Search
  • Follow NativePlanet
Share
» »ಕೊಲ್ಕತ್ತಾದ ಅತ್ಯಂತ ಭಯಾನಕ ಸ್ಥಳಗಳಿವು...ಈ ಜಾಗಕ್ಕೆ ಒಬ್ಬರೇ ಹೋಗ್ಬೇಡಿ

ಕೊಲ್ಕತ್ತಾದ ಅತ್ಯಂತ ಭಯಾನಕ ಸ್ಥಳಗಳಿವು...ಈ ಜಾಗಕ್ಕೆ ಒಬ್ಬರೇ ಹೋಗ್ಬೇಡಿ

By Manjula Balaraj Tantry

ಭಯಾನಕ ಸ್ಥಳಗಳ ವಿಷಯಕ್ಕೆ ಬಂದಾಗ ಕೊಲ್ಕತ್ತಾವು ಕೆಲವು ಭಯಾನಕ ಸ್ಥಳಗಳನ್ನು ಹೊಂದಿರುವುದರ ಬಗ್ಗೆ ಗಮನಕ್ಕೆ ಬರುತ್ತದೆ. ಈ ನಗರವು ಮೊಘಲರು, ಫ್ರೆಂಚರು, ಬ್ರಿಟಿಷರು ಮತ್ತು ಡಚ್ಚರ ಅಚ್ಚುಮೆಚ್ಚಿನದ್ದಾಗಿತ್ತು. ಇಲ್ಲಿಯ ಪ್ರತೀ ಬೀದಿಗಳೂ ಒಂದೊಂದು ಕಥೆಯನ್ನು ಸಾರುತ್ತದೆ.ಇನ್ನೂ ಕೆಲವು ಭಯಾನಕ ಕಥೆಗಳಾಗಿ ಮಾರ್ಪಟ್ಟಿವೆ. ಕೊಲ್ಕತ್ತಾದಲ್ಲಿ ಭಯಾನಕ ಅನುಭವವನ್ನು ನೀಡುವ ಅನೇಕ ಸ್ಥಳಗಳಿವೆ. ಅವುಗಳು ಯಾವ್ಯಾವು ಅನ್ನೋದನ್ನು ನೋಡೋಣ......

1. ಭಾರತ ರಾಷ್ಟ್ರೀಯ ಗ್ರಂಥಾಲಯ

1. ಭಾರತ ರಾಷ್ಟ್ರೀಯ ಗ್ರಂಥಾಲಯ

Avrajyoti Mitra

ಭಾರತದ ಅತ್ಯಂತ ದೊಡ್ಡ ಗ್ರಂಥಾಲಯ ಕೇವಲ ಪುಸ್ತಕ ಪ್ರಿಯರಿಗೆ ಪುಸ್ತಕ ಮಾತ್ರವಲ್ಲದೆ ಇನ್ನೂ ಬಹಳಷ್ಟ ಅನುಭವವನ್ನು ತಂದುಕೊಡುತ್ತದೆ. ಕೊಲ್ಕತ್ತಾದಲ್ಲಿ ಈ ಸ್ಥಳವು ಅತ್ಯಂತ ಭಯಾನಕ ಸ್ಥಳಗಳಲ್ಲಿ ಒಂದಾಗಿದೆ. ಬಿಬ್ಲಿಯೋಫೈಲ್ಸ್ ನ ಈ ನಿಧಿ ಸುರುಳಿಗಳು ಪ್ರೇತ ಕಥೆಗಳ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಲೇಡಿ ಮೆಟ್ಕಾಲ್ಫಿಯ ದೆವ್ವದ ಭಯಾನಕ ಕಥೆಯು ಇಲ್ಲಿಯ ಕಾರಿಡಾರ್ ನಲ್ಲಿ ಹಲವು ವರ್ಷಗಳಿಂದ ಕೇಳಿ ಬರುತ್ತದೆ. ಬಹಳಷ್ಟು ಸಾಕ್ಷ್ಯಗಳು ಈ ಕಥೆಗಳನ್ನು ನಂಬುವಂತೆ ಮಾಡುತ್ತದೆ.

