Search
  • Follow NativePlanet
Share
» »ಮುರುಡೇಶ್ವರ ಮತ್ತು ಅದರ ಸುತ್ತಮುತ್ತಲಿರುವ ಅನ್ವೇಷಣೆಗೆ ಒಳಪಡಬೇಕಿರುವ ಮನಮೋಹಕ ಸಮುದ್ರಗಳು

ಮುರುಡೇಶ್ವರ ಮತ್ತು ಅದರ ಸುತ್ತಮುತ್ತಲಿರುವ ಅನ್ವೇಷಣೆಗೆ ಒಳಪಡಬೇಕಿರುವ ಮನಮೋಹಕ ಸಮುದ್ರಗಳು

ಮುರುಡೇಶ್ವರ ಮತ್ತು ಅದರ ಸುತ್ತಮುತ್ತಲಿರುವ ಅನ್ವೇಷಣೆಗೆ ಒಳಪಡಬೇಕಿರುವ ಮನಮೋಹಕ ಸಮುದ್ರಗಳು

ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿರುವ ಮುರುಡೇಶ್ವರವು ಅರಬ್ಬೀ ಸಮುದ್ರದ ದಡದಲ್ಲಿರುವ ಒಂದು ಸುಂದರವಾದ ಕಡಲ ಪಟ್ಟಣವಾಗಿದೆ. ವಿಶ್ವದಲ್ಲಿಯೇ ಅತ್ತ್ಯಂತವಾಗಿ ಎರಡನೇ ಎತ್ತರವಾದ ಶಿವನ ವಿಗ್ರಹವನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ ಈ ಕಾರಣದಿಂದಾಗಿ ಮುರುಡೇಶ್ವರ ದೇವಾಲಯವು ರಾಜ್ಯದಾದ್ಯಂತದ ವಿಶೇಷವಾಗಿ ಹಿಂದು ಭಕ್ತರಿಂದ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಪೂಜ್ಯನೀಯವಾದ ದೇವಾಲಯದ ಹೊರತಾಗಿಯೂ ಮುರುಡೇಶ್ವರ ಮತ್ತು ಅದರ ಸುತ್ತಮುತ್ತಲಿನಲ್ಲಿ ಹಲವಾರು ಸ್ಥಳಗಳಲ್ಲಿ ನೋಡಬಹುದಾದ ಹಲವಾರು ಸ್ಥಳಗಳಿವೆ. ಕಡಲಪಟ್ಟಣವಾಗಿರುವ ಈ ಸ್ಥಳವು ಹಲವಾರು ಸುಂದರ ಕಡಲತೀರಗಳಿಂದ ಸುತ್ತುವರೆಯಲ್ಪಟ್ಟಿದೆ.

ಅವುಗಳಲ್ಲಿ ಕೆಲವು ಪ್ರವಾಸಿಗರಲ್ಲಿ ಪ್ರಸಿದ್ದಿಯನ್ನು ಪಡೆದಿದ್ದು, ಜನಸಂದಣಿಯಿಂದ ಕೂಡಿರುತ್ತದೆ ಮತ್ತು ಇನ್ನು ಕೆಲವು ಕೇವಲ ಸ್ಥಳೀಯರಿಗೆ ಮಾತ್ರ ತಿಳಿಯಲ್ಪಟ್ಟಿರುವುದಾಗಿದ್ದು ಈ ಸ್ಥಳವು ಪ್ರಶಾಂತವಾದ ಹಾಗೂ ಮಾಲಿನ್ಯ ರಹಿತ ವಾತಾವರಣವನ್ನು ಹೊಂದಿದೆ. ನೀವು ಬೀಚ್ ಗಳನ್ನು ಇಷ್ಟಪಡುವವರಾಗಿದ್ದಲ್ಲಿ, ಈ ಲೇಖನವನ್ನು ಓದಿ. ಮುರುಡೇಶ್ವರದಲ್ಲಿಯ ಕೆಲವು ಅತ್ಯಂತ ಸುಂದರವಾದ ಮತ್ತು ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ ಬೀಚ್ ಗಳ ಬಗ್ಗೆ ತಿಳಿಯೋಣ.

