Search
  • Follow NativePlanet
Share
» »ಭಾರತದ ನಂಬಲು ಅಸಾಧ್ಯವಾದಂತಹ ಸ್ಥಳಗಳು ಎಲ್ಲೆಲ್ಲಿವೆ ಗೊತ್ತ?

ಭಾರತದ ನಂಬಲು ಅಸಾಧ್ಯವಾದಂತಹ ಸ್ಥಳಗಳು ಎಲ್ಲೆಲ್ಲಿವೆ ಗೊತ್ತ?

ನಮ್ಮ ಭಾರತ ದೇಶದಲ್ಲಿ ಹಲವಾರು ಕುತೂಹಲಕಾರಿಯಾದ ಸ್ಥಳಗಳು ಇವೆ. ಯಾರಿಗೆ ಆಗಲಿ ವಿಶೇಷತೆ ಇರುವ ಸ್ಥಳಕ್ಕೆ ಭೇಟಿ ನೀಡಬೇಕು ಎಂದರೆ ಬಲು ಇಷ್ಟ. ಒಮ್ಮೆ ನಾವು ಕೂಡ ನೋಡಿಯೇ ಬಿಡೋಣ ಅದು ನಿಜವೇ, ಸುಳ್ಳೆ ಎಂಬುದನ್ನು ಎಂದು ಅಂದುಕೊಳ್ಳುತ್ತೇವೆ. ಪ್ರಸ್

ನಮ್ಮ ಭಾರತ ದೇಶದಲ್ಲಿ ಹಲವಾರು ಕುತೂಹಲಕಾರಿಯಾದ ಸ್ಥಳಗಳು ಇವೆ. ಯಾರಿಗೆ ಆಗಲಿ ವಿಶೇಷತೆ ಇರುವ ಸ್ಥಳಕ್ಕೆ ಭೇಟಿ ನೀಡಬೇಕು ಎಂದರೆ ಬಲು ಇಷ್ಟ. ಒಮ್ಮೆ ನಾವು ಕೂಡ ನೋಡಿಯೇ ಬಿಡೋಣ ಅದು ನಿಜವೇ, ಸುಳ್ಳೆ ಎಂಬುದನ್ನು ಎಂದು ಅಂದುಕೊಳ್ಳುತ್ತೇವೆ. ಪ್ರಸ್ತುತ ಲೇಖನದಲ್ಲಿ ಕೆಲವು ವಿಶೇಷತೆಗಳನ್ನು ಹೊಂದಿರುವ ತಾಣಗಳು ಎಲ್ಲೆಲ್ಲಿ? ಏನೆನಿದೆ? ಎಂಬುದರ ಬಗ್ಗೆ ತಿಳಿಯೋಣ.

ಆ ವಿಶೇಷತೆಗಳು ಯಾವುವು ಎಂದರೆ ಅವುಗಳು ದೆವ್ವ, ಭೂತದಿಂದ ಹಿಡಿದು ಯಾರಿಗೂ ಇಂದಿಗೂ ತಿಳಿಯದ ಅದ್ಭುತವಾದ ಪ್ರಕೃತಿಯ ಬಗ್ಗೆ. ಹಾಗಾದರೆ ಯಾವೆಲ್ಲ ಸ್ಥಳಗಳು ಏನೆಲ್ಲ ವಿಶೇಷತೆಗಳನ್ನು ಹೊಂದಿದೆ. ಅವುಗಳು ನಿಮ್ಮನ್ನು ಆಕರ್ಷಿಸುತ್ತದೆಯೇ ಎಂಬದನ್ನು ತಿಳಿಯೋಣ.

ಸರಪಣಿ ಮರ

ಸರಪಣಿ ಮರ


ಈ ಸರಪಣಿಯ ಮರವನ್ನು ಚೈನ್ ಟ್ರೀ ಎಂದೇ ಕರೆಯುತ್ತಾರೆ. ಈ ಮರವು ಕೇರಳ ರಾಜ್ಯದ ವಯನಾಡ್ ಜಿಲ್ಲೆಯಲ್ಲಿರುವ ಲಕ್ಕಿಡಿ ಗೇಟ್ ವೇ ಎಂಬ ಸ್ಥಳದಲ್ಲಿ ಇದೆ. ಸ್ಥಳೀಯರ ಕಥೆಯ ಪ್ರಕಾರ ಒಬ್ಬ ಸ್ಥಳೀಯ ನಿವಾಸಿಯೊಬ್ಬನ ಆತ್ಮ ಈ ಮರದಲ್ಲಿ ಸರಪಣಿಯಿಂದ ಬಂಧಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ.

