕನಕ್ ಭವನ್ ದೇವಾಲಯವನ್ನು ರಾಮ ದೇವರ ಮಡದಿಯಾದ ಸೀತಾ ದೇವಿಯವರಿಗೆ ರಾಮನ ಮಲತಾಯಿಯಾದ ಕೈಕೇಯಿ ಅವರಿಂದ ಉಡುಗೊರೆಯಾಗಿ ನೀಡಲ್ಪಟ್ಟಿತ್ತು ಎಂದು ಹೇಳಲಾಗುತ್ತದೆ. ಇದು ಸುಂದರವಾದ ದೇವಾಲಯವಾಗಿದ್ದು, ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ರಾಮ ಮತ್ತು ಸೀತಾ ದೇವಿಯ ಅನೇಕ ಪ್ರತಿಮೆಗಳನ್ನು ಹೊಂದಿದೆ.ಈ ಕನಕ್ ಭವನದ ಆವರಣದ ಒಳಗೆ ಉತ್ಸವದ ಸಮಯದಲ್ಲಿ ಅನೇಕ ಸಂಗೀತಗಾರರು ರಾಗಗಳನ್ನು ನುಡಿಸುವುದನ್ನು ಕೇಳಬಹುದು. ಆದ್ದರಿಂದ ಅದರ ಅಂಗಳ ಮತ್ತು ಇಲ್ಲಿಯ ಸುಂದರ ಗ್ಯಾಲರಿಗಳನ್ನು ಅನ್ವೇಷಿಸಿದರೆ ಹೇಗಿರಬಹುದು?

ಗುಪ್ತಾರ್ ಘಾಟ್

ಗುಪ್ತಾರ್ ಘಾಟ್

PC- Ramnath Bhat

ಗುಪ್ತಾರ್ ಘಾಟ್ ಗೆ ರಾಮ ದೇವರ ಜೊತೆ ಸಂಬಂಧವಿರುವ ಕಾರಣದಿಂದಾಗಿ ಅಯೋಧ್ಯೆಯಲ್ಲಿ ಇದು ಭೇಟಿ ಕೊಡಲೇ ಬೇಕಾದ ಸ್ಥಳವಾಗಿದೆ. ಈ ಸ್ಥಳವು ರಾಮನು ಸಾರಾಯು ನದಿಯ ನೀರಿನಲ್ಲಿ ಸ್ವತ: ಮುಳುಗಿ ಸ್ವರ್ಗಕ್ಕೆ ಹೋಗಿದ್ದ ಸ್ಥಳವೆಂದು ಹೇಳಲಾಗುತ್ತದೆ. ಆದುದರಿಂದ, ಈ ಘಾಟ್ ನ ನೀರನ್ನು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಜನರು ಪವಿತ್ರ ನೀರಿನಲ್ಲಿ ತಮ್ಮ ಪಾಪಗಳನ್ನು ಮತ್ತು ಜೀವನದ ಕಷ್ಟಗಳನ್ನು ತೊಡೆದುಕೊಳ್ಳಲು ಈ ನೀರಿನಲ್ಲಿ ಸ್ನಾನ ಮಾಡುವುದನ್ನು ನೋಡಬಹುದು. ನೀವು ಗುಪ್ತಾರ್ ಘಾಟ್ ನಲ್ಲಿ ನಿಮ್ಮ ಮನಸ್ಸನ್ನು ಶುದ್ದಿಗೊಳಿಸಿಕೊಳ್ಳಲು ಬಯಸುವಿರಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X