Search
  • Follow NativePlanet
Share
» »10000 ವರ್ಷಗಳ ಚರಿತ್ರೆ ಹೊಂದಿರುವ ಈ ದೇವಾಲಯದಲ್ಲಿ ಕ್ಷುದ್ರ ಪೂಜೆಗಳನ್ನು ನಡೆಸುತ್ತಿದ್ದರಂತೆ...

10000 ವರ್ಷಗಳ ಚರಿತ್ರೆ ಹೊಂದಿರುವ ಈ ದೇವಾಲಯದಲ್ಲಿ ಕ್ಷುದ್ರ ಪೂಜೆಗಳನ್ನು ನಡೆಸುತ್ತಿದ್ದರಂತೆ...

ಭಾರತ ದೇಶದಲ್ಲಿಯೇ ಅತ್ಯಂತ ಪುರಾತನವಾದ ದೇವಾಲಯವನ್ನು ತಮಿಳುನಾಡಿನ ಪುರಾವಸ್ತು ಶಾಖೆಯ ಅಧಿಕಾರಿಗಳು ಬೆಳಕಿಗೆ ತರುತ್ತಿದ್ದಾರೆ. ಈ ದೇವಾಲಯವು ಅತ್ಯಂತ ಮಾನವಾತೀತ ಶಕ್ತಿಗಳ ನಿಲಯವೆಂದು ಹೇಳಿದರೆ, ಇನ್ನು ಕೆಲವು ಮಂದಿ ಅಘೋರಿಗಳ ನಿಲಯವೆಂದು ಇನ್ನು ಕೆಲವು ಮಂದಿ ವಾದಿಸುತ್ತಾರೆ. ಮುಖ್ಯವಾಗಿ ಶೈವಾರಾಧನೆಯನ್ನು ಮಾಡುವವರು ಈ ದೇವಾಲಯದ ಬಗ್ಗೆ ಅನೇಕ ಕಥೆಗಳನ್ನು ಹೇಳುತ್ತಾರೆ. ಅದ್ದರಿಂದಲೇ ಈ ದೇವಾಲದ ಬಳಿ ಅನೇಕ ರಹಸ್ಯವಾದ ಪೂಜೆಗಳನ್ನು ನಿರ್ವಹಿಸುತ್ತಾ ಇರುತ್ತಾರೆ.

ಮುಖ್ಯವಾಗಿ ಆ ದೇವಾಲಯ ಬೆಳಕಿಗೆ ಬಂದ ಪ್ರದೇಶದಲ್ಲಿ ಮಣ್ಣನ್ನು ತೆಗೆದುಕೊಂಡು ತಾಂತ್ರಿಕ ಪೂಜೆಗಳಲ್ಲಿ ಬಳಸುತ್ತಿದ್ದರು ಎಂಬ ಸುದ್ದಿ ಇದೆ. ಅಷ್ಟೇ ಅಲ್ಲದೇ ಮಣ್ಣಿನಲ್ಲಿ ಮುಚ್ಚಿದ್ದ ಆ ದೇವಾಲಯದ ಗರ್ಭಗುಡಿಯಲ್ಲಿ ವಿಭಿನ್ನವಾದ ಮುರುಗನ್ ವಿಗ್ರಹದ ಜೊತೆಗೆ ಅನೇಕ ನಿಧಿ ನೀಕ್ಷೇಪಗಳಿವೆ ಎಂದು ಕೂಡ ಹೇಳುತ್ತಾರೆ.

ಅಷ್ಟಕ್ಕೂ ಈ ದೇವಾಲಯ ಎಲ್ಲಿದೆ? ಈ ದೇವಾಲಯಕ್ಕೆ ಹೇಗೆ ತಲುಪಬೇಕು? ಅದರ ನಿರ್ಮಾಣ ಹೇಗೆ ನಡೆಯಿತು ಎಂಬ ಅನೇಕ ವಿವರಗಳನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯಿರಿ.

