Search
  • Follow NativePlanet
Share
» »ಇಲ್ಲಿವೆ ಭಾರತದ ಜನಪ್ರಿಯ ಆಯುರ್ವೇದ ತಾಣಗಳು

ಇಲ್ಲಿವೆ ಭಾರತದ ಜನಪ್ರಿಯ ಆಯುರ್ವೇದ ತಾಣಗಳು

ಭಾರತದ ಈ ಆಯುರ್ವೇದ ಸ್ಥಳಗಳಲ್ಲಿ ನಿಮ್ಮನ್ನು ನೀವು ಪುನಶ್ಚೇತನಗೊಳಿಸಿಕೊಳ್ಳಿ

ಹಿಂದಿನಿಂದಲೂ ಆಯುರ್ವೇದವು ವೈದ್ಯಕೀಯ ಕ್ಷೇತ್ರದ ಅವಿಭಾಜ್ಯ ಅಂಗವಾಗಿದೆ. ವೇದಗಳ ಕಾಲದಿಂದಲೂ ಅದರ ಅಗತ್ಯತೆ ಮತ್ತು ಪ್ರಗತಿಯ ದೃಷ್ಟಿಯಿಂದ ಅಭಿವೃದ್ದಿಯ ಪಥದಲ್ಲಿ ಸಾಗುತ್ತಾ ಬಂದಿದೆ.

ಇಂದಿನ ಮುಂದುವರೆಯುತ್ತಿರುವಂತಹ ಜಗತ್ತಿನಲ್ಲಿ ಮನುಷ್ಯನ ಜೀವನದಲ್ಲಿ ಉಂಟಾಗುವ ಏರುಪೇರುಗಳಿಂದ ಪಾರಾಗಲು ನೈಸರ್ಗಿಕ ಚಿಕಿತ್ಸೆಯು ಪರಿಣಾಮಕಾರಿಯಾಗಿದ್ದು ತಮ್ಮನ್ನು ತಾವು ಪುನಶ್ಚೇತನಗೊಳಿಸಿಕೊಳ್ಳಲು ಒಂದು ಉತ್ತಮವಾದ ಮಾರ್ಗವಾಗಿದೆ. ಇತಿಹಾಸಪೂರ್ವ ಯುಗದಿಂದಲೂ ಭಾರತದಲ್ಲಿ ತನ್ನ ಪ್ರಭಾವವನ್ನು ಎಲ್ಲೆಡೆ ಹರಡಿಸಿರುವ ಆಯುರ್ವೇದವು ಇಂದು ಪರ್ಯಾಯ ಔಷಧದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಇಂದು ಪ್ರತಿಯೊಬ್ಬರೂ ತಮ್ಮ ಒತ್ತಡದ ಜೀವನವನ್ನು ನಿವಾರಿಸಿಕೊಳ್ಳಲು ಪ್ರಶಾಂತತೆ ತುಂಬಿರುವ ವಾತಾವರಣವಿರುವ ಸ್ಥಳಗಳಲ್ಲಿ ವಾರಾಂತ್ಯಗಳನ್ನು ನೆಮ್ಮದಿಯಿಂದ ಕಳೆಯಲು ಹಂಬಲಿಸುತ್ತಿದ್ದಾರೆ.

ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸಲು ಹಾಗೂ ರಜಾದಿನಗಳನ್ನು ಶಾಂತಿದಾಯಕವಾಗಿ ಆಹ್ಲಾದಕರವಾದ ಪರಿಸರದಲ್ಲಿ ಕಳೆಯಲು ಬಯಸುತ್ತಿದ್ದಲ್ಲಿ , ಈ ಲೇಖನದಲ್ಲಿ ನಿಮಗೆ ಸೂಕ್ತವಾದ ಸ್ಥಳಗಳ ಮಾಹಿತಿಯನ್ನು ನೀಡುತ್ತಿದ್ದೇವೆ. ಭಾರತದಲ್ಲಿಯ ಈ ಕೆಳಗಿರುವ 3 ಆಯುರ್ವೇದದ ಸ್ಥಳಗಳು ನಿಮ್ಮ ಹುಡುಕಾಟಕ್ಕೆ ಸೂಕ್ತವಾದುದಾಗಿದೆ.

