Search
  • Follow NativePlanet
Share
» »ಖಂಡಿತವಾಗಿಯೂ ಇನ್ನೂ ಹೆಚ್ಚಿನ ಗಮನಕ್ಕೆ ಪಾತ್ರವಾಗಬೇಕಾದಂತಹ ಕರ್ನಾಟಕದ ಅರಮನೆಗಳು

ಖಂಡಿತವಾಗಿಯೂ ಇನ್ನೂ ಹೆಚ್ಚಿನ ಗಮನಕ್ಕೆ ಪಾತ್ರವಾಗಬೇಕಾದಂತಹ ಕರ್ನಾಟಕದ ಅರಮನೆಗಳು

ಶ್ರೀಮಂತ ಇತಿಹಾಸ ಸಂಸ್ಕೃತಿ, ಪರಂಪರೆ ಮತ್ತು ವೈವಿಧ್ಯತೆಗಳನ್ನು ಹೊಂದಿದ ಭೂಮಿಯಾಗಿದೆ ಇನ್ನೊಂದು ವಿಧದಲ್ಲಿ ಹೇಳಬೇಕೆಂದರೆ ಈ ಸುಂದರವಾದ ಭಾರತದಲ್ಲಿನ ರಾಜ್ಯವು ಎಲ್ಲಾ ವಿಧದ ಪ್ರಯಾಣಿಕನಿಗೂ ಒಂದು ಪರಿಪೂರ್ಣತೆಯ ಪ್ಯಾಕೇಜ್ ಅನ್ನು ಒದಗಿಸುವ ಭೂಮಿ ಎನ್ನಬಹುದಾಗಿದೆ. ಇಲ್ಲಿಯ ಮನಸೋಲಿಸುವ ನೈಸರ್ಗಿಕ ಪರಿಸರದಲ್ಲಿ , ಐತಿಹಾಸಿಕ ಭವ್ಯತೆಗಳು, ಮತ್ತು ಆಧುನಿಕ ಅದ್ಭುತಗಳಲ್ಲಿ ಭಾಗಿಯಾಗಿ. ಅದ್ಬುತವಾದ ತಾಣಗಳನ್ನು ಹೊಂದಿರುವ ಕರ್ನಾಟಕವು ತನ್ನಲ್ಲಿಗೆ ಭೇಟಿ ಕೊಡುವ ಸಂದರ್ಶಕರನ್ನು ಎಂದಿಗೂ ನಿರಾಸೆಗೊಳಿಸಲು ಸಾಧ್ಯವೇ ಇಲ್ಲ.

ಎಲ್ಲಾ ತರಹದ ಪ್ರಯಾಣಿಕನಿಗೆ ಬೇಕಾಗುವ ತಾಣಗಳಿಂದಾಗಿ ಕರ್ನಾಟಕವು ಪ್ರಸಿದ್ದಿಯನ್ನು ಪಡೆದಿದ್ದರೂ ಸಹ ಇದರ ಹೊರತಾಗಿಯೂ ಇನ್ನೂ ಕೆಲವು ತಾಣಗಳು ಅನ್ವೇಷಣೆಗಾಗಿ ಕಾಯುತ್ತಿವೆ. ತಮ್ಮ ಅದ್ಬುತವಾದ ವಾಸ್ತುಶಿಲ್ಪಕಲೆಗಳು ಮತ್ತು ಅವುಗಳು ಹೇಗೆ ಹುಟ್ಟಿದವು ಎಂಬ ದಂತಕಥೆಗಳನ್ನು ಒಳಗೊಂಡ ಈ ಕೆಳಗಿನ ಕೆಲವು ಕರ್ನಾಟಕದ ತಾಣಗಳು ಇನ್ನೂ ಹೆಚ್ಚಿನ ಗಮನಕ್ಕೆ ಬರಲು ಯೋಗ್ಯವಾದವುಗಳಾಗಿವೆ.

