Search
  • Follow NativePlanet
Share
» »ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಯಮ ಹಾಗು ಶಿವಲಿಂಗ ಒಂದೇ ಸ್ಥಳದಲ್ಲಿಯೇ ಇರುವ ಯಾವುದಾದರೂ ದೇವಾಲಯದ ಬಗ್ಗೆ ನೀವು ನೋಡಿದ್ದೀರಾ? ಇಲ್ಲ.. ಅಲ್ಲವೇ? ಎಂಥಹ ದೇವಾಲಯ ಯಾವುದು ಇಲ್ಲ ಎಂದೇ ಭಾವಿಸಿರುತ್ತೀರಾ?. ಆದರೆ ನಮ್ಮ ದೇಶದಲ್ಲಿ ಶಿವ ಹಾಗು ಯಮಧರ್ಮ ರಾಜ ಇಬ್ಬರು ಒಂದೇ ದೇವಾಲಯದಲ್

ಯಮ ಹಾಗು ಶಿವಲಿಂಗ ಒಂದೇ ಸ್ಥಳದಲ್ಲಿಯೇ ಇರುವ ಯಾವುದಾದರೂ ದೇವಾಲಯದ ಬಗ್ಗೆ ನೀವು ನೋಡಿದ್ದೀರಾ? ಇಲ್ಲ.. ಅಲ್ಲವೇ? ಎಂಥಹ ದೇವಾಲಯ ಯಾವುದು ಇಲ್ಲ ಎಂದೇ ಭಾವಿಸಿರುತ್ತೀರಾ?. ಆದರೆ ನಮ್ಮ ದೇಶದಲ್ಲಿ ಶಿವ ಹಾಗು ಯಮಧರ್ಮ ರಾಜ ಇಬ್ಬರು ಒಂದೇ ದೇವಾಲಯದಲ್ಲಿ ನೆಲೆಸಿ, ಭಕ್ತರನ್ನು ಸಲುಹುತ್ತಿದ್ದಾರೆ. ಯಮಧರ್ಮ ರಾಜನೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯವೇ ಆಗಿದೆ. ಆತ ಮೃತ್ಯು ದೇವತೆಯಾದ್ದರಿಂದ ಸಹಜವಾಗಿಯೇ ಆತನನ್ನು ಕಂಡಾಗ ಭಯ ಮೂಡುವುದು ಸಹಜ. ಭಾರತ ದೇಶದಲ್ಲಿ ಯಮನಿಗೆ ಸಂಬಂಧಿಸಿದಂತೆ ಕೆಲವೇ ದೇವಾಲಯಗಳಿವೆ. ಹಾಗಾದರೆ ಇಂಥಹ ವಿಭಿನ್ನವಾದ ದೇವಾಲಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯೋಣ.

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಈ ವಿಭಿನ್ನವಾದ ದೇವಾಲಯವು ತೆಲಂಗಾಣ ರಾಜ್ಯದ ಕರಿಂನಗರದ ಮಹದೇವ ಪುರಕ್ಕೆ ಸಂಬಂಧಿಸಿದ ಗ್ರಾಮದಲ್ಲಿ ಈ ದೇವಾಲಯವಿದೆ. ಬೇರೆ ಎಲ್ಲೂ ನೋಡದೇ ಇರುವ ರೀತಿಯಲ್ಲಿ ಈ ದೇವಾಲಯದಲ್ಲಿ ಯಮ ಹಾಗು ಮಹಾಶಿವನು ಲಿಂಗ ರೂಪದಲ್ಲಿ ನೆಲೆಸಿದ್ದಾರೆ. ಇತನನ್ನು ದರ್ಶನ ಮಾಡಲು ಅನೇಕ ಮಂದಿ ಭಕ್ತರು ಭೇಟಿ ನೀಡಲು ಬರುತ್ತಿರುತ್ತಾರೆ.

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮಹಾಶಿವನ ಸಮೀಪದಲ್ಲಿ ಯಮಧರ್ಮ ರಾಜನು ನೆಲೆಸಿರುವ ವಿಶೇಷವಾದ ದೇವಾಲಯ ಇಲ್ಲಿದೆ. ದೇವಾಲಯಕ್ಕೆ ಪ್ರವೇಶ ಮಾಡುವುದಕ್ಕಿಂತ ಮುಂಚೆ ಯಮಕೋಣವಿರುತ್ತದೆ. ಇದರಿಂದ ಹೊರಗೆ ಹೋದರೆ ಯಮದೋಷದಿಂದ ಹಾಗು ಮೃತ್ಯು ಭಯದಿಂದ ವಿಮುಕ್ತಿ ಹೊಂದಬಹುದು ಎಂದು ನಂಬಲಾಗಿದೆ.

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಈ ದೇವಾಲಯಕ್ಕೆ ಭೇಟಿ ನೀಡಿದರೆ ಅಪಮೃತ್ಯು ದೋಷಗಳು ತೊಲಗುತ್ತವೆ ಎಂದು ಭಕ್ತರ ದೃಡವಾದ ನಂಬಿಕೆ. ಆ ಮಹಿಮಾನ್ವಿತವಾದ ದೇವಾಲಯವೇ ಕಾಳೇಶ್ವರ ಹಾಗು ಮುಕ್ತೇಶ್ವರ ದೇವಾಲಯ. ಇದು ಗೋದಾವರಿ ನದಿ ತೀರದಲ್ಲಿ ಅರಣ್ಯ ಪ್ರದೇಶದಲ್ಲಿ ಹಚ್ಚ ಹಸಿರಿನ ಪ್ರಕೃತಿಯ ಮಧ್ಯೆ ಎಷ್ಟೋ ರಮಣೀಯವಾದ ಹಾಗು ಆಹ್ಲಾದಕರವಾದ ವಾತಾವರಣದಲ್ಲಿ ಈ ಅತಿ ಪ್ರಾಚೀನವಾದ ದೇವಾಲಯವಿದೆ.

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಸ್ಥಳ ಪುರಾಣದ ಪ್ರಕಾರ ಮುಕ್ತೇಶ್ವರ ಸ್ವಾಮಿಯನ್ನು ದರ್ಶಿಸಿದರೆ ಭಕ್ತರಿಗೆ ಮುಕ್ತಿ ಉಂಟಾಗಿ ತನಗೆ ಕೆಲಸ ಇಲ್ಲದೇ ಆಯಿತು ಎಂದು ಯಮನು ಶಿವನನ್ನು ಬೇಡಿಕೊಳ್ಳುತ್ತಾನೆ. ಆಗ ಪರಮಶಿವನು ಯಮನನ್ನು ತನ್ನ ಪಕ್ಕದಲ್ಲಿಯೇ ಲಿಂಗ ರೂಪದಲ್ಲಿ ನೆಲೆಸು ಎಂದೂ, ತನ್ನನ್ನು ದರ್ಶಿಸಿದ ನಂತರ ಯಮನನ್ನು ದರ್ಶನ ಮಾಡದೇ ಇದ್ದರೆ ಅವರಿಗೆ ಮೋಕ್ಷ ಪ್ರಾಪ್ತಿಯಾಗುವುದಿಲ್ಲವೆಂದೂ, ಅಂತಹವರಿಗೆ ನೇರವಾಗಿ ನರಕಕ್ಕೆ ತೆಗೆದುಕೊಂಡು ಹೋಗು ಎಂದು ಹೇಳುತ್ತಾನೆ.

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಹಾಗಾಗಿಯೇ ಭಕ್ತರು ಸ್ವಾಮಿಯನ್ನು ಅಂದರೆ ಪರಮಶಿವನನ್ನು ದರ್ಶನ ಮಾಡಿದ ನಂತರ ತಪ್ಪದೇ ಕಾಳೇಶ್ವರ ರುಪದಲ್ಲಿರುವ ಯಮನನ್ನು ಕೂಡ ದರ್ಶನ ಮಾಡಬೇಕು ಎಂದು ಹೇಳುತ್ತಾರೆ. ಅನೇಕ ಶೈವ ಕ್ಷೇತ್ರಗಳಲ್ಲಿ ಶ್ರೀ ಶೈಲದಲ್ಲಿನ ಮಲ್ಲಿಕಾರ್ಜುನ ಸ್ವಾಮಿ, ದ್ರಾಕ್ಷಾರಾಮದಲ್ಲಿ ಭೀಮೇಶ್ವರಂ, ಕಾಳೇಶ್ವರದಲ್ಲಿ ಮುಕ್ತೇಶ್ವರ ದೇವಾಲಯವು ಅತ್ಯಂತ ಪ್ರಸಿದ್ಧಿಯನ್ನು ಹೊಂದಿದೆ.

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಇಲ್ಲಿ ಗೋದಾವರಿ ಪ್ರಾಣಹಿತ ನದಿಗಳ ಜೊತೆ ಜೊತೆಗೆ ಅಂತರ್ ವಾಹಿನಿಯಾಗಿ ಸರಸ್ವತಿ ನದಿ ಪ್ರವಹಿಸುತ್ತಿರುವ ಕಾರಣವಾಗಿ ತ್ರಿವೇಣಿ ಸಂಗಮವಾಗಿದೆ. ಇದನ್ನು ಭಕ್ತರು ದಕ್ಷಿಣ ಕಾಶಿ ಎಂದು ಕೂಡ ಕರೆಯುತ್ತಾರೆ. ಎಲ್ಲಿಯೇ ಆದರೂ ಒಂದೇ ಜಗಲಿಯ ಮೇಲೆ ಒಂದೇ ಶಿವಲಿಂಗವಿರುತ್ತದೆಯಾದರೂ ಕೂಡ ಇಲ್ಲಿ ಮಾತ್ರ 2 ಶಿವಲಿಂಗಗಳಿರುವುದು ವಿಶೇಷವೇ ಸರಿ.

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಆ 2 ಶಿವಲಿಂಗಗಳೆಂದರೆ ಒಂದು ಕಾಳೇಶ್ವರ ಶಿವಲಿಂಗ ಹಾಗು ಮತ್ತೊಂದು ಮುಕ್ತೇಶ್ವರ ಶಿವಲಿಂಗ. ಮುಕ್ತೇಶ್ವರ ಶಿವಲಿಂಗಕ್ಕೆ 2 ನಾಸಿಕ ರಂಧ್ರಗಳು ಇವೆ. ಆ ರಂಧ್ರದಲ್ಲಿ ಎಷ್ಟೇ ನೀರು ಹಾಕಿದರು ಕೂಡ ಮೇಲೆ ಮಾತ್ರ ಬರುವುದಿಲ್ಲವಂತೆ. ಆ ಪವಿತ್ರವಾದ ನೀರು ತ್ರಿವೇಣಿ ಸಂಗಮದಲ್ಲಿ ಲೀನವಾಗುತ್ತದೆ ಎಂದು ನಂಬಲಾಗಿದೆ.

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಒಂದು ಕಾಲದಲ್ಲಿ ಗೋವಿಂದ ರಾಯ್ ಎಂಬ ಕಲೆಕ್ಟರ್ ಮುಕ್ತೇಶ್ವರ ಶಿವಲಿಂಗದ ನಾಸಿಕ ರಂಧ್ರ ನೀರು ಹಾಕಿದರೆ ಎಲ್ಲಿ ಲೀನವಾಗುತ್ತದೆ ಎಂದು ತಿಳಿಯುತ್ತದೆ ಎಂದು ಪರೀಕ್ಷಿಸಿದರು. ಆಗ ಒಂದು ಬಿಂದಿಕೆಯಷ್ಟು ನೀರು ಆ ಸ್ವಾಮಿಯ ನಾಸಿಕ ರಂಧ್ರದಲ್ಲಿ ಸುರಿದರೆ ತ್ರಿವೇಣಿ ಸಂಗಮದಲ್ಲಿ ಲೀನವಾಗುತ್ತಿತ್ತಂತೆ. ಇದನ್ನು ಕಂಡು ಭಕ್ತರು ಇದೆಲ್ಲಾ ಸ್ವಾಮಿಯ ಮಹಿಮೆ ಎನ್ನುತ್ತಾರೆ.

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಈ ಮಹಿಮಾನ್ವಿತವಾದ ದೇವಾಲಯದ ಬಗ್ಗೆ ಸ್ಕಂದ ಪುರಾಣ ಹಾಗು ಗೌತಮಿ ಪುರಾಣಗಳಲ್ಲಿಯೂ ಕೂಡ ಉಲ್ಲೇಖಗಳಿರುವುದನ್ನು ಗಮನಿಸಬಹುದು. ಕಾಳೇಶ್ವರದಲ್ಲಿ ಸಮಿಪದಲ್ಲಿ ಅಂದರೆ ಕೇವಲ 1 ಕಿ.ಮೀ ದೂರದಲ್ಲಿ ಆದಿ ಮುಕ್ತೇಶ್ವರ ದೇವಾಲಯವಿದೆ. ನಮ್ಮ ದೇಶದಲ್ಲಿನ ಮುಖ್ಯವಾದ ಸರಸ್ವತಿ ದೇವಾಲಯಗಳಲ್ಲಿ ಕಾಶ್ಮೀರದಲ್ಲಿ ಬಾಲ ಸರಸ್ವತಿ, ಬಾಸರದಲ್ಲಿ ಜ್ಞಾನ ಸರಸ್ವತಿ, ಕಾಳೇಶ್ವರದಲ್ಲಿ ಮಹಾ ಸರಸ್ವತಿ ಎಂದು ಹೆಸರನ್ನು ಹೊಂದಿ ತಾಯಿಯು ನೆಲೆಸಿದ್ದಾಳೆ.

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಹಾಗಾಗಿಯೇ ಅನೇಕ ಮಂದಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಈ ದೇವಾಲಯಕ್ಕೆ ಕರೆದುಕೊಂಡು ಹೋಗುತ್ತಿರುತ್ತಾರೆ. ಅದೇ ವಿಧವಾಗಿ ಒರಿಸ್ಸಾದಲ್ಲಿ ಕೋನಾರ್ಕ್, ಕಾಶ್ಮೀರದಲ್ಲಿ ಮಾರ್ತಾಂಡ, ಶ್ರೀಕಾಕುಳಂನಲ್ಲಿ ಅರಸವಲ್ಲಿ ಸೂರ್ಯ ದೇವಾಲಯವಿದೆ. ಆದರೆ ಕಾಶ್ಮೀರದಲ್ಲಿನ ಮಾರ್ತಾಂಡ ದೇವಾಲಯವು ಶಿಥಿಲಾವಸ್ಥೆಯಲ್ಲಿದೆ.

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಇಲ್ಲಿರುವ ದೇವಾಲಯವು ಅತ್ಯಂತ ವಿಶೆಷತೆಯನ್ನು ಹೊಂದಿದೆ. ಇಲ್ಲಿನ ಸುತ್ತಮುತ್ತ ಸಹಜಸಿದ್ಧವಾದ ವಿಭೂತಿಗಳು ಕಲ್ಲುಗಳು ಲಭಿಸುತ್ತವೆ. ಕಾಳೇಶ್ವರ ಮಹದೇವ ದೇವಾಲಯವು ಮಹಾರಾಷ್ಟ್ರದ ಭೂಭಾಗಕ್ಕೆ ಸಮೀಪದಲ್ಲಿರುವುದರಿಂದ ಇಲ್ಲಿಂದ ಅನೇಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಇನ್ನು ಈ ಕಾಳೇಶ್ವರ ಹಾಗು ಮುಕ್ತೆಶ್ವರ ಸ್ವಾಮಿಯನ್ನು ದರ್ಶನ ಮಾಡಿ, ಅಭಿಷೇಕ ಮಾಡಿ ಬಿಲ್ವ ಪತ್ರೆಯನು ಸಮರ್ಪಿಸಿದರೆ ಅಪಮೃತ್ಯು ದೋಷಗಳು ತೊಲಗುತ್ತವೆ ಎಂದು ನಂಬಲಾಗಿದೆ. ಹಾಗಾಗಿಯೇ ಅನೇಕ ಸ್ಥಳಗಳಿಂದ ಈ ದೇವಾಲಯಕ್ಕೆ ಅನೇಕ ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಉತ್ಸವದ ಸಮಯದಲ್ಲಿ ಇನ್ನು ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ತೆಲಂಗಾಣದ ಕರಿಂನಗರದಲ್ಲಿರುವ ಕಾಳೇಶ್ವರ ಹಾಗು ಮುಕ್ತೇಶ್ವರ ದೇವಾಲಯಕ್ಕೆ ರೈಲು, ರಸ್ತೆ ಹಾಗು ವಿಮಾನ ಮಾರ್ಗದ ಮೂಲಕ ಸುಲಭವಾಗಿ ಸೇರಿಕೊಳ್ಳಬಹುದಾಗಿದೆ. ಇಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು ಒಮ್ಮೆ ಅಲ್ಲಿಗೂ ಭೇಟಿ ನೀಡಿ ಬನ್ನಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X