ಅದರಲ್ಲಿ 2010 ರಲ್ಲಿ ಭಾರತದ ಪುರಾತತ್ತ್ವಶಾಸ್ತ್ರ ಸಮೀಕ್ಷೆ (ಎಎಸ್ಐ) ಕಂಡುಹಿಡಿದ ಗುಪ್ತ ಕೊಠಡಿಯ ರಹಸ್ಯವನ್ನು ಸೇರಿಸಲಾಗಿದ್ದು ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಈ ಕೊಠಡಿಯಲ್ಲಿ ಜನರಿಗೆ ಚಿತ್ರಹಿಂಸೆ ಕೊಡಲಾಗುತ್ತಿತ್ತು ಎಂಬ ಸುದ್ದಿಯಿದೆ. ನಮ್ಮ ಲೆಕ್ಕಚಾರದ ಪ್ರಕಾರ ಇಂತಹ ಅಸಮಾನ್ಯವಾದ ಅನುಭವಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅನುಭವಕ್ಕೆ ಬಂದುದೆಂದರೆ ಅದು ಈ ಜಾಗದಲ್ಲಿ ಪುನರ್ ನಿರ್ಮಾಣದ ಕೆಲಸ ಮಾಡುವಾಗ ಅಪಘಾತದಿಂದಾಗಿ 12 ಜನ ಕಾರ್ಮಿಕರು ತಮ್ಮ ಜೀವವನ್ನು ಕಳೆದುಕೊಂಡ ಮೇಲೆ. ಇಲ್ಲಿ ಕೆಲವು ವಿಚಿತ್ರ ರೀತಿಯ ಧ್ವನಿಗಳು ಕೇಳಿ ಬರುತ್ತಿದೆ ಎನ್ನಲಾಗುತ್ತದೆ.

2. ಪುತುಲ್ಬರಿ ಅಥವಾ ಗೊಂಬೆಗಳ ಮನೆ

2. ಪುತುಲ್ಬರಿ ಅಥವಾ ಗೊಂಬೆಗಳ ಮನೆ

ಹೆಸರೇ ಸೂಚಿಸುವಂತೆ ಈ ಭಯಾನಕ ವಿಷಯದ ಬಗ್ಗೆ ಒಂದು ಸಂದೇಹವಿದೆ. ಇದೊಂದು ಅತ್ಯಂತ ಹಳೆಯ ಶಿಥಿಲಗೊಂಡಿರುವ ಕಟ್ಟಡವಾಗಿದ್ದು ಇಲ್ಲಿನ ಕೆಳಗಿನ ಮಹಡಿಯಲ್ಲಿ ಕೆಲವೇ ಕೆಲವು ಮನೆಗಳಲ್ಲಿ ವಾಸವಾಗಿದ್ದಾರೆ. ಮತ್ತು ಟೆರೇಸ್ ನಲ್ಲಿ ಪುರಾತನ ರೋಮನ್ ಶೈಲಿಯಲ್ಲಿ ಮಾಡಿದ ಗೊಂಬೆಗಳಿಂದ ಅಲಂಕರಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಅನೇಕ ಭಯಾನಕ ಕಥೆಗಳನ್ನು ಹೊಂದಿದೆ. ಈ ಸ್ಥಳವನ್ನು ಹಗಲಿನ ವೇಳೆಯಲ್ಲಿ ಸಹ ಮೇಲ್ಭಾಗದ ಮಹಡಿಗಳನ್ನು ಭೇಟಿ ಮಾಡಲು ಅನುಮತಿಸಲಾಗುವುದಿಲ್ಲ ಏಕೆಂದರೆ ಸ್ಥಳದಲ್ಲಿ ಬ್ರಿಟಿಷರ ಕಾಲದಲ್ಲಿ ಮತ್ತು ಅದಕ್ಕಿಂತ ಮೊದಲು ಶ್ರೀಮಂತ ಭೂ ಮಾಲೀಕರಿಂದ ಶೋಷಣೆಗೊಳಗಾದ ವೇಶ್ಯೆಯರ ಆತ್ಮಗಳು ಇಲ್ಲಿ ಕಾಡುತ್ತವೆ ಎಂದು ಹೇಳಲಾಗುತ್ತದೆ. ರಾತ್ರಿಯಲ್ಲಿ ಪುತುಲ್ಬಾರಿಯ ಮೇಲಿನ ಮಹಡಿಯಿಂದ ನಗು ಕೇಳಿ ಬರುತ್ತದೆ ಎಂದು ಇಲ್ಲಿಯ ಜನ ಹೇಳುತ್ತಾರೆ.ಈ ಕಥೆಯು ನಿಜವೋ ಅಥವಾ ಸುಳ್ಳೋ ಗೊತ್ತಿಲ್ಲ ಆದರೆ ಕಟ್ಟಡದ ಹತ್ತಿರಕ್ಕೆ ಹೋಗುವಾಗ ಆಗುವ ಅನುಭವವು ನಮ್ಮಲ್ಲಿ ನಡುಕ ಹುಟ್ಟಿಸುವುದಂತೂ ನಿಜ.