ನಾಲ್ಕ್ನಾಡ್ ಅರಮನೆ , ಕೊಡಗು

ನಾಲ್ಕ್ನಾಡ್ ಅರಮನೆ , ಕೊಡಗು

ನಾಲ್ಕ್ನಾಡ್ ಅರಮನೆಯು ಇಂದು ಒಂದು ಸಂರಕ್ಷಿತ ಸ್ಮಾರಕವಾಗಿದ್ದು, ಇದನ್ನು ಕರ್ನಾಟಕ ಸರಕಾರದ ನೇತೃತ್ವದಲ್ಲಿ ನವೀಕರಿಸಲಾಗಿದೆ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿರುವ ಈ ಅರಮನೆಯು 18ನೇ ಶತಮಾನದ ಅವಧಿಯಲ್ಲಿ ನಿರ್ಮಿಸಿದ್ದಾಗಿದೆ. ಕೊಡಗಿನ ಈ ಸುಂದರವಾದ ಅರಮನೆಯು, ಬ್ರಿಟಿಷರ ಸೈನ್ಯದಿಂದ ಪದಚ್ಯುತಿಗೊಳಗಾಗುವ ಮೊದಲು ಕೊಡಗಿನ ರಾಜರು ವಾಸವಾಗಿದ್ದ ಕೊನೆಯ ಆಶ್ರಯವೆಂದು ಹೇಳಲಾಗುತ್ತದೆ. ಭಾರತದ ಇನ್ನಿತರ ಅರಮನೆಗಳಂತೆಯೆ, ನಾಲ್ಕ್ನಾಡ್ ಅರಮನೆಯ ಬೀದಿಗಳು ಅದರ ಬಗೆಗಿನ ದಂತ ಕಥೆಗಳನ್ನು ಅನ್ವೇಷಿಸಲು ಕಾಯುತ್ತಿದೆ.

ಈ ಅರಮನೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದರೂ, ಜನರು ಇನ್ನೂ ಈ ವಾಸ್ತುಶಿಲ್ಪದ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತಿಲ್ಲ. ಆದ್ದರಿಂದ ನೀವು ಈ ಋತುವಿನಲ್ಲಿ ನಾಲ್ಕ್ನಾಡ್ ಅರಮನೆಗೆ ಏಕೆ ಭೇಟಿ ನೀಡಬಾರದು ಹಾಗೂ ಅಲ್ಲಿಯ ಅರಮನೆಯ ಅದ್ಭುತ ರಚನೆ ಮತ್ತು ಒಳಾಂಗಣ ವಿನ್ಯಾಸವನ್ನು ಪರಿಶೀಲಿಸಬಾರದೇಕೆ?

ಜಗನ್ಮೋಹನ್ ಅರಮನೆ, ಮೈಸೂರು

ಜಗನ್ಮೋಹನ್ ಅರಮನೆ, ಮೈಸೂರು

ಒಡೆಯರ್ ರಾಜವಂಶಸ್ಥರ ವಾಸ್ತುಶಿಲ್ಪಶೈಲಿಯ ವಿಕ್ಷಣೆ ಮಾಡುವ ಹಂಬಲವುಳ್ಳವರಾಗಿದ್ದಲ್ಲಿ ನೀವು, ಮೈಸೂರಿನ ಏಳು ಅತ್ಯಂತ ವೈಭವೋಪೇತ ಅರಮನೆಗಳಲ್ಲಿ ಒಂದೆನಿಸಿರುವ ಜಗನ್ಮೋಹನ ಅರಮನೆಯು ಖಂಡಿತವಾಗಿಯೂ ಒಮ್ಮೆ ಭೇಟಿ ಕೊಡಲೇ ಬೇಕಾದ ಸ್ಥಳವಾಗಿದೆ.1861 ರಲ್ಲಿ ವೊಡೈಯರ್ ರಾಜವಂಶದ ರಾಜನಿಂದ ಪೂರ್ಣಗೊಂಡ ಜಗನ್ಮೋಹನ್ ಅರಮನೆ ಅತಿಥಿ ರಾಜರಿಗೆ ರಾಜ ವೈಭವ ನೀಡುವ ನಿವಾಸವಾಗಿತ್ತು.

ಇಂದು, ಇದು ಕಾರ್ಯಕ್ರಮಗಳನ್ನು ನೆರವೇರಿಸುವ ಹಾಲ್ ಮತ್ತು ಆರ್ಟ್ ಗ್ಯಾಲರಿಯಾಗಿ ಕಾರ್ಯನಿರ್ವಹಿಸುತ್ತಿದೆ, ಅಲ್ಲಿ ಹಲವಾರು ಶಿಲ್ಪಗಳು, ವರ್ಣಚಿತ್ರಗಳು ಮತ್ತು ಪ್ರತಿಮೆಗಳನ್ನು ಕಾಣಬಹುದು.ಅಲ್ಲದೆ ಒಡೆಯರ್ ರಾಜವಂಶದ ಪೌರಾಣಿಕ ಕಥೆಗಳು ಜಗನ್ಮೋಹನ್ ಅರಮನೆಯ ದೊಡ್ಡ ಸಭಾಂಗಣಗಳಲ್ಲಿ ಪ್ರತಿಧ್ವನಿಸುತ್ತಿವೆ.

