Search
  • Follow NativePlanet
Share
» »ಭಾರತದಲ್ಲಿಯೇ ಮೊದಲ ದೇವಿಯ ದೇವಾಲಯ ಯಾವುದು ಗೊತ್ತ?

ಭಾರತದಲ್ಲಿಯೇ ಮೊದಲ ದೇವಿಯ ದೇವಾಲಯ ಯಾವುದು ಗೊತ್ತ?

ದೇವಾಲಯಗಳನ್ನು ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಒಂದೊಂದು ದೇವಾಲಯಕ್ಕೂ ತನ್ನದೇ ಆದ ವಿಶೇಷತೆಗಳನ್ನು ಅಡಗಿಸಿಕೊಂಡಿರುತ್ತವೆ. ಇವೆಲ್ಲಾ ನೋಡಿದರೆ ದೇವಾಲಯದ ಉಗಮ ಹೇಗೆ ಪ್ರಾರಂಭವಾಯಿತು ಎಂಬ ಪ್ರೆಶ್ನೆ ಎಲ್ಲರಿಗೂ ಮೂಡುವಂತಹದು. ಯಾರು ದೇವ

ದೇವಾಲಯಗಳನ್ನು ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಒಂದೊಂದು ದೇವಾಲಯಕ್ಕೂ ತನ್ನದೇ ಆದ ವಿಶೇಷತೆಗಳನ್ನು ಅಡಗಿಸಿಕೊಂಡಿರುತ್ತವೆ. ಇವೆಲ್ಲಾ ನೋಡಿದರೆ ದೇವಾಲಯದ ಉಗಮ ಹೇಗೆ ಪ್ರಾರಂಭವಾಯಿತು ಎಂಬ ಪ್ರೆಶ್ನೆ ಎಲ್ಲರಿಗೂ ಮೂಡುವಂತಹದು. ಯಾರು ದೇವಾಲಯಗಳನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು? ದೇವತಾ ಮೂರ್ತಿಯನ್ನು ಇಟ್ಟು ಆರಾಧಿಸಬೇಕು ಎಂದು ಯಾರು ಹೇಳಿದರು? ಎಂಬ ಪ್ರೆಶ್ನೆಗೆ ಉತ್ತರ ಯಾರಿಗೂ ತಿಳಿದಿಲ್ಲ.

ಆದರೆ ನಮ್ಮ ಪುರಾತನ ಶಾಸನಗಳ ಮೂಲಕ ಯಾವ ರಾಜರು ಯಾವ ಯಾವ ದೇವಾಲಯಗಳನ್ನು ಸ್ಥಾಪನೆ ಮಾಡಿದರು ಎಂಬುದನ್ನು ನಾವು ಕಾಣಬಹುದಾಗಿದೆ. ಸಾಮಾನ್ಯವಾಗಿ ಮೊದಲು ಶಿವನನ್ನು ಲಿಂಗ ಸ್ವರೂಪಿಯಾಗಿ ಪೂಜೆಗಳನ್ನು ಮಾಡುತ್ತಿದ್ದರು. ತದ ನಂತರ ಇತರ ದೇವತಾ ಮೂರ್ತಿಗಳ ದೇವಾಲಯಗಳು ಉಗಮ ಹೊಂದಿತು. ಮೊಟ್ಟ ಮೊದಲ ದೇವಿಗೆ ದೇವಾಲಯ ಎಲ್ಲಿ ನಿರ್ಮಾಣ ಮಾಡಿದರು? ಆ ದೇವಾಲಯ ಯಾವುದು ಎಂಬ ವಿವಿರ ನಿಮಗೆ ಗೊತ್ತೆ?

ಹಾಗಾದರೆ ಲೇಖನದ ಮೂಲಕ ಭಾರತದಲ್ಲಿಯೇ ಮೊದಲು ನಿರ್ಮಾಣ ಮಾಡಿದ ದೇವಿಯ ದೇವಾಲಯದ ಬಗ್ಗೆ ಮಾಹಿತಿಯನ್ನು ಪಡೆಯೋಣ.

ಯಾವ ದೇವಾಲಯ? ಎಲ್ಲಿದೆ?

ಯಾವ ದೇವಾಲಯ? ಎಲ್ಲಿದೆ?

ಭಾರತದ ಮೊಟ್ಟ ಮೊದಲ ದೇವಿಯ ದೇವಾಲಯ ಇರುವುದು ಬಿಹಾರ ರಾಜ್ಯದ ಕೈ ಮೂರ್ ಜಿಲ್ಲೆಯ ಕೌರಾದ ಮುಂಡೇಶ್ವರಿ ಬೆಟ್ಟದ ಮೇಲೆ. ಆ ಮಾಹಿಮಾನ್ವಿತವಾದ ದೇವಾಲಯದ ಹೆಸರು ಮುಂಡೇಶ್ವರಿ ದೇವಿ ದೇವಾಲಯವಾಗಿದೆ. ಇದೊಂದು ಪವಿತ್ರವಾದ ಹಿಂದೂ ದೇವಾಲಯವಾಗಿದೆ.

