Search
  • Follow NativePlanet
Share
» »ಇಲ್ಲಿ ಒಂದು ದಿನ ತಂಗಲು ಗರಿಷ್ಠ 6 ಲಕ್ಷ ರೂಪಾಯಿ!

ಇಲ್ಲಿ ಒಂದು ದಿನ ತಂಗಲು ಗರಿಷ್ಠ 6 ಲಕ್ಷ ರೂಪಾಯಿ!

ಪ್ರವಾಸಿ ಪ್ರಿಯರು ತಮ್ಮ ರಜಾದಿನಗಳಲ್ಲಿ ಕೆಲವೊಮ್ಮೆ ವಿವಿಧ ಪ್ರದೇಶಗಳಿಗೆ ಪ್ರವಾಸಕ್ಕೆ ಹೊರಡುವುದು ಸಾಮಾನ್ಯ. ಹೀಗೆ ಬೇರೆ ಸ್ಥಳಕ್ಕೆ ತೆರಳುವ ಮುಂಚೆಯೇ ತಂಗಲು ಹೋಟೆಲ್‍ಗಳನ್ನು ಬುಕ್ ಮಾಡಿಕೊಳ್ಳುವುದು ಒಂದು ರೂಢಿ. ಇದು ಅತ್ಯುತ್ತಮವಾದ ಮುಂಜಾಗ್ರತೆ ಕೂಡ ಹೌದು. ಈ ರೀತಿ ಮಾಡುವುದರಿಂದ ನಮ್ಮ ಪ್ರಯಣ ಮತ್ತಷ್ಟು ಸುಂದರವಾಗಿರುತ್ತದೆ.

ಹೀಗೆ ಮೊದಲೇ ಹೋಟೆಲ್‍ಗಳನ್ನು ಬುಕ್ ಮಾಡುವುದರಿಂದ ಹಣದ ಉಳಿತಾಯವಾಗುತ್ತದೆ. ಇದು ಒಂದು ರೀತಿಯದ್ದಾಗಿದ್ದರೆ, ಶ್ರೀಮಂತರು ಮಾತ್ರ ತಮ್ಮ ವಿಲಾಸಿ ಜೀವನವನ್ನು ಕಳೆಯಲು ಅತ್ಯಂತ ದುಬಾರಿ ಹೋಟೆಲ್‍ಗಳಲ್ಲಿ ತಂಗುವುದುಂಟು. ಸಾಮಾನ್ಯವಾಗಿ ನಿಮಗೆ ತಿಳಿದಿರಲಿಕ್ಕಿಲ್ಲ ಅನ್ನಿಸುತ್ತದೆ. ಅದೆನೆಂದರೆ ಒಂದು ರಾತ್ರಿ ಶ್ರೀಮಂತರು ತಂಗಲು ನೀಡುವ ಹಣ ಒಬ್ಬ ಜನ ಸಾಮಾನ್ಯ ಲಕ್ಷಾಧಿಪತಿಯಾಗಬಹುದು.

ಭಾರತ ದೇಶದಲ್ಲಿ ಅಂತಹ ದುಬಾರಿ ಹಾಗು ಶ್ರೀಮಂತ ಸಂಪ್ರದಾಯವಿರುವ ಹಲವಾರು ಹೋಟೆಲ್‍ಗಳು ಇವೆ. ಇಲ್ಲಿ ರಾಜವೈಭೋಗ ಮತ್ತು ಅತಿ ದುಬಾರಿ ವೆಚ್ಚವಿರುವ ಅತಿಥ್ಯವನ್ನು ಆನಂದಿಸಬಹುದಾಗಿದೆ. ಇಲ್ಲಿ ದೇಶದ ಆನೇಕ ವ್ಯಕ್ತಿಗಳು, ನಟ, ನಟಿಯರು, ವಿದೇಶಿಯರು ಈ ಹೋಟೆಲ್‍ಗಳಿಗೆ ಇಳಿಯುತ್ತಾರೆ.

ಭಾರತದಲ್ಲಿ ದುಬಾರಿ ಹೋಟೆಲ್‍ಗಳು ಯಾವುವು ಎಂಬುದರ ಬಗ್ಗೆ ಲೇಖನದ ಮೂಲಕ ತಿಳಿಯಿರಿ.

ದಿ ತಾಜ್ ಮಹಲ್ ಪ್ಯಾಲೆಸ್ ಆಂಡ್ ಟಾವರ್, ಮುಂಬೈ

ದಿ ತಾಜ್ ಮಹಲ್ ಪ್ಯಾಲೆಸ್ ಆಂಡ್ ಟಾವರ್, ಮುಂಬೈ

ಮುಂಬೈನ ಅತ್ಯಂತ ದುಬಾರಿಯ ಹೋಟೆಲ್‍ಗಳಲ್ಲಿ ಇದು ಕೂಡ ಒಂದಾಗಿದೆ. ಇದೊಂದು ಮುಂಬೈನ ಪ್ರಸಿದ್ಧವಾದ ಸ್ಥಳವಾಗಿದೆ. ನಗರದ ಹಳೆಯ ಹೋಟೆಲ್‍ಗಳ ಪೈಕಿ ಇದು ಕೂಡ ಒಂದಾಗಿದ್ದು, ಒಂದು ದಿನದ ಕೋಣೆಯ ಬಾಡಿಗೆ 21,500 (ಸಾಮಾನ್ಯ) ಹಾಗು ಐಷಾರಾಮಿ ಕೋಣೆಯ ಬಾಡಿಗೆ ಸುಮಾರು 1.7 ಲಕ್ಷ ರೂಪಾಯಿಗಳು.