ಮುರುಡೇಶ್ವರ ಬೀಚ್

ಮುರುಡೇಶ್ವರ ಬೀಚ್

ಮುರುಡೇಶ್ವರದ ಈ ಕಡಲತೀರವು ಅತ್ಯಂತ ಹೆಸರುವಾಸಿಯಾದ ಮತ್ತು ಹೆಚ್ಚಾಗಿ ಭೇಟಿ ಕೊಡಲ್ಪಡುವ ಸ್ಥಳವಾಗಿದೆ. ಸರಾಸರಿಯಾಗಿ ಈ ಕಡಲತೀರಕ್ಕೆ ಸಾವಿರಾರು ಜನ ಪ್ರವಾಸಿಗರಿಂದ ಪ್ರತೀವರ್ಷ ಭೇಟಿ ನೀಡಲ್ಪಡುತ್ತದೆ. ಆದುದರಿಂದ ನೀವು ಮುರುಡೇಶ್ವರದಲ್ಲಿರುವ ಮತ್ತು ಅದರ ಸುತ್ತಮುತ್ತಲಿರುವ ಬೀಚ್ ಗಳ ಸೌಂದರ್ಯತೆಯನ್ನು ನೋಡಲು ತಪ್ಪಿಸಲೇಬಾರದವುಗಳಾಗಿವೆ.

ಕಾಲಾನಂತರ ಈ ಸುಂದರವಾದ ಕಡಲತೀರವು ಸ್ಥಳೀಯರಿಗೆ ಮತ್ತು ವಿಶ್ರಾಂತಿ ಪಡೆಯ ಬಯಸುವ ಪ್ರವಾಸಿಗರಿಗೆ ಪ್ರಸಿದ್ದವಾದ ಪಿಕ್ನಿಕ್ ತಾಣವಾಗಿ ಮಾರ್ಪಟ್ಟಿದೆ. ಬೋಟಿಂಗ್ ಮತ್ತು ಪಕ್ಷಿವೀಕ್ಷಣೆಯು ಇಲ್ಲಿ ಮಾಡಬಹುದಾದ ಪ್ರಮುಖ ಚಟುವಟಿಕೆಗಳಾಗಿವೆ.

 ಅಲ್ವೇಕೋಡಿ ಬೀಚ್

ಅಲ್ವೇಕೋಡಿ ಬೀಚ್

ನೀವು ಮುರುಡೇಶ್ವರದ ಹೊರವಲಯದಲ್ಲಿ ಅನ್ವೇಷಿಸಲು ಬಯಸಿದರೆ, ಅಲ್ವೆಕೋಡಿ ಬೀಚ್ ಖಂಡಿತವಾಗಿಯೂ ನಿಮಗೆ ಆಸಕ್ತಿಯನ್ನುಂಟುಮಾಡುವ ಒಂದು ತಾಣವಾಗಿದೆ. ಇದು ಕೇವಲ ಸ್ಥಳೀಯರಲ್ಲಿ ಪ್ರಾಮುಖ್ಯತೆಯನ್ನು ಹೊಂದಿದ್ದು ಮತ್ತು ಅಪರೂಪವಾಗಿ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರಿಂದ ಭೇಟಿ ಕೊಡಲ್ಪಡುವುದರಿಂದ ಇದು ಪ್ರಶಾಂತವಾಗಿ ಮತ್ತು ಮಾಲಿನ್ಯರಹಿತವಾದ ಮತ್ತು ಯಾವುದೇ ತೊಂದರೆಗಳಿಲ್ಲದ ಪರಿಸರದಿಂದ ಕೂಡಿದೆ.