1) ಕೇರಳ

1) ಕೇರಳ

ದೇವರ ಸ್ವಂತ ದೇಶವೆಂದು ಕರೆಯಲ್ಪಡುವ ಕೇರಳದಲ್ಲಿ ಎಲ್ಲೆಡೆ ಹರಡಿರುವ ಅಂತ್ಯವಿಲ್ಲದ ಶಾಶ್ವತ ಸೌಂದರ್ಯತೆಯನ್ನು ಹೊಂದಿರುವುದು ಸಹಜವಾದ ಸಂಗತಿ. ನೈಸರ್ಗಿಕ ಚಿಕಿತ್ಸೆಗಳ ಸಹಾಯದಿಂದ ನಮ್ಮಲ್ಲಿಯ ಆಂತರಿಕ ಸ್ವಭಾವಗಳನ್ನು ಅನ್ವೇಷಿಸಲು ಮತ್ತು ಗುಣಪಡಿಸುವಲ್ಲಿ ಕೇರಳವು ಒಂದು ಪ್ರಮುಖ ಸ್ಥಳವಾಗಿದೆ. ಶಾಂತಿಯುತವದ ಪರಿಸರದಿಂದ ಕೂಡಿದ ಈ ಸ್ಥಳವು ನೈಸರ್ಗಿಕ ಸೌಂದರ್ಯವನ್ನು ತನ್ನ ಎಲ್ಲಾ ಕಡೆಯಲ್ಲೂ ಹೊಂದಿದ್ದು, ತೊಂದರೆಗೊಳಗಾದ ವ್ಯಕ್ತಿಯನ್ನು ಗುಣಪಡಿಸಲು ಬೇಕಾದ ಎಲ್ಲವನ್ನೂ ತನ್ನಲ್ಲಿ ಹೊಂದಿದೆ.

ಅನೇಕ ಸ್ಪಾಗಳು, ಮತ್ತು ಹಲವಾರು ಆಯುರ್ವೇಕದದ ರೆಸಾರ್ಟ್ಗಗಳಿಗೆ ನೆಲೆಯಾಗಿರುವ ಭಾರತದ ಈ ಸುಂದರವಾದ ರಾಜ್ಯವು ಈಗ ಸಂತೃಪ್ತಿ ಮತ್ತು ಸ್ಥಿರತೆಯನ್ನು ತನ್ನಲ್ಲಿ ಒಳಗೊಂಡಿದ್ದು ಸಮಾನಾರ್ಥಕವಾಗಿದೆ. ಇಲ್ಲಿ ಸಾಕಷ್ಟು ಆಯುರ್ವೇದ ಕೇಂದ್ರಗಳಿದ್ದು, ಅವುಗಳಲ್ಲಿ ಕೆಲವು ಏಕಾಂತ ಭಾವನೆಯನ್ನು ತರಲು ಪೂರಕವಾಗುವಂತೆ ಬೆಟ್ಟಗಳ ಮೇಲೆ ಇದ್ದರೆ ಇನ್ನು ಕೆಲವು ಪ್ರಕೃತಿಯ ದೈವಿಕ ಶಕ್ತಿಯನ್ನು ಪ್ರತಿಬಿಂಬಿಸುವ ಹಿನ್ನೀರಿನ ಪ್ರದೇಶದುದ್ದಕ್ಕೂ ಇವೆ. ಈ ಕೇಂದ್ರಗಳು ಯೋಗ , ಧ್ಯಾನ ಮತ್ತು ನೈಸರ್ಗಿಕ ಆಯುರ್ವೇದದ ಚಿಕಿತ್ಸೆಗಳ ಮೂಲಕ ಗುಣಪಡಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತವೆ.

ಆತ್ರೇಯ ಆಯುರ್ವೇದ ಸೆಂಟರ್ , ಸೋಮತೀರಮ್ ಆಯುರ್ವೇದ ರೆಸಾರ್ಟ್, ಕೈರಾಳಿ ಆಯುರ್ವೇದ ಹೆಲ್ತ್ ವಿಲೇಜ್ ಮುಂತಾದವು ಇಲ್ಲಿಯ ಆಯುರ್ವೇದ ಕೇಂದ್ರಗಳಲ್ಲಿ ಪ್ರಮುಖವಾದವುಗಳಾಗಿವೆ.

2) ಉತ್ತರಾಖಂಡ್

2) ಉತ್ತರಾಖಂಡ್

ಒಬ್ಬ ವ್ಯಕ್ತಿಯನ್ನು ಪುನಶ್ಚೇತನಗೊಳಿಸುವಲ್ಲಿ ಸೂಕ್ತವಾದ ಇನ್ನೊಂದು ಸ್ಥಳವೆಂದರೆ ಅದು ಉತ್ತರಾಖಂಡ್ ಇದು ಭಾರತದ ಒಂದು ಕಡಿಮೆ ವೆಚ್ಚದ ಸ್ಥಳವಾಗಿದ್ದು ಇಲ್ಲಿ ಪವಿತ್ರ ನದಿಗಳು ಮತ್ತು ಧರ್ಮನಿಷ್ಠ ಭಕ್ತರ ಮೂಲಕ ಹರಿಯುವ ಆಧ್ಯಾತ್ಮಿಕತೆಯೊಂದಿಗೆ ಎತ್ತರದ ಹಿಮಾಲಯದ ಮಧ್ಯೆ ನಿಮ್ಮ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಿಕೊಳ್ಳಬಹುದಾಗಿದೆ.