PC:Vinodnellackal

ಸರಪಣಿ ಮರ

ಸರಪಣಿ ಮರ

ಹಿಂದೆ ಬ್ರಿಟೀಷ್ ಆಡಳಿತದ ಸಮಯದಲ್ಲಿ ಬ್ರಟೀಷ್ ಇಂಜಿನೀಯರ್ ಒಬ್ಬ ತಮ್ಮ ಕಛೇರಿಗೆ ಸುಲಭವಾಗಿ ಮಾರ್ಗವನ್ನು ಕಂಡು ಹಿಡಿಯಲು ಯೋಜಿಸುತ್ತಿದ್ದ. ಅದಕ್ಕಾಗಿ ಸ್ಥಳೀಯ ನಿವಾಸಿಯಾಗಿದ್ದ ಕರಿಂದಾನ್ ಎಂಬ ನಿವಾಸಿಯ ಸಹಾಯವನ್ನು ಪಡೆದ. ಈತ ಎಲ್ಲಾ ಸ್ಥಳವನ್ನು ಸೂಕ್ಷ್ಮವಾಗಿ ತಿಳಿದವನಾಗಿದ್ದನು. ಹೀಗಾಗಿ ಲಕ್ಕಿಡಿ ಪಾಸ್ ಅನ್ನು ಶೋಧನೆ ಮಾಡಲು ಪ್ರಮುಖವಾಗಿ ಸಹಾಯವನ್ನು ಮಾಡಿದನು.

PC:Traveler7

ಸರಪಣಿ ಮರ

ಸರಪಣಿ ಮರ

ಕರಿಂತಂದನ್ ಈ ಮಾರ್ಗವನ್ನು ಕಂಡುಹಿಡಿದ್ದಿದ್ದರಿಂದ ಹಾಗು ಆ ಗೌರವ ಪ್ರಧಾನ ಅವನಿಗೆ ಸಲ್ಲುವುದರಿಂದ ಆ ಬ್ರಿಟಿಷ್ ಇಂಜಿನಿಯರ್ ದುರುದ್ದೇಶದಿಂದ ಕರಿಂತಂದನ್‍ನನ್ನು ಕೊಲೆ ಮಾಡಿಸುತ್ತಾನೆ.

PC:Abhishek

ಸರಪಣಿ ಮರ

ಸರಪಣಿ ಮರ

ಆದರೆ ಕರಿಂತಂದನ್‍ನ ಆತ್ಮ ಮಾತ್ರ ಆ ಪ್ರದೇಶದಲ್ಲಿ ಓಡಾಡತೊಡಗಿತು. ಆ ಹೊಸದಾರಿಯಲ್ಲಿ ಹೋಗುವವರಿಗೆಲ್ಲಾ ಪೀಡಿಸಲು ಪ್ರಾರಂಭ ಮಾಡಿತು. ಈ ಎಲ್ಲಾ ವೃತ್ತಾಂತ ತಿಳಿದ ಒಬ್ಬ ಪಾದ್ರಿ ಅವನ ಆತ್ಮವನ್ನು ಸರಪಣಿಯೊಂದರಲ್ಲಿ ಬಂಧಿಸಿ ಮರವೊಂದಕ್ಕೆ ಕಟ್ಟಿದರು.

PC:Kleuske

ಸರಪಣಿ ಮರ

ಸರಪಣಿ ಮರ

ಇದೆ ಆ ಲಕ್ಕಿಡಿಯಲ್ಲಿರುವ ಆ ಚೈನ್ ಕಟ್ ಟ್ರೀ ಅಥವಾ ಸರಪಣಿ ಮರವಾಗಿದೆ ಎಂದು ಅಲ್ಲಿನ ಸ್ಥಳೀಯರು ಈ ಕಥೆಯನ್ನು ತಿಳಿಸುತ್ತಾರೆ.

