Search
  • Follow NativePlanet
Share
» »ರಾಮೇಶ್ವರ ಸುತ್ತಲಿನ ಈ 9 ಪುಣ್ಯ ತೀರ್ಥಗಳಿಗೂ ರಾಮ-ಸೀತೆಗೂ ಇರುವ ನಂಟೇನು?

ರಾಮೇಶ್ವರ ಸುತ್ತಲಿನ ಈ 9 ಪುಣ್ಯ ತೀರ್ಥಗಳಿಗೂ ರಾಮ-ಸೀತೆಗೂ ಇರುವ ನಂಟೇನು?

ರಾಮೇಶ್ವರ ಜ್ಯೋತಿರ್ಲಿಂಗವು ಶಿವನ ಪ್ರಸಿದ್ಧ ಹಾಗೂ ವಿಶೇಷ ಮಂದಿರಗಳಲ್ಲಿ ಒಂದಾಗಿದೆ. ಈ ಮಂದಿರದ ಶಿವಲಿಂಗವನ್ನು ಶ್ರೀರಾಮ ಸ್ಥಾಪಿಸಿದನು ಎನ್ನಲಾಗುತ್ತದೆ. ರಾಮೇಶ್ವರದ ಮಹತ್ವ ಹಾಗೂ ವಿಶೇಷತೆಗಳ ಬಗ್ಗೆ ಅನೇಕ ಗ್ರಂಥಗಳಲ್ಲಿ ಕಾಣಸಿಗುತ್ತದೆ. ರಾಮೇಶ್ವರ ಮಂದಿರ ಎಷ್ಟು ಪ್ರಾಮುಖ್ಯತೆಯನ್ನು ಪಡೆದಿದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿವೆ ಅದರ ಸುತ್ತಮುತ್ತಲಿರುವ 9 ತೀರ್ಥಗಳು. ಈ ಎಲ್ಲಾ ಸ್ಥಳಗಳಲ್ಲಿ ಶ್ರೀರಾಮ ಹಾಗೂ ಸೀತಾ ದೇವಿಗೆ ಸಂಬಂಧಿಸಿದ ಕಥೆಗಳಿವೆ. ಹಾಗಾದರೆ ಬನ್ನಿ ರಾಮೇಶ್ವರದ ಸುತ್ತಲಿರುವ ಆ 9 ತೀರ್ಥಗಳು ಯಾವುದು ಅನ್ನೋದನ್ನು ತಿಳಿಯೋಣ.

ಗಂಧಮದನ ಪರ್ವತ

ಗಂಧಮದನ ಪರ್ವತ

PC: youtube

ಈ ಸ್ಥಳದಲ್ಲಿ ಶ್ರೀರಾಮನು ತನ್ನ ವಾನರ ಸೇನೆಯ ಜೊತೆ ಸೇರಿ ಯುದ್ಧದ ಪ್ಲ್ಯಾನಿಂಗ್ ಮಾಡಿದ್ದರಂತೆ. ಇದನ್ನು ರಾಮೇಶ್ವರದ ಅತ್ಯಂತ ಎತ್ತರದ ಸ್ಥಳ ಎನ್ನಲಾಗುತ್ತದೆ. ಈ ಸ್ಥಳದಿಂದ ದೂರದ ಸ್ಥಳಗಳನ್ನು ನೋಡಲು ಸಾಧ್ಯವಾಗುತ್ತದೆ. ಈ ಪರ್ವತದಲ್ಲಿ ರಾಮನ ಪಾದದ ಗುರುತುಗಳಿವೆ ಎನ್ನಲಾಗುತ್ತದೆ.

ಈ ದೇವಸ್ಥಾನಕ್ಕೆ ಬಂದು ತುಪ್ಪದ ದೀಪ ಹಚ್ಚಿದ್ರೆ ಸಂಕಷ್ಟ ದೂರವಾಗುತ್ತದಂತೆ !ಈ ದೇವಸ್ಥಾನಕ್ಕೆ ಬಂದು ತುಪ್ಪದ ದೀಪ ಹಚ್ಚಿದ್ರೆ ಸಂಕಷ್ಟ ದೂರವಾಗುತ್ತದಂತೆ !