ಶಿವಪ್ಪ ನಾಯಕ ಅರಮನೆ, ಶಿವಮೊಗ್ಗ

ಶಿವಪ್ಪ ನಾಯಕ ಅರಮನೆ, ಶಿವಮೊಗ್ಗ

ಭಾರತೀಯ ಪುರಾತತ್ವ ಸಮೀಕ್ಷೆಯ ನಿರ್ವಹಣೆಯಡಿಯಲ್ಲಿರುವ ಶಿವಮೊಗ್ಗ ಜಿಲ್ಲೆಯ ಶಿವಪ್ಪ ನಾಯಕ ಅರಮನೆಗೆ 17ನೇ ಶತಮಾನದ ಕೆಳದಿ ನಾಯಕ ರಾಜವಂಶಸ್ಥ ಶಿವಪ್ಪ ನಾಯಕನ ಮರಣಾ ನಂತರ ಅವನ ಹೆಸರನ್ನಿಡಲಾಯಿತು.

ಆದರೂ ಇತಿಹಾಸಕಾರರ ಪ್ರಕಾರ ಈ ಅರಮನೆಯನ್ನು ಆ ಸಮಯದಲ್ಲಿ ಮೈಸೂರಿನ ದೊರೆ ಹೈದರ್ ಅಲಿ ನಿರ್ಮಿಸಿದನೆಂದು ನಂಬಲಾಗಿದೆ. ಈ ಭವ್ಯವಾದ ಅರಮನೆಯ ಪ್ರಮುಖ ವಿಶೇಷತೆಗಳಲ್ಲಿ ಅದರ ಅಚ್ಚರಿಗೊಳಿಸುವಂತಹ ಕಲಾತ್ಮಕತೆಯು ಅರಮನೆಯ ಮೇಲ್ಮೈ, ಸ್ತಂಭಗಳು, ಗೋಡೆಗಳು ಮತ್ತು ಚಾವಣಿಯ ಮೇಲೆ ಕಾಣಿಸುತ್ತದೆ. ಪ್ರಸ್ತುತ, ಶಿವಪ್ಪ ನಾಯಕ ಅರಮನೆಯು ಸರ್ಕಾರಿ ವಸ್ತುಸಂಗ್ರಹಾಲಯವಾಗಿ ಕಾರ್ಯನಿರ್ವಹಿಸುತ್ತಿದೆ, ಇದು ಭಾರತೀಯ ದೇವರುಗಳ ಪ್ರಾಚೀನ ಶಿಲ್ಪಗಳು, ಪವಿತ್ರ ಪ್ರಾಣಿಗಳು ಮತ್ತು ಕೆಲವು ಶಾಸನಗಳನ್ನು ಹೊಂದಿರುವ ಹಲವಾರು ಕಲ್ಲುಗಳನ್ನು ಹೊಂದಿದೆ.

ಚೆಲುವಾಂಬಾ ಮ್ಯಾನ್ಶನ್ , ಮೈಸೂರು

ಚೆಲುವಾಂಬಾ ಮ್ಯಾನ್ಶನ್ , ಮೈಸೂರು

ಒಡೆಯರ್ ರಾಜವಂಶದ ರಾಜನಿಂದ ನಿರ್ಮಿಸಲ್ಪಟ್ಟ ಚೆಲುವಾಂಬ ಮ್ಯಾನ್ಷನ್ ವೊಡೈಯರ್ ರಾಜವಂಶದ ರಾಜನಿಂದ ನಿರ್ಮಿಸಲ್ಪಟ್ಟ ಚೆಲುವಾಂಬಾ ಮ್ಯಾನ್ಷನ್ ಒಂದು ಕಾಲದಲ್ಲಿ ಮೈಸೂರಿನ ಮೂರನೆಯ ರಾಜಕುಮಾರಿಯ ಚೆಲುವಾಜಮ್ಮಣ್ಣಿಯ ವಾಸಿಸುವ ಅರಮನೆಯಾಗಿತ್ತು.

