Search
  • Follow NativePlanet
Share
» »ಭಾರತದ 10 ಅತ್ಯಂತ ವರ್ಣರಂಜಿತ ಸ್ಥಳಗಳು

ಭಾರತದ 10 ಅತ್ಯಂತ ವರ್ಣರಂಜಿತ ಸ್ಥಳಗಳು

ಭಾರತವು ವರ್ಣರಂಜಿತ ಮತ್ತು ಸುಂದರವಾದ ಸ್ಥಳಗಳಿಂದ ತುಂಬಿದ ದೇಶ ಎನ್ನುವುದರ ಅರಿವು ತುಂಬಾ ಜನರಿಗಿರಲಿಕ್ಕಿಲ್ಲ. ಹಿಮಚ್ಚಾದಿತ ಪರ್ವತಗಳು ಮತ್ತು ಜಲಪಾತಗಳಿಂದ ದೇವಾಲಯಗಳು ಮತ್ತು ಸುಂದರವಾದ ಭೂಪ್ರದೇಶಗಳವರೆಗೆ ಭಾರತದಲ್ಲಿ ನೋಡಬಹುದಾದ ಅಥವಾ ಇಲ್ಲಿ ಮಾಡಬಹುದಾದಂತಹ ಯಾವ ವಿಷಯಗಳಿಗೂ ಕೊರತೆ ಇಲ್ಲ.

ಭಾರತದಲ್ಲಿಯ 10 ಅತ್ಯಂತ ವರ್ಣರಂಜಿತ ಸ್ಥಳಗಳ ಪಟ್ಟಿ ಮಾಡುವುದು ನಿಜವಾಗಿಯೂ ಸುಲಭದ ಮಾತಲ್ಲ. ಮತ್ತು, ಈ ಎಲ್ಲಾ ಸುಂದರ ಸ್ಥಳಗಳಿಗೆ ಭೇಟಿ ಕೊಡಲು ನಿಮ್ಮ ಜೀವಿತಾವಧಿಯ ಬಹಳಷ್ಟು ಅಥವಾ ಅತಿ ಹೆಚ್ಚು ಸಮಯಬೇಕಾಗಬಹುದು.

ಆದರೂ ಇಲ್ಲಿ ಕೆಲವು ಯಾವಾಗಲೂ ಪ್ರವಾಸದ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆಯುವಂತಹ ಆಕರ್ಷಣೀಯ ಸ್ಥಳಗಳ ಪಟ್ಟಿಯಿದೆ. ಈ ಪ್ರತಿಯೊಂದೂ ಸ್ಥಳಗಳೂ ನೋಡಲೇಬೇಕಾದ ಮತ್ತು ಭೇಟಿ ನೀಡಿ ಆಂದಿಸಲೇಬೇಕಾದ ಸ್ಥಳಗಳಾಗಿದ್ದು, ಇವುಗಳ ಭೇಟಿ ಜೀವನದುದ್ದಕ್ಕೂ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಸುಂದರವಾದ ಅನುಭವವನ್ನು ನೀಡುತ್ತದೆ.

1. ಜೈಪುರ

1. ಜೈಪುರ

ಸಾಂಪ್ರದಾಯಿಕವಾಗಿ ಹೆಚ್ಚು ಸದ್ದು ಮಾಡುವ ಜೈಪುರ (ಪಿಂಕ್ ಸಿಟಿ) ವರ್ಣರಂಜಿತ ಸ್ಥಳಗಳಲ್ಲೊಂದಾಗಿದೆ. ರಾಜಸ್ಥಾನದ ರಾಜಧಾನಿಯಾಗಿರುವ ಈ ಸ್ಥಳದ ಬಗ್ಗೆ ಸೂಕ್ಷ್ಮವಾಗಿ ಹೇಳಲು ಕಷ್ಟಕರ. ಆದುದರಿಂದ ಈ ಸ್ಥಳವನ್ನು ಪ್ರೀತಿಸುವಂತಿದೆ. ಇಲ್ಲಿನ ಪ್ರಸಿದ್ಧ ಹವಾ ಮಹಲ್‌ನ ಬಹು-ಬಣ್ಣದ ಮುಂಭಾಗಗಳಿಂದ ಹಿಡಿದು ಪುರಾತನ ಸಿಟಿ ಅರಮನೆಗಳವರೆಗೆ ಜೈಪುರ ನಗರ ಬಣ್ಣ ಮತ್ತು ಇತಿಹಾಸದ ಮಿಶ್ರಣವೆಂದರೆ ತಪ್ಪಾಗಲಾರದು.

