Search
  • Follow NativePlanet
Share
» »ಪ್ರಮುಖ ನಗರಗಳ ಆಕರ್ಷಕ ರಾತ್ರಿಗಳು

ಪ್ರಮುಖ ನಗರಗಳ ಆಕರ್ಷಕ ರಾತ್ರಿಗಳು

By Vijay

ನಗರಗಳು ದಿನದ ಸಮಯದಲ್ಲಿ ಒಂದು ರೀತಿ ಎನಿಸಿದರೆ ರಾತ್ರಿಯಾಗುತ್ತಿದ್ದಂತೆ ಥಳುಕು ಬಳುಕು ತುಂಬಿಕೊಂಡು ನವ ವಧುವಿನಂತೆ ಸಿಂಗರಿಸಲ್ಪಡುತ್ತವೆ. ಯಾವುದೋ ಪಾರ್ಕು, ಕಟ್ಟಡ ಅಥವಾ ರಸ್ತೆ ದಿನದ ಸಮಯದಲ್ಲಿ ಒಂದು ಸಾಮಾನ್ಯ ಅಂಶವೆನಿಸಿದರೂ ಕತ್ತಲಾಗುತ್ತಿದ್ದಂತೆ ದೀಪಾಲಂಕಾರಗಳಿಂದ ಶೋಭಿಸತೊಡಗುತ್ತವೆ.

ಕೆಲವು ನಗರಗಳಂತೂ ರಾತ್ರಿಯ ಸಮಯದಲ್ಲಿಯೆ ಜೀವ ಬಂದು ಉಸಿರಾಡತೊಡಗುತ್ತವೆ. ರಸ್ತೆಯ ಮೇಲೆ ಝಗಮಗಿಸುವ ದೀಪಗಳು, ಅಲಂಕೃತಗೊಂಡ ಕಟ್ಟಡಗಳು, ಎಲ್ಲೆಲ್ಲೂ ದೀಪಗಳೂ ಸಂಚರಿಸುತ್ತಿವೆ ಎಂಬ ಆಭಾಸ ಮೂಡಿಸುವ ಎಲ್ಲ ರೀತಿಯ ವಾಹನಗಳು ಇವೆಲ್ಲವುದಕ್ಕಿಂತಲೂ ದಿನದ ಸಮಯಕ್ಕಿಂತ ಕಡಿಮೆಯಿರುವ ವಾತಾವರಣದ ತಾಪಮಾನ ಒಟ್ಟಾರೆಯಾಗಿ ನಗರಗಳ ರಾತ್ರಿ ನೋಟವನ್ನು ನೋಡಲು ಬಲು ಆಕರ್ಷಕವನ್ನಾಗಿ ಮಾಡುತ್ತವೆ.

ಮುಂಬೈ:

ಮುಂಬೈ:

ಹಲವು ಆಕರ್ಷಣೆಗಳಿಂದ ಕಂಗೊಳಿಸುವ ಮುಂಬೈ ನಗರವು ರಾತ್ರಿಯ ಸಮಯದಲ್ಲಂತೂ ಮದುವಣಗಿತ್ತಿಯಂತೆ ಕಂಗೊಳಿಸುತ್ತದೆ.

ಚಿತ್ರಕೃಪೆ: Advait Supnekar

ಚೆನ್ನೈ:

ಚೆನ್ನೈ:

ನಗರದಲ್ಲಿನ ಒಂದು ಸಾಮಾನ್ಯ ರಾತ್ರಿ.

ಚಿತ್ರಕೃಪೆ: Planemad

ಕೊಲ್ಕತ್ತಾ:

ಕೊಲ್ಕತ್ತಾ:

ರಾತ್ರಿಯಲ್ಲಿ ಝಗಮಗಿಸುವ ಕೊಲ್ಕತ್ತಾದ ಹಾವ್ರಾ ಸೇತುವೆ.

ಚಿತ್ರಕೃಪೆ: Shubhankar.sengupta19

ದೆಹಲಿ:

ದೆಹಲಿ:

ರಾಷ್ಟ್ರ ರಾಜಧಾನಿ ದೆಹಲಿಯ ಹೆಮ್ಮೆಯ ಪ್ರತೀಕವಾದ ಇಂಡಿಯಾ ಗೇಟ್.

