Search
  • Follow NativePlanet
Share
» »ಪ್ರವಾಸಿಗರನ್ನು ಮಂತ್ರಮುಗ್ದರನ್ನಾಗಿಸುವ ಈಶಾನ್ಯ ಭಾರತದ ಅತ್ಯಂತ ಸುಂದರ ಪರ್ವತಗಳು

ಪ್ರವಾಸಿಗರನ್ನು ಮಂತ್ರಮುಗ್ದರನ್ನಾಗಿಸುವ ಈಶಾನ್ಯ ಭಾರತದ ಅತ್ಯಂತ ಸುಂದರ ಪರ್ವತಗಳು

ಈಶಾನ್ಯ ಭಾರತವು ನೈಸರ್ಗಿಕ ಸೌಂದರ್ಯದ ಅದ್ಬುತಗಳಲ್ಲೊಂದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದರ ಇನ್ನೂ ಅನ್ವೇಷಣೆಗೊಳಗಾಗದೇ ಇರುವ ಗಿರಿಗಳು, ಕಣಿವೆಗಳು, ಅರಣ್ಯಗಳು, ವನ್ಯಜೀವಿಗಳು ಮತ್ತು ಪರ್ವತಗಳ ಇತ್ಯಾದಿಗಳನ್ನೇಲ್ಲಾ ಗಣನೆಗೆ ತೆಗೆದುಕೊಂಡಲ್ಲಿ, ಈಶಾನ್ಯ ಭಾರತವನ್ನು ಜಗತ್ತಿನ ಅತ್ಯಂತ ಸುಂದರ ಪ್ರದೇಶಗಳಲ್ಲಿ ಒಂದೆಂದು ಪರಿಗಣಿಸಬಹುದು. ಜೀವವೈವಿಧ್ಯಗಳನ್ನು ಗುರುತಿಸುವುದರಿಂದ ಹಿಡಿದು ಸುಂದರ ಕೆಂಪು ಪಾಂಡಾವನ್ನು ಸೆರೆಹಿಡಿಯುವವರೆಗೆ ಇಲ್ಲಿ ಅಪರೂಪದ ಅನುಭವವನ್ನು ಪಡೆಯುವ ಸ್ಥಳವಾಗಿದೆ. ಈಶಾನ್ಯ ಭಾರತದ ಹಲವಾರು ರಾಜ್ಯಗಳು ಹಿಮಾಲಯದ ಅದ್ಬುತಗಳಿಂದ ಆಶೀರ್ವದಿಸಲ್ಪಟ್ಟಿರುವುದರಿಂದ, ಇದು ಪ್ರಕೃತಿಯ ಛಾಯಾಗ್ರಾಹಕರಿಗೆ ಒಂದು ರಮಣೀಯ ತಾಣವಾಗಿದೆ.

ಸ್ವರ್ಗದಿಂದ ಇಳಿದು ಬಂದಂತೆ ಕಾಣುವ ಹಿಮಾಲಯದ ಹಿಮಚ್ಚಾದಿತ ಪರ್ವತಗಳ ಸುಂದರತೆಯಿಂದ ನಿಮ್ಮ ಕಣ್ಣನ್ನು ತಂಪಾಗಿಸಲು ಯಾರು ತಾನೇ ಬಯಸುವುದಿಲ್ಲ? ಈಶಾನ್ಯ ಭಾರತದಲ್ಲಿರುವ ಅತ್ಯಂತ ಸುಂದರವಾದ ಪರ್ವತಗಳಲ್ಲಿಯ ನೋಟವನ್ನು ಪ್ರತಿಯೊಬ್ಬ ಪ್ರಯಾಣಿಕನೂ ಸವಿಯಲು ಯೋಗ್ಯವಾದುದಾಗಿದೆ..