ಈ ಅದ್ಭುತ ಭವನವನ್ನು ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಎಂಬ ಸಂಶೋಧನಾ ಸಂಸ್ಥೆಯಾಗಿ ಪರಿವರ್ತಿಸಲಾಗಿದ್ದರೂ ಕೂಡ ಅರಮನೆಯ ಸೌಂದರ್ಯ ಇನ್ನೂ ಹಾಗೇ ಇದೆ. ಈ ಭವ್ಯವಾದ ಅರಮನೆಯು ಉದ್ಯಾನವನಗಳಿಂದ ಸುತ್ತುವರೆದಿದೆ ಮತ್ತು ಮೈಸೂರಿನ ಐತಿಹಾಸಿಕ ಸ್ಥಳದ ಮಧ್ಯೆ ಹೆಮ್ಮೆಯಿಂದ ತಲೆ ಎತ್ತಿ ನಿಂತಿದೆ. ಚೆಲುವಾಂಬಾ ಮ್ಯಾನ್ಷನ್ ನ ಇತಿಹಾಸದ ಅನ್ವೇಷಿಸದ ತುಣುಕುಗಳನ್ನು ಅನ್ವೇಷಿಸಲು ಬಯಸಿದರೆ ಇದು ನೀವು ಭೇಟಿ ನೀಡಲೇಬೇಕಾದ ತಾಣವಾಗಿದೆ.

ದರಿಯಾ ದೌಲತ್ ಅರಮನೆ, ಶ್ರೀರಂಗ ಪಟ್ಟಣ

ದರಿಯಾ ದೌಲತ್ ಅರಮನೆ, ಶ್ರೀರಂಗ ಪಟ್ಟಣ

ಈ ಅರಮನೆಯ ಹೆಚ್ಚಿನ ಭಾಗವು ತೇಗದ ಮರದಿಂದ ಕೆತ್ತಲಾಗಿದ್ದು ಇದು ಐತಿಹಾಸಿಕ ಪಟ್ಟಣವೆನಿಸಿರುವ ಶ್ರೀರಂಗ ಪಟ್ಟಣದಲ್ಲಿದೆ. ದರಿಯಾ ದೌಲತ್ ಅರಮನೆಯು ಇಂಡೋ- ಸೆರಾನಿಕ್ ವಾಸ್ತುಶಿಲ್ಪಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದ್ದು ಇದು 18ನೇ ಶತಮಾನದಲ್ಲಿ ಮೈಸೂರನ್ನು ಆಳುತ್ತಿದ್ದ ಟಿಪ್ಪು ಸುಲ್ತಾನನಿಂದ ನಿರ್ಮಿಸಲ್ಪಟ್ಟಿತು. ದರಿಯಾ ದೌಲತ್ ಮೊದಲು ಬೇಸಿಗೆಯ ಅರಮನೆಯಾಗಿದ್ದು, ಟಿಪ್ಪು ಸುಲ್ತಾನ್ ತಮ್ಮ ಬೇಸಿಗೆ ಕಾಲವನ್ನು ಈ ಅರಮನೆಯಲ್ಲಿ ಕಳೆಯುತ್ತಿದ್ದರು ಎಂದು ಹೇಳಲಾಗುತ್ತದೆ. ಇಂದು ಈ ಸ್ಥಳವು ಒಂದು ಜನಪ್ರಿಯ ಐತಿಹಾಸಿಕ ಸ್ಥಳವೆನಿಸಿದ್ದರೂ ಕೂಡ ಈ ಅರಮನೆಯ ಕಡೆಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ.

ಅರಮನೆಯ ಒಳಗೆ ಎಲ್ಲೆಡೆ ಕಾಣಬಹುದಾದ ವಿಶಿಷ್ಟ ವಾಸ್ತುಶಿಲ್ಪಕ್ಕಾಗಿ ಇದು ಇತಿಹಾಸ ಪ್ರಿಯರಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಅಲ್ಲದೆ ಕಂಬಗಳಿಂದ ಮೇಲ್ಚಾವಣಿವರೆಗೆ ಮತ್ತು ಗೋಡೆಗಳಿಂದ ನೆಲಗಳವರೆಗೆ ದರಿಯಾ ದೌಲತ್ ಅರಮನೆಯಾ ಪ್ರತಿಯೊಂದೂ ಭಾಗಗಳಲ್ಲಿಯೂ ವರ್ಣಚಿತ್ರಗಳು, ಅನೇಕ ಮಾದರಿಗಳು ಮತ್ತು ರೇಖಾಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ. ಬೆಂಗಳೂರಿನಲ್ಲಿರುವ ಈ ಭವ್ಯ ಅರಮನೆಯ ಪ್ರತಿಕೃತಿಯನ್ನೂ ಸಹ ನೀವು ಭೇಟಿ ಮಾಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more