ಇಲ್ಲಿಯ ಮನಮೋಹಕ ಭೂದೃಶ್ಯ ಮತ್ತು ಆಧ್ಯಾತ್ಮಿಕತೆಯ ಹೊರತಾಗಿ, ಈ ಪರ್ವತ ಪ್ರದೇಶವು ಹಲವಾರು ಆಯುರ್ವೇದ ಕೇಂದ್ರಗಳು ಮತ್ತು ಧ್ಯಾನ ಕೇಂದ್ರಗಳಿಗೂ ಪ್ರಸಿದ್ದಿಯಾಗಿದೆ. ಪ್ರತೀ ವರ್ಷ ಇಲ್ಲಿಗೆ ದೇಶ ವಿದೇಶಗಳಿಂದ ಲಕ್ಷಾಂತರ ಸಂದರ್ಶಕರು ಇಲ್ಲಿಯ ಸುಂದರವಾದ ಪರಿಸರವನ್ನುಆಸ್ವಾದಿಸಲು ಮತ್ತು ತಮ್ಮನ್ನು ತಾವು ಆಧ್ಯಾತ್ಮಿಕತೆಯಲ್ಲಿ ತೊಡಗಿಸಿ ಕೊಳ್ಳಲು ಮತ್ತು ಮಂತ್ರಮುಗ್ದ ಸೌಂದರ್ಯತೆಯನ್ನು ಅನುಭವಿಸುವ ಸಲುವಾಗಿ ಭೇಟಿ ನೀಡುತ್ತಾರೆ.

ಇಲ್ಲಿಯ ಆಯುರ್ವೇದ ಕೇಂದ್ರಗಳು ಇಲ್ಲಿ, ಆಯುರ್ವೇದ ಕೇಂದ್ರಗಳು ಚಯಾಪಚಯ ಪರಿಸ್ಥಿತಿಗಳು ಮತ್ತು ಮನಸ್ಸಿನ ಸ್ಥಿತಿಯನ್ನು ಕಾಪಾಡಿಕೊಳ್ಳಲು ವೈದ್ಯಕೀಯ ಚಿಕಿತ್ಸೆಗಳು ಮತ್ತು ಯೋಗದ ಹೊರತಾಗಿ ವ್ಯಾಯಾಮ ಮತ್ತು ಧ್ಯಾನಗಳತ್ತ ಗಮನ ಹರಿಸುತ್ತವೆ. ಧ್ಯಾನ ಮತ್ತು ಚಿಕಿತ್ಸೆಗಳ ಸಹಾಯದಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ನೀವು ಬಯಸುವಿರಾದಲ್ಲಿ, ಇದು ಖಂಡಿತವಾಗಿಯೂ ನಿಮಗೆ ಸೂಕ್ತವಾದ ತಾಣವಾಗಿದೆ.

ಆನಂದಾಸ್, ಹೇಮಾದ್ರಿ ಆಯುರ್ವೇದ ಸೆಂಟರ್, ಪಂಚಕರ್ಮ ಸೆಂಟರ್ ಇತ್ಯಾದಿಗಳು ಉತ್ತರಾಖಂಡ್ ನ ಪ್ರಮುಖ ಆಯುರ್ವೇದ ಕೇಂದ್ರಗಳಾಗಿವೆ.

3)ಗೋವಾ

3)ಗೋವಾ

ಭಾರತದಲ್ಲಿ ಸಂಭ್ರಮ ಕೂಟಗಳನ್ನು ನಡೆಸುವ ರಾಜಧಾನಿ ಎನಿಸಿರುವ ಗೋವಾದಲ್ಲಿ ಒಂದು ಸಂಗ್ರಹವಾದ ಉಷ್ಣಾಂಶದ ಅನುಭವವನ್ನು ಆನಂದಿಸಬಹುದಾಗಿದೆ. ಹೌದು, ಗೋವಾ ಭಾರತದ ಒಂದು ಅತೀ ಸುಂದರವಾದ ಸ್ಥಳಗಳಲ್ಲೊಂದಾಗಿದೆ. ಇಲ್ಲಿ ಯಾವುದೇ ಕಟ್ಟು ಪಾಡಿಲ್ಲದೆ ನಿಮ್ಮ ಮಹತ್ವದ ಸಮಯವನ್ನು ಆನಂದಿಸುವ ಒಂದು ಸುಂದರ ಸ್ಥಳವಾಗಿದೆ. ರಾತ್ರಿ ಇಡೀ ನಡೆಯುವ ಪಾರ್ಟಿಗಳಿಂದ ಹಿಡಿದು ನಯನ ಮನೋಹರ ಸೌಂದರ್ಯತೆಗಳ ವರೆಗೆ ಈ ಜೀವಂತಿಕೆ ತುಂಬಿರುವ ಸ್ಥಳದಲ್ಲಿ ಹಗಲು ರಾತ್ರಿ ಎನ್ನದೆ ಅನುಭವಿಸ ಬಹುದಾದ ಅನೇಕ ವಿಷಯಗಳಿವೆ.