PC:Lakshya2509

 ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಈ ದೇವಾಲಯದ ಗರ್ಭಗುಡಿಯಲ್ಲಿ ಮಹಾಶಿವನು ತನ್ನ ಪತ್ನಿಯಾದ ಶಕ್ತಿಯೊಂದಿಗೆ ನೆಲೆಸಿದ್ದಾನೆ. ಇದು ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ ಎಂದು ಕರೆಯುತ್ತಾರೆ.

PC:Nandanupadhyay


 ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಈ ಪುರಾತನವಾದ ದೇವಾಲಯವನ್ನು ಬಿಹಾರ್ ಧಾರ್ಮಿಕ ಟ್ರಸ್ಟ್ ಮಂಡಳಿಯು ಎ.ಎಸ್.ಐ ಅಡಿಯಲ್ಲಿ 1915 ರಿಂದಲೂ ತನ್ನ ಅಧೀನದಲ್ಲಿ ಇಟ್ಟಕೊಂಡು ರಕ್ಷಣೆ ಮಾಡುತ್ತಿದೆ.

PC:Bihar Images

 ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಮುಂಡೇಶ್ವರಿ ದೇವಿ ದೇವಾಲಯವು ಮುಂಡೇಶ್ವರಿ ಬೆಟ್ಟದ ಮೇಲೆ ಇದೆ. ಇದು ಸುಮಾರು 608 ಅಡಿ ಅಂದರೆ (185 ಮೀ) ಎತ್ತರದಲ್ಲಿದೆ. ಈ ಮುಂಡೇಶ್ವರಿ ಬೆಟ್ಟದ ಮೇಲೆ ಆನೇಕ ಪುರಾತತ್ತ್ವ ಶಾಸ್ತ್ರದ ಅವಶೇಷಗಳನ್ನು ಕಾಣಬಹುದಾಗಿದೆ.


PC:Nandanupadhyay

 ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಈ ದೇವಾಲಯವನ್ನು 107 ರಲ್ಲಿ ನಿರ್ಮಾಣ ಮಾಡಿರಬಹುದು ಎಂದು ಲೆಕ್ಕಚಾರ ಹಾಕಲಾಗಿದೆ. ಈ ದೇವಾಲಯವನ್ನು ನಗರ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.


PC:Nandanupadhyay


 ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ದೇವಾಲಯದಲ್ಲಿ ದೇವಿಯು ದುರ್ಗಾ ಸ್ವರೂಪಿಯಾಗಿದ್ದು, 10 ಕೈಗಳನ್ನು ಹೊಂದಿದ್ದಾಳೆ. ಇಲ್ಲಿನ ತಾಯಿಯು ಸಿಂಹದ ಮೇಲೆ ಕುಳಿತ್ತಿದ್ದು, ಮಹೀಷಾಸುರ ಮರ್ದಿನಿ ರೂಪದಲ್ಲಿ ದರ್ಶನ ನೀಡುತ್ತಾಳೆ.


PC:Nandanupadhyay

 ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಆಶ್ಚರ್ಯ ಏನಪ್ಪ ಎಂದರೆ ಇಲ್ಲಿ ಮಹಾ ಶಿವನು ಕೂಡ 4 ಮುಖಗಳನ್ನು ಹೊಂದಿದ್ದಾನೆ. ಅಪರೂಪದ ಅಷ್ಟಭುಜಾಕೃತಿ ಯೋಜನೆಯಲ್ಲಿ ಈ ದೇವಾಲಯವನ್ನು ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ.


PC:Nandanupadhyay

 ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಈ ಅದ್ಭುತವಾದ ದೇವಾಲಯವು ಬಿಹಾರದ ನಾಗಾರಾ ಎಂಬ ಶೈಲಿಯ ವಾಸ್ತು ಶಿಲ್ಪವನ್ನು ಹೊಂದಿದೆ. ನಾಲ್ಕು ಭಾಗಗಳಲ್ಲಿಯೂ ಬಾಗಿಲುಗಳು ಹಾಗು ಕಿಟಕಿಗಳನ್ನು ದೇವಾಲಯವು ಹೊಂದಿದೆ.

PC:Nandanupadhyay

 ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ದೇವಾಲಯದ ಗೋಪುರವನ್ನು ದಾಳಿಗಳಿಂದ ನಾಶ ಹೊಂದಿದರೂ ಕೂಡ ನವೀಕರಣದ ಭಾಗವಾಗಿ ಛಾವಣಿಯನ್ನು ನಿರ್ಮಾಣ ಮಾಡಲಾಗಿದೆ. ದೇವಾಲಯದ ಒಳಭಾಗದಲ್ಲಿ ಸೂಕ್ಷ್ಮವಾದ ಕೆತ್ತನೆಗಳಿಂದ ಕಂಗೊಳಿಸುತ್ತಿದೆ.