2. ಜೋಧಪುರ

2. ಜೋಧಪುರ

ನೀಲಿ ನಗರವೆನಿಸಿರುವ ಜೋಧಪುರಕ್ಕೆ ಜೈಪುರದಿಂದ ಹೆಚ್ಚು ದೂರವಿಲ್ಲ. ಈ ಸ್ಥಳಕ್ಕೆ ತನ್ನದೇ ಆದ ಕಥೆಯಿದೆ. ಮೇಲ್ಜಾತಿಯ ಬ್ರಾಹ್ಮಣ ಸಮುದಾಯದ ಜನರು ತಮ್ಮನ್ನು ಹಾಗೂ ತಮ್ಮ ಸಂಪ್ರದಾಯಗಳನ್ನು ಇತರರಿಗಿಂತ ಭಿನ್ನವಾಗಿ ತೋರಿಸಿಕೊಳ್ಳಲು ತಮ್ಮ ಮನೆಗಳಿಗೆ ನೀಲಿ ಬಣ್ಣದಿಂದ ಚಿತ್ರಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಈ ಸ್ಥಳವು ಇನ್ಸ್ಟಾಗ್ರಾಂ ಪುಟಕ್ಕೆ ಯೋಗ್ಯವಾದ ಸ್ಥಳವೆನಿಸಿದೆ.

3. ಕಚ್

3. ಕಚ್

ಬಹು-ಸಾಂಸ್ಕೃತಿಕ ಮತ್ತು ಬಹು -ವರ್ಣಮಯ ಇವೆರಡನ್ನೂ ತನ್ನಲ್ಲಿ ಹೊಂದಿರುವ ಕಚ್ ಗುಜರಾತಿನ ಅತ್ಯಂತ ಆಕರ್ಷಣೀಯ ಜಿಲ್ಲೆಗಳಲ್ಲೊಂದೆನಿಸಿದೆ. ಕಚ್ ವಿಸ್ತಾರವಾದ ಬಿಳಿ ಮರುಭೂಮಿಯ ನೆಲೆಯಾಗಿದೆ. ಮತ್ತು ಈ ಬಿಳಿ ಮರುಭೂಮಿಯಲ್ಲಿ ಪ್ರತೀ ವರ್ಷ ನವೆಂಬರ್ ತಿಂಗಳಿನಿಂದ ಫ಼ೆಬ್ರವರಿ ತಿಂಗಳಗಳವರೆಗೆ ನಡೆಸಲಾಗುವ ರಾನ್ ಉತ್ಸವವು ಅತ್ಯಂತ ಹೆಸರುವಾಸಿಯಾಗಿದೆ ಅಲ್ಲದೆ ಇಲ್ಲಿ ಮನಮೋಹಕ ಸಾಂಸ್ಕೃತಿಕ ವೈಭವವನ್ನು ಮತ್ತು ವಿಸ್ಮಯಕಾರಿ ಇತಿಹಾಸವನ್ನು ಈ ವೇಳೆ ಪ್ರದರ್ಶಿಸಲಾಗುತ್ತದೆ.

4. ಚೆನ್ನೈ

4. ಚೆನ್ನೈ

ಚೆನ್ನೈ ಗೆ ಭೇಟಿ ಕೊಡುವ ಯೋಜನೆಯಿದ್ದರೆ ಇಲ್ಲಿ ಕೇವಲ ಊಟದ ವಿಚಾರವನ್ನು ಮಾತ್ರ ಹುಡುಕುತ್ತಾ ಇರುವುದು ಸೂಕ್ತವಲ್ಲ. ಇಲ್ಲಿ ರೂಫ್ ಟಾಪ್ ಪಬ್ ಗಳು ಮತ್ತು ಜಗಜಗಿಸುವ ಬಾರ್ ಗಳಿಂದ ಹಿಡಿದು ಅನೇಕ ಪ್ರಾಚೀನ ದೇವಾಲಯಗಳವರೆಗೆ ಎಲ್ಲವನ್ನೂ ನೋಡಬಹುದಾಗಿದೆ.

