Search
  • Follow NativePlanet
Share
» »ಇಲ್ಲಿನ ದೇವಿಗೆ ಸಾತ್ವಿಕ ಪಶು ಬಲಿ ನೀಡಲಾಗುತ್ತದಂತೆ; ಏನಿದರ ವಿಶೇಷತೆ

ಇಲ್ಲಿನ ದೇವಿಗೆ ಸಾತ್ವಿಕ ಪಶು ಬಲಿ ನೀಡಲಾಗುತ್ತದಂತೆ; ಏನಿದರ ವಿಶೇಷತೆ

ಭಾರತದಲ್ಲಿ ದೇವಿಗೆ ಅನೇಕ ಪ್ರಾಚೀನ ಮಂದಿರಗಳಿವೆ. ಎಲ್ಲದಕ್ಕೂ ತನ್ನದೇ ಆದ ವಿಶೇಷತೆಗಳಿರುತ್ತದೆ. ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಇಂತಹದ್ದೇ ಒಂದು ವಿಶೇಷ ಮಂದಿರವಿದೆ. ಈ ಮಂದಿರವನ್ನು ಜನರು ಮುಂಡೇಶ್ವರಿ ಮಾತಾ ಮಂದಿರ ಎಂದು ಕರೆಯುತ್ತಾರೆ. ಇದನ್ನು ದೇವಿಯ ಪ್ರಾಚೀನ ಮಂದಿರಗಳಲ್ಲಿ ಒಂದು ಎನ್ನಲಾಗುತ್ತದೆ. ಪುರಾತತ್ತ್ವ ವಿಭಾಗವು ಪ್ರಮಾಣಿಕರಿಸಿದೆ.

ಏನೆಲ್ಲಾ ವಿಶೇಷತೆ

ಏನೆಲ್ಲಾ ವಿಶೇಷತೆ

ಈ ಪ್ರಾಚೀನ ಮುಂಡೇಶ್ವರಿ ದೇವಿ ದೇವಸ್ಥಾನದ ಇನ್ನೊಂದು ವಿಶೇಷತೆ ಎಂದರೆ ಇಲ್ಲಿ ನೀಡಲಾಗುವ ಸಾತ್ವಿಕ ಬಲಿ. ಈ ದೇವಸ್ಥಾನದ ಸಂರಕ್ಷಕರು ಮುಸ್ಲಿಂ ಪರಿವಾರ ಎನ್ನುವುದು ಇಲ್ಲಿನ ಮತ್ತೊಂದು ವಿಶೇಷ.

ಸಾವಿರಾರು ವರ್ಷ ಹಳೆಯ ಇತಿಹಾಸ

ಸಾವಿರಾರು ವರ್ಷ ಹಳೆಯ ಇತಿಹಾಸ

PC:Lakshya2509

ಈ ಮಂದಿರವು ಕೈಮೂರ್ ಜಿಲ್ಲೆಯ ಭಗವಾನ್‌ಪುರ ಅಂಚಲದಲ್ಲಿ ಪವರಾ ಬೆಟ್ಟದ ಮೇಲೆ 608 ಫೀಟ್‌ ಎತ್ತರದಲ್ಲಿದೆ. 1868ರಿಂದ 1904ರವರೆಗೆ ಹಲವು ಬ್ರಿಟಿಷ್ ವಿದ್ವಾನ್‌ಗಳು, ಪ್ರವಾಸಿಗಳು ಇಲ್ಲಿಗೆ ಆಗಮಿಸಿದ್ದಾರೆ. ಕೊಲ್ಕತ್ತಾದ ಈ ಭಾರತೀಯ ಸಂಗ್ರಹಾಲಯವು ಪುರಾತತ್ವಗಳ ಪ್ರಕಾರ ಶಿಲಾಲೇಖವು 349ಇಸವಿಯಿಂದ 636 ಇಸವಿಯ ನಡುವಿನದ್ದು. ಇಲ್ಲಿ ಸುಮಾರು 1900 ವರ್ಷಗಳಿಂದ ಪೂಜೆ ನಡೆಯುತ್ತಲಿದೆ. ಇಲ್ಲಿ ದೊರೆತಿರುವ ಮಹಾರಾಜರ ದುತ್ತಗಮನಿ ಮುದ್ರೆಯಿಂದಲೂ ಈ ಮಂದಿರದ ಪ್ರಾಚೀನತೆಯನ್ನು ತಿಳಿಯಬಹುದು.

ಶಿವನ ಎದೆ ಮೇಲೆ ನಿಂತಿರುವ ಕಾಳಿ ; ತಂತ್ರ ಮಂತ್ರಗಳಿಗೆ ಫೇಮಸ್ ಈ ಮಂದಿರ ಶಿವನ ಎದೆ ಮೇಲೆ ನಿಂತಿರುವ ಕಾಳಿ ; ತಂತ್ರ ಮಂತ್ರಗಳಿಗೆ ಫೇಮಸ್ ಈ ಮಂದಿರ

ಮಂದಿರದ ಸಂರಕ್ಷಕರು ಒಂದು ಮುಸ್ಲಿಂ ಪರಿವಾರ

ಮಂದಿರದ ಸಂರಕ್ಷಕರು ಒಂದು ಮುಸ್ಲಿಂ ಪರಿವಾರ

PC: Nandanupadhyay

ಹಲವಾರು ವರ್ಷಗಳಿಂದಲೂ ಮುಂಡೇಶ್ವರಿ ಮಂದಿರದ ಸಂರಕ್ಷಕರು ಒಂದು ಮುಸ್ಲಿಂ ಪರವಾರವೇ ಆಗಿದೆ. ದುರ್ಗೇಯ ವೈಷ್ಣವಿ ರೂಪವೇ ಇಲ್ಲಿ ಮುಂಡೇಶ್ವರಿ ರೂಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಮುಂಡೇಶ್ವರಿ ದೇವಿಯ ಪ್ರತಿಮೆಯು ವರಾಹಿ ದೇವಿಯ ಪ್ರತಿಮೆಯಾಗಿದೆ. ಈ ದೇವಿಯ ವಾಹನವು ಮಹಿಷ. ಇದು ಅಷ್ಟಕೋಣಿಯ ಮಂದಿರವಾಗಿದೆ. ಮುಖ್ಯ ದ್ವಾರವು ದಕ್ಷಿಣ ದಿಕ್ಕಿನಲ್ಲಿದೆ.