ಆದ್ದರಿಂದ, ಏಕಾಂತ ಮತ್ತು ಸಂಯೋಜಿತ ವಾತಾವರಣದ ಮಧ್ಯೆ ಅನುಭವವನ್ನು ಪಡೆಯಲು ಬಯಸಿದಲ್ಲಿ, ಅಲೆವ್ಕೋಡಿ ಬೀಚ್‌ಗೆ ಭೇಟಿ ನೀಡಲು ಮರೆಯಬೇಡಿ. ಇದು ಮುರುಡೇಶ್ವರದಿಂದ ಸುಮಾರು 40 ಕಿ.ಮೀ ದೂರದಲ್ಲಿದೆ ಮತ್ತು ಸುಲಭವಾಗಿ ತಲುಪಬಹುದು. ಈ ಪ್ರದೇಶವು ಛಾಯಾಗ್ರಹಣ ಮತ್ತು ವಿಹಾರಕ್ಕೆ ಸಹ ಸೂಕ್ತವಾಗಿದೆ.

ಬೈಲೂರ್ ಬೀಚ್

ಬೈಲೂರ್ ಬೀಚ್

ಮುರುಡೇಶ್ವರ ಬೀಚ್ ಗ ಸುಮಾರು 7ಕಿ.ಮೀ ಅಂತರದಲ್ಲಿರುವ ಬೈಲೂರು ಬೀಚ್ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಕಾಲ ಕಳೆಯಲು ಬೈಲೂರ್ ಬೀಚ್ ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ಕೆಲವು ಸಮಯದಲ್ಲಿ ಈ ಸಮಯವು ಜನಸಂದಣಿಯಿಂದ ಕೂಡಿದ್ದರೂ ಸಹ ಇದು ಮತ್ತು ಉಲ್ಲಾಸಕರ ವಾತಾವರಣವನ್ನು ಹೊಂದಿದೆ.

ಬೈಲೂರು ಕಡಲತೀರ ಪ್ರದೇಶವು ಹಲವಾರು ಸುಂದರವಾದ ದೇವಾಲಯಗಳಿಗೆ ನೆಲೆಯಾಗಿದೆ ಆದುದರಿಂದ ಪ್ರಕೃತಿ ಸೌಂದರ್ಯತೆಯ ಜೊತೆಗೆ ದೈವಿಕ ವಾತಾವರಣವನ್ನೂ ಸಹ ನೀವು ಇಲ್ಲಿ ಅನುಭವಿಸಬಹುದಾಗಿದೆ. ಅಲ್ಲದೆ ಇಲ್ಲಿಯ ಹಳ್ಳಿಗೆ ಭೇಟಿ ಕೊಟ್ಟು ಸ್ಥಳೀಯರೊಂದಿಗೆ ಬೆರೆಯಬಹುದಾಗಿದೆ.

ನಾಕುಡಾ ಬೀಚ್

ನಾಕುಡಾ ಬೀಚ್

ಇದನ್ನು ತೆಂಗಿನಗುಡ್ಡ ಬೀಚ್ ಎಂದೂ ಕರೆಯಲಾಗುತ್ತದೆ. ಹೊರಗಿನ ಜಗತ್ತಿನ ಸದ್ದುಗದ್ದಲಗಳಿಂದ ದೂರವಾಗಿ ನೈಸರ್ಗಿಕ ವಾತಾವರಣದಲ್ಲಿ ಮತ್ತು ಯಾವುದೇ ಅಡ್ಡಿ ಆತಂಕಗಳಿಲ್ಲದ ಜಾಗದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಬಯಸುತ್ತಿರುವಿರಾದಲ್ಲಿ, ನಾಕುಡಾ ಬೀಚ್ ಒಂದು ಅತ್ಯದ್ಬುತ ತಾಣವಾಗಿದೆ.ಹೌದು, ನಖುದಾ ಬೀಚ್ ಕರ್ನಾಟಕದ ಕಡಿಮೆ ಅನ್ವೇಷಣೆಗೆ ಒಳಗಾದ ಸದ ಕಡಲತೀರಗಳಲ್ಲಿ ಒಂದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X