PC:Prof tpms

ಕೃಷ್ಣನ ಬಂಡೆ

ಕೃಷ್ಣನ ಬಂಡೆ

ಇದನ್ನು ಇಂಗ್ಲಿಷ್‍ನಲ್ಲಿ ಕೃಷ್ಣಾಸ್ ಬಟರ್ ಬಾಲ್ ಎಂದು ಕರೆಯುತ್ತಾರೆ. ಸುಮಾರು 15 ಅಡಿಗಳಷ್ಟು ಎತ್ತರದಲ್ಲಿರುವ ಈ ಬಂಡೆಯು ಗುರುತ್ವಾಕರ್ಷಣೆಗೆ ಸವಾಲೆಸೆದು ಹಲವಾರು ವರ್ಷಗಳಿಂದ ಅಲ್ಲಿಯೇ ನಿಂತಿದೆ.

PC:: Amritamitraghosh

ಕೃಷ್ಣನ ಬಂಡೆ

ಕೃಷ್ಣನ ಬಂಡೆ

ಸ್ಥಳೀಯ ಕಥೆಯ ಪ್ರಕಾರ ಶ್ರೀ ಕೃಷ್ಣ ತಾನು ಕದಿಯುತ್ತಿದ್ದ ಬೆಣ್ಣೆಯ ಸಂಗ್ರಹವೇ ಈ ಬಂಡೆ ಎಂದು ಹೇಳುತ್ತಾರೆ. ಹಾಗಾಗಿಯೇ ಇದನ್ನು ಶ್ರೀ ಕೃಷ್ಣನ ಬಂಡೆ ಎಂದು ಕರೆಯುತ್ತಾರೆ. ಈ ಆಚ್ಚರಿಯ ಬಂಡೆ ಇರುವುದು ತಮಿಳುನಾಡಿನ ಚೆನ್ನೈ ಬಳಿಯಿರುವ ಮಹಾಬಲಿಪುರಂನಲ್ಲಿ ಸಾವಿರಾರು ವರ್ಷಗಳಿಂದಲೂ ಈ ಬಂಡೆ ಇಲ್ಲಿಯೇ ನೆಲೆಸಿದೆ ಎಂದು ಕೆಲವರು ಹೇಳುತ್ತಾರೆ.

PC:Manbalaji

ಹರಿಶ್ಚಂದ್ರ ಘಡ್

ಹರಿಶ್ಚಂದ್ರ ಘಡ್

ಈ ಹರಿಶ್ಚಂದ್ರ ಘಡ್ ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಒಂದು ಆಶ್ರ್ಚಯಕರವಾದ ತಾಣವಾಗಿದೆ. ಇದೊಂದು ಮೂಲತಃ ಬೆಟ್ಟವಾಗಿದ್ದು, ಇದನ್ನು ಪ್ರಳಯದ ಸೂಚಕ ಎಂದು ಕರೆಯುತ್ತಾರೆ. ಇದು ಸುಮಾರು 6 ನೇ ಶತಮಾನಕ್ಕೆ ಸೇರಿದೆ ಎಂದು ಕೆಲವರು ಹೇಳುತ್ತಾರೆ. ಇಲ್ಲಿ ಮಹಿಮಾನ್ವಿತವಾದ ಶಿವಲಿಂಗವಿದೆ. ಸದಾ ನೀರಿನಿಂದ ಇರುವ ಈ ತಾಣದಲ್ಲಿ ನೀರು ಎಲ್ಲಿಂದ ಬರುತ್ತದೆ ಎಂಬ ಪ್ರೆಶ್ನೆಗೆ ಇಂದಿಗೂ ಉತ್ತರ ದೊರೆತ್ತಿಲ್ಲ.

ಬೇಸಿಗೆಯ ಕಾಲದಲ್ಲಿಯೂ ಕೂಡ ಇಲ್ಲಿ ತಂಪಾದ ನೀರು ಇರುತ್ತದೆ. ಅದು ಹೇಗೆ ಸಾಧ್ಯ? ಆದರೆ ಮಳೆಗಾಲದಲ್ಲಿ ಮಾತ್ರ ಯಾವುದೇ ಕಾರಣದಲ್ಲೂ ಇಲ್ಲಿ ಒಂದು ತುಟ್ಟು ನೀರು ಕೂಡ ಇರುವುದಿಲ್ಲವಂತೆ.