ವಿಲುಂದಿ ತೀರ್ಥ

ವಿಲುಂದಿ ತೀರ್ಥ

PC:Ms Sarah Welch

ರಾಮೇಶ್ವರ ಮಂದಿರದಿಂದ ಸುಮಾರು 7ಕಿ.ಮೀ ದೂರದಲ್ಲಿದಲ್ಲಿ ಒಂದು ಬಾವಿ ಇದೆ. ಈ ಬಾವಿಯನ್ನು ರಾಮನು ತನ್ನ ಬಾಣಗಳಿಂದ ನಿರ್ಮಿಸಿದ್ದನು ಎನ್ನಲಾಗುತ್ತದೆ. ದೇವಿ ಸೀತೆಗೆ ಬಾಯಾರಿಕೆಯಾಗಿದ್ದಾಗ ಶ್ರೀರಾಮನು ತನ್ನ ಬಾಣವನ್ನು ಬಿಟ್ಟು ಒಂದು ಬಾವಿಯನ್ನು ನಿರ್ಮಿಸಿದನು. ಈ ನೀರನ್ನು ಕುಡಿದು ಸೀತೆಯು ತನ್ನ ದಾಹವನ್ನು ನೀಗಿಸಿದಳಂತೆ.

ಜಡಾ ತೀರ್ಥ

ಜಡಾ ತೀರ್ಥ

PC: youtube

ರಾಮೇಶ್ವರದಿಂದ ಸುಮಾರು 3.5ಕಿ.ಮೀ ದೂರದಲ್ಲಿ ಜಾಡಾ ಎನ್ನುವ ಸರೋವರವಿದೆ. ಪುರಾಣಗಳ ಪ್ರಕಾರ ಶ್ರೀರಾಮನು ರಾವಣನನ್ನು ಸಂಹರಿಸಿ ತೆರಳುತ್ತಿದ್ದಾಗ ಇದೇ ಸರೋವರದಲ್ಲಿ ತನ್ನ ಜಡೆಯನ್ನು ಅಂದರೆ ಕೂದಲನ್ನು ತೊಳೆದಿದ್ದಂತೆ. ಈ ಜಡೆ ತೀರ್ಥದ ಬಳಿಯೇ ಒಂದು ಶಿವನ ಮಂದಿರವಿದೆ. ಈ ಮಂದಿರದಲ್ಲಿ ಶಿವಲಿಂಗದ ಪೂಜೆಯನ್ನ ಸ್ವತಃ ರಾಮನೇ ಮಾಡಿದ್ದರು ಎನ್ನಲಾಗುತ್ತದೆ.

ಅಗ್ನಿ ತೀರ್ಥ

ಅಗ್ನಿ ತೀರ್ಥ

PC: Nsmohan

ಇದು ರಾಮೇಶ್ವರದಿಂದ ಸುಮಾರು 100 ಮೀಟರ್ ದೂರದಲ್ಲಿದೆ. ರಾಮನು ರಾವಣನನ್ನು ವಧೆ ಮಾಡಿ ಇದೇ ತೀರ್ಥದಲ್ಲಿ ಸ್ನಾನ ಮಾಡಿದ್ದನು . ಈ ತೀರ್ಥವನ್ನು ಇಂದು ಅಗಿನ್ ತೀರ್ಥ ಎನ್ನಲಾಗುತ್ತದೆ. ಈ ತೀರ್ಥದಲ್ಲಿ ಯಾರೇ ಸ್ನಾನ ಮಾಡಿದರೂ ಅವರ ಪಾಪಗಳೆಲ್ಲಾ ಕಳೆದುಹೋಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ.

ಧನುಷ್‌ಕೋಡಿ ತೀರ್ಥ

ಧನುಷ್‌ಕೋಡಿ ತೀರ್ಥ

PC:ILAKKIA KAMARAJ

ಈ ತೀರ್ಥವು ರಾಮೇಶ್ವರ ಮಂದಿರದ ಪೂರ್ವ ಭಾಗದಲ್ಲಿ 18ಕಿ.ಮೀ ದೂರದಲ್ಲಿದೆ. ರಾಮನು ಈ ಸೇತುವೆ ಮೂಲಕ ಲಂಕೆಗೆ ತೆರಳಿದ್ದನಂತೆ. ರಾವಣನ ವಧೆ ಮಾಡಿದ ನಂತರ ವಿಭೀಷಣನ ಪ್ರಾರ್ಥನೆಯ ಮೇರೆಗೆ ಆ ಸೇತುವೆಯನ್ನು ಅಲ್ಲೇ ತುಂಡರಿಸಲಾಯಿತು.