1) ಮೌಂಟ್ ಪಂಡಿಮ್

1) ಮೌಂಟ್ ಪಂಡಿಮ್

ಸರಾಸರಿ ಮಟ್ಟಕ್ಕಿಂತ 22000 ಅಡಿ ಎತ್ತರದಲ್ಲಿ, ಪಾಂಡಿಮ್ ಪರ್ವತವು ದೇಶದ ಅತಿ ಎತ್ತರದ ಪರ್ವತಗಳಲ್ಲಿ ಒಂದಾಗಿರುವ ಈ ಪರ್ವತವು ಸಿಕ್ಕಿಂ ನಲ್ಲಿದೆ. ಈ ಪರ್ವತವು ನಿಮಗೆ ಝೋಂಗ್ರಿಯಿಂದ ಗೋಯೆಚಾ ಲಾ ಗೆ ಹೋಗುವ ದಾರಿಯಲ್ಲಿ ಕಾಣಸಿಗುತ್ತದೆ. ಈ ಬೆರಗುಗೊಳಿಸುವಂತಹ ಪರ್ವತವು ಹಿಮದಿಂದ ಆವೃತವಾಗಿದ್ದು, ಈ ಬೃಹತ್ ಶಿಖರವು ನಿಮ್ಮನ್ನು ಬೆರಗುಗೊಳಿಸುವಂತಹ ಸೌಂದರ್ಯವನ್ನು ಒಳಗೊಂಡಿದ್ದು, ಅಷ್ಟೇ ಅಲ್ಲದೆ ಈ ಪರ್ವತದ ಸುತ್ತಲಿನ ಪ್ರದೇಶವು ಹಲವಾರು ಟ್ರೆಕ್ಕಿಂಗ್ ಹಾದಿಗಳಿಂದ ಆಶೀರ್ವದಿಸಲ್ಪಟ್ಟಿದೆ.

ನಿಮ್ಮ ಕೆಮರಾಗೆ ಸೆರೆಹಿಡಿಯಲು ಉತ್ತಮವಾಗಿರುವ ಚಿತ್ರಣವನ್ನು ಮಾತ್ರ ಹೊಂದಿರುವುದಲ್ಲದೆ, ಇಲ್ಲಿ ನೀವು ಇಲ್ಲಿ ಟ್ರೆಕ್ಕಿಂಗ್ ಮತ್ತು ಹೈಕಿಂಗ್ ಗಾಗಿಯೂ ಹೋಗಬಹುದಾಗಿದೆ. ಹತ್ತಿಯಂತೆ ಕಾಣುವ ಮೋಡಗಳ ಮಧ್ಯೆ ಅವಿತಿರುವಂತೆ ಕಾಣುವ ಮೌಂಟ್ ಪಂಡಿಮ್ ಸಿಕ್ಕಿಂ ಪ್ರವಾಸದಲ್ಲಿರುವವರಿಗೆ ಅವಿಸ್ಮರಣೀಯ ನೆನಪನ್ನು ತಮ್ಮೊಂದಿಗೆ ಒಯ್ಯುವಂತೆ ಮಾಡುತ್ತದೆ.

2) ಕಬ್ರು

2) ಕಬ್ರು

ಎತ್ತರವಾಗಿ ಹಾಗೂ ಅಚಲವಾಗಿ ನಿಂತಿರುವ ಕಬ್ರು ಮತ್ತೊಂದು ಪರ್ವತವಾಗಿದ್ದು ಇದೂ ಇಲ್ಲಿಗೆ ಭೇಟಿ ನೀಡುವ ಸಂದರ್ಶಕರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಈ ಪರ್ವತವು ಭಾರತ ಮತ್ತು ನೇಪಾಳದ ಗಡಿಯಲ್ಲಿ ನೆಲೆಸಿದ್ದು ಈ ಪರ್ವತವನ್ನು ಸಿಕ್ಕಿಂ ನ ಜೋಂಗ್ರಿಯಿಂದ ಸ್ಪಷ್ಟವಾಗಿ ನೋಡಬಹುದಾಗಿದೆ.