Taj Hotels

ದಿ ಲೀಲಾ ಪ್ಯಾಲೆಸ್, ಉದಯಪುರ್

ದಿ ಲೀಲಾ ಪ್ಯಾಲೆಸ್, ಉದಯಪುರ್

ರಾಜಸ್ಥಾನದಲ್ಲಿನ ಉದಯಪುರ್ ನಗರದ ಪಿಚೋಲಾ ಕೆರೆಯ ತಟದಲ್ಲಿ ಒಂದು ಅದ್ಭುತವಾದ ಹೋಟೆಲ್ ಇದೆ. ಇಲ್ಲಿ ಅರಾವಳಿ ಪರ್ವತಗಳ ಸುಂದರವಾದ ದೃಶ್ಯಾವಳಿಗಳನ್ನು ಪ್ರವಾಸಿಗರಿಗೆ ನೀಡುತ್ತದೆ. ಈ ಪ್ಯಾಲೆಸ್ ಅತ್ಯಂತ ಮನೋಹರವಾಗಿದ್ದು, ಒಂದು ದಿನದ ಬಾಡಿಗೆ ಸುಮಾರು 26000 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಮಹಾರಾಜ ದರ್ಜೆಯ ಕೊಠಡಿಯ ಬಾಡಿಗೆ ಸುಮಾರು 200000 ರೂಪಾಯಿಗಳವರೆಗೆ ಇದೆ.


The Leela

ತಾಜ್ ಫಲಕ್ನುಮಾ ಪ್ಯಾಲೆಸ್, ಹೈದ್ರಾಬಾದ್

ತಾಜ್ ಫಲಕ್ನುಮಾ ಪ್ಯಾಲೆಸ್, ಹೈದ್ರಾಬಾದ್

ಪ್ರಸ್ತುತ ಹೋಟೆಲ್ ಆಗಿ ಪರಿರ್ವತನೆಗೊಂಡಿರುವ ಈ ಭವ್ಯವಾದ ಕಟ್ಟಡವು ಹಿಂದೆ ಹೈದ್ರಾಬಾದ್ ನಿಜಾಮನ ಮನೆಯಾಗಿತ್ತು. ಈ ಸುಂದರವಾದ ಕಟ್ಟಡವು ಸಮುದ್ರ ಮಟ್ಟದಿಂದ 2000 ಅಡಿಗಳಷ್ಟು ಎತ್ತರದಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನು ಬಾನಿನ ಕನ್ನಡಿ ಎಂದೂ ಸಹ ಕರೆಯುತ್ತಾರೆ. ಇಲ್ಲಿ ಒಂದು ದಿನದ ಬಾಡಿಗೆಯು ಸುಮಾರು 33000 ರೂಪಾಯಿಗಳಿಂದ ಪ್ರಾರಂಭವಾಗಿ ಐಷಾರಾಮಿ ಕೋಣೆಯ ಬಾಡಿಗೆ 1.95 ಲಕ್ಷ ರೂಪಾಯಿಗಳವರೆಗೆ ಇದೆ.


Taj Hotels

ಒಬೇರಾಯ್ ರಾಜ್ ವಿಲಾಸ್, ಜೈಪುರ್

ಒಬೇರಾಯ್ ರಾಜ್ ವಿಲಾಸ್, ಜೈಪುರ್

ಈ ಭವ್ಯವಾದ ಐಷಾರಾಮಿ ಹೋಟೆಲ್ ರಾಜಸ್ಥಾನದ ಪ್ರಖ್ಯಾತವಾದ ಪ್ರವಾಸಿ ತಾಣವಾದ ಪಿಂಕ್ ಸಿಟಿ ಜೈಪುರ್ ನಗರದಲ್ಲಿ ಇದೆ. ಈ ಹೋಟೆಲ್ ಅತ್ಯಂತ ದುಬಾರಿಯಾಗಿದ್ದು, ಕೋಣೆಯ ಬಾಡಿಗೆ ಸುಮಾರು 35000 ರೂಪಾಯಿಗಳಿಂದ ಪ್ರಾರಂಭವಾಗಿ ಐಷಾರಾಮಿ ಕೊಠಡಿಯ ಬಾಡಿಗೆ 2.3 ಲಕ್ಷ ರೂಪಾಯಿಯವರೆಗೆ ಇದೆ.