3. ಬರಹಗಾರರ ಕಟ್ಟಡ (ರೈಟರ್ಸ್ ಕಟ್ಟಡ)

3. ಬರಹಗಾರರ ಕಟ್ಟಡ (ರೈಟರ್ಸ್ ಕಟ್ಟಡ)

ಈ ಹಳೆಯ ಕಟ್ಟಡವು ಆಡಳಿತಾತ್ಮಕ ಉದ್ಯೋಗಿಗಳ ಕಛೇರಿಯಾಗಿ ಕಾರ್ಯ ನಿರ್ವಹಿಸುತ್ತದೆ ಆದರೆ ಸೂರ್ಯಾಸ್ತದ ನಂತರ ಯಾವುದೇ ಉದ್ಯೋಗಿಯೂ ಇಲ್ಲಿ ಉಳಿಯುವುದಿಲ್ಲ ಎಂಬ ಪ್ರಖ್ಯಾತಿಯನ್ನು ಹೊಂದಿದೆ. ಇಲ್ಲಿಯ ಕಟ್ಟಡದ ಕೆಲವು ಕೊಠಡಿಗಳು ಖಾಲಿಯಾಗಿಯೇ ಉಳಿದಿವೆ ಮತ್ತು ಕೆಲವು ದಶಕಗಳಿಂದ ತೆರೆದೂ ಇಲ್ಲ ಎಂದು ಹೇಳಲಾಗುತ್ತದೆ. ಅನೇಕ ಕಥೆಗಳು ಸೇರಿ ಈ ಸ್ಥಳದ ಖ್ಯಾತಿಯನ್ನು ಸಾರುತ್ತವೆ.

ಈ ಮುಚ್ಚಿದ ಕೊಠಡಿಗಳ ಹಿಂದೆ ಭಯಾನಕ ಕಥೆಗಳಿವೆ ಮತ್ತು ಸಂಜೆಯಾಗುತ್ತಿದ್ದಂತೆಯೇ ಇಲ್ಲಿ ಏರು ಧ್ವನಿಯಲ್ಲಿ ನಗು, ಕಿರುಚುವಿಕೆ ಮತ್ತು ಪಿಸುಮಾತುಗಳಂತಹ ಕೆಲವು ವಿಚಿತ್ರವಾದ ಶಬ್ದಗಳು ಕೇಳಿ ಬರುತ್ತವೆ. ತನಿಖೆಗಳ ಪ್ರಕಾರ ಇಂತಹ ವಿಚಿತ್ರವಾದ ವಿಷಯಗಳಿಗೆ ಸರಿಯಾದ ಕಾರಣಗಳು ದೊರೆತಿಲ್ಲವಾದುದರಿಂದ ಇವೆಲ್ಲ ಸೇರಿ ಈ ಸ್ಥಳವನ್ನು ಭಯಾನಕ ಮಾಡಿವೆ.