ನಿಮ್ಮ ದೈನಂದಿನ ಜಂಜಾಟದ ಜೀವನ ಮತ್ತು ನಗರದ ಸದ್ದು ಗದ್ದಲಗಳಿಂದ ಬೇಸತ್ತು ಇವೆಲ್ಲವುಗಳಿಂದ ನಿಮ್ಮನ್ನು ನೀವು ಸ್ವಲ್ಪ ಸಮಯ ದೂರವಿರ ಬಯಸುವಿರಾದಲ್ಲಿ, ನೀವು ಖಂಡಿತವಾಗಿಯೂ ಗೋವಾದಲ್ಲಿಯ ಸೊಂಪಾದ ಪರಿಸರದ ಸುತ್ತಲಿರುವ ಅನೇಕ ಧ್ಯಾನ ಕೇಂದ್ರಗಳು ಮತ್ತು ಸ್ಪಾಗಳಿಗೆ ಭೇಟಿ ಕೊಡುವುದು ಸೂಕ್ತ. ಗೋವಾದಲ್ಲಿ ಹಲವಾರು ಧ್ಯಾನ ಮತ್ತು ಆಯುರ್ವೇದ ಕೇಂದ್ರಗಳಿದ್ದು ಅಲ್ಲಿಯ ಪ್ರಶಾಂತತೆ ಮತ್ತು ಶಾಂತತೆಯ ಪರಮಾವಧಿ ಸ್ಥಿತಿಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದಾಗಿದೆ.

ಇಲ್ಲಿ ಕರಾವಳಿಯ ತಂಪಾದ ಗಾಳಿಯು ನಿಮ್ಮ ಮನಸ್ಸಿನ ಸಮತೋಲನವನ್ನು ಕಾಯ್ದುಕೊಳ್ಳಲು ಅನುಕೂಲ ಮಾಡಿಕೊಡುತ್ತವೆ. ಒಮ್ಮೆ ನೀವು ಗೋವಾದಲ್ಲಿಯ ಶಾಂತಿಯುತವಾದ ವಾತಾವರಣದಲ್ಲಿ ನಿಮ್ಮ ಸಮಯವನ್ನು ಕಳೆಯುವಿರಿ ಎಂದಾದಲ್ಲಿ ಈ ಪಾರ್ಟಿಗಳ (ಕೂಟ) ರಾಜಧಾನಿಯು ತನ್ನ ಶಾಂತತೆ ಮತ್ತು ನಿಶ್ಚಲತೆಯಿಂದ ನಿಮ್ಮನ್ನು ಮೂಕ ವಿಸ್ಮತರನ್ನಾಗಿಸುವಲ್ಲಿ ಸಂಶಯವೇ ಇಲ್ಲ.

ಗೋವಾದ ಕೆಲವು ಪ್ರಮುಖ ಆಯುರ್ವೇದ ಮತ್ತು ಧ್ಯಾನ ಕೇಂದ್ರಗಳಲ್ಲಿ ದೇವಾಯ ಆಯುರ್ವೇದ ಮತ್ತು ನೇಚರ್ ಕ್ಯೂರ್ ಸೆಂಟರ್, ಆಯುರ್ಕ್ಲಿನಿಕ್ ಗೋವಾ, ಭಾರ್ಗವ ನ್ಯಾಚುರಲ್ ಹೀಲಿಂಗ್ ಸೆಂಟರ್, ಇತ್ಯಾದಿಗಳು ಸೇರಿವೆ.

ಇವುಗಳು ಭಾರತದ ಪ್ರಮುಖ ಆಯುರ್ವೇದ ತಾಣಗಳಾಗಿವೆ. ಈ ಸ್ಥಳಗಳಿಗೆ ನಿಮ್ಮ ರಜಾದಿನಗಳನ್ನು ಕಳೆಯಲು ಯೋಜಿಸಿ ಮತ್ತು ನಿಮ್ಮ ಸಮಯದ ಪ್ರತೀ ಕ್ಷಣಗಳನ್ನು ಅತೀ ಮೌನ ಹಾಗೂ ಶಾಂತತೆಯ ಜೊತೆ ಆನಂದಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more