Oberoi Hotels

ತಾಜ್ ಲ್ಯಾಂಡ್ಸ್ ಎಂಡ್, ಮುಂಬೈ

ತಾಜ್ ಲ್ಯಾಂಡ್ಸ್ ಎಂಡ್, ಮುಂಬೈ

ಮುಂಬೈ ನಗರದಲ್ಲಿರುವ ತಾಜ್ ಸಮೂಹದ ಮತ್ತೊಂದು ದುಬಾರಿ ಹೋಟೆಲ್ ಇದು. ಬಾಂದ್ರಾದಲ್ಲಿರುವ ಈ ಹೋಟೆಲ್ ಅರೇಬಿಯನ್ ಸಮುದ್ರಕ್ಕೆ ಅಭಿಮುಖವಾಗಿದೆ. ಇದರ ಕೋಣೆಯ ಬಾಡಿಗೆ 23000 ರೂಪಾಯಿಗಳಿಂದ ಪ್ರಾರಂಭವಾಗಿ 2.5 ಲಕ್ಷ ರೂಪಾಯಿಗಳ ವರೆವಿಗೂ ಇದೆ.


Taj Hotels

ಒಬೇರಾಯ್ ಅಮರವಿಲಾಸ್, ಆಗ್ರಾ

ಒಬೇರಾಯ್ ಅಮರವಿಲಾಸ್, ಆಗ್ರಾ

ಆಗ್ರಾದಲ್ಲಿರುವ ಈ ಒಬೇರಾಯ್ ಅಮರವಿಲಾಸ್ ಅದ್ಭುತವಾದ ಹೋಟೆಲ್ ಇದಾಗಿದೆ. ಈ ಸುಂದರವಾದ ಹೋಟೆಲ್‍ಗೆ ದೇಶಿಯ ಶ್ರೀಮಂತರೇ ಅಲ್ಲದೇ ವಿದೇಶಿಯರು ಕೂಡ ಭೇಟಿ ನೀಡುತ್ತಾರೆ. ಈ ಹೋಟೆಲ್‍ನ ಒಂದು ದಿನದ ಬಾಡಿಗೆ 35000 ದಿಂದ ಪ್ರಾರಂಭವಾಗಿ ಐಷಾರಾಮಿ ದರ್ಜೆಯ ಕೋಣೆಯ ಬಾಡಿಗೆ 2.5 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.

ಒಬೇರಾಯ್, ಗುರ್ಗಾಂವ್

ಒಬೇರಾಯ್, ಗುರ್ಗಾಂವ್

ಗುರ್ಗಾಂವ್‍ನಲ್ಲಿರುವ ಪ್ರತಿಷ್ಠಿತ ಒಬೇರಾಯ್ ಹೋಟೆಲ್ ಅತ್ಯಂತ ವಿಶೇಷವಾಗಿದ್ದು, ಭಾರತದಲ್ಲಿಯೇ ಏಕೈಕ ಸಿಗಾರ್ ಲಾಂಜ್ ಹೊಂದಿರುವ ಈ ಹೋಟೆಲ್ ಭಾರತೀಯ ಕಲಾ ಸಂಗ್ರಹಾಲವನ್ನು ಹೊಂದಿದೆ. ಇದರ ಕೋಣೆಗಳ ಬಾಡಿಗೆಯು 30,000 ರೂಪಾಯಿಗಳು. ಐಷಾರಾಮಿ ದರ್ಜೆಯ ಕೋಣೆಯ ಬಾಡಿಗೆ 3 ಲಕ್ಷ ರೂಪಾಯಿಗಳವರೆಗೆ ಇದೆ.

Oberoi Hotels

ತಾಜ್ ಲೇಕ್ ಪ್ಯಾಲೆಸ್, ಉದಯಪುರ್

ತಾಜ್ ಲೇಕ್ ಪ್ಯಾಲೆಸ್, ಉದಯಪುರ್

ಪ್ರಸ್ತುತ ಭಾರತದ ಅತ್ಯಂತ ದುಬಾರಿಯ ಬಾಡಿಗೆಯ ಐಷಾರಾಮಿ ಹೋಟೆಲ್ ಎಂದರೆ ಅದು ತಾಜ್ ಲೇಕ್ ಪ್ಯಾಲೆಸ್ ಆಗಿದೆ. ಈ ಸುಂದರವಾದ ಭವ್ಯವಾದ ಹೋಟೆಲ್ ಕೆರೆಯ ಮಧ್ಯದಲ್ಲಿ ನಿರ್ಮಾಣವಾಗಿರುವುದು ವಿಶೇಷವಾಗಿದೆ. ಇದರ ಕೋಣೆಯ ಬಾಡಿಗೆಯು 36000 ರೂಪಾಯಿಗಳಿಂದ ಪ್ರಾರಂಭವಾಗಿ ಐಷಾರಾಮಿ ಕೋಣೆಯ ಬಾಡಿಗೆ 6 ಲಕ್ಷ ರೂಪಾಯಿಗಳವರೆಗೆ ಇದೆ.


Taj Hotels

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X