ಚಿತ್ರಕೃಪೆ: Edmund Gall

ಬೆಂಗಳೂರು:

ಬೆಂಗಳೂರು:

ಇಗೋ ನೋಡಿ...ಯು.ಬಿ ಸಿಟಿಯಿಂದ ನಮ್ಮ ಬೆಂಗಳೂರು ರಾತ್ರಿಯ ಸಮಯದಲ್ಲಿ ಕಾಣುವ ಪರಿ.

ಚಿತ್ರಕೃಪೆ: Ming-yen Hsu

ಹೈದರಾಬಾದ್:

ಹೈದರಾಬಾದ್:

ಹೈದರಾಬಾದಿನ ಹುಸೇನ್ ಸಾಗರ ಕೇರೆಯ ಮಧ್ಯದಲ್ಲಿ ಸುಂದರವಾಗಿ ಕಾಣುವ ಬುದ್ಧನ ಪ್ರತಿಮೆ.

ಚಿತ್ರಕೃಪೆ: Alosh Bennett

ಗುವಾಹಟಿ:

ಗುವಾಹಟಿ:

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಸ್ಸಾಮಿನ ಗುವಾಹಟಿ ಪಟ್ಟಣವು ರಾತ್ರಿಯಲ್ಲಿ ಕಾಣುವುದು ಹೀಗೆ.

ಚಿತ್ರಕೃಪೆ: Kinshuk Kashyap

ಅಹ್ಮದಾಬಾದ್:

ಅಹ್ಮದಾಬಾದ್:

ನವರಾತ್ರಿಯ ಸಂದರ್ಭದಲ್ಲಿ ಗರ್ಭಾ ನೃತ್ಯದಿಂದ ಮೈತುಂಬಿಕೊಂಡಿರುವ ಗುಜರಾತ್ ರಾಜ್ಯದ ಅಹ್ಮದಾಬಾದ್ ನಗರ.

ಚಿತ್ರಕೃಪೆ: Hardik jadeja

ಅಲೆಪ್ಪಿ:

ಅಲೆಪ್ಪಿ:

ಕೇರಳದ ಅಲೆಪ್ಪಿ ಅಥವಾ ಅಲಪುಳಾದಲ್ಲಿ ಹಿನ್ನೀರಿನಲ್ಲಿ ವಿಹರಿಸುತ್ತಿರುವ ದೋಣಿ ಮನೆ.

ಚಿತ್ರಕೃಪೆ: Ajith

ಅಲಹಾಬಾದ್:

ಅಲಹಾಬಾದ್:

ಕುಂಭ ಮೇಳದ ಪ್ರಮುಖ ತಾಣವಾದ ಉತ್ತರ ಪ್ರದೇಶದ ಅಲ್ಲಹಾಬಾದ್ ನಗರದಲ್ಲಿ ಕುಂಭ ಮೇಳದ ಒಂದು ರಾತ್ರಿಯಲ್ಲಿ.

ಅಮೃತಸರ್:

ಅಮೃತಸರ್:

ಪಂಜಾಬಿನ ಅಮೃತಸರ್ ಪಟ್ಟಣದಲ್ಲಿರುವ ಸಿಖ್ಖರ ಪವಿತ್ರ ದೇಗುಲವಾದ ಗೋಲ್ಡನ್ ಟೆಂಪಲ್.

ಮದುರೈ:

ಮದುರೈ:

ಮದುರೈ ಪಟ್ಟಣದ ಎ.ವಿ ಸೇತುವೆ.

ಚಿತ್ರಕೃಪೆ: wishvam

ಹರಿದ್ವಾರ:

ಹರಿದ್ವಾರ:

ಪ್ರಖ್ಯಾತ ತೀರ್ಥ ಕ್ಷೇತ್ರ ಹರಿದ್ವಾರ್ ನಲ್ಲಿರುವ ಪವಿತ್ರ ಹರ್ ಕಿ ಪೌರಿ (ಪೈರಿ).