PC:Bajirao

ಹರಿಶ್ಚಂದ್ರ ಘಡ್

ಹರಿಶ್ಚಂದ್ರ ಘಡ್

ಇಲ್ಲಿ ಶಿವಲಿಂಗಕ್ಕೆ 4 ಸ್ತಂಭಗಳು ಇವೆ. ಇದರ ಅರ್ಧ ಒಂದೊಂದು ಸ್ತಂಭಕ್ಕೆ ಒಂದೊಂದು ಯುಗಗಳನ್ನು ಸೂಚಿಸಲಾಗುತ್ತದೆ. ಕಳೆದ ಮೂರು ಸ್ತಂಭವು ಈಗಾಗಲೇ ಮುಗಿದು ಹೋಗಿದೆ. ಈಗ ಇರುವುದು ಕಲಿಯುಗ, ಆ ಕಲಿಯುಗ ಅಂತ್ಯವನ್ನು ಈ ಶಿವಲಿಂಗಕ್ಕೆ ಆಧಾರವಾಗಿರುವ ಸ್ತಂಭ ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಆ ಸ್ತಂಭ ನಾಶವಾದರೆ ಪ್ರಳಯವಾಗುವುದಂತು ಖಂಡಿತವಂತೆ.

PC:rohit gowaikar

ಕೊಂಕಣ ಕಡಾ

ಕೊಂಕಣ ಕಡಾ

ಹರಿಶ್ಚಂದ್ರಗಡ್‍ನಲ್ಲಿ ಇರುವ ಈ ಕೊಂಕಣ ಕಡಾ ಎಂಬುದು ಮೊನಚಾದ ಬೆಟ್ಟಗಳ ತುದಿಯನ್ನು ಹೊಂದಿದೆ. ಇಲ್ಲಿ ಆಗಾಗ ಮೇಘಗಳ ಸ್ಪೋಟವಾಗುತ್ತಿರುತ್ತದೆ. ಇದೊಂದು ಸುಂದರವಾದ ಸ್ಥಳವಾಗಿದೆ. ಹಾಗಾಗಿಯೇ ಈ ಸ್ಥಳಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

PC:: Cj.samson

ಜತಿಂಗಾ

ಜತಿಂಗಾ

ಇದು ಅಸ್ಸಾಂ ರಾಜ್ಯದಲ್ಲಿರುವ ಒಂದು ಸ್ಥಳವೇ ಜತಿಂಗಾ ಆಗಿದ್ದು, ಇಲ್ಲಿ ಹಲವಾರು ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಹೀಗಾಗಿಯೇ ಈ ಸ್ಥಳವು ಪ್ರಸಿದ್ಧಿ ಪಡೆದಿದೆ. ಇಲ್ಲಿ ಪಕ್ಷಿಗಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಅದಂದರೆ ನಿರ್ಧಿಷ್ಟವಾದ ಸಮಯದಲ್ಲಿ ಮಾತ್ರ. ಪಕ್ಷಿಗಳು ಹೀಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದರು ಏನು? ಎಂಬ ಪ್ರೆಶ್ನೆಗೆ ಉತ್ತರ ಇಂದಿಗೂ ನಿಗೂಢವಾಗಿಯೇ ಉಳಿದಿದೆ.

PC:: nchills.gov.in

ಭಾನಗಡ್ ಕೋಟೆ

ಭಾನಗಡ್ ಕೋಟೆ

ಭಾನಗಡ್ ಕೋಟೆ ರಾಜಸ್ಥಾನ ರಾಜ್ಯದ ಅಲ್ವಾರ್ ಎಂಬ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಇದೊಂದು ಭಯಾನಕವಾದ ಕೋಟೆಯಾಗಿದ್ದು, ಇಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆ ಪ್ರವಾಸಿಗರು ಜಾಗ ಖಾಲಿ ಮಾಡುತ್ತಾರೆ. ಏಕೆಂದರೆ ಇಲ್ಲಿ ಅಗೋಚರವಾದ ಶಕ್ತಿಗಳ ಸಂಚಾರವಿದೆ ಎಂದು ನಂಬಲಾಗಿದೆ.