ಆದುದರಿಂದ, ಚೆನ್ನೈ ತನ್ನಲ್ಲಿ ಎಲ್ಲವನ್ನೂ ಹೊಂದಿರುವ ಸ್ಥಳವೆನಿಸಿದ್ದು, ಇಲ್ಲಿ ಹಲವಾರು ಪ್ರಾಚೀನ ದೇವಾಲಯಗಳಿದ್ದು ಇವುಗಳಲ್ಲಿ ಅತ್ಯಂತ ಉನ್ನತ ಮಟ್ಟದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳ ಸಂಕೀರ್ಣವನ್ನು ನೋಡಬಹುದಾಗಿದೆ. ಆದರೆ ಇಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ಸನ್ ಗ್ಲಾಸ್ ಒಯ್ಯಲು ಮರೆಯಬಾರದು!

5. ಮಧುರೈ

5. ಮಧುರೈ

ಮಧುರೈ ಚೆನ್ನೈನಿಂದ ಸುಮಾರು 7 ತಾಸುಗಳ ರಸ್ತೆ ಮೂಲಕ ಪ್ರಯಾಣಿಸಿದಲ್ಲಿ ಸಿಗುವ ಒಂದು ಸಣ್ಣ ನಗರವಾಗಿದೆ. ಈ ಸ್ಥಳವು ವರ್ಣರಂಜಿತ ಹಾಗೂ ಸೌಂದರ್ಯತೆಯಿಂದ ಕೂಡಿದೆ. ಇಲ್ಲಿಯ ಪ್ರತಿಯೊಂದೂ ದೇವಾಲಯಗಳು ಹೊಳೆಯುವ ಬಣ್ಣಗಳ ಮಿಶ್ರಣದಿಂದ ಕೂಡಿದ್ದು, ಹಲವಾರು ಸಂಕೀರ್ಣಗಳನ್ನು ಹಲವಾರು ವರ್ಣರಂಜಿತ ಚಿತ್ರಗಳಿಂದ ಅಲಂಕರಿಸಲಾಗಿದೆ. ಒಮ್ಮೆ ಮಧುರೈನ ಪ್ರಾಚೀನ ಬೀದಿಗಳ ನಡುವೆ ಅಲೆದಾಡಿದರೆ, ಕಾಮನ ಬಿಲ್ಲಿನಂತೆ ಚಿತ್ರಿಸಿದ ಮೀನಾಕ್ಷಿ ಅಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಬಹುದು ಇದೆಲ್ಲವೂ ಕಣ್ಣಿಗೆ ಕಟ್ಟುವಂತಿದೆ!

6.ಅಂಡಮಾನ್ ಮತ್ತು ನಿಕೋಬಾರ್

6.ಅಂಡಮಾನ್ ಮತ್ತು ನಿಕೋಬಾರ್

ದ್ವೀಪಗಳ ಬಣ್ಣಗಳು ಮತ್ತು ಮಳೆಬಿಲ್ಲುಗಳು ಸಮುದ್ರ ಮಟ್ಟಕ್ಕೆ ಸೀಮಿತವಾಗಿಲ್ಲ. ಆದುದರಿಂದ ದೂರದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕರಾವಳಿಯಲ್ಲಿ, ಅಸಾಧಾರಣ ಹವಳದ ಬಂಡೆಯ ಪರಿಸರ ವ್ಯವಸ್ಥೆಯು ಪ್ರಪಂಚದಾದ್ಯಂತದ ಸಾವಿರಾರು ಜನರನ್ನು ಆಕರ್ಷಿಸುತ್ತದೆ.