ಚಿತ್ರಕೃಪೆ: Livefree2013

ಜೈಪೂರ್:

ಜೈಪೂರ್:

ರಾಜಸ್ಥಾನದ ಜೈಪೂರ್ ನಲ್ಲಿರುವ ಸವಾಯ್ ಮಾನ್ ಸಿಂಗ್ ಅರಮನೆ ರಾತ್ರಿಯಲ್ಲಿ ಕಂಗೊಳಿಸುವ ರೀತಿ.

ಚಿತ್ರಕೃಪೆ: Nitesh Pandey

ಜಮ್ಶೇಡ್ಪೂರ್:

ಜಮ್ಶೇಡ್ಪೂರ್:

ಉಕ್ಕಿನ ನಗರಿ ಎಂದೆ ಜನಪ್ರೀಯವಾದ ಜಮ್ಶೇಡ್ಪೂರ್ ನಗರದ ಒಂದು ರಾತ್ರಿ.

ಚಿತ್ರಕೃಪೆ: Ashokinder

ಕೊಚ್ಚಿ:

ಕೊಚ್ಚಿ:

ಕೇರಳದ ಕೊಚ್ಚಿ ನಗರವು ರಾತ್ರಿಯ ಸಮಯದಲ್ಲಿ ಪ್ರಕಾಶಮಾನವಾಗಿ ಕಂಗೊಳಿಸುತ್ತ ಆಕರ್ಷಿಸುತ್ತದೆ.

ಚಿತ್ರಕೃಪೆ: Augustus Binu

ವಾರಣಾಸಿ:

ವಾರಣಾಸಿ:

ವಾರಣಾಸಿಯಲ್ಲಿ ರಾತ್ರಿಯ ಸಮಯದಲ್ಲಿ ಗಂಗೆಗೆ ಗೌರವಸೂಚಕವಾಗಿ ಅತಿ ಸಡಗರದಿಂದ ಆಚರಿಸಲಾಗುವ ಗಂಗಾ ಆರತಿ.

ಚಿತ್ರಕೃಪೆ: dalbera

ಪಾಂಡಿಚೆರಿ:

ಪಾಂಡಿಚೆರಿ:

ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೆರಿಯಲ್ಲೊಂದು ರಾತ್ರಿ.

ಚಿತ್ರಕೃಪೆ: Nelson.G

ಶಿಮ್ಲಾ:

ಶಿಮ್ಲಾ:

ಜಮ್ಮು ಕಾಶ್ಮೀರ ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣವಾದ ಶಿಮ್ಲಾ ರಾತ್ರಿಯ ಪರಿಸರ ಆನಂದವನ್ನುಂಟು ಮಾಡುತ್ತದೆ.

ಚಿತ್ರಕೃಪೆ: Sumit.kumar2209

ಕನ್ಯಾಕುಮಾರಿ:

ಕನ್ಯಾಕುಮಾರಿ:

ತಮಿಳುನಾಡಿನ ಪ್ರಖ್ಯಾತ ಪ್ರವಾಸಿ ತಾಣವಾದ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕ ಬಂಡೆ ದೇವಾಲಯ.

ಚಿತ್ರಕೃಪೆ: Jegan M

ಕರ್ನೂಲ್:

ಕರ್ನೂಲ್:

ಕರ್ನೂಲ್ ಪಟ್ಟಣದಲ್ಲಿರುವ ಕೊಂಡಾ ರೆಡ್ಡಿ ಬುರುಜು ರಾತ್ರಿಯಲ್ಲಿ.

ಚಿತ್ರಕೃಪೆ: Poreddy Sagar

ಶಿವಕಾಶಿ:

ಶಿವಕಾಶಿ:

ತಮಿಳುನಾಡಿನ ಪಟಾಕಿ ಕಾರ್ಖಾನೆಗಳಿಗೆ ಸುಪ್ರಸಿದ್ಧವಾದ ಶಿವಕಾಶಿ ನಗರದ ರಾತ್ರಿ ಸಮಯ.

ಚಿತ್ರಕೃಪೆ: Joel Suganth

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X