4. ಸೌತ್ ಪಾರ್ಕ್ ಸ್ಟ್ರೀಟ್ ಸ್ಮಶಾನ

4. ಸೌತ್ ಪಾರ್ಕ್ ಸ್ಟ್ರೀಟ್ ಸ್ಮಶಾನ

ಭಯಾನಕ ಅಲ್ಲವಾದರೂ ಸ್ಮಶಾನಕ್ಕೆ ಭೇಟಿ ಕೊಡುವುದೇ ಒಂದು ಅಸಮಾನ್ಯ ಅನುಭವ. ಕೊಲ್ಕತ್ತಾದ ಸೌತ್ ಪಾರ್ಕ್ ಸ್ಮಶಾನ ಕೂಡಾ ಇಲ್ಲಿಯ ಭಯಾನಕ ಕಥೆಗಳನ್ನು ಹೇಳುವಾಗ ಇದರ ವಿಷಯಗಳೂ ಕೂಡ ಒಂದೆರಡು ಹಾದು ಹೋಗುತ್ತದೆ.

ಇದು 1767 ತೆರೆಯಲಾಗಿದ್ದು, ಇಲ್ಲಿ ಸುಮಾರು 1600 ಸಮಾಧಿಗಳಿವೆ. ಅವುಗಳಲ್ಲಿ ಹೆಚ್ಚಿನವು ಪಾಚಿಗಳಿಂದ ಮುಚ್ಚಿಹೋಗಿವೆ. ಈ ಸ್ಮಶಾನದಲ್ಲಿ ಶಿಥಿಲಗೊಂಡ ನೋಟಗಳ ಹೊರತಾಗಿಯೂ ಕೆಲವು ಪ್ರವಾಸಿಗರ ಕ್ಯಾಮರಾ ಕಣ್ಣಿಗೆ ಅಸ್ಪಸ್ಟವಾದ ಬಿಳಿಯ ವ್ಯಕ್ತಿಯ ಒಂದು ದೇಹವನ್ನು ನೋಡಿದಂದಿನಿಂದ ಅದನ್ನು ದೆವ್ವ ಎಂದು ಹೇಳಲಾಗಿದೆ. ಈ ದೃಶ್ಯವನ್ನು ನೋಡಿದ ಪ್ರವಾಸಿಗರ ಗುಂಪಿನವರು ಹಿಂದೆಂದೂ ತಮಗೆ ಇರದ ಅಸ್ತಮಾ ರೋಗಕ್ಕೆ ಗುರಿಯಾದರು ಎನ್ನಲಾಗುತ್ತದೆ. ಕಥೆಗಳ ಪ್ರಕಾರ, ಇನ್ನುಳಿದ ಕೆಲವು ಪ್ರವಾಸಿ ಗುಂಪಿನ ಜನರೂ ಕೂಡ ಈ ಸ್ಮಶಾನಕ್ಕೆ ಭೇಟಿ ಕೊಟ್ಟ ನಂತರದಿಂದ ಒಂದಲ್ಲ ಒಂದು ರೀತಿಯ ಖಾಯಿಲೆಗೆ ಗುರಿಯಾದರು ಎಂದು ಹೇಳಲಾಗುತ್ತದೆ.