ಸಾತ್ವಿಕ ಬಲಿ

ಸಾತ್ವಿಕ ಬಲಿ

ಸಾತ್ವಿಕ ಬಲಿ ಈ ಮಂದಿರದ ವಿಶೇಷತೆ ಎಂದರೆ ಇಲ್ಲಿ ನೀಡಲಾಗುವ ಬಲಿ. ಇಲ್ಲಿ ಆಡನ್ನು ಬಲಿ ನೀಡಲಾಗುತ್ತದೆ. ಆಡಿನ ಬಲಿ ಎಂದರೆ ಇದನ್ನು ಕೊಲ್ಲಲಾಗುವುದಿಲ್ಲ. ಬದಲಾಗಿ ಆಡನ್ನು ದೇವಿಯ ಮುಂದೆ ತಂದು ನಿಲ್ಲಿಸಲಾಗುತ್ತದೆ. ಆ ದೇವಾಲಯದ ಅರ್ಚಕರು ಅಕ್ಷತೆಯನ್ನು ದೇವಿಯ ಮೂರ್ತಿಗೆ ಸ್ಪರ್ಶಿಸಿ ಆಡಿನ ಮೇಲೆ ಎಸೆಯುತ್ತಾರೆ. ಆ ಅಕ್ಷತೆ ಆಡಿನ ಮೇಲೆ ಬೀಳುತ್ತಿದ್ದಂತೆ ಆಡು ಮೂರ್ಛೇ ಹೋಗುತ್ತದೆ. ಸ್ವಲ್ಪ ಹೊತ್ತಿನ ನಂತರ ಮತ್ತೆ ಆಡಿನ ಮೇಲೆ ಅಕ್ಷತೆ ಎಸೆಯಲಾಗುತ್ತದೆ ಆಗ ಆಡು ಮೇಲೇಳುತ್ತದೆ. ನಂತರವೇ ಅದನ್ನು ಬಿಡಲಾಗುವುದು.

ಮಳೆ ಅಂದ್ರೆ ಹೇಗಿರುತ್ತೇ ಅನ್ನೋದನ್ನು ತಿಳಿಬೇಕಾದ್ರೆ ಇಲ್ಲಿಗೆ ಹೋಗ್ಲೇ ಬೇಕುಮಳೆ ಅಂದ್ರೆ ಹೇಗಿರುತ್ತೇ ಅನ್ನೋದನ್ನು ತಿಳಿಬೇಕಾದ್ರೆ ಇಲ್ಲಿಗೆ ಹೋಗ್ಲೇ ಬೇಕು

ಸಂಗ್ರಹಾಲಯದಲ್ಲಿದೆ ಕೆಲವು ಮೂರ್ತಿ

ಸಂಗ್ರಹಾಲಯದಲ್ಲಿದೆ ಕೆಲವು ಮೂರ್ತಿ

PC: youtube

ಮಂದಿರದಲ್ಲಿ ಚೈತ್ರ ಮಾಸದ ನರವರಾತ್ರಿ ಸಂದರ್ಭ ಭಕ್ತರು ಇಲ್ಲಿಗೆ ಬಂದು ದುರ್ಗಾ ಸಪ್ತಸತಿ ಪಾಠ ಮಾಡುತ್ತಾರೆ. 1968ರಲ್ಲಿ ಪುರಾತತ್ವ ಇಲಾಖೆಯು ಇಲ್ಲಿನ 97ದುರ್ಲಭ ಮೂರ್ತಿಯನ್ನು ಸುರಕ್ಷತೆಯ ದೃಷ್ಠಿಯಿಂದ ಪಟ್ನಾ ಸಂಗ್ರಹಾಲಯದಲ್ಲಿರಿಸಿದೆ. ಮೂರು ಮೂರ್ತಿಯು ಕೊಲ್ಕತ್ತಾ ಸಂಗ್ರಹಾಲಯದಲ್ಲಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Vikas.krr

ಮುಂಡೇಶ್ವರಿ ಮಾತ ಮಂದಿರಕ್ಕೆ ತಲುಪಲು ಎಲ್ಲದಕ್ಕಿಂತಲೂ ಸುಲಭ ಮಾರ್ಗವೆಂದರೆ ರೈಲು ಮಾರ್ಗ. ಅಲ್ಲಿಂದ ಮುಂಡೇಶ್ವರಿ ಧಾಮದ ವರೆಗೆ ರಸ್ತೆ ಹೋಗುತ್ತದೆ. ಮಂದಿರದ ಒಳಗೆ ಹೋಗಲು ಬೆಟ್ಟಗಳನ್ನು ಕಡಿದು ಮೆಟ್ಟಿಲುಗಳನ್ನು ಹಾಗೂ ರೇಲಿಂಗ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಮೆಟ್ಟಿಲು ಹತ್ತಲು ಸಾಧ್ಯವಾಗದವರು ರಸ್ತೆ ಮೂಲಕ ಹೋಗಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X