ಸ್ನಾರ್ಕೆಲ್ ಮತ್ತು ಪಾಪ್-ಮೇಲ್ಮೈ ಅಡಿಯಲ್ಲಿ ನೋಡಿದರೆ, 600 ಕ್ಕೂ ಹೆಚ್ಚು ಬಗೆಯ ಮೃದು ಮತ್ತು ಗಟ್ಟಿಯಾದ ಹವಳಗಳಿಂದ ಕೂಡಿದ ನೀರೊಳಗಿನ ಮಳೆಬಿಲ್ಲು ಕಾಣಿಸುತ್ತದೆ. ಅದರ ಮೇಲೆ, ಹವಳದ ನಡುವೆ ನೇಯ್ಗೆಯಂತೆ ಕಾಣುವ ಮೀನು ಮತ್ತು ಸಮುದ್ರ ಜೀವಿಗಳ ವರ್ಣರಂಜಿತ ಶೆಲ್ ಗಳ ದೃಶ್ಯವು ಮರೆಯಲಾಗದಂತೆ ಮಾಡುತ್ತದೆ.

7. ಪಾಂಡಿಚೇರಿ

7. ಪಾಂಡಿಚೇರಿ

ಹಳೆಯ ಫ್ರೆಂಚ್ ವಾಸ್ತುಶಿಲ್ಪವನ್ನು ಎತ್ತಿ ಹಿಡಿಯುವ ಪಾಂಡಿಚೆರಿ ನೀಲಿಬಣ್ಣದ ಚಿತ್ರದಂತೆ ಸುಂದರವಾಗಿದೆ. ರಸ್ತೆಮಾರ್ಗಗಳು ಸ್ಪಷ್ಟವಾಗಿ ಚಿತ್ರಿಸಿದ ಮನೆಗಳಿಂದ ಕೂಡಿದ್ದು, ಅವುಗಳು ಪಾದಾಚಾರಿಗಳು ಮತ್ತು ಆರೋಹಿಗಳಿಂದ ಕೂಡಿರುತ್ತದೆ. ಈ ಹಿನ್ನೆಲೆಯು ಸೇರಿದಂತೆ ಆಕಾಶ ನೀಲಿ ಸಮುದ್ರದ ಸುಂದರ ನೋಟವು ಸುಂದರ ನಗರಕ್ಕೆ ಇನ್ನೂ ಹೆಚ್ಚಿನ ಮೆರುಗನ್ನು ನೀಡುತ್ತದೆ.

8. ಲೇಹ್ ಲಡಾಖ್

8. ಲೇಹ್ ಲಡಾಖ್

ಲೇಹ್ ಮತ್ತು ಲಡಾಖ್‌ಗೆ ಹೋಗುವುದು ಈ ಪಟ್ಟಿಯಲ್ಲಿರುವ ಬೇರೆ ಸ್ಥಳಗಳಿಗಿಂತ ಹೆಚ್ಚಿನ ಪರಿಶ್ರಮ ಬೇಕಾಗಬಹುದು , ಆದರೆ ಪ್ರತಿಫಲವು ಅಷ್ಟೇ ಪ್ರವಾಸಕ್ಕೆ ಯೋಗ್ಯವಾದುದಾಗಿದೆ. ಸಮುದ್ರ ಮಟ್ಟದಿಂದ 4,000 ಮೀಟರ್ ಎತ್ತರದಲ್ಲಿರುವ ಲೇಹ್ ಮತ್ತು ಲಡಾಖ್‌ಗೆ ಹೋಗುವ ದಾರಿಯಲ್ಲಿ, ಹಿಮದಿಂದ ಆವೃತವಾದ ಹಿಮಾಲಯದ ಮಧ್ಯೆ ಬೀಸುತ್ತಿರುವ ಮಳೆಬಿಲ್ಲುಗಳು ಧ್ವಜಗಳಂತೆ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಇಷ್ಟೇ ಅಲ್ಲದೆ ಇಲ್ಲಿ ಪ್ರಸಿದ್ದ ಮಠಗಳು ಮತ್ತು ಪ್ರಾರ್ಥನೆ ಮಾಡುವ ಸ್ಥಳಗಳು ದಾರಿಯುದ್ದಕ್ಕೂ ಇದೆ. ಇವೆಲ್ಲವು ಬೆರಗುಗೊಳಿಸುವುದರಲ್ಲಿ ಸಂಶಯವೇ ಇಲ್ಲ.