1.ಸಾಲುವಕುಪ್ಪನ್ ಮುರುಗನ್ ದೇವಾಲಯ

1.ಸಾಲುವಕುಪ್ಪನ್ ಮುರುಗನ್ ದೇವಾಲಯ

PC:YOUTUBE

ತಮಿಳುನಾಡಿನಲ್ಲಿ ಉಳಿದ ದೇವತೆಗಳಿಗೆ ಹೋಲಿಸಿದರೆ ಮುರುಗನ್‍ಗೆ ಹೆಚ್ಚು ಆರಾಧಿಸುತ್ತಾರೆ. ಉಳಿದ ಪ್ರದೇಶದಲ್ಲಿ ಆ ಮುರುಗನ್‍ನನ್ನು ಸುಬ್ರಹ್ಮಣ್ಯಸ್ವಾಮಿ ಹೆಸರಿನಿಂದ ಆರಾಧಿಸುತ್ತಾರೆ.

2.ಸಾಲುವಕುಪ್ಪನ್ ಮುರುಗನ್ ದೇವಾಲಯ

2.ಸಾಲುವಕುಪ್ಪನ್ ಮುರುಗನ್ ದೇವಾಲಯ

PC:YOUTUBE

ನಾಗಪಂಚಮಿಯ ದಿನದಂದು ಸುಬ್ರಹ್ಮಣ್ಯಸ್ವಾಮಿ ನೆಲೆಸಿರುವ ಕ್ಷೇತ್ರದಲ್ಲಿ ಭಕ್ತರು ಹೆಚ್ಚಾಗಿ ಪೂಜೆಗಳನ್ನು ನಿರ್ವಹಿಸುತ್ತಾರೆ. ಇದರಿಂದ ಅವರಿಗೆ ಸಂತಾನವಾಗುತ್ತದೆ ಎಂದು ದೃಢವಾಗಿ ನಂಬುತ್ತಾರೆ.

3.ಸಾಲುವಕುಪ್ಪನ್ ಮುರುಗನ್ ದೇವಾಲಯ

3.ಸಾಲುವಕುಪ್ಪನ್ ಮುರುಗನ್ ದೇವಾಲಯ

PC:YOUTUBE

ಆದರೆ ತಮಿಳುನಾಡಿನಲ್ಲಿ ಪ್ರಮುಖ ಪ್ರವಾಸಿ ಪ್ರದೇಶವಾದ ಮಹಾಬಲೀಪುರಂನ ಸಮೀಪದಲ್ಲಿ ಸಾಲುವಕುಪ್ಪಂ ಎಂಬ ಗ್ರಾಮವಿದೆ. ಅಲ್ಲಿ ಸರಿಸುಮಾರು 10 ಸಾವಿರ ವರ್ಷಗಳಿಗಿಂತ ಪೂರ್ವವೇ ಇಲ್ಲಿನ ದೇವಾಲಯವನ್ನು ಇಟ್ಟಿಗೆಗಳಿಂದ ನಿರ್ಮಾಣ ಮಾಡಿದ್ದರು. ವಾತಾವರಣದಲ್ಲಿ ಆದ ಮಾರ್ಪಾಟಾನಿಂದಾಗಿ ಈ ದೇವಾಲಯವು ಪೂರ್ತಿಯಾಗಿ ನೆಲದಲ್ಲಿ ಸಮವಾಯಿತು.

4.ಸಾಲುವಕುಪ್ಪನ್ ಮುರುಗನ್ ದೇವಾಲಯ

4.ಸಾಲುವಕುಪ್ಪನ್ ಮುರುಗನ್ ದೇವಾಲಯ

PC:YOUTUBE

ಇನ್ನು ಈ ದೇವಾಲಯದ ದೊಡ್ಡಸ್ಥಿಕೆಯನ್ನು ತಿಳಿದುಕೊಂಡ ಪಲ್ಲವರು 8 ನೇ ಶತಮಾನದಲ್ಲಿ ಪುನಃ ನಿರ್ಮಾಣ ಮಾಡಿದರು. ಈ ಬಾರಿ ಇಟ್ಟಿಕೆಗಳ ಬದಲಿಗೆ ಒಟ್ಟು ದೇವಾಲಯವನ್ನು ಗ್ರಾನೈಟ್‍ನಿಂದ ನಿರ್ಮಾಣ ಮಾಡಿದರು.