ಸಿಕ್ಕಿಂ ರಾಜ್ಯವು ಹಿಮಾಲಯ ಪರ್ವತ ಶ್ರೇಣಿಗಳಿಗೆ ಹತ್ತಿರದಲ್ಲಿರುವುದರಿಂದ ಇಲ್ಲಿಯೂ ಕೂಡಾ ಭಾರತದ ಹಲವಾರು ಎತ್ತರದ ಪರ್ವತಗಳನ್ನು ಗುರುತಿಸಬಹುದಾಗಿದ್ದು ಇವುಗಳಲ್ಲಿ ಹಲವಾರು ವಿಶ್ವದಲ್ಲಿಯೇ ದೊಡ್ದ ಪರ್ವತಗಳಲ್ಲಿ ಒಂದೆನಿಸಿರುವಂತಹವುಗಳನ್ನೂ ವೀಕ್ಷಿಸಬಹುದು. ಕಬ್ರು ಸುಮಾರು 25000 ಅಡಿಗಳಷ್ಟು ಎತ್ತರವನ್ನು ಹೊಂದಿದೆ. ಇದು ಮೂಲತಃ ಪರ್ವತದ ಒಂದು ಭಾಗವಾಗಿದ್ದು, ಇದನ್ನು ಕಬ್ರು ಉತ್ತರ, ಕಬ್ರು ದಕ್ಷಿಣ ಮತ್ತು ತಾಲುಂಗ್‌ನಂತಹ ಹಲವಾರು ಇತರ ಭಾಗಗಳಾಗಿ ವಿಂಗಡಿಸಲಾಗಿದೆ.

3) ಗಿಮ್ಮಿಗೆಲಾ ಚೂಲಿ

3) ಗಿಮ್ಮಿಗೆಲಾ ಚೂಲಿ

ದಿ ಟ್ವಿನ್ಸ್ ಎಂದೂ ಕರೆಯಲ್ಪಡುವ ಗಿಮ್ಮಿಗೆಲಾ ಚುಲಿಯು ಕಾಂಚನಜುಂಗಾದ ಸಮೀಪದಲ್ಲಿದೆ ಮತ್ತು ಸಿಕ್ಕಿಂನಿಂದ ಸುಲಭವಾಗಿ ಗೋಚರಿಸುತ್ತದೆ. ಈ ಭವ್ಯ ಪರ್ವತದ ವಿಸ್ತರಣೆಯು ಭಾರತ ಮತ್ತು ನೇಪಾಳದ ನಡುವೆ ಹಂಚಲ್ಪಟ್ಟಿದೆ.ಇದನ್ನು ಮೊದಲು 1995 ರಲ್ಲಿ ಮೂರು ಪರ್ವತಾರೋಹಿಗಳು ಏರಿದ್ದರು. ಅವರು ಇದಕ್ಕೆ ಮೊದಲು ಅಂದರೆ ಒಂದು ವರ್ಷದ ಹಿಂದೆ ತಮ್ಮ ಆರೋಹಣ ಮಾಡುವಲ್ಲಿ ವಿಫಲರಾಗಿದ್ದರು. ಹಿಮಕುಸಿತದ ಕಾರಣದಿಂದ ಇಲ್ಲಿ ಹಲವಾರು ಸಾವಿನ ಘಟನೆಗಳು ವರದಿಯಾಗಿವೆ.

4) ಕಿರಾತ್ ಚೂಲಿ

4) ಕಿರಾತ್ ಚೂಲಿ

ಟೆಂಟ್ ಪೀಕ್ ಎಂದೂ ಕರೆಯಲ್ಪಡುವ ಕಿರಾತ್ ಚೂಲಿಯು ನೈಸರ್ಗಿಕ ಹಾಗೂ ಧಾರ್ಮಿಕ ಮಹತ್ವವನ್ನು ಹೊಂದಿರುವಂತಹ ಪರ್ವತವಾಗಿದೆ. ಹಿಮಾಲಯದ ಸಾಂಪ್ರದಾಯಿಕ ಸಮೂಹಗಳಲ್ಲಿ ಇವುಗಳನ್ನು ಕಿರಾತೀಸ್ ಎಂದೂ ಕರೆಯಲಾಗುತ್ತದೆ. ಈ ಸುಂದರವಾದ ಪರ್ವತವು ಯುಮಾ ಸಮ್ಮಾಂಗ್ ಅವರ ಸರ್ವಶಕ್ತ ದೇವತೆಯ ನಿವಾಸವಾಗಿದೆ ಎಂದು ನಂಬಲಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 24000 ಅಡಿ ಎತ್ತರದಲ್ಲಿದೆ ಮತ್ತು 1939 ರಲ್ಲಿ ಮೊದಲ ಬಾರಿಗೆ ಏರಲಾಯಿತು.