9. ಹೂವುಗಳ ಕಣಿವೆ(ವ್ಯಾಲಿ ಆಫ್ ಪ್ಲವರ್ಸ್)

9. ಹೂವುಗಳ ಕಣಿವೆ(ವ್ಯಾಲಿ ಆಫ್ ಪ್ಲವರ್ಸ್)

ಉತ್ತರಾಖಂಡದ ವ್ಯಾಲಿ ಆಫ್ ಫ್ಲವರ್ಸ್(ಹೂವುಗಳ ಕಣಿವೆ) ರಾಷ್ಟ್ರೀಯ ಉದ್ಯಾನವನವು ಅಚ್ಚರಿಗೊಳಿಸುವ ಸಂಗತಿಯಾಗಿದೆ. 3,500 ಮೀಟರ್‌ಗಿಂತ ಹೆಚ್ಚು ಎತ್ತರದಲ್ಲಿರುವ ಈ ಸ್ಥಳವು ಬಹುಕಾಂತೀಯ ನೈಸರ್ಗಿಕ ಅದ್ಭುತಕ್ಕೆ ಸಾಕ್ಷಿಯಾಗಿದೆ.

ಇದನ್ನು 1931ರಲ್ಲಿ ಬ್ರಿಟಿಷ್ ಪರ್ವತಾರೋಹಿಗಳು ಕಂಡುಹಿಡಿದರು ಮತ್ತು ಅದರ ವೈವಿಧ್ಯತೆಯು ಹಳದಿ, ನೀಲಿ ಗುಲಾಬಿ, ವೈಢೂರ್ಯ ಮತ್ತು ಬರ್ಗಂಡಿ ಹೂವುಗಳಿಂದ ಬೆರಗುಗೊಳಿಸುವಂತೆ ಮಾಡುತ್ತದೆ. ಅಲ್ಲದೆ ಇದರಿಂದ ಈ ಕಣಿವೆಯನ್ನು ಬೇರೆಲ್ಲವುಗಳಿಗಿಂತ ವಿಭಿನ್ನವಾಗಿಸುತ್ತದೆ.

10. ಸತಾರಾ

10. ಸತಾರಾ

ಕಡಲತೀರಗಳು ಮತ್ತು ಬಾಲಿವುಡ್ ಇವೆಲ್ಲ ಸೇರಿ ಮಹಾರಾಷ್ಟ್ರಕ್ಕೆ ಇನ್ನೂ ಹೆಚ್ಚಿನ ಮೆರುಗನ್ನು ನೀಡುತ್ತದೆ. ಅಲ್ಲದೆ ಇಲ್ಲಿ ಕೃಷ್ಣ ನದಿ ಮತ್ತು ಅದರ ಉಪನದಿ ವೆನ್ನಾ ಸಂಗಮದ ಕಡೆಗೆ ಒಳನಾಡಿಗೆ ಹೋದರೆ, ಶೀಘ್ರದಲ್ಲೇ ನಂಬಲಾಗದ ಕಾಸ್ ಪ್ರಸ್ಥಭೂಮಿಯಲ್ಲಿನ್ನು ಕಾಣಬಹುದಾಅಗಿದೆ.

ಈ ಪ್ರಸ್ಥಭೂಮಿ 850 ಭಿನ್ನ ಜಾತಿಯ ಹೂವುಗಳ ನೆಲೆಯಾಗಿದೆ. ಮಳೆಬಿಲ್ಲು-ಪರಿಣಾಮವು ಸೂರ್ಯೋದಯದ ಸಮಯದಲ್ಲಿ ಅತ್ಯಂತ ಸುಂದರವಾಗಿರುತ್ತದೆ, ಆದ್ದರಿಂದ ಮುಂಜಾನೆಯಲ್ಲಿ ಎದ್ದು, ಒಂದು ಕಪ್ ಕಾಫಿ ಹಿಡಿದು, ಇಲ್ಲಿ ಬಣ್ಣದ ಅಲೆಗಳು ಪರಸ್ಪರರಿಗೆ ಅಭಿನಂದನೆಯನ್ನು ಹೇಳುವಂತೆ ಕಾಣುವುದನ್ನು ನೋಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X