5. ರಬೀಂದ್ರ ಸರೋಬರ್ ಮೆಟ್ರೋ ನಿಲ್ದಾಣ

5. ರಬೀಂದ್ರ ಸರೋಬರ್ ಮೆಟ್ರೋ ನಿಲ್ದಾಣ

ಆನಂದ ನಗರದಲ್ಲಿ ಮೆಟ್ರೋ ನಿಲ್ದಾಣವನ್ನು ನೋಡುವುದು ಸರ್ವೇ ಸಾಮಾನ್ಯವಾದ ಸಂಗತಿ. ಈ ಜಾಗವು ನಗರದ 50% ರಷ್ಟು ಆತ್ಮಹತ್ಯೆ ನಡೆಯುವ ಸ್ಥಳವೆಂಬ ಕುಖ್ಯಾತಿಯನ್ನು ಪಡೆದಿದೆ. ಮೆಟ್ರೋ ರೈಲುಗಳ ಸುಗಮ ಚಾಲನೆಯಲ್ಲಿರುವ ನಿಲ್ದಾಣದ ಒಳಗೆ ಒಂದು ಉನ್ನತ-ವೋಲ್ಟೇಜ್ ಶಕ್ತಿ ರೇಖೆಯನ್ನು ಹೊಂದುವ ಈ ನಿಲ್ದಾಣವು ನಗರದ ಆತ್ಮಹತ್ಯಾ ಕೇಂದ್ರವಾಗಿ ಮಾರ್ಪಟ್ಟಿದೆ. ಈಗ ಈ ನಿಲ್ದಾಣದ ಒಳಗಿನ ಸ್ಥಳದಲ್ಲಿ ಕೆಲವೊಮ್ಮೆ ಅಪರಾತ್ರಿಯ ಸಮಯದಲ್ಲಿ ಕೆಲವು ಅಸ್ಪಸ್ಟವಾದ ಬಿಳಿ ಆಕಾರಗಳು ಇಲ್ಲಿ ಗೋಚರಿಸುತ್ತವೆ ಎಂಬುದನ್ನು ಕಣ್ಣಾರೆ ಕಂಡ ಕೆಲವು ಜನರು ಒಪ್ಪಿಕೊಳ್ಳುತ್ತಾರೆ. ಕೆಲವು ವರ್ಷಗಳ ಹಿಂದೆ, ಇಲ್ಲಿಯ ರೈಲ್ವೇ ಹಳಿಯ ಉದ್ದಕ್ಕೂ ವಿಚಿತ್ರ ರೀತಿಯ ಬಿಳಿ ಬಟ್ಟೆಯಿಂದ ಮುಚ್ಚಿರುವ ಕೆಲವು ಆಕಾರಗಳು ಕಂಡುಬರುತ್ತವೆ ಎಂಬುದನ್ನು ರೈಲಿನ ಚಾಲಕರು ಹೇಳುತ್ತಾರೆ ಮತ್ತು ರೈಲುಗಳನ್ನು ನಿಲ್ಲಿಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ.

ಇಲ್ಲಿ ನಡೆದ ಆತ್ಮಹತ್ಯೆಗಳೇ ಇಲ್ಲಿ ನಡೆಯುವ ಅವಘಡಗಳಿಗೆ ಕಾರಣ ಎಂಬುದಾಗಿ ಜನ ನಂಬುತ್ತಾರೆ ಅಲ್ಲದೆ ಇಲ್ಲಿ ಸತ್ತವರ ದೆವ್ವಗಳು ಇಲ್ಲಿ ಸುತ್ತಾಡುತ್ತವೆ ಆದುದರಿಂದ ಈ ಸ್ಥಳವನ್ನು ಭಯಾನಕ ಎಂಬಂತೆ ಮಾಡಿವೆ ಎಂಬುದಾಗಿ ಹೇಳಲಾಗುತ್ತದೆ ಆದುದರಿಂದ ಇಲ್ಲಿಗೆ ತಡರಾತ್ರಿಯ ಪ್ರಯಾಣ ಸೂಕ್ತವಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X