ಲಕ್ಷ್ಮಣ ತೀರ್ಥ

ಲಕ್ಷ್ಮಣ ತೀರ್ಥ

PC: youtube

ರಾಮೇಶ್ವರ ಮಂದಿರದ ಸಮೀಪದಲ್ಲಿ ಲಕ್ಷ್ಮಣ ತೀರ್ಥ ಎನ್ನುವ ಸ್ಥಳವಿದೆ. ಇಲ್ಲಿ ಮಂದಿರದ ಬಳಿಯೇ ಒಂದು ಕೆರೆ ಇದೆ. ಇದನ್ನು ಬಹಳ ಪವಿತ್ರ ಎನ್ನಲಾಗುತ್ತದೆ. ಇಲ್ಲಿನ ದೇವಸ್ಥಾನವನ್ನು ಪ್ರವೇಶಿಸುವ ಮೊದಲು ಈ ಕೆರೆಯಲ್ಲಿ ಸ್ನಾನ ಮಾಡಿಯೇ ಒಳಗೆ ಪ್ರವೇಶಿಸಬೇಕು. ಈ ಮಂದಿರದಲ್ಲಿ ರಾಮಾಯಣದ ಕಥೆ ಚಿತ್ರಗಳ ಮೂಲಕ ಕಾಣಸಿಗುತ್ತದೆ.

ಪಂಚಮುಖಿ ಹನುಮಾನ್ ಮಂದಿರ

ಪಂಚಮುಖಿ ಹನುಮಾನ್ ಮಂದಿರ

PC: youtube

ರಾಮೇಶ್ವರ ಮಂದಿರದಿಂದ2 ಕಿ.ಮೀ ದೂರದಲ್ಲಿ ಪಂಚಮುಖಿ ಹನುಮಾನ್ ಮಂದಿರವಿದೆ. ಇದೇ ಸ್ಥಳದಲ್ಲಿ ಹನುಮಾನ್ ಮೊದಲ ಬಾರಿಗೆ ತನ್ನ ಪಂಚಮುಖದ ದರ್ಶನ ನೀಡಿದ್ದನಂತೆ.

ಕೋದಂಡರಾಮಸ್ವಾಮಿ ಮಂದಿರ

ಕೋದಂಡರಾಮಸ್ವಾಮಿ ಮಂದಿರ

PC: Ryan

ರಾಮೇಶ್ವರ ಮಂದಿರದಿಂದ ಸ್ವಲ್ಪ ದೂರದಲ್ಲಿರುವ ಈ ಮಂದಿರವು ಸುಮಾರು 500 ವರ್ಷಗಳ ಕಾಲ ಹಳೆಯದು. ಇದೇ ಸ್ಥಳದಲ್ಲಿ ರಾಮನು ವಿಭೀಷಣನ ಅಭಿಷೇಕ ಮಾಡಿದ್ದನು . ಈ ಮಂದಿರದಲ್ಲಿ ರಾಮ, ಲಕ್ಷಣ, ಸೀತೆಯ ಜೊತೆಗೆ ವಿಭೀಷಣನ ಮೂರ್ತಿಯೂ ಇದೆ. ಈ ಮಂದಿರದ ಪರಿಸರದಲ್ಲಿ ರಾಮನ ಪಾದದ ಗುರುತುಗಳಿವೆ. ಹಾಗೆಯೇ ಮಂದಿರದ ಗೋಡೆಗಳಲ್ಲಿ ರಾಮನು ವಿಭೀಷಣನಿಗೆ ಅಭಿಷೇಕ ಮಾಡಿದ ಚಿತ್ರಗಳಿವೆ.

ರಾಮ ಸೇತು

ರಾಮ ಸೇತು

ಸೇತು ಕರಾಯಿಯು ರಾಮನು ಸೇತುವೆ ಮಾಡಲು ಪ್ರಾರಂಭಿಸಿದ ಸ್ಥಳ. ಆದರೆ ಇಂದು ಆ ಸೇತುವೆ ಕಾಣಸಿಗುವುದಿಲ್ಲ. ಆದರೆ ಆ ಸ್ಥಳ ಇದುವೇ ಎನ್ನಲಾಗುತ್ತದೆ. ಈ ಸ್ಥಳವು ರಾಮೇಶ್ವರ ಮಂದಿರದಿಂದ ೫೮ಕಿ.ಮೀ ದೂರದಲ್ಲಿದೆ. ಈಗ ಇಲ್ಲಿ ಹನುಮಾನ್‌ನ ಸಣ್ಣ ಮಂದಿರವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X