5.ಸಾಲುವಕುಪ್ಪನ್ ಮುರುಗನ್ ದೇವಾಲಯ

5.ಸಾಲುವಕುಪ್ಪನ್ ಮುರುಗನ್ ದೇವಾಲಯ

PC:YOUTUBE

ಆದರೆ ಆ ದೇವಾಲಯವು ಮತ್ತೆ ವಾತಾವರಣದಿಂದಾಗಿ ಅಥವಾ ಕೆಲವು ಮಂದಿ ಧ್ವಂಸ ಮಾಡಿದ್ದರಿಂದ ನಾಶವಾಯಿತು. ಆದರೆ ಸುನಾಮಿ ಬಂದ ನಂತರವೇ ಈ ದೇವಾಲಯವು ಬೆಳಕಿಗೆ ಬಂತು. ಈ ದೇವಾಲಯವು ಉತ್ತರಮುಖವಾಗಿದೆ. ತಮಿಳುನಾಡಿನಲ್ಲಿನ ಪಲ್ಲವರಿಗಿಂತ ಮುಂಚೆ ನಿರ್ಮಾಣ ಮಾಡಿದ ದೇವಾಲಯಗಳಲ್ಲಿ ಇದು 2 ನೇ ಯದು ಎಂದು ಗುರುತಿಸಲಾಗಿದೆ.

6.ಸಾಲುವಕುಪ್ಪನ್ ಮುರುಗನ್ ದೇವಾಲಯ

6.ಸಾಲುವಕುಪ್ಪನ್ ಮುರುಗನ್ ದೇವಾಲಯ

PC:YOUTUBE

ಮತ್ತೊಂದು ದೇವಾಲಯವು ನಮಗೆ ವಿಪ್ಪತ್ತೂರಿನಲ್ಲಿನ ವಿತ್ತಿರುದ್ರ ಪೆರುಮಾಳ್ ದೇವಾಲಯ. ಪ್ರಸ್ತುತ ಗರ್ಭಗುಡಿ ಪೂರ್ತಿ ಮರಳಿನಿಂದ ಹಾಗು ದೊಡ್ಡದಾದ ಗ್ರಾನೈಟ್ ಬಂಡೆಯಿಂದ ನಿರ್ಮಾಣ ಮಾಡಲಾಗಿದೆ. ಇದನ್ನು ಹೊರಗೆ ತೆಗೆದರೆ ಅತಿ ವಿಶಿಷ್ಟವಾದ ಹಾಗು ಬೆಲೆಬಾಳುವ ಸುಬ್ರಹ್ಮಣ್ಯಸ್ವಾಮಿ ವಿಗ್ರಹ ಲಭಿಸುತ್ತದೆ ಎಂದು ತಿಳಿದುಬಂದಿದೆ.

7.ಸಾಲುವಕುಪ್ಪನ್ ಮುರುಗನ್ ದೇವಾಲಯ

7.ಸಾಲುವಕುಪ್ಪನ್ ಮುರುಗನ್ ದೇವಾಲಯ

PC:YOUTUBE

ಇದಕ್ಕಾಗಿಯೇ ಕೆಲವುಮಂದಿ ಅಘೋರಿಗಳು ಪೂಜೆಗಳನ್ನು ಮಾಡಿದ ಹಾಗೆ ಸಮಾಚಾರ. ಇದಕ್ಕೆ ಸಂಬಂಧಿಸಿದ ಶಾಸನಗಳು ಕೂಡ ಇಲ್ಲಿ ದೊರೆತಿವೆ. ಸುನಾಮಿಯಿಂದಾಗಿಯೇ ಈ ದೇವಾಲಯವು ನಾಶವಾಯಿತು ಎಂದು ಪುರಾವಸ್ತುಶಾಖೆಯ ಅಧಿಕಾರಿಗಳು ಹೇಳುತ್ತಾರೆ.