PC:Nandanupadhyay

 ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ದೇವಾಲಯದ ಪ್ರವೇಶ ದ್ವಾರದಲ್ಲಿ ದ್ವಾರಪಾಲಕರು, ಗಂಗಾ, ಯಮುನ ಮತ್ತು ಆನೇಕ ಇತರ ದೇವತಾ ಮೂರ್ತಿಗಳು ಕೆತ್ತಿದ ಚಿತ್ರಗಳನ್ನು ಹೊಂದಿರುವ ದ್ವಾರವನ್ನು ಕಾಣಬಹುದಾಗಿದೆ.


PC:Nandanupadhyay

 ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ದೇವಾಲಯದ ಗರ್ಭಗುಡಿಯಲ್ಲಿ ಮುಖ್ಯ ದೇವತೆಯಾಗಿ ಮುಂಡೇಶ್ವರಿ ಮತ್ತು ಚರ್ತುಮುಖ ಶಿವಲಿಂಗ ವಿದೆ. ಇಲ್ಲಿನ ಮತ್ತೊಂದು ವಿಶೇಷವೆನೆಂದರೆ ವಿಭಿನ್ನ ವಿನ್ಯಾಸದ 2 ಕಲ್ಲಿನ ಪಾತ್ರೆಗಳನ್ನು ಇಲ್ಲಿ ಕಾಣಬಹುದಾಗಿದೆ.


PC:Nandanupadhyay

 ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಈ ದೇವಾಲಯದಲ್ಲಿ ಇತರ ದೇವತಾ ಮೂರ್ತಿಗಳನ್ನು ಸಹ ಕಾಣಬಹುದಾಗಿದೆ. ಅವುಗಳೆಂದರೆ ಗಣೇಶ, ಸೂರ್ಯ ಮತ್ತು ವಿಷ್ಣುವಿನಂತಹ ಜನಪ್ರಿಯ ದೇವತೆಗಳ ಮೂರ್ತಿಗಳನ್ನು ಕಾಣಬಹುದಾಗಿದೆ.

PC:Nandanupadhyay

 ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ದಶಕಗಳು ಉರುಳುತ್ತಿದ್ದರು ಕೂಡ ಈ ದೇವಾಲಯದಲ್ಲಿ ಪೂಜೆಗಳು ನಡೆಯುತ್ತಲೇ ಇವೆ. ಅದ್ದರಿಂದಲೇ ಮುಂಡೇಶ್ವರಿ ಭಾರತದ ಅತ್ಯಂತ ಪ್ರಾಚೀನವಾದ ಹಿಂದೂ ದೇವಾಲಯವಾಗಿದೆ.


PC:Nandanupadhyay

 ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯ

ಈ ದೇವಾಲಯದಲ್ಲಿ ಪ್ರತಿ ವರ್ಷವೂ ರಾಮನವಮಿ, ಶಿವರಾತ್ರಿ ಉತ್ಸವವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಇಲ್ಲಿ ನವರಾತ್ರಿಯ ಸಮಯದಲ್ಲಿಯಂತು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

PC:Nandanupadhyay

ಭೇಟಿಗೆ ಉತ್ತಮವಾದ ಸಮಯ

ಭೇಟಿಗೆ ಉತ್ತಮವಾದ ಸಮಯ

ಈ ದೇವಾಲಯವು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಭಕ್ತರಿಗೆ ಪ್ರವೇಶದ ಅನುಮತಿಯನ್ನು ನೀಡಲಾಗುತ್ತದೆ.

PC:Nandanupadhyay


ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಈ ಬಿಹಾರದ ಮುಂಡೇಶ್ವರಿ ದೇವಾಲಯಕ್ಕೆ ಪಾಟ್ನಾ, ಗಯಾ ಅಥವಾ ವಾರಾಣಾಸಿಯಿಂದ ರಸ್ತೆಯ ಮೂಲಕ ತಲುಪಬಹುದಾಗಿದೆ. ಬಿಹಾರದ ಮೊಹಾನಿಯ-ಭಬುವಾ ರೋಡ್ ರೈಲ್ವೆ ನಿಲ್ದಾಣ ಅತ್ಯಂತ ಸಮೀಪದ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಂದ ಕೇವಲ 22 ಕಿ.ಮೀ ದೂರದಲ್ಲಿ ಮಹಿಮನ್ವಿತ ಮುಂಡೇಶ್ವರಿ ದೇವಾಲಯವಿದೆ.

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇವಾಲಯದಿಂದ ಸುಮಾರು 103 ಕಿ.ಮೀ ದೂರದಲ್ಲಿದೆ. ಹಲವಾರು ಕಡೆಗಳಿಂದ ವಿಮಾನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಮುಖ್ಯವಾಗಿ ದೆಹಲಿ, ಮುಂಬೈ ಮತ್ತು ಕೊಲ್ಕತ್ತಾದಿಂದ ದಿನನಿತ್ಯ ವಿಮಾನಗಳು ಇಲ್ಲಿ ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X