PC:Shahnawaz Sid

ಭಾನಗಡ್ ಕೋಟೆ

ಭಾನಗಡ್ ಕೋಟೆ

ಈ ಕೋಟೆಯ ಹಿಂದೆ ಒಂದು ಅದ್ಭುತವಾದ ಕಥೆ ಇದೆ. ಅದೆನೆಂದರೆ ರಾಣಿ ರತ್ನವತಿ ಅತ್ಯಂತ ಸುಂದರವತಿಯಾಗಿದ್ದಳು. ಆಕೆಯನ್ನು ಕಂಡ ತಾಂತ್ರಿಕನು ಅವಳನ್ನು ವಿವಾಹ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ. ಹೀಗಾಗಿ ಯುವರಾಣಿಯನ್ನು ಮಾಟ ಮಂತ್ರದ ಮೂಲಕ ವಶಪಡಿಸಿಕೊಳ್ಳಲು ಬಯಸುತ್ತಿದ್ದ. ಈ ವಿಷಯ ರಾಜನಿಗೆ ತಿಳಿದು ಅವನನ್ನು ಕೊಲೆ ಮಾಡಿಸಿದ. ಆದರೆ ಸಾಯುವಾಗ ಆ ಮಾಂತ್ರಿಕನು ಈ ಕೋಟೆಗೆ ಶಾಪವನ್ನು ನೀಡಿದ. ಹಾಗಾಗಿಯೇ ಇಲ್ಲಿ ಆತ್ಮಗಳು ನೆಲೆಸಿವೆ ಎಂದು ಹೇಳಲಾಗಿದೆ.

PC:Shahnawaz Sid

ಕುಲಧಾರ

ಕುಲಧಾರ

ರಾಜಸ್ಥಾನದ ಜೈಸಲ್ಮೇರ್‍ನಿಂದ ಸುಮಾರು 15 ಕಿ.ಮೀ ದೂರದಲ್ಲಿ ಕುಲಧಾರ ಎಂಬ ಹಳ್ಳಿ ಇದೆ. ಈ ಹಳ್ಳಿಯನ್ನು ಸಾವಿನ ಹಳ್ಳಿ ಎಂದೇ ಪ್ರಸಿದ್ಧಿ ಪಡೆದಿದೆ. ಒಂದು ರಾತ್ರಿಯಲ್ಲಿ ಊರೇ ಖಾಲಿ ಮಾಡಿದರು. ಇದಕ್ಕೆ ಸ್ಥಳೀಯರು ವಿಭಿನ್ನವಾದ ಕಥೆಗಳನ್ನು ತಿಳಿಸುತ್ತಾರೆ.

PC:Tomas Belcik

ರೂಪಕೊಂಡ

ರೂಪಕೊಂಡ

ಉತ್ತರಖಂಡ ರಾಜ್ಯದಲ್ಲಿ ಒಂದು ವಿಚಿತ್ರವಾದ ರೂಪಕೊಂಡ ಎಂಬ ಸರೋವರವಿದೆ. ಇದಕ್ಕೆ ಮುಖ್ಯವಾದ ಕಾರಣ ಏನೆಂದರೆ ಇಲ್ಲಿ ದೊರೆತ ಅಸಂಖ್ಯಾತ ಅಸ್ಥಿ ಪಂಜರಗಳು ಹಾಗು ತಲೆ ಬುರುಡೆಗಳು.

PC:Schwiki

ರೂಪಕೊಂಡ

ರೂಪಕೊಂಡ

ಕೇವಲ 2 ಮೀಟರ್ ಆಳ ಹೊಂದಿರುವ ಈ ಹಿಮಗಡ್ಡೆ ಕೊಳ ಕರಗಿದಾಗ ಅದರ ತಳದಲ್ಲಿರುವ ಅಸ್ಥಿ ಪಂಜರ ಸ್ಪಷ್ಟವಾಗಿ ಕಾಣುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕುತೂಹಲ ಕೆರಳಿಸುತ್ತದೆ.

PC:Schwiki

ಶನಿವಾರವಾಡಾ

ಶನಿವಾರವಾಡಾ

ಪುಣೆ ನಗರದ ಬಾಜಿ ರಾವ್ ರಸ್ತೆಯ ಅಭಿನವ ಕಲಾ ಮಂದಿರ ಬಳಿಯಿರುವ ಈ ಕೋಟೆಯು ಭಾರತದ ಪ್ರಮುಖ ಪಿಶಾಚಗ್ರಸ್ತ ತಾಣಗಳಲ್ಲಿ ಒಂದಾಗಿದೆ. 14 ವರ್ಷದ ರಾಜ ಕುಮಾರನನ್ನು ಕ್ರೂರವಾಗಿ ಕೊಲೆ ಮಾಡಿದ್ದರಿಂದಲೇ ಇಲ್ಲಿ ಆತನ ಆತ್ಮ ಇದೆ ಎಂದು ಹೇಳುತ್ತಾರೆ. ಇದು ಪುಣೆ ನಗರದ ಪ್ರವಾಸಿ ಆಕರ್ಷಣೆ ಕೂಡ ಹೌದು.