5) ಸಿನಿಯೋಲ್ಚು

5) ಸಿನಿಯೋಲ್ಚು

ನೀವೇನಾದರೂ ಅಪ್ಪಟ ಛಾಯಾಗ್ರಾಹಕರಾಗಿದ್ದಲ್ಲಿ, ಸಿನಿಯೋಲ್ಚು ಪರ್ವತಕ್ಕೆ ಭೇಟಿ ಕೊಟ್ಟು ಇಲ್ಲಿನ ಭವ್ಯತೆಯನ್ನು ಸೆರೆಹಿಡಿಯುವುದನ್ನು ಖಂಡಿತವಾಗಿಯೂ ತಪ್ಪಿಸಲಾರಿರಿ. ಸಮುದ್ರ ಮಟ್ಟದಿಂದ ಸುಮಾರು 23000 ಅಡಿ ಎತ್ತರದಲ್ಲಿರುವ ಸಿಕ್ಕಿಂ ರಾಜ್ಯದಲ್ಲಿ ನೆಲೆಸಿರುವ ಈ ಪರ್ವತ ಶ್ರೇಣಿಯನ್ನು ವಿಶ್ವದ ಅತ್ಯಂತ ಸುಂದರ ಹಿಮಚ್ಚಾದಿತ ಪರ್ವತವೆಂದು ಘೋಷಿಸಲಾಗಿದೆ. ಸಿಕ್ಕಿಮೀಸ್ ಮತ್ತು ಜರ್ಮನ್ ಪರ್ವತಾರೋಹಿಗಳಿಂದ ಇದನ್ನು ಹಲವಾರು ಬಾರಿ ಅಳೆಯಲ್ಪಟ್ಟಿದ್ದು, ಸಿನಿಯೋಲ್ಚು ತನ್ನ ಅದ್ಭುತವಾದ ಪರ್ವತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ ಎಂದು ನಿಮಗೆ ತಿಳಿದಿದೆಯೇ ಹಾಗೂ ಇಂತಹ ಸೌಂದರ್ಯ ವಿಶ್ವದ ಬೇರೆಲ್ಲೂ ಸಿಗಲಾರದು!

6) ಪೌಹುನ್ರಿ

6) ಪೌಹುನ್ರಿ

ಭೂಮಿಯ ಮೇಲಿನ ಅತಿ ಎತ್ತರದ ಪರ್ವತಗಳಲ್ಲಿ ಒಂದಾದ ಪೌಹುನ್ರಿ ಭಾರತ ಮತ್ತು ಚೀನಾ ನಡುವೆ ಹಂಚಿಹೋಗಿದೆ ಮತ್ತು ಈ ಪರ್ವತವನ್ನು ಪರ್ವತಾರೋಹಿಗಳು ಹಲವಾರು ಬಾರಿ ಏರಿದ್ದಾರೆ. ಇದು 1911 ರಲ್ಲಿ ಅಲೆಕ್ಸಾಂಡರ್ ಮಿಚೆಲ್ ಅವರಿಂದ ಅಳೆಯಲ್ಪಟ್ಟ ನಂತರ ಸುಮಾರು 20 ವರ್ಷಗಳ ಕಾಲ ಅತಿ ಎತ್ತರದ ಶಿಖರವಾಗಿ ಉಳಿಯಿತು. ಪೌಹುನ್ರಿ ಪರ್ವತವು ತೀಸ್ತಾ ನದಿಯ ಮೂಲವಾಗಿದೆ ಎಂದು ಹೇಳಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X