8.ಸಾಲುವಕುಪ್ಪನ್ ಮುರುಗನ್ ದೇವಾಲಯ

8.ಸಾಲುವಕುಪ್ಪನ್ ಮುರುಗನ್ ದೇವಾಲಯ

PC:YOUTUBE

ಆದರೆ ಈ ದೇವಾಲಯದ ಒಳಗೆ ವಿಶೇಷವಾದ ವಿಗ್ರಹದ ಜೊತೆಗೆ ಬೆಲೆಬಾಳುವ ಸಂಪತ್ತು ಕೂಡ ಇದೆ ಎಂದು ಹೇಳುತ್ತಾರೆ. ಇಲ್ಲಿ ದೊರೆತಿರುವ ಆಧಾರಗಳನ್ನು ಅನುಸರಿಸಿ ಈ ದೇವಾಲಯ ನಿರ್ಮಾಣದ ವಾಸ್ತುಶಾಸ್ತ್ರವು ದಕ್ಷಿಣ ಭಾರತದೇಶದಲ್ಲಿ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ.

9.ಸಾಲುವಕುಪ್ಪನ್ ಮುರುಗನ್ ದೇವಾಲಯ

9.ಸಾಲುವಕುಪ್ಪನ್ ಮುರುಗನ್ ದೇವಾಲಯ

PC:YOUTUBE

ಈ ದೇವಾಲಯದಲ್ಲಿ ಕಾಣಿಸುವ ಶಿಲ್ಪಗಳ ಭಂಗಿಮಗಳನ್ನು ಅನುಸರಿಸಿ ಈ ದೇವಾಲಯದಲ್ಲಿ ತಾಂತ್ರಿಕ ಪೂಜೆಗಳನ್ನು ಕೂಡ ಮಾಡುತ್ತಿದ್ದರು ಎಂದು ಅನುಮಾನಿಸಲಾಗಿದೆ. ಭಾರತ ದೇಶದಲ್ಲಿ ವಾಸ್ತುಶಾಸ್ತ್ರ ಬರುವುದಕ್ಕಿಂತ ಮುಂಚೆಯೇ ನಿರ್ಮಾಣ ಮಾಡಿದ ಈ ದೇವಾಲಯದ ಬಗ್ಗೆ ಮತ್ತಷ್ಟು ಪರಿಶೋಧನೆಯನ್ನು ಒಂದು ಕಡೆ ಪುರಾವಸ್ತುಶಾಖೆಯ ಅಧಿಕಾರಿಗಳು ಮಾಡುತ್ತಿದ್ದರೆ ಮತ್ತೊಂದೆಡೆ ಅಘೋರಿಗಳು ಮಾಡುತ್ತಿದ್ದಾರೆ.

10.ಸಾಲುವಕುಪ್ಪನ್ ಮುರುಗನ್ ದೇವಾಲಯ

10.ಸಾಲುವಕುಪ್ಪನ್ ಮುರುಗನ್ ದೇವಾಲಯ

PC:YOUTUBE

ಇಲ್ಲಿ ನಂದಿ, ಒಂದು ಮಹಿಳೆಯ ತಲೆ, ದೀಪ, ಶಿವಲಿಂಗ, ಅತ್ಯಂತ ವಿಶೇಷವಾದ ನೀಲ ಮಣಿಯಿಂದ ತಯಾರಿಸಿದ ಅದ್ಭುತವಾದ ವಸ್ತು ಕೂಡ ಈ ಸ್ಥಳದಲ್ಲಿ ದೊರೆತಿವೆ. ಪ್ರಸ್ತುತ ಈ ಪ್ರದೇಶವು ಪ್ರಸಿದ್ಧವಾದ ಪ್ರವಾಸಿ ಕೇಂದ್ರವಾಗಿ ಮಾರ್ಪಾಟಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X