PC:Ramakrishna Reddy

ಡುಮಾಸ್ ಬೀಚ್

ಡುಮಾಸ್ ಬೀಚ್

ಇದು ಅರೇಬಿಯನ್ ಸಮುದ್ರದ ಈ ಕಡಲ ತೀರವು ಗುಜರಾತ್ ರಾಜ್ಯದ ಸುರತ್ ನಗರದಿಂದ ಸುಮಾರು 21 ಕಿ.ಮೀ ದೂರದಲ್ಲಿದೆ. ಇದೊಂದು ಭಯಾನಕವಾದ ತಾಣವಾಗಿದೆ. ಮಧ್ಯ ರಾತ್ರಿಯ ಸಮಯದಲ್ಲಿ ಒಂದು ನಿರ್ಧಿಷ್ಟವಾದ ಸ್ಥಳದಲ್ಲಿ ಆತ್ಮಗಳ ಸಂಚಾರವಿದೆ ಎಂದು ಹೇಳಲಾಗುತ್ತಿದೆ. ಎಷ್ಟೋ ಜನರು ಅದೃಶ್ಯರಾಗಿದ್ದಾರಂತೆ ಮರಳಿ ಹಿಂದಿರುಗಿ ಬಂದಿಲ್ಲವಂತೆ.

PC:Marwada

ಬಿಕ್ತಾನ್ ಕೋಟೆ

ಬಿಕ್ತಾನ್ ಕೋಟೆ

ಜಮ್ಮು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿರುವ ಚಿಕ್ತಾನ್ ಎಂಬ ಗ್ರಾಮದಲ್ಲಿ ಈ ಕೋಟೆ ಇದೆ. ಇದೊಂದು ಆತ್ಮಗಳ ಸಂಚಾರವಿರುವ ಕೋಟೆಯ ಹಾಗೆ ಕಾಣುತ್ತದೆ. ಆದರೆ ಇದು ಇತಿಹಾಸ ವೈಭವ ಸಾರುವ ಸ್ಮಾರಕವಾಗಿ ನಿಂತಿದೆ.


PC:Polybert49

ಶೆಟ್ಟಿ ಹಳ್ಳಿ ಚರ್ಚ್

ಶೆಟ್ಟಿ ಹಳ್ಳಿ ಚರ್ಚ್

ಈ ಚರ್ಚ್ ಹಾಸನದ ಬಳಿ ಇದೆ. ಇದೊಂದು ವಿಸ್ಮಯಕಾರಿಯಾದ ಪ್ರದೇಶ ಎಂದು ಪ್ರಸಿದ್ಧಿ ಪಡೆದಿದೆ. 1860 ರಲ್ಲಿ ಫ್ರೆಂಚ್‍ರಿಂದ ಈ ಚರ್ಚ್ ನಿರ್ಮಾಣವಾಯಿತು. ಇಲ್ಲಿ ಹೇಮಾವತಿ ನದಿ ತುಂಬಿ ತುಳುಕುವಾಗ ಚರ್ಚ್ ಕಣ್ಮರೆಯಾಗುತ್ತದೆ ಮತ್ತೇ ಗೋಚರಿಸುತ್ತದೆ.

PC:Pal.guru

ಬೋನಕ್ಕಾಡ್ ಬಂಗಲೆ

ಬೋನಕ್ಕಾಡ್ ಬಂಗಲೆ

ಇದು ಕೇರಳ ರಾಜ್ಯದಲ್ಲಿದೆ. ಇದು ತಿರುವನಂತಪುರಂನಿಂದ ಬೋನಕ್ಕಾಡ ಸುಮಾರು 60 ಕಿ.ಮೀ ದೂರದಲ್ಲಿದೆ. ಹಿಂದೆ ಈ ಬಂಗಲೆಯನ್ನು ಬ್ರಿಟಿಷರು ನಿರ್ಮಾಣ ಮಾಡಲಾಗಿದ್ದು ಈಗ ಅದು ಪಾಳು ಬಿದ್ದು ಪಿಶಾಚಿಗಳ ನೆಲೆಯಾಗಿದೆ. ರಾತ್ರಿಯ ಸಮಯದಲ್ಲಿ ಯಾರು ಕೂಡ ಈ ಸ್ಥಳಕ್ಕೆ ಭೇಟಿ ನೀಡುವುದಿಲ್ಲ.

